»   » ಹೃತಿಕ್ ರೋಷನ್ ಮತ್ತೆ ಮದುವೆ ಆಗ್ತಿದ್ದಾರಾ...?

ಹೃತಿಕ್ ರೋಷನ್ ಮತ್ತೆ ಮದುವೆ ಆಗ್ತಿದ್ದಾರಾ...?

Written By:
Subscribe to Filmibeat Kannada

ಬಾಲಿವುಡ್ ಮಂದಿ ಸೇರಿದಂತೆ ಹೃತಿಕ್ ರೋಷನ್ ಅಭಿಮಾನಿಗಳು, ಅವರು ತಮ್ಮ ಹೆಂಡತಿಗೆ ಡೈವೋರ್ಸ್ ಕೊಟ್ಟ ಸುದ್ದಿ ಕೇಳಿ ಶಾಕ್‌ ಆಗಿದ್ದರು. ಹಾಗೆ ಹೃತಿಕ್ ಹೆಂಡತಿ ಸುಸಾನೆ, ಹೃತಿಕ್ ಅವರಲ್ಲಿ ಬೇಡಿಕೆ ಇಟ್ಟಿದ್ದ ಜೀವನಾಂಶ ಮೊತ್ತ ಕೇಳಿ ಹೃತಿಕ್ ಸುಸ್ತು ಸಹ ಆಗಿದ್ದರು. ಡೈವೋರ್ಸ್ ಆದ ನಂತರವು ಹೃತಿಕ್ ಮತ್ತು ಸುಸಾನೆ ಹಲವು ಕಡೆ ಜೊತೆಯಲ್ಲಿ ಕಾಣಿಸಿಕೊಂಡು, ಸುಸಾನೆ ಜೊತೆಗಿನ ಸಂಬಂಧ ಈಗ ಪೀಸ್ ಫುಲ್ ಆಗಿದೆ, ನಾವು ಈಗ ಗುಡ್ ಫ್ರೆಂಡ್ಸ್‌ ಎಂದು ಹೇಳಿದ್ದರು.[ಸುಸಾನೆ ಜೀವನಾಂಶ ಮೊತ್ತ ಕೇಳಿ ಹೃತಿಕ್ ಸುಸ್ತು]

ಆದ್ರೆ ಈಗ ಹೃತಿಕ್ ರೋಷನ್, ಸುಸಾನೆ ಜೊತೆ ಡೈವೋರ್ಸ್ ಪಡೆದ ನಂತರ, ಮತ್ತೆ ಮದುವೆ ಆಗಲು ಪ್ಲಾನ್ ಮಾಡುತ್ತಿದ್ದಾರಾ.., ಇನ್ನೊಬ್ಬರ ಜೊತೆ ಹೊಸ ಲೈಫ್ ಆರಂಭಿಸುತ್ತಾರಾ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಅದಕ್ಕೆ ಹೃತಿಕ್ ಹೇಳಿರುವ ಮಾಹಿತಿ ಇಲ್ಲಿದೆ.. ಈ ಮಾಹಿತಿಗಳೆಲ್ಲಾ ಅವರು ಸಂದರ್ಶನದಲ್ಲಿ ನೀಡಿದವುಗಳಾಗಿವೆ.

ಹೃತಿಕ್ ಮತ್ತೆ ಮದುವೆ ಆಗುವ ಬಗ್ಗೆ...

ಹೃತಿಕ್ ಮತ್ತೆ ಮದುವೆ ಆಗ್ತಿರಾ? ಎಂಬ ಪ್ರಶ್ನೆಯನ್ನು ಸಂದರ್ಶನ ಒಂದರಲ್ಲಿ ಕೇಳಲಾಗಿತ್ತು. ಅದಕ್ಕೆ ಹೃತಿಕ್, " ಇಲ್ಲ, ಅದರ ಬಗ್ಗೆ ನಾನು ಯೋಚನೆ ಮಾಡಿಲ್ಲಾ. ಈಗ ತುಂಬಾ ಖುಷಿ ಆಗಿದ್ದೇನೆ. ಐ ಫೀಲ್ ಫುಲ್‌ಫಿಲ್ಡ್. ಮದುವೆ ಅಗತ್ಯ ಭಾವನೆಯ ಫೀಲ್ ಇಲ್ಲ. ಆದರೆ ಫ್ಯೂಚರ್ ನಲ್ಲಿ ಏನಾಗುತ್ತೋ ಗೊತ್ತಿಲ್ಲಾ.. ಈಗ ಮಾತ್ರ ಧೃಡವಾದ ನಿರ್ಧಾರದಲ್ಲಿದ್ದೇನೆ", ಎಂದು ಉತ್ತರಿಸಿದ್ದಾರೆ.['ಕಾಬಿಲ್‌' ಚಿತ್ರ ತಂಡದಿಂದ 'ಕುಚ್‌ ದಿನ್' ವೀಡಿಯೊ ಸಾಂಗ್ ರಿಲೀಸ್]

ಸಲ್ಮಾನ್ ಬಯಸುವ ಮತ್ತು ಎಸ್ ಆರ್ ಕೆ ಸಿನಿಮಾಗಳಿಗಾಗಿ

"ನಾನು ಯೋಚಿಸಿದ ಪ್ರಕಾರ ಇದು ಸಲ್ಮಾನ್ ಖಾನ್ ಗೆಶ್ಚರ್. ಅಲ್ಲದೇ ಇದು ಇತರರನ್ನು ಫಾಲೋ ಮಾಡಲು ಒಂದು ಉದಾಹರಣೆ ಮತ್ತು ಇದನ್ನು ಒಂದು ರೀತಿಯ ಪ್ರೀತಿ ಆಗಿ ವಿಸ್ತರಿಸುತ್ತೇನೆ. ಇದರ ಬಗ್ಗೆ ಪ್ರಶ್ನೆ ಏಕೆ?" ಎಂದು ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಶಾರುಖ್ ನಮ್ಮ ಗ್ರೇಟೆಸ್ಟ್ ಸ್ಟಾರ್

"ಒಂದು ರೀತಿಯಲ್ಲಿ, ಇದನ್ನ ದೂರವಿಡಲು ಹೆಮ್ಮೆ ಪಡುತ್ತೇನೆ. ಇನ್ನೊಂದು ರೀತಿಯಲ್ಲಿ, ತಂಬಾ ವಿನಮ್ರವಾಗಿ ಫೀಲ್ ಮಾಡುತ್ತೇನೆ. ಕಾರಣ ಜನರು ಶಾರುಖ್ ಖಾನ್‌ ರಷ್ಟೇ ಯೋಗ್ಯ ರೀತಿಯಲ್ಲಿ ಹೋಲಿಸಿ ನೋಡುತ್ತಾರೆ. ಕಾರಣ ಅವರು ನಮ್ಮ ಗ್ರೇಟೆಸ್ಟ್ ಸ್ಟಾರ್. ಅವರ ಮೇಲೆ ಪ್ಯಾಚ್ ಮಾಡುತ್ತಿಲ್ಲ"

"ಆದ ಕಾರಣ, ನಾವಿಬ್ಬರು ವೃತ್ತಿಪರರು ಮತ್ತು ಆಕರ್ಷಕವಾಗಿ ಕಾಣಬೇಕು. ಆದರೆ ಏನಾದರು ತೊಡಕು ನಮ್ಮ ಸ್ನೇಹ ಸಂಬಂಧದಲ್ಲಿ ಉಂಟಾಗಬಹುದೇ ಎನ್ನಲು ಕಾರಣವಿಲ್ಲ"

ಸಿನಿಮಾ ರಿಲೀಸ್ ಬಗ್ಗೆ ನರ್ವಸ್ ಆಗುತ್ತದೆ

ಹೃತಿಕ್ ಅವರ ಕಾಬಿಲ್ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗುತ್ತಿದೆ. ಈ ಬಗ್ಗೆ ಬಯ ಏನಿಲ್ವಾ ಎಂದು ಕೇಳಿದ ಪ್ರಶ್ನೆಗೆ, " ಹೌದು.. ನಾನು ಯಾವಾಗಲು ನರ್ವಸ್ ಆಗುತ್ತೇನೆ. ಅದು ನನ್ನ ಸಿನಿಮಾ ಮೊದಲ ಕಾಪಿ ಬರುವವರೆಗೆ. ನಂತರ ಶಾಂತವಾಗುತ್ತೇನೆ. ಎದುರುನೋಡುತ್ತೇನೆ. ನನ್ನ ಸಿನಿಮಾವನ್ನು ಜನರು ಮೆಚ್ಚುತ್ತಾರೋ ಇಲ್ಲವೋ ಅಂತ. ಏನಾದರೂ ಒಪ್ಪಲಿಲ್ಲ ಎಂದಲ್ಲಿ, ಮತ್ತೆ ಡಿಫರೆಂಟ್ ಆಗಿ ಕಾಣಿಸಲು ನಿರ್ಧರಿಸುತ್ತೇನೆ" ಎಂದು ಉತ್ತರಿಸಿದ್ದಾರೆ.

ಕಾರಣ ಕಾಬಿಲ್ ಮತ್ತು ರಯೀಸ್ ಒಮ್ಮೆಯೇ "ಬಿಡುಗಡೆ ಆಗುತ್ತಿವೆ..

"ಕಾಬಿಲ್ ಒಂದೇ ರಿಲೀಸ್ ಆಗಿದ್ದಲ್ಲಿ, ನಾನು ಸ್ವಲ್ಪ ನೆಮ್ಮದಿ ಇಂದ ಇರಬಹುದಿತ್ತೇನೋ.. ಆದರೆ ಎಲ್ಲೋ ಒಂದು ಕಡೆ ಕ್ಲ್ಯಾಶ್ ಆಗೇ ಆಗುತ್ತದೆ. ಅಲ್ಲದೇ ಹೆಚ್ಚಿನ ಉತ್ಸಾಹ ಮತ್ತು ಕುತೂಹಲ ಎರಡೂ ಇದೆ. ನಾನು ಪಶ್ಚಾತಾಪ ಪಡುವವನಲ್ಲ. ನಾನು ಇದನ್ನು ಬೆಸ್ಟ್ ಆಗಿ ನಿರೂಪಿಸಲು ಪ್ರಯತ್ನಿಸುತ್ತಿದ್ದೇನೆ" ಎಂದು ತಮ್ಮ ಚಿತ್ರದ ಬಿಡುಗಡೆ ಬಗ್ಗೆ ಹೇಳಿದ್ದಾರೆ.

ನನ್ನ ಸಿನಿಮಾಗೆ ಬಗ್ಗೆ ಮಾತ್ರ ಗಮನಹರಿಸುತ್ತಿದ್ದೇನೆ!

"ಹೊರಗಡೆ ಎರಡು ನಟರ ಮಧ್ಯೆ ಮತ್ತು ಸಿನಿಮಾ ಗಳ ನಡುವೆ ಕ್ಲ್ಯಾಶ್ ಆಗುತ್ತಿದೆ ಎಂದು ಕಾಣಿಸುತ್ತದೆ. ಆದರೆ ಇದನ್ನು ನಾನು ಆ ರೀತಿ ನೋಡುವುದಿಲ್ಲ. ನನ್ನ ಸಿನಿಮಾ ಬಗ್ಗೆ ಫೋಕಸ್ ಮಾಡುತ್ತೇನೆ. ನನ್ನ ಗುರಿಯನ್ನು ಯಾರು ಸಹ ಚೇಂಜ್ ಮಾಡಲು ಆಗುವುದಿಲ್ಲ", "ಇದು ನನ್ನ ಬೆಸ್ಟ್ ಟೈಮ್ ಅಲ್ಲ ಎಂದಾದಲ್ಲಿ, ಇದು ಕಲಿಯಲು ಮತ್ತು ಬೆಳೆಯಲು ಅವಕಾಶ ಎಂದು ಮುಂದೆ ನಡೆಯುತ್ತೇನೆ" ಎಂದು ಹೇಳಿದ್ದಾರೆ.

English summary
So after his split with Sussanne, is the actor planning to get married again and start a new life with someone? Read what he said below.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X