twitter
    For Quick Alerts
    ALLOW NOTIFICATIONS  
    For Daily Alerts

    2022ರ ತಮಿಳಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ವಿಕ್ರಂ'? 'ಕೆಜಿಎಫ್ 2', 'ಬೀಸ್ಟ್' ಹಿಂದಿಕ್ಕಿದ್ರಾ ಕಮಲ್?

    |

    ತಮಿಳಿನ ಉಳಗನಾಯಗನ್ ಕಮಲ್ ಹಾಸನ್ ಸಿನಿಮಾ ಮತ್ತೆ ಕಾಲಿವುಡ್‌ಗೆ ಜೀವ ಒಟ್ಟಿದೆ. 2022ರ ಮೊದಲಾರ್ಧ ಬ್ಲಾಕ್‌ ಬಸ್ಟರ್ ಸಿನಿಮಾ ನೀಡಲು ಸೋತಿದ್ದ ಚಿತ್ರರಂಗವೀಗ ಗೆಲುವಿನ ನಗೆ ಬೀರಿದೆ. ಈ ಸಿನಿಮಾ ರಿಲೀಸ್ ಆಗಿ ಎರಡು ವಾರಗಳಾಗಿದ್ದರೂ ಥಿಯೇಟರ್ ಹಿಂದೆ ಸರಿಯುವ ಮಾತ್ತಾಡುತ್ತಿಲ್ಲ.

    'ವಿಕ್ರಂ' ಸಿನಿಮಾ ಕಮಲ್ ಹಾಸನ್ ಕರಿಯರ್‌ನಲ್ಲಿ ಹೊಸ ಬಾಕ್ಸಾಫೀಸ್ ದಾಖಲೆಗಳನ್ನು ಮಾಡಿದೆ. ಹಾಗೇ 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ತಮಿಳಿನ ಸಿನಿಮಾ ಎಂಬ ದಾಖಲೆ ಬರೆಯುವುದಕ್ಕೆ ಇನ್ನು ಕೆಲವೇ ಕೆಲವು ಮೆಟ್ಟಿಲುಗಳಿವೆ. ಬಿಡುಗಡೆಯಾದ 11 ದಿನಗಳಲ್ಲಿ ಬಾಕ್ಸಾಫೀಸ್ ಕಲೆಕ್ಷನ್ 300 ಕೋಟಿ ರೂ. ಕ್ಲಬ್ ಸೇರುವ ಸನಿಹದಲ್ಲಿದೆ.

    'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!

    ಕಳೆದೆರಡು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ 'ವಿಕ್ರಂ' ಸದ್ದು ನೋಡಿದ ಮೇಲೆ ಕಾಲಿವುಡ್ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಸಿದೆ. ತಮಿಳು ಚಿತ್ರರಂಗದ ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ವಿಕ್ರಂ' ಸಿನಿಮಾ 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗುತ್ತಿದೆ. 'ವಿಕ್ರಂ' ಸಿನಿಮಾ ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾವನ್ನು ಬೀಟ್ ಮಾಡಿದೆ. ಇತ್ತ ತಮಿಳುನಾಡಿನಲ್ಲಿ 'ಕೆಜಿಎಫ್ 2' ಸಿನಿಮಾ ಹಿಂದೆ ಬಿದ್ದಿದೆ.

    300 ಕೋಟಿ ರೂ. ಕ್ಲಬ್ ಸೇರಿದ 'ವಿಕ್ರಂ'

    300 ಕೋಟಿ ರೂ. ಕ್ಲಬ್ ಸೇರಿದ 'ವಿಕ್ರಂ'

    ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ ಕಮಲ್ ಹಾಸನ್ 'ವಿಕ್ರಂ' ಸಿನಿಮಾಕ್ಕೆ 300 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿತ್ತು. ಮತ್ತೆ ಕೆಲವು ಮೂಲಗಳ ಪ್ರಕಾರ, 'ವಿಕ್ರಂ' ಸಿನಿಮಾ 11 ದಿನಗಳಲ್ಲಿ 310 ಕೋಟಿ ಕಲೆಕ್ಷನ್ ಮಾಡಿ ಅತೀ ಹೆಚ್ಚು ಗಳಿಕೆ ಕಂಡ ತಮಿಳಿನ ಮೂರನೇ ಸಿನಿಮಾ ಎಂಬ ದಾಖಲೆ ಬರೆದಿದೆ. 10ನೇ ದಿನ ಭಾನುವಾರ ಈ ಸಿನಿಮಾ 25 ಕೋಟಿ ರೂ. ಕಲೆ ಹಾಕಿತ್ತು. 11ನೇ ದಿನವೂ ಸಿನಿಮಾ ಕಲೆಕ್ಷನ್ 14 ಕೋಟಿ ರೂ ಆಗಿದೆ ಎನ್ನಲಾಗಿದೆ.

    ಮೂರೇ ದಿನದಲ್ಲಿ 'ವಿಕ್ರಂ' ಕಲೆಕ್ಷನ್ ₹150 ಕೋಟಿ: ಕಮಲ್ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?ಮೂರೇ ದಿನದಲ್ಲಿ 'ವಿಕ್ರಂ' ಕಲೆಕ್ಷನ್ ₹150 ಕೋಟಿ: ಕಮಲ್ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

    'ಕೆಜಿಎಫ್ 2' ಹಿಂದಿಕ್ಕಿದ 'ವಿಕ್ರಂ'

    'ಕೆಜಿಎಫ್ 2' ಹಿಂದಿಕ್ಕಿದ 'ವಿಕ್ರಂ'

    ಕಮಲ್ ಹಾಸನ್ ಸಿನಿಮಾ 'ವಿಕ್ರಂ' ತಮಿಳುನಾಡಿನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಕೇವಲ ತಮಿಳುನಾಡಿನಲ್ಲಿಯೇ 150 ಕೋಟಿ ರೂ ಕಲೆಕ್ಷನ್ ಮಾಡಿದೆ. ಈ ಮೂಲಕ ಅತೀ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ ಎನ್ನುವ ಪಟ್ಟಿ ಸೇರಿದೆ. ಈ ಹಿಂದೆ 'ಕೆಜಿಎಫ್ 2' ಡಬ್ಬಿಂಗ್ ಸಿನಿಮಾ ಆಗಿದ್ದರೂ, ಈ ವರ್ಷ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಲಿಸ್ಟ್ ಸೇರಿತ್ತು. ಕೆಲವೇ ದಿನಗಳಲ್ಲಿ ತಮಿಳಿನ ಸಿನಿಮಾ 'ಕೆಜಿಎಫ್‌ 2' ದಾಖಲೆಯನ್ನು ತಮಿಳುನಾಡು ಒಂದರಲ್ಲೇ ಮುರಿದಿದೆ.

    'ವಿಕ್ರಂ' ಬೇರೆ ರಾಜ್ಯಗಳಲ್ಲಿ ಎಷ್ಟು ಗಳಿಕೆ?

    'ವಿಕ್ರಂ' ಬೇರೆ ರಾಜ್ಯಗಳಲ್ಲಿ ಎಷ್ಟು ಗಳಿಕೆ?

    'ವಿಕ್ರಂ' ಸಿನಿಮಾ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಅದ್ಭುತ ಗಳಿಕೆ ಕಂಡಿದೆ. ಕಳೆದ 10 ದಿನಗಳಲ್ಲಿ ಆಂಧ್ರ, ತೆಲಂಗಾಣ, ಕರ್ನಾಟಕ ಹಾಗೂ ಕೇರಳದಲ್ಲಿ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಈ ಮೂರು ರಾಜ್ಯಗಳಲ್ಲಿ ಕಂಡ ಗಳಿಕೆ ಹೀಗಿದೆ.

    'ವಿಕ್ರಂ' 10 ದಿನಗಳ ಕಲೆಕ್ಷನ್ ಹೀಗಿದೆ

    ಆಂಧ್ರ/ ತೆಲಂಗಾಣ 25 ಕೋಟಿ ರೂ.
    ಕೇರಳ 30 ಕೋಟಿ ರೂ.
    ಕರ್ನಾಟಕ 15 ಕೋಟಿ ರೂ.

    ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!

    ಹಿಂದಿಯಲ್ಲಿ 'ವಿಕ್ರಂ' ಚಮತ್ಕಾರ ಮಾಡಿಲ್ಲ

    ಹಿಂದಿಯಲ್ಲಿ 'ವಿಕ್ರಂ' ಚಮತ್ಕಾರ ಮಾಡಿಲ್ಲ

    'ವಿಕ್ರಂ' ಸಿನಿಮಾಗೆ ಎಲ್ಲಾ ಭಾಷೆಯಲ್ಲೂ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ ಆದರೆ, ಹಿಂದಿ ಬೆಲ್ಟ್‌ನಲ್ಲಿ ಮಾತ್ರ ಸಿನಿಮಾ ಕಲೆಕ್ಷನ್ ಆಶಾದಾಯಕವಾಗಿಲ್ಲ. ಮೂಲಗಳ ಪ್ರಕಾರ, ಒಂದು ವಾರದಲ್ಲಿ 'ವಿಕ್ರಂ' ಸಿನಿಮಾ ಕೇವಲ 3.45 ಕೋಟಿ ರೂ. ಮಾತ್ರ ಗಳಿಸಿದೆ ಎನ್ನಲಾಗಿದೆ. ಹಿಂದಿ ಬೆಲ್ಟ್ ಬಿಟ್ಟು ವಿದೇಶ ಸೇರಿದಂತೆ ಉಳಿದ ಕಡೆಗಳಲ್ಲೆಲ್ಲಾ ಈ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

    English summary
    Kamal Haasan Vijay Starrer Vikram Is The Highest Grossing Tamil Movie Of 2022, Know More.
    Tuesday, June 14, 2022, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X