»   » ಪ್ರೀತಿಯ ತಂಗಿಗೆ ಆತ್ಮೀಯ ಉಡುಗೊರೆ ಕೊಟ್ಟ ಸಲ್ಮಾನ್

ಪ್ರೀತಿಯ ತಂಗಿಗೆ ಆತ್ಮೀಯ ಉಡುಗೊರೆ ಕೊಟ್ಟ ಸಲ್ಮಾನ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದ ಜನಪ್ರಿಯ ನಟ ಸಲ್ಮಾನ್ ಖಾನ್ ಅವರು ನಟನೆ ಜೊತೆಗೆ ಚಿತ್ರಕಲೆಯಲ್ಲೂ ಆಸಕ್ತಿ ಹೊಂದಿರುವುದು ಹಾಗೂ ಸಮಯ ಸಿಕ್ಕಾಗಲೆಲ್ಲ ಚಿತ್ರ ರಚಿಸುವ ಹವ್ಯಾಸ ಇರಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ.

ಇದರ ಜೊತೆಗೆ ಸಲ್ಮಾನ್ ಅವರು ತಮ್ಮ ಕುಟುಂಬದ ಸದಸ್ಯರು ಅದರಲ್ಲೂ ತಂಗಿ ಅರ್ಪಿತಾ ರನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಹಾಗೂ ಅವರ ಸುಖಕ್ಕಾಗಿ ಸದಾ ಶ್ರಮಿಸುತ್ತಾರೆ ಇಡೀ ಸಿನಿ ಪ್ರಪಂಚವೇ ಈ ವಿಷಯದಲ್ಲಿ ಸಲ್ಮಾನ್ ಕಂಡರೆ ತಲೆಬಾಗುತ್ತದೆ.[ಸಲ್ಮಾನ್ ಖಾನ್ ಗೆ ಅರ್ಪಿತಾ ಒಡಹುಟ್ಟಿದ ತಂಗಿ ಅಲ್ಲ]

ಇತ್ತೀಚಿಗೆ ಅರ್ಪಿತಾ ಖಾನ್ ಮದುವೆಯಾಗಿ ಸುಖ ಸಂಸಾರದ ಸುಂದರ ಸ್ವಪ್ನಗಳನ್ನು ಕಾಣುತ್ತಿದ್ದಾರೆ. ಚಿತ್ರೀಕರಣದ ನಡುವೆ ಬಿಡುವಾದಗ ಸಲ್ಮಾನ್ ಖಾನ್ ತಪ್ಪದೇ ಅರ್ಪಿತಾ ರನ್ನು ಭೇಟಿ ಮಾಡುತ್ತಾರೆ. ಜೊತೆಗೆ ಒಂದು ಗಿಫ್ಟ್ ನೀಡುತ್ತಾರೆ.

Salman Khan Gifts Unique Painting To Sister Arpita Khan

ಇತ್ತೀಚೆಗೆ ಹೋಳಿ ಹಬ್ಬದ ಸಂಭ್ರಮ ಮುಗಿಸಿಕೊಂಡು ಮನೆಗೆ ಬಂದ ಅರ್ಪಿತಾ ಅವರಿಗೆ ಸಲ್ಮಾನ್ ಅವರು ತಮ್ಮ ಕೈಯಾರ ಬರೆದ ಚಿತ್ರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಣ್ಣನ ಪ್ರೀತಿಯ ಉಡುಗೊರೆ ಕಂಡು ಅರ್ಪಿತಾ ಕಣ್ತುಂಬಿ ಬಂದಿತ್ತು ಎಂಬ ಸುದ್ದಿಯಿದೆ.

ವಿವಿಧ ಬಗೆಯಲ್ಲಿ ನಮಾಜು ಮಾಡುವ ಭಂಗಿಗಳನ್ನು ಬಣ್ಣ ಬಣ್ಣದ ಶೇಡ್ಸ್ ನಲ್ಲಿ ಸಲ್ಲೂ ಚಿತ್ರಿಸಿ ಅರ್ಪಿತಾಗೆ ನೀಡಿದ್ದಾರೆ. ಈ ಬಗ್ಗೆ ಖುಷಿಯಿಂದ ಇನ್ಸ್ಟಾಗ್ರಾಂನಲ್ಲಿ ಅರ್ಪಿತಾ #beautifulpainting #courtesybhai #loveit #homesweethome #differentpostures #namaaz" ಎಂದು ಅಡಿಬರಹ ನೀಡಿ ಚಿತ್ರ ಪೋಸ್ಟ್ ಮಾಡಿದ್ದಾರೆ.

Salman Khan Gifts Unique Painting To Sister Arpita Khan

ಸಲ್ಮಾನ್ ಖಾನ್ ಅವರು ಸೋನಮ್ ಕಪೂರ್ ಜೊತೆಗೆ ಪ್ರೇಮ್ ರತನ್ ಧನ್ ಪಾಯೋ, ಕರೀನಾ ಕಪೂರ್ ಜೊತೆಗೆ ಬಜರಂಗಿ ಭಾಯಿ ಜಾನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಲ್ತಾನ್ ಎಂಬ ಹೆಸರಿನ ಮತ್ತೊಂದು ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೂ ಹರಡುತ್ತಿದೆ.

English summary
We all know about Salman Khan's painting hobby and the actor has got quite an expertise in that. While, Salman Khan loves to paint in leisure, recently the actor gifted a unique painting to his doting sister Arpita Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada