twitter
    For Quick Alerts
    ALLOW NOTIFICATIONS  
    For Daily Alerts

    ಕಾಬಿಲ್‌ನ ಪ್ರೇಮಕ್ಕೆ ವಿಮರ್ಶಕರು ಏನಂದ್ರು?

    By Suneel
    |

    ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಂಧರಾಗಿ ಕಾಣಿಸಿಕೊಂಡಿರುವ 'ಕಾಬಿಲ್' ಚಿತ್ರ ನೆನ್ನೆ (ಜನವರಿ 25) ತೆರೆ ಕಂಡಿದೆ. ಭಾವಲೋಕದಲ್ಲಿನ ಕ್ರೌರ್ಯದ ಕಥನ ನೋಡಿ ಅಂದರ ಪ್ರೇಮ ಕುರುಡಲ್ಲ ಎಂದು ಹೇಳಿ ಚಿತ್ರ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.['ಕಾಬಿಲ್' ಅಸಾಧಾರಣ, ಅಚ್ಚರಿದಾಯಕ, ಅವಾರ್ಡ್ ವಿನ್ನಿಂಗ್ ಚಿತ್ರ]

    'ಕಾಬಿಲ್' ಚಿತ್ರಕ್ಕೆ ಸಂಜಯ್ ಗುಪ್ತಾ ಆಕ್ಷನ್ ಕಟ್ ಹೇಳಿದ್ದು, ರಾಜೇಶ್ ರೋಷನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಅಂದವಾದ ಅಂಧರ ಕಥೆ ನೋಡಿ ವಿಮರ್ಶಕರು ಏನಂದ್ರು?['ಕಾಬಿಲ್‌' ಚಿತ್ರ ತಂಡದಿಂದ 'ಕುಚ್‌ ದಿನ್' ವೀಡಿಯೊ ಸಾಂಗ್ ರಿಲೀಸ್]

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಕಾಬಿಲ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. 'ಕಾಬಿಲ್' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು ನೋಡೋಣ ಬನ್ನಿ..

    ಭಾವಲೋಕದಲ್ಲಿ ಕ್ರೌರ್ಯದ ಕಥನ - ಪ್ರಜಾವಾಣಿ

    ಭಾವಲೋಕದಲ್ಲಿ ಕ್ರೌರ್ಯದ ಕಥನ - ಪ್ರಜಾವಾಣಿ

    ಜಿಗಿತ ಬಯಸದೆ ಇರುವ ಮಾದರಿಯಲ್ಲೇ ರಂಜನೆಯ ಹುಡುಕಾಟ ನಡೆಸುವ ಚಿತ್ರಕರ್ಮಿಗಳಿದ್ದಾರೆ. ಸುರಕ್ಷಿತವೂ ಇದ್ದುದರಲ್ಲೇ ಕೊಂಚ ಭಿನ್ನವೂ ಆದ ಅಂಥವರ ನಿಲುವಿಗೆ ಉದಾಹರಣೆ 'ಕಾಬಿಲ್'. ಚಿತ್ರದ ನಿರೂಪಣೆಯಲ್ಲಿಯೂ ವೃಥಾ ಕಸರತ್ತುಗಳಿಲ್ಲ. ಅಂಧ ನಾಯಕ ಸಾಕ್ಷಿಗಳನ್ನೇ ಉಳಿಸದೆ ಕ್ರೂರಿಗಳ ಪ್ರಾಣಾಪೋಷನ ತೆಗೆದುಕೊಳ್ಳುವ ಕಥೆಯಲ್ಲಿ ಕ್ರೀಡೆ ಕೊಡುವಂಥ ಕುತೂಹಲವಿದೆ. ಸಿನಿಮಾದ ಇನ್ನೊಂದು ಗುಣಾತ್ಮಕ ಅಂಶ ಸಂಯಮ. ಬುದ್ಧಿವಂತಿಕೆಯ ದೃಶ್ಯಗಳನ್ನು ಉತ್ಪ್ರೇಕ್ಷೆ ಇಲ್ಲದೆ ತೋರಿರುವುದನ್ನು ನಿರ್ದೇಶಕರ ಜಾಣ್ಮೆ ಎಂದೇ ಭಾವಿಸಬೇಕು.ಹೃತಿಕ್ ರೋಷನ್ ಅವರದ್ದು ಹೃದ್ಯ ಅಭಿನಯ. ಕುರುಡನಾಗಿ ಭಾವ ತುಳುಕಿಸುವುದು ತಮಾಷೆಯಲ್ಲ. ಅವರ ನೃತ್ಯ ಲಾಲಿತ್ಯ ಪೋಷಿಸಿರುವ ರೀತಿಯೂ ಮೆಚ್ಚುಗೆಗೆ ಅರ್ಹ. ಯಾಮಿ ಗೌತಮ್‌ ಕೂಡ ಅಭಿನಯ ಪಾಠ ಕಲಿತಿರುವುದು ಒಳ್ಳೆಯ ಬೆಳವಣಿಗೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನರೇಂದ್ರ ಝಾ ಇಷ್ಟವಾಗುತ್ತಾರೆ. ರೋನಿತ್ ರಾಯ್ ಅತಿ ತಣ್ಣಗೆ ನಟಿಸಲು ಹೋಗಿರುವುದು ಫಲ ನೀಡಿಲ್ಲ. ಸಂದೀಪ್ ಚಟರ್ಜಿ, ಅಯಾಂಕಾ ಬೋಸ್ ಹೆಚ್ಚು ‘ಕ್ಲೋಸಪ್ ಶಾಟ್ಸ್' ಸೆರೆಹಿಡಿದಿರುವುದು ಸಿನಿಮಾದ ಸೌಂದರ್ಯ ಹೆಚ್ಚಿಸಿದೆ. ವಿಷಾದದಲ್ಲೂ ಹೃತಿಕ್ ಅವರನ್ನು ಚೆಂದಗಾಣಿಸಿರುವುದನ್ನು ಪಕ್ಕಕ್ಕೆ ಇಡಬೇಕು. ಸೇಡಿನ ಕಥಾನಕಗಳು ಮತ್ತೆ ಮತ್ತೆ ಮೂಡುತ್ತಿರುತ್ತವೆ; ಕಪ್ಪು-ಬಿಳುಪು ಧೋರಣೆಯೂ.

    ಅಂದವಾಗಿದೆ ಅಂಧರ ಕಥೆ - ವಿಜಯವಾಣಿ

    ಅಂದವಾಗಿದೆ ಅಂಧರ ಕಥೆ - ವಿಜಯವಾಣಿ

    ವಿಕಲಾಂಗರ ಮೇಲೆ ನಡೆಯುವ ದೌರ್ಜನ್ಯಗಳ ಕುರಿತು ಆಗಾಗ ವರದಿಗಳಾಗುತ್ತಿರುತ್ತವೆ. ಆದರೆ ‘ಕಾಬಿಲ್' ಮೂಲಕ ಅದರ ವಿರುದ್ಧ ಹೋರಾಡುವ ಇಚ್ಛಾಶಕ್ತಿ ತೋರಿದ್ದಾರೆ ನಿರ್ದೇಶಕ ಸಂಜಯ್ ಗುಪ್ತಾ. ಅಂಧರಾದವರು ಎಷ್ಟೇ ಬುದ್ಧಿವಂತರಾದರೂ ಹೀಗೆಲ್ಲ ಮಾಡಲು ಸಾಧ್ಯವಾ ಎಂಬ ಅನುಮಾನ ಮೂಡಬಹುದು. ಆದರೆ ಸಿನಿಮಾಗಳಲ್ಲಿ ನೋ ಲಾಜಿಕ್ ಓನ್ಲಿ ಮ್ಯಾಜಿಕ್, ಹೀಗಾಗಿ ಎಲ್ಲವೂ ಸಾಧ್ಯ ಅಂತ ನೋಡಿಕೊಂಡು ಹೋದರೆ ಒಳ್ಳೆಯದು. ಅನಿರೀಕ್ಷಿತ ತಿರುವುಗಳು ಥ್ರಿಲ್ ನೀಡುತ್ತವೆಯಾದರೂ, ಅಷ್ಟೇ ಅನಿರೀಕ್ಷಿತವಾಗಿ ಬರುವ ಹಾಡುಗಳು ಕಥೆಯನ್ನು ಎಳೆಯುತ್ತವೆ. ಆದರೂ ಸಿನಿಮಾ ಎಲ್ಲೂ ಬೋರ್ ಹೊಡೆಸದಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಇನ್ನು ಹೃತಿಕ್ ರೋಶನ್ ಅವರ ನಟನೆ ಸಿನಿಮಾದ ಜೀವಾಳ. ನ್ಯೂನತೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಚತುರತೆ ಚಿತ್ರದ ಪ್ಲಸ್ ಪಾಯಿಂಟ್. ಕ್ಯೂಟ್ ಮತ್ತು ಬಬ್ಲಿಯಾಗಿ ಕಾಣುವ ಯಾಮಿ ಗೌತಮ್ ಸಹ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಕೆಲವೆಡೆ ಅತಿ ಅನ್ನಿಸಿದರೂ, ಅಂಧರಾಗಿ ಸುಂದರವಾಗಿ ನಟಿಸಿರುವ ಇಬ್ಬರಿಗೂ ಬೋನಸ್ ಅಂಕಗಳು. ಖಳರಾಗಿ ರೋನಿತ್ ಮತ್ತು ರೋಹಿತ್ ರಾಯ್ ಸಹೋದರರು ಹಾಗೂ ಪೊಲೀಸ್ ಅಧಿಕಾರಿಯಾಗಿ ನರೇಂದ್ರ ಝಾ ಗಮನ ಸೆಳೆಯುತ್ತಾರೆ. ರಾಜೇಶ್ ರೋಶನ್ ಸಂಗೀತ ಸಂಯೋಜಿಸಿರುವ ಹಾಡುಗಳಲ್ಲಿ ಮೋನ್ ಅಮೌರ್ ಕುಣಿಸಿದರೆ, ಟೈಟಲ್ ಹಾಡು ಗುನುಗಿಸುತ್ತದೆ. ಮೊದಲಾರ್ಧದಲ್ಲಿ ನವಿರಾದ ಪ್ರೇಮ ಕಥೆ, ದ್ವಿತೀಯಾರ್ಧದಲ್ಲಿ ಸೇಡಿನ ವ್ಯಥೆ ಹೇಳುವ ‘ಕಾಬಿಲ್' ಒಮ್ಮೆ ನೋಡಲಡ್ಡಿಯಿಲ್ಲ.

    ಕಾಬಿಲ್‌ನ ಪ್ರೇಮ ಕುರುಡಲ್ಲ - ವಿಜಯ ಕರ್ನಾಟಕ

    ಕಾಬಿಲ್‌ನ ಪ್ರೇಮ ಕುರುಡಲ್ಲ - ವಿಜಯ ಕರ್ನಾಟಕ

    ಎಷ್ಟೋ ಚಿತ್ರಗಳಲ್ಲಿ ನೋಡಿರುವ ಅದೇ ಕೆಟ್ಟ ಪೊಲಿಟಿಷಿಯನ್‌, ಅವನ ರೌಡಿ ಬ್ರದರ್‌, ಅವರಿಗೆ ಸಹಾಯ ಮಾಡೋ ಪೊಲೀಸ್‌ ಅಧಿಕಾರಿಗಳು ಇಲ್ಲೂ ಇದ್ದಾರೆ. ಆದರೆ, ರೋಹನ್‌ ತನ್ನ ಕಲೆ ಮತ್ತು ಬುದ್ಧಿವಂತಿಕೆಯಿಂದ ಹೇಗೆ ಸಾಕ್ಷಿ ಇಲ್ಲದಂತೆ ಮಾಡಿ, ಎಲ್ಲರನ್ನೂ ಹಳ್ಳಕ್ಕೆ ಕೆಡವುತ್ತಾನೆ ಎನ್ನುವುದು ಕುತೂಹಲಕರ ಸಂಗತಿ. ಮನರಂಜನೆಗೆ ಒಂದು ಐಟಂ ಸಾಂಗ್‌ ಇದೆ. ನಾಯಕಿ ಯಾಮಿ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸೋತಿದ್ದಾರೆ. ಹೃತಿಕ್‌ ರೋಷನ್‌ ಇನ್ನೂ ಚೆನ್ನಾಗಿ ನಟಿಸಬಹುದಿತ್ತು ಎನಿಸುತ್ತದೆ. ದೃಷ್ಟಿ ವಿಕಲಚೇತನರ ಪಾತ್ರ ಪೋಷಣೆ ದುರ್ಬಲವಾಗಿದೆ. ನೋಡುಗರನ್ನು ಭಾವುಕರನ್ನಾಗಿ ಮಾಡುವುದಿಲ್ಲ. ಚಿತ್ರದಲ್ಲಿ ಕೆಲ ತಪ್ಪುಗಳೂ ಕಾಣುತ್ತವೆ. ಉದಾಹರಣೆಗೆ ಪೊಲೀಸರ ಕಣ್ಗಾವಲು ತಪ್ಪಿಸಿ ರೋಹನ್‌ ಹೇಗೆ ಕಾರ್ಪೊರೇಟರ್‌ನ ಕೊಂದ ಎನ್ನುವುದನ್ನು ಅವನ ಬಾಯಲ್ಲೇ ಕೇಳುವ ಪೊಲೀಸ್‌ ಅಧಿಕಾರಿ ಅದನ್ನು ರೆಕಾರ್ಡ್‌ ಮಾಡಿಕೊಳ್ಳುವ ಕನಿಷ್ಠ ಬುದ್ಧಿವಂತಿಕೆಯನ್ನು ತೋರದೆ, ಸಾಕ್ಷಿಗಾಗಿ ಟೆಲಿಫೋನ್‌ ಬೂತ್‌ನವನನ್ನು ಹುಡುಕಿಕೊಂಡು ಹೋಗುತ್ತಾನೆ. ಛಾಯಾಗ್ರಹಣ ಚೆನ್ನಾಗಿದೆ. ಹಾಡೊಂದರಲ್ಲಿ ನಾಯಕ, ನಾಯಕಿಯ ಡಾನ್ಸ್‌ ಸೂಪರ್‌ ಆಗಿದೆ.

    Kaabil movie review: The Indian Express

    Kaabil movie review: The Indian Express

    Can Hrithik Roshan act? No question about it. Can Hrithik hack it, in Kaabil, a film that gives him every opportunity to gain lost ground? That's a toughie. Because apart from the leading man, there is not one thing to keep us with the film.The challenge with doing a film whose beats are stacked from its opening frame is to insert surprise. Instead, Kaabil plays it strictly by the numbers, and you can see everything coming from a mile. Yami Gautam's act includes a permanent unblinking wide-eyed stare. Hrithik does all the heavy lifting and remains the only bright spot in this dispirited mess of a movie. He still has the moves. What he needs is a plot.

    And did anyone tell those who wrote this film just how distasteful their insistence on using ‘andha ‘ and ‘andhi ‘ repeatedly, is? To use the phrase to express crassness is one thing, but as a constant descriptive just plain unacceptable.

    Kaabil: Leaching boredom - The Hindu

    Kaabil: Leaching boredom - The Hindu

    Needless to say, in the second half, the film becomes a usual revenge saga, marginally more engaging than deathly dull, dreary and deadening first half. Clichés abound right down to playing blind in a way that Bollywood has for long institutionalised-looking straight ahead and staring vacantly and unblinkingly into the space. If it's the heroine, then the omission of kajal/eyeliner is an added indication of sightlessness.Then there are dialogues from another era-"Kya andhera andhere ko roshan karega (Can one darkness light up the other)? Can two negatives make one positive?" And a cringingly bad and problematic portrayal of the aftermath of rape. Why should the woman (who is otherwise pitched as an independent and self-reliant one) keep harping on how things can't be the same between the couple after the act of violation and why should the man play along with that? Roshan gives it his all but the effort shows. There is too earnest a performer in him for his own spontaneous good. Add to that the close-ups, the cloying sentimentality and twitching of every facial pore and muscle. He just needs to relax and wait for better films.

    English summary
    Hrithik Roshan Starrer 'Kaabil' released yesterday (January 25). Here is Critic review of 'Kaabil'.
    Thursday, January 26, 2017, 16:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X