»   » ಓಹ್! ದೀಪಿಕಾ ಬಾಯ್‌ ಫ್ರೆಂಡ್‌ಗೆ ವಿನ್‌ ಡೀಸೆಲ್‌ ಪ್ರಶಂಸೆ..

ಓಹ್! ದೀಪಿಕಾ ಬಾಯ್‌ ಫ್ರೆಂಡ್‌ಗೆ ವಿನ್‌ ಡೀಸೆಲ್‌ ಪ್ರಶಂಸೆ..

Posted By:
Subscribe to Filmibeat Kannada

ಬಿ ಟೌನ್ ಜೋಡಿ ಹಕ್ಕಿಗಳಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮಿಬ್ಬರ ನಡುವಿನ ಸಂಬಂಧವನ್ನು ಇಷ್ಟು ದಿನ ಬಹಿರಂಗ ಗೊಳಿಸದೇ ಸೈಲೆಂಟ್ ಆಗೇ ಇದ್ದರು. ಯಾರದೇ ಬಾಯಿ ಮುಚ್ಚಿಸಿದ್ದರು, ಹಾಲಿವುಡ್ ಸ್ಟಾರ್ ಬಾಯಿಯನ್ನು ಮುಚ್ಚಿಸಲು ಸಾಧ್ಯವಾಗಿಲ್ಲ. ಹೌದು, ಹಾಲಿವುಡ್ ಸ್ಟಾರ್ ವಿನ್‌ ಡೀಸೆಲ್ ಇಬ್ಬರ ಡೇಟಿಂಗ್ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ.['ಪದ್ಮಾವತಿ' ಚಿತ್ರದ ಸೆಟ್‌ನಲ್ಲಿ ಅವಘಡ: ಓರ್ವ ಸಾವು]

ವಿನ್ ಡೀಸೆಲ್ 2 ದಿನಗಳ ಕಾಲ ತಮ್ಮ 'xxx: ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಚಿತ್ರದ ಪ್ರಮೋಶನ್‌ ಗಾಗಿ ಭಾರತಕ್ಕೆ ಬಂದಿದ್ದರು. ಇದೇ ವೇಳೆ ಸಂದರ್ಶನವೊಂದರಲ್ಲಿ ವಿನ್‌ ಡೀಸೆಲ್, ದೀಪಿಕಾ ಬಾಯ್‌ ಫ್ರೆಂಡ್ ಆಗಿ ರಣವೀರ್ ಸಿಂಗ್ ಗೆ ಸಿಹಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿನ್ ಡೀಸೆಲ್ ಹೇಳಿದ್ದೇನು? ಇಲ್ಲಿದೆ ನೋಡಿ..

ವಿನ್ ಡೀಸೆಲ್, ರಣವೀರ್ ರನ್ನು ದೀಪಿಕಾ ಬಾಯ್‌ ಫ್ರೆಂಡ್ ಎಂದು ಸೂಚಿಸಿದ್ದಾರೆ!

"ಜೀವನದ ಅನುಭವ ರಾಶಿಗಟ್ಟಲೇ ನೀಡುತ್ತದೆ... ಇದು ಜಸ್ಟ್‌ ಸೋ ಫನ್ನಿ. ಜಸ್ಟ್ ಕಳೆದ ರಾತ್ರಿ, ರಣವೀರ್, ಅವಳ(ದೀಪಿಕಾ) ಬಾಯ್‌ ಫ್ರೆಂಡ್, ಈ ಸ್ವೀಟ್ ಕಾಂಪ್ಲಿಮೆಂಟ್ ಅನ್ನು ನನಗೆ ಕೊಡಿ." ಎಂದು ವಿನ್‌ ಡೀಸೆಲ್ ಸಿನಿಮಾ ವಿಮರ್ಶಕಿ ಅನುಪಮ ಚೋಪ್ರಾ ಆಯೋಜಿಸಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.[ದೀಪಿಕಾ ಪಡುಕೋಣೆ ಬಗ್ಗೆ ವಿನ್ ಡೀಸೆಲ್ ಬಾಯಲ್ಲಿ ಎಂತಹ ಮಾತು!]

ರಣವೀರ್ ಬಗ್ಗೆ ವಿನ್ ಹೇಳಿದ್ದೇನು?

"ನಿಮ್ಮ ದೇಹದ ಪಾಂಡಿತ್ಯ ಮೂರನೇ ವ್ಯಕ್ತಿ ದೃಷ್ಟಿಕೋನದಿಂದ ಆಕರ್ಷಕವಾಗಿದೆ. ಕಾರಣ ನೀವು ತಿರುಗುವ ರೀತಿ ಮತ್ತು ನೀವು ನಿಲ್ಲುವ ರೀತಿ ಪದಗಳಿಗಿಂತ ಪರಿಣಾಮಕಾರಿಯಾಗಿದೆ. ಈ ಸಾಲುಗಳು ಮತ್ತು ನಾನು ವಿವರಿಸುತ್ತಿರುವುದು ಅಮೆರಿಕದ ಆಹ್ವಾನಿತ ಆಗಿ' ಎಂದು ವಿನ್‌ ಡೀಸೆಲ್‌ ಹೇಳಿದ್ದಾರೆ.

ಥಿಂಕ್ ಮಾಡಲು ಸಾಧ್ಯವೇ ಇಲ್ಲ: ವಿನ್ ಡೀಸೆಲ್

ಸಂದರ್ಶನದಲ್ಲಿ ರಣವೀರ್ ಮತ್ತು ದೀಪಿಕಾ ಕುರಿತು ಮಾತನಾಡುತ್ತಾ "ಮುಂಭಾಗದ ಬಾಗಿಲಿನ ಮೇಲೆ ನಿಂತು ನನ್ನನ್ನು ನೋಡಿದ್ದು, ಅದರ ಬಗ್ಗೆ ಹೇಳುವುದು ಏನೆಂದರೆ 'ಇದರ ಬಗ್ಗೆ ಯೋಚನೆ ಮಾಡಲು ಸಾಧ್ಯವೇ ಇಲ್ಲ'," ಎಂದು ಹೇಳಿದರು.

ದೀಪಿಕಾಳನ್ನು ಶ್ಲಾಘಿಸಿದ ವಿನ್ ಡೀಸೆಲ್‌

ಭಾರತಕ್ಕೆ ಭೇಟಿ ನೀಡಿರುವ ವಿನ್‌ ಡೀಸೆಲ್ ದೀಪಿಕಾ ಪಡುಕೋಣೆ ಅನ್ನು " 'ಆನ್‌ ಏಂಜೆಲ್‌ ವಿತ್ ಎ ಬ್ಯೂಟಿಫುಲ್ ಸೋಲ್'. ಭಾರತಕ್ಕೆ ಬರಲು ಅವಕಾಶಕ್ಕಾಗಿ ಕಾಯುತ್ತಿದ್ದೆ. ದೀಪಿಕಾ ನನ್ನ ಜೀವನಕ್ಕೆ ಆಶೀರ್ವಾದ ಮಾಡಿದ ಕ್ವೀನ್ ಮತ್ತು ಏಂಜೆಲ್‌. ಇವರು ಸುಂದರವಾದ ಆತ್ಮ ಹೊಂದಿದ್ದಾರೆ. ಮ್ಯಾಜಿಕ್ ನಂತೆ ಇಬ್ಬರೂ ಸಹ ಆನ್ ಸ್ಕ್ರೀನ್‌ ನಲ್ಲಿ ಕಾಣಿಸಿಕೊಂಡಿದ್ದು ನನ್ನ ಲೈಫ್‌ ಗೆ ಆಶೀರ್ವಾದ ಮಾಡಿ��್ದಾರೆ", ಎಂದು ವಿನ್ ಡೀಸೆಲ್ ಹೇಳಿದ್ದಾರೆ.

ದೀಪಿಕಾ ರೀತಿ ಯಾರು ಇಲ್ಲ

"ದೀಪಿಕಾ ಳಂತೆ ಯಾರು ಇಲ್ಲ. ದೀಪಿಕಾ ಪಡುಕೋಣೆ ಭಾರತೀಯ ಮೂಲದವರು ಸಹ. ಪ್ರಪಂಚದ ಕ್ವೀನ್ ಇವರು. ಇವರನ್ನು 'ಬಾಜಿರಾವ್ ಮಸ್ತಾನಿ' ಚಿತ್ರದಲ್ಲಿ ನೋಡಿದ್ದೇ. ಮೈಂಡ್‌ಬ್ಲೋಯಿಂಗ್," ಎಂದು ವಿನ್‌ ಡೀಸೆಲ್‌ ತನ್ನ ಸಹನಟಿ ಬಗ್ಗೆ ಪ್ರಶಂಸಿಸಿದ್ದಾರೆ.

ಮುಂಬೈನಲ್ಲಿ ವಿನ್‌ ಡೀಸೆಲ್

"ಈ ಸಿಟಿಗೆ ಬಂದಿರುವುದು ಒಂದು ರೀತಿ ಕನಸು ನನಸಾದಂತೆ ಆಗಿದೆ. ದೀಪಿಕಾ ಜೊತೆ ದೀರ್ಘಕಾಲ ನಟಿಸಬೇಕು ಎಂಬ ಆಸೆ. ಅವರನ್ನು ಕೇವಲ ಒಂದು ವರ್ಷದ ಹಿಂದೆ ಅಷ್ಟೇ ಭೇಟಿ ಮಾಡಿದೆ. ಭಾರತದಲ್ಲಿ ಮೊದಲು ಸಿನಿಮಾ ರಿಲೀಸ್ ಮಾಡಿ ಎಂದು ಒತ್ತಾಯಿಸಿದರು. ಅವರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಈಗ ಇಲ್ಲಿ ನಾವಿದ್ದೇವೆ,' ಎಂದು ವಿನ್‌ ಹೇಳಿದ್ದಾರೆ.

English summary
Diesel was on a two-day trip to promote "xXx: Return of Xander Cage", which also features Deepika in a key role. During an interview, Diesel said that Deepika's "boyfriend" Ranveer paid him a sweet compliment.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X