»   » ದೀಪಿಕಾ ಧರಿಸಿದ್ದ ಉಡುಗೆ ಬಗ್ಗೆ ಈಗ ಭಾರೀ ಚರ್ಚೆ

ದೀಪಿಕಾ ಧರಿಸಿದ್ದ ಉಡುಗೆ ಬಗ್ಗೆ ಈಗ ಭಾರೀ ಚರ್ಚೆ

Posted By:
Subscribe to Filmibeat Kannada

ಬಾಲಿವುಡ್ ಮತ್ತು ಹಾಲಿವುಡ್ ನಟಿಯರು ಸ್ಲೀವ್ ಲೆಸ್ ಮತ್ತು ಗ್ಲಾಮರಸ್ ಡ್ರೆಸ್‌ ನಲ್ಲೇ ಹೆಚ್ಚಾಗಿ ಎಲ್ಲಾ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಗ್ಲಾಮರಸ್ ಅಂತ ಧರಿಸಿಕೊಂಡ ಡ್ರೆಸ್‌ ಗಳು ನಟಿ ಮಣಿಯರಿಗೆ ಫಿಟ್ ಆಗದೇ ಸಡಿಲಗೊಂಡು, ತಮ್ಮ ಉಡುಗೆಗಳಿಂದಲೇ ವಿವಾದಕ್ಕೆ ಸಿಲುಕುತ್ತಾರೆ. ಅಂದಹಾಗೆ ಅಂತಹದೊಂದು ಘಟನೆಗೆ ಈಗ ದೀಪಿಕಾ ಪಡುಕೋಣೆ ಸಿಲುಕಿದ್ದಾರೆ.[ಓಹ್! ದೀಪಿಕಾ ಬಾಯ್‌ ಫ್ರೆಂಡ್‌ಗೆ ವಿನ್‌ ಡೀಸೆಲ್‌ ಪ್ರಶಂಸೆ..]

priyaka chopra

2017 ಜನವರಿ 8 ರಂದು ಪ್ರಿಯಾಂಕ ಚೋಪ್ರಾ 'ಗೋಲ್ಡನ್‌ ಗ್ಲೋಬ್' ಪ್ರಶಸ್ತಿ ಸಮಾರಂಭಕ್ಕೆ ಹೊಳೆಯುವ ಗೌನ್ ಜೊತೆಗೆ ಪ್ಲಂಗಿಂಗ್ ನೆಕ್‌ಲೈನ್ ಡ್ರೆಸ್ ಧರಿಸಿದ್ದರು. ಅವರನ್ನು ಆ ಉಡುಗೆಯಲ್ಲಿ ನೋಡಿದ ಹಾಲಿವುಡ್ ಸೆಲೆಬ್ರಿಟಿಗಳು ಪ್ರಿಯಾಂಕ ಜೊತೆ ಫೋಟೋ ಮೇಲೆ ಫೋಟೋ ತೆಗೆಸಿಕೊಂಡ್ರು. ಆದರೆ ಅದೇ ರೀತಿಯ ಉಡುಗೆಯನ್ನು ತೊಟ್ಟ ದೀಪಿಕಾ ಈಗ ಸಿಕ್ಕಾಪಟ್ಟೆ ನೆಗೆಟಿವ್ ಅಭಿಪ್ರಾಯಗಳನ್ನು ಪಡೆಯುತ್ತಿದ್ದಾರೆ.[ಫೋಟೋಗಳು: 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ]

Deepika Padukone’s this ensemble proves all that glitters is NOT gold

ಮುಂಬೈನಲ್ಲಿ ಜನವರಿ 13 ರಂದು ಹಾಲಿವುಡ್ ಸ್ಟಾರ್ ವಿನ್‌ ಡೀಸೆಲ್ ಮತ್ತು ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ನಟಿಸಿರುವ 'xxx: ರಿಟರ್ನ್‌ ಆಫ್ ಕ್ಸಾಂಡರ್ ಕೇಜ್' ಸಿನಿಮಾ ಪ್ರೀಮಿಯರ್ ಶೋ ನಡೆಯಿತು. ಅಂದು ದೀಪಿಕಾ ಪ್ಲಂಗಿಂಗ್ ನೆಕ್‌ಲೈನ್, ಗೌನ್ ಧರಿಸಿಬಂದಿದ್ದರು. ಆದ್ರೆ ಗೌನ್‌ ತುಂಬಾ ಲೋ ಕಟ್ ಫಿಟ್ ಆಗಿದ್ದರಿಂದ ಅವರಿಗೆ ತಕ್ಕನಾಗಿ ಗ್ಲಾಮರಸ್ ನೀಡುವಲ್ಲಿ ವಿಫಲವಾಯಿತು. ಹಾಗೆ ನೋಡುಗರಿಗೂ ಹೆಚ್ಚಾಗಿ ಮುಜುಗರ ಉಂಟುಮಾಡುವ ಧಿರಿಸಾಗಿ ಕಾಣಿಸಿಕೊಂಡಿತು.[ರಣವೀರ್-ದೀಪಿಕಾ ನಡುವೆ ಇದ್ದಕ್ಕಿದ್ದಂತೆ ಏನಾಯ್ತು?]

Deepika Padukone’s this ensemble proves all that glitters is NOT gold

ಪ್ರೀಮಿಯರ್ ಶೋ ಮತ್ತು ಮೀಡಿಯಾ ಈವೆಂಟ್ ನಲ್ಲಿ ವಿನ್‌ ಮತ್ತು ದೀಪಿಕಾ 'ಲುಂಗಿ ಡ್ಯಾನ್ಸ್' ಹಾಡಿಗೆ ಸ್ಟೆಪ್‌ ಹಾಕಿದಾಗ ದೀಪಿಕಾ ಡ್ರೆಸ್ ನೋಡುಗರಿಗೆ ಇನ್ನೂ ಹೆಚ್ಚು ದಿಗಿಲು ಮೂಡಿಸಿದೆ ಎಂದು ಹಲವರು ಕಮೆಂಟ್ ಸಹ ಮಾಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿ ದೀಪಿಕಾ ಧರಿಸಿದ್ದ ಉಡುಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಹಲವರು ಉಡುಗೆ ಆಯ್ಕೆ ಬಗ್ಗೆ ಸ್ಫೂರ್ತಿದಾಯಕವಾಗಿದೆ ಎಂದರೆ, ಇನ್ನೂ ಹಲವರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ.

[ದೀಪಿಕಾ ಪ್ರೀಮಿಯರ್ ಶೋ ಈವೆಂಟ್ ನಲ್ಲಿ ಧರಿಸಿದ್ದ ಉಡುಗೆ ಫೋಟೋ ಗ್ಯಾಲರಿ]

English summary
Deepika Padukone Made Vin Diesel Pull Off 'Lungi Dance' And The Result Is Bloody Entertaining!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada