'ಕಾಬಿಲ್' ಚಿತ್ರ ತಂಡದಿಂದ 'ಕುಚ್ ದಿನ್' ವೀಡಿಯೊ ಸಾಂಗ್ ರಿಲೀಸ್
ಹ್ಯಾಡ್ಸಂಮ್ ಹಂಕ್ ಹೃತಿಕ್ ರೋಷನ್ 'ರವರ ಬಹು ನಿರೀಕ್ಷಿತ ಸಿನಿಮಾ 'ಕಾಬಿಲ್' ನಿರ್ಮಾಣಕಾರರು ಹೊಸ ಸೋಲ್ ಫುಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ನ ಕಾಂಬಿನೇಷನ್ ನ ಹೊಸ ಟ್ರ್ಯಾಕ್ ಹೆಸರು 'ಕುಚ್ ದಿನ್'.[ಒಂದಿನಾ ಹೃತಿಕ್ ಸೆಟ್ ಗೆ ಬರದಿದ್ದರೆ, ನಿರ್ಮಾಪಕರಿಗೆ ಆಗೋ ಲಾಸ್ ಎಷ್ಟು.?]

'ಕುಚ್ ದಿನ್' ವಿಡಿಯೋ ಸಾಂಗ್ ನಲ್ಲಿ ಹೃತಿಕ್ ಮತ್ತು ಯಾಮಿ ಗೌತಮ್ ರೊಮ್ಯಾಂಟಿಕ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದು, ಪರಸ್ಪರ ಎಂಜಾಯ್ ಮಾಡಿದ್ದಾರೆ. ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಂಧರಾಗಿ ಕಾಣಸಿಕೊಂಡಿರುವ 'ಕಾಬಿಲ್' ಚಿತ್ರದ ಈ ಹಾಡಿನಲ್ಲಿ ಇಬ್ಬರೊಳಗಿನ ಮಗುವಿನ ಸ್ವಭಾವವನ್ನು ಹೊರತೆಗೆತಂದಿದೆ. ಹೃದಯ ಗೆಲ್ಲುವಂತಿರುವ ಈ ಪೀಸ್ ಫುಲ್ ಹಾಡಿಗೆ ರಾಜೇಶ್ ರೋಷನ್ ಸಂಗೀತ ನಿರ್ದೇಶನ ಮಾಡಿದ್ದು, ಜುಬಿನ್ ನೌಟಿಯಲ್ ಹಾಡಿದ್ದಾರೆ.
'ಕಾಬಿಲ್' ಚಿತ್ರದಲ್ಲಿ ಹೃತಿಕ್ ರೋಷನ್ 'ರೋಹನ್ ಭಟ್ನಾಗರ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯಾಮಿ ಗೌತಮ್ ರ ಪ್ರೀತಿಯಲ್ಲಿ ಬೀಳುವ ದೃಷ್ಟಿ ವಿಕಲ ಚೇತನರಾಗಿ ಅಭಿನಯಿಸಿದ್ದಾರೆ. ಯಾಮಿ ಗೌತಮ್ ಸಹ ದೃಷ್ಟಿ ವಿಕಲ ಚೇತನರಾಗಿ ನಟಿಸಿದ್ದು, ಪ್ರೀತಿಯಲ್ಲಿ ಬಿದ್ದ ಇಬ್ಬರ ಜೀವನ ದುರಂತಕ್ಕೆ ಸಿಲುಕುವುದು, ಹೃತಿಕ್ ರೋಷನ್ ನಂತರದಲ್ಲಿ ಸೇಡು ತೀರಿಸಿಕೊಳ್ಳುವುದು ಸಿನಿಮಾದಲ್ಲಿನ ಕಥೆ.[ಶಾರುಖ್ ಖಾನ್, ಹೃತಿಕ್ ರೋಷನ್ ಬೀಟ್ ಮಾಡಿದ್ರು ಕಿಚ್ಚ ಸುದೀಪ್!]

ಸಂಜಯ್ ಗುಪ್ತಾ ಆಕ್ಷನ್ ಕಟ್ ಹೇಳಿರುವ 'ಕಾಬಿಲ್' ಚಿತ್ರ 2017 ಜನವರಿ 25 ರಂದು ತೆರೆ ಕಾಣುತ್ತಿದೆ. ವಿಡಿಯೋ ಸಾಂಗ್ ಈ ಕೆಳಗೆ ನೋಡಿ.


Click it and Unblock the Notifications











