»   » ಒಂಬತ್ತು ಹುಡುಗಿಯರ ಮಧ್ಯೆ ಸಲ್ಮಾನ್ ನೋ ಎಂಟ್ರಿ

ಒಂಬತ್ತು ಹುಡುಗಿಯರ ಮಧ್ಯೆ ಸಲ್ಮಾನ್ ನೋ ಎಂಟ್ರಿ

Posted By:
Subscribe to Filmibeat Kannada

ಸದ್ಯದಲ್ಲೇ ಬಾಲಿವುಡ್ ನಲ್ಲಿ ಹೊಸ ಮಲ್ಟಿ ಸ್ಟಾರ್ ಚಿತ್ರವೊಂದು ಬರಲಿದೆ. ಮೂವರು ನಾಯಕರು ಆರು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂವರು ನಾಯಕರಿಗೆ ಒಂಬತ್ತು ನಾಯಕಿಯರು ಜೊತೆಯಾಗಲಿದ್ದಾರೆ. ಬರಲಿರುವ ಈ ಚಿತ್ರದ ಹೆಸರು 'ನೋ ಎಂಟ್ರಿ'. ಈ ಚಿತ್ರದ ಮೂವರು ನಾಯಕರು ಸಲ್ಮಾನ್ ಖಾನ್, ಅನಿಲ್ ಕಪೂರ್ ಹಾಗೂ ಫರ್ದೀನ್ ಖಾನ್. ಅವರಿಗೆ ಜೊತೆಯಾಗಿ ಚಿತ್ರದಲ್ಲಿ ಒಂಬತ್ತು ನಾಯಕಿಯರು ಇರಲಿದ್ದಾರೆ.

ಅನೀಸ್ ಬಜ್ಮಿ ನಿರ್ದೇಶಿಸಲಿರುವ ಈ ಚಿತ್ರದ ಒಂಬತ್ತು ನಾಯಕಿಯರಲ್ಲಿ ಯಾರೊಬ್ಬರೂ ಇನ್ನೂ ಆಯ್ಕೆಯಾಗಿಲ್ಲ. ಒಂಬತ್ತು ನಾಯಕಿಯರು ಯಾಕೆ ಎಂಬ ಪ್ರಶ್ನೆಗೆ, "ಮೂರು ನಾಯಕರೂ ದ್ವಿಪಾತ್ರದಲ್ಲಿ ನಟಿಸಲಿರುವುದರಿಂದ ಅವರಿಗೆ ಗೊಂದಲು ಉಂಟುಮಾಡಲು ಒಂಬತ್ತು ನಾಯಕಿಯರು ಇರುತ್ತಾರೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆ ಅನೀಸ್ ಬಜ್ಮಿ. ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಮುಂಬೈನಲ್ಲೇ ನಡೆಸಲಾಗುವುದು ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕರು.

ನಿರ್ದೇಶಕ ಅನೀಸ್ ಬಜ್ಮಿ ಅವರಿಗೆ ಇಂಥ ಹಾಸ್ಯ ಪ್ರಧಾನ ಚಿತ್ರಗಳನ್ನು ರೂಪಿಸುವುದು ಎಂದರೆ ಭಾರಿ ಖುಷಿಯಂತೆ. ಈ ವಿಷಯವನ್ನು ಸಖತ್ ಖುಷಿಯಿಂದಲೇ ಹೇಳಿಕೊಂಡಿರುವ ಬಜ್ಮಿ, ಸಲ್ಮಾನ್ ಖಾನ್ ಅವರನ್ನೇ ನಂಬಿಕೊಂಡು ಚಿತ್ರದ ಬಗ್ಗೆ ಸ್ಕೆಚ್ ರೂಪಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಅನೀಲ್ ಕಪೂರ್ ಹಾಗೂ ಫರ್ದಿನ್ ಖಾನ್ ಇದ್ದೇ ಇರುತ್ತಾರೆ ಎಂದಿದ್ದಾರೆ.

ಬಂದಿರುವ ಮಾಹಿತಿ ಪ್ರಕಾರ, ಹಾಲಿವುಡ್ ಶೈಲಿಯ ಹಾಸ್ಯವನ್ನು ಚಿತ್ರಕಥೆಯಲ್ಲಿ ಅಳವಡಿಸಲಾಗಿದೆ. ನೋ ಎಂಟ್ರಿ ಎಂಬ ಟೈಟಲ್ ಕೂಡ ಅದನ್ನೇ ಹೇಳುತ್ತಿದೆ ಎಂಬುದನ್ನು ನಿರ್ದೇಶಕರು ನಿರಾಕರಿಸಿದ್ದಾರೆ. "ಟೈಟಲ್ ಆಕರ್ಷಕವಾಗಿರಲಿ ಎಂದು ಹಾಗೆ ಇಟ್ಟಿದ್ದೇನೆ. ಹಾಲಿವುಡ್ ಚಿತ್ರದ ನಿರೂಪಣೆ ನೆರಳು ಇದರಲ್ಲಿರುವುದಿಲ್ಲ. ಆದರೆ ಚಿತ್ರಕಥೆ ಆ ರೀತಿ ಇದೆ ಅಷ್ಟೇ" ಎಂದು ಎಲ್ಲರಲ್ಲೂ ತೀವ್ರ ಕುತೂಹಲ ಸೃಷ್ಟಿಸಿದ್ದಾರೆ. (ಏಜೆನ್ಸೀಸ್)

English summary
Anees Bazmee direction upcoming comedy movie 'No Entry' starts very soon. Salman Khan, Anil Kapoor and Fardhin Khan are the three Heros. There will be nine heroines in the movie which are not selected yet. This is full comedy oriented movie and story based on Hollywood style. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada