»   » ಕೋರ್ಟ್ ಏನೇ ಅಂದರೂ ನೀ ನಮ್ಮ ದೇವರು!

ಕೋರ್ಟ್ ಏನೇ ಅಂದರೂ ನೀ ನಮ್ಮ ದೇವರು!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಟ್ ಅಂಡ್ ರನ್ ಕೇಸಿನಲ್ಲಿ ಫಿಟ್ ಆದ ಬಾಲಿವುಡ್ ನಟ ಸಲ್ಮಾನ್ ಖಾನ್ 2 ದಿನಗಳ ಮಟ್ಟಿಗೆ ಜೈಲುಶಿಕ್ಷೆ ತಪ್ಪಿಸಿಕೊಂಡಿದ್ದಾರೆ. ಸೆಷನ್ಸ್ ಕೋರ್ಟ್ 5 ವರ್ಷ ಶಿಕ್ಷೆ ಪ್ರಕಟಿಸಿದೆ.

ಸುಮಾರು 13 ವರ್ಷಗಳ ನಂತರ ತೀರ್ಪು ಹೊರ ಬಿದ್ದಿದ್ದು ಸಲ್ಮಾನ್ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದೆ. ಪ್ರಕರಣದಲ್ಲಿ ಸಲ್ಮಾನ್ ದೋಷಿ ಎಂದು ಜಡ್ಜ್ ಡಿಡಬ್ಲ್ಯೂ ದೇಶಪಾಂಡೆ ಆದೇಶ ನೀಡಿದ್ದಾರೆ. [ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಸಲ್ಮಾನ್ ಗೆ ಶಿಕ್ಷೆ ಸಿಗುವುದು ನಿರೀಕ್ಷಿತವಾದರೂ ಶಿಕ್ಷೆ ಪ್ರಮಾಣ, ಬ್ಯಾಡ್ ಬಾಯ್ ಎನಿಸಿದ್ದ ಸಲ್ಮಾನ್ ಬದಲಾಗಿದ್ದಾನೆ. ಆತನನ್ನು ನಂಬಿಕೊಂಡು ಇಡೀ ಇಂಡಸ್ಟ್ರಿ ನಿಂತಿದೆ ಎಂಬ ಮಾತುಗಳಿವೆ. [ಸಲ್ಲೂ ಮೆಂಟಲ್ ಅಲ್ಲ, ಗಾಡ್ ಫಾದರ್ ಕಣ್ರಿ]

ಸಲ್ಮಾನ್ ಗೆ ಶಿಕ್ಷೆ ನೀಡಿರುವ ಕೋರ್ಟ್ ಏನೇ ಅಂದರೂ ಸಲ್ಮಾನ್ ನಮ್ಮ ಪಾಲಿನ ದೇವರು. ಸಲ್ಮಾನ್ ಸ್ನೇಹಪರ ಜೀವಿ, ಒಬ್ಬನ ಜೀವ ತೆಗೆದರೂ ನೂರಾರು ಜನರಿಗೆ ಬದುಕು ನೀಡಿದ್ದಾನೆ ಎಂದು ಬಾಲಿವುಡ್ ಮಂದಿ ಹಾಡಿ ಹೊಗಳಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಸೆಲೆಬ್ರಿಟಿಗಳ ಟ್ವೀಟ್ ಗಳು ಇಲ್ಲಿವೆ...

ಕೆಲವರಿಂದ ಹುಚ್ಚಾಪಟ್ಟೆ ಟ್ವೀಟ್ಸ್

ಗಾಯಕ ಅಭಿಜಿತ್ ಸಂತ್ರಸ್ತರ ಬಗ್ಗೆ ಮಾಡಿದ ಟ್ವೀಟ್ ಗದ್ದಲ ಉಂಟು ಮಾಡಿತ್ತು. ಕಮಲ್ ಆರ್ ಖಾನ್ ನ್ಯಾಯಾಂಗ ವ್ಯವಸ್ಥೆ ಬಗ್ಗೆಯೇ ಪ್ರಶ್ನಿಸಿದ್ದಾರೆ. ಫರ್ಹಾಖಾನ್ ಕೂಡಾ ಫುಟ್ ಪಾತ್ ಮೇಲೆ ಮಲಗುವವರನ್ನು ಪ್ರಶ್ನಿಸಿದ್ದಾರೆ. ಉಳಿದ ಸೆಲೆಬ್ರಿಟಿಗಳು ತಮ್ಮ ಗೋಳು ತೋಡಿಕೊಂಡರೆ, ಮತ್ತೆ ಕೆಲವರು ಸಲ್ಲೂ ಮನೆಯಲ್ಲಿ ಬೀಡು ಬಿಟ್ಟಿದ್ದಾರೆ.

ಫರ್ಹಾ ಖಾನ್ ಟ್ವೀಟ್

ನೃತ್ಯ ಸಂಯೋಜಕಿ, ನಟಿ, ನಿರ್ದೇಶಕಿ ಫರ್ಹಾಖಾನ್ ಟ್ವೀಟ್ ಮಾಡಿ ಕಳಕಳಿ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್

ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ ಕೂಡಾ ಸಲ್ಲೂ ಫ್ಯಾನ್. ಸಲ್ಮಾನ್ ಬೆಂಬಲಕ್ಕೆ ನಾವಿದ್ದೇವೆ ಎಂದಿದ್ದಾರೆ.

ನಟಿ ಪರಿಣಿತಿ ಛೋಪ್ರಾ

ನಟಿ ಪರಿಣಿತಿ ಛೋಪ್ರಾ ಟ್ವೀಟ್ ಮಾಡಿ, ಇದು ನೋವಿನ ಸಂಗತಿ. ಸಲ್ಮಾನ್ ಮಾಡಿರುವ ಉತ್ತಮ ಕಾರ್ಯಗಳನ್ನು ಜಡ್ಜ್ ಪರಿಗಣಿಸಲಿ ಎಂದಿದ್ದಾರೆ.

ನಟಿ ಸೋನಾಕ್ಷಿ ಸಿನ್ಹಾ

ನಟಿ ಸೋನಾಕ್ಷಿ ಸಿನ್ಹಾ ಬೆಳಗ್ಗಿನಿಂದಲೂ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದಲ್ಲಿ ಬೀಡು ಬಿಟ್ಟಿದ್ದಾರೆ. ದಬ್ಬಾಂಗ್ ಚಿತ್ರದಲ್ಲಿ ಸಲ್ಲೂ ಜೊತೆ ನಟಿಸಿದ ಸೋನಾಕ್ಷಿಗೆ ಚಿತ್ರರಂಗದಲ್ಲಿ ಒಳ್ಳೆ ಬ್ರೇಕ್ ಸಿಕ್ಕಿದ್ದು ಸಲ್ಮಾನ್ ಖಾನ್ ರಿಂದ ಎನ್ನಬಹುದು.

ನ್ಯಾಯಾಂಗ ವ್ಯವಸ್ಥೆಗೆ ಗೌರವಿಸಬೇಕು

ನ್ಯಾಯಾಂಗ ವ್ಯವಸ್ಥೆಗೆ ಗೌರವಿಸಬೇಕು, ಸಲ್ಮಾನ್ ಖಾನ್ ಹಾಗೂ ಕುಟುಂಬ ಕೂಡಾ ದೇಶದ ಕಾನೂನನ್ನು ಗೌರವಿಸುತ್ತದೆ: ವರುಣ್ ಧವನ್

ಸಲ್ಲೂ ಕುಟುಂಬದ ಗೆಳತಿ ದಿಯಾ ಮಿರ್ಜಾ

ಸಲ್ಲೂ ಕುಟುಂಬದ ಗೆಳತಿ ದಿಯಾ ಮಿರ್ಜಾ ಅವರು ಸಲ್ಮಾನ್ ಅವರು ಇತರರಿಗೆ ನೆರವಾಗುವ ಬಗ್ಗೆ ಹೇಳಿಕೊಂಡಿದ್ದಾರೆ.

ಸಲ್ಮಾನ್ ಬೀಯಿಂಗ್ ಹ್ಯೂಮನ್

ಸಲ್ಮಾನ್ ಬೀಯಿಂಗ್ ಹ್ಯೂಮನ್ ಅವರು ಎಷ್ಟು ಜನರ ಬದುಕು ಬಂಗಾರವಾಗಿದೆ ಎಂಬುದನ್ನು ಗಮನಿಸಿ.

ರಿತೇಶ್ ದೇಶ್ ಮುಖ್

ರಿತೇಶ್ ದೇಶ್ ಮುಖ್ ಪ್ರತಿಕ್ರಿಯಿಸಿ ಕೋರ್ಟ್ ಆದೇಶದ ಬಗ್ಗೆ ಏನು ಹೇಳಲಾರೆ. ಅದರೆ, ಗೆಳೆಯ ಸಲ್ಮಾನ್ ಉತ್ತಮ ವ್ಯಕ್ತಿ ಎಂದಿದ್ದಾರೆ.

English summary
Salman Khan, who was found guilty in 2002 hit-and-run case, has been sentenced to five years in prison. The Bollywood actor broke down in the court when the judge pronounced the verdict on Wednesday, May 6.Check how Bollywood actors, celebs are reacting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada