»   » ತಂದೆಗೆ ನಟ ರಿತೇಶ್ ದೇಶಮುಖ್ ಲಿವರ್ ದಾನ?

ತಂದೆಗೆ ನಟ ರಿತೇಶ್ ದೇಶಮುಖ್ ಲಿವರ್ ದಾನ?

Posted By:
Subscribe to Filmibeat Kannada
Reitesh to donate liver to his dad
ಚೆನ್ನೈ ನಗರದ ಗ್ಲೋಬಲ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಗಂಭೀರ ಪರಿಸ್ಥಿತಿಯಲ್ಲಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವಿಲಾಸ್ ರಾವ್ ದೇಶಮುಖ್ ಅವರ ಪ್ರಾಣ ಉಳಿಸಲು ಮಗ ಹೆಸರಾಂತ ಬಾಲಿವುಡ್ ನಟ ರಿತೇಶ್ ದೇಶಮುಖ್ ತಮ್ಮ ಪಿತ್ತಜನಕಾಂಗದ (ಲಿವರ್) ಒಂದು ಭಾಗವನ್ನು ನೀಡಲು ಮುಂದಾಗಿದ್ದಾರೆನ್ನಲಾಗಿದೆ.

ಕೃತಕ ಉಸಿರಾಟ ವ್ಯವಸ್ಥೆಯಲ್ಲಿರುವ ಸಚಿವ ದೇಶಮುಖ್ ಅವರ ದೇಹಸ್ಥಿತಿ ತೀವ್ರ ಬಿಗಡಾಯಿಸಿದೆ. ಒಂದು ವರ್ಷದ ಹಿಂದೆಯೇ ಸಚಿವರಿಗೆ ಲಿವರ್ ಸಮಸ್ಯೆ ಇರುವುದು ತಿಳಿದು ಬಂದಿತ್ತು. ಪಿತ್ತಜನಕಾಂಗ ಕಸಿ ಮಾಡಿಸಿಕೊಳ್ಳಲು ಅವರು ಚಿಂತನೆ ನಡೆಸಿದ್ದರು. ಈ ಸಂಬಂಧ ವಿದೇಶಕ್ಕೆ ತೆರಳಿ ತಪಾಸಣೆ ಕೂಡಾ ಮಾಡಿಸಿಕೊಂಡು ಬಂದಿದ್ದರು.

ಮುಂಬೈ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದ ವಾರ ಸಚಿವರು ದಾಖಲಾಗಿದ್ದರು. ಲಿವರ್ ಸಮಸ್ಯೆಯಿಂದ ಮೂತ್ರಪಿಂಡಗಳು ನಿಷ್ಕ್ರಿಯವಾದ ಹಿನ್ನಲೆಯಲ್ಲಿ ಡಯಾಲಿಸಿಸ್ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಚಿವರನ್ನು ಸೋಮವಾರ (ಆ 6) ಚೆನ್ನೈ ಗ್ಲೋಬಲ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಸಚಿವ ದೇಶಮುಖ್ ಅವರ ಪರಿಸ್ಥಿತಿ ಗಂಭೀರವಾಗಿದ್ದರೂ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ಈ ಮಧ್ಯೆ ಸಚಿವರ ಮಗ ರಿತೇಶ್ ದೇಶಮುಖ್ ತನ್ನ ಲಿವರ್ ನ ಒಂದು ಭಾಗ ಕೊಡಲು ಮುಂದಾಗಿದ್ದಾರೆ. ಅವರ ಲಿವರ್ ಸಚಿವರ ಲಿವರ್ ಜೊತೆ ಹೊಂದಿಕೆಯಾಗುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

67ವರ್ಷದ ಸಚಿವ ವಿಲಾಸ್ ರಾವ್ ದೇಶಮುಖ್ ಕರಳು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.

English summary
Riteish Deshmukh's father Vilasrao Deshmukh has been airlifted to a hospital in Chennai as he is in a critical condition. Riteish has reportedly stated that he is ready to donate a part of his liver (as is required in such cases) to help his father.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada