For Quick Alerts
  ALLOW NOTIFICATIONS  
  For Daily Alerts

  ರಣ್ವೀರ್ ಸಿಂಗ್ ಗೆ ಸಾಥ್ ನೀಡಿದ ಕಮಲ್, ನಾಗಾರ್ಜುನ

  |

  ನಟ ರಣ್ವೀರ್ ಸಿಂಗ್ ಸಿನಿಮಾಗೆ ಸೌತ್ ಸ್ಟಾರ್ ಗಳು ಬೆಂಬಲ ಸೂಚಿಸಿದ್ದಾರೆ. ನಟ ಕಮಲ್ ಹಾಸನ್ ಹಾಗೂ ನಾಗಾರ್ಜುನ ರಣ್ವೀರ್ ಗೆ ಸಾಥ್ ನೀಡಿದ್ದಾರೆ.

  ರಣ್ವೀರ್ ಸಿಂಗ್ '83' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ದಂತಕಥೆಯನ್ನು ಸಿನಿಮಾ ಹೇಳುತ್ತಿದೆ. ಈ ಸಿನಿಮಾದಲ್ಲಿ ಅಂದಿನ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಕಾಣಿಸಿಕೊಳ್ಳುತ್ತಿದ್ದಾರೆ.

  '83' ವಿಶ್ವಕಪ್ ಚಿತ್ರಕ್ಕೆ ಸೌತ್ ಸ್ಟಾರ್ ನಟನ ಎಂಟ್ರಿ'83' ವಿಶ್ವಕಪ್ ಚಿತ್ರಕ್ಕೆ ಸೌತ್ ಸ್ಟಾರ್ ನಟನ ಎಂಟ್ರಿ

  '83' ಸಿನಿಮಾವನ್ನು 'ಭಜರಂಗಿ ಭಾಯಿಜಾನ್' ಖ್ಯಾತಿಯ ಕಬೀರ್ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಕಬೀರ್ ಸಿಂಗ್ ಸದ್ಯ ಕಮಲ್ ಹಾಸನ್ ಹಾಗೂ ನಾಗಾರ್ಜುನರನ್ನು ಭೇಟಿ ಮಾಡಿ, ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ದಾರೆ.

  ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿದೆ. ತಮಿಳು ಅವರಣಿಕೆಯ ಟೈಟಲ್ ಕಾರ್ಡ್ ನಲ್ಲಿ ಕಮಲ್ ಹಾಸನ್ ಅರ್ಪಿಸುವ ಹಾಗೂ ತೆಲುಗಿನಲ್ಲಿ ನಾಗಾರ್ಜುನ ಅರ್ಪಿಸುವ ಎಂದು ಬರಲಿದೆ. ಈ ಮೂಲಕ ಈ ಸಿನಿಮಾಗೆ ಸೌತ್ ಸ್ಟಾರ್ ಗಳು ಶಕ್ತಿ ತುಂಬಿದ್ದಾರೆ.

  ಈ ಸ್ಟಾರ್ ನಟ ಯಾರು ಅಂತ ಗುರುತಿಸಬಲ್ಲಿರಾ?ಈ ಸ್ಟಾರ್ ನಟ ಯಾರು ಅಂತ ಗುರುತಿಸಬಲ್ಲಿರಾ?

  '83' ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಹಾಕಿದೆ. ಯಾವ ರೀತಿ ರಣ್ವೀರ್ ಸಿಂಗ್ ಪಾತ್ರ ನಿರ್ವಹಣೆ ಮಾಡಿದ್ದಾರೆ ಎನ್ನುವ ಕುತೂಹಲವಿದೆ. ದೀಪಿಕಾ ಪಡುಕೋಣೆ ಸಿನಿಮಾದ ನಾಯಕಿಯಾಗಿದ್ದಾರೆ. ಸಿನಿಮಾ ಏಪ್ರಿಲ್ 10 ರಂದು ಬಿಡುಗಡೆ ಆಗಲಿದೆ.

  English summary
  Nagarjuna and Kamal Haasan to present 83 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X