»   » ಪಾಕಿಸ್ತಾನದಲ್ಲಿ ಶಾರುಖ್ ಖಾನ್ 'ರಯೀಸ್' ಬ್ಯಾನ್: ಕಾರಣಗಳೇನು?

ಪಾಕಿಸ್ತಾನದಲ್ಲಿ ಶಾರುಖ್ ಖಾನ್ 'ರಯೀಸ್' ಬ್ಯಾನ್: ಕಾರಣಗಳೇನು?

Posted By:
Subscribe to Filmibeat Kannada

ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ಅಭಿನಯದ 'ರಯೀಸ್' ಚಿತ್ರವನ್ನು ಪಾಕಿಸ್ತಾನದಲ್ಲಿ ಭಾನುವಾರ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಸೋಮವಾರ ಸಿನಿಮಾವನ್ನು ರಿಲೀಸ್ ಮಾಡದಂತೆ ಬ್ಯಾನ್ ಮಾಡಲಾಗಿದೆ.[ಶಾರುಖ್ ಖಾನ್ 'ರಯೀಸ್'ಗೆ ವಿಮರ್ಶಕರು ಫುಲ್ ಫಿದಾ!]

ಪಾಕಿಸ್ತಾನ ನಟಿ ಮಹಿರಾ ಖಾನ್ ಮತ್ತು ಶಾರುಖ್ ಖಾನ್ ಅಭಿನಯದ 'ರಯೀಸ್' ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡುವ ಬಗ್ಗೆ ಹಲವು ದಿನಗಳಿಂದ ಮಾಹಿತಿ ಹರಿದಾಡುತ್ತಲೇ ಇತ್ತು. ಈಗ ಕೊನೆಗೂ ಚಿತ್ರವನ್ನು ಬಿಡುಗಡೆ ಮಾಡದಂತೆ ನಿಷೇಧ ಹೇರಲಾಗಿದೆ. 'ರಯೀಸ್' ಚಿತ್ರ ಪಾಕಿಸ್ತಾನದಲ್ಲಿ ಪ್ರದರ್ಶನ ರದ್ದಾಗಲು ಅಸಲಿ ಕಾರಣಗಳೇನು? ಇಲ್ಲಿದೆ ಮಾಹಿತಿ.

ಪಾಕಿಸ್ತಾನದಲ್ಲಿ 'ರಯೀಸ್' ಬ್ಯಾನ್

ವರದಿಗಳ ಪ್ರಕಾರ ಪಾಕಿಸ್ತಾನಿ ಸೆಂಟ್ರಲ್ ಸೆನ್ಸಾರ್ ಬೋರ್ಡ್ 'ರಯೀಸ್' ಚಿತ್ರ ಬಿಡುಗಡೆ ಆಗದಂತೆ ತಡೆ ಹಿಡಿದಿದೆ.[ಟ್ವಿಟರ್ ವಿಮರ್ಶೆ: ಶಾರುಖ್ ಖಾನ್ 'ರಯೀಸ್' ಗೆ ಶಹಬ್ಬಾಸ್]

'ರಯೀಸ್' ಚಿತ್ರ ಬಿಡುಗಡೆ ಮಾಡದಿರಲು ಕಾರಣಗಳಿವು..

'ರಯೀಸ್' ಚಿತ್ರದಲ್ಲಿ ' ಇಸ್ಲಾಂ ಧರ್ಮವನ್ನು ಅಲ್ಲಗಳೆಯುವ ಅಂಶಗಳಿದ್ದು, ಮುಸ್ಲಿಂ ಜನರು ಅಪರಾಧಿಗಳು ಮತ್ತು ಭಯೋತ್ಪಾದಕರೆಂದು ಬಿಂಬಿಸಲಾಗಿದೆ' ಎನ್ನುವ ಕಾರಣದಿಂದ ಬ್ಯಾನ್ ಮಾಡಲಾಗಿದೆ.

ನವಾಜ್ ಶರೀಫ್ ಅವಕಾಶ ನೀಡಿದ್ದರು

ಕಳೆದ ವಾರ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರು ಮಾಹಿತಿ ಸಚಿವಾಲಯದ ಶಿಫಾರಸ್ಸಿನ ಮೇರೆಗೆ, 'ರಯೀಸ್' ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು.

ಮಹಿರಾ ಖಾನ್ ಪ್ರಮೋಶನ್ ಗೆ ಬ್ಯಾನ್ ಆಗಿದ್ದರು

'ರಯೀಸ್' ಚಿತ್ರ ಬಿಡುಗಡೆಗೂ ಮುನ್ನ ಪಾಕಿಸ್ತಾನಿ ನಟಿ ಭಾರತದಲ್ಲಿ ಧರಿಸಿದ್ದ ಔಟ್ ಫಿಟ್ ಕಾರಣದಿಂದ ಸಿನಿಮಾ ಪ್ರಮೋಶನ್ ಗೆ ಮಹಿರಾ ಖಾನ್ ಅನ್ನು ಬ್ಯಾನ್ ಮಾಡಲಾಗಿತ್ತು.

ಪಾಕಿಸ್ತಾನದಲ್ಲಿ 'ರಯೀಸ್' ನಕಲಿ ಸಿಡಿಗಳು

'ರಯೀಸ್' ಚಿತ್ರದ ನಕಲಿ ಸಿಡಿಗಳು ಈಗಾಗಲೇ ಪಾಕಿಸ್ತಾನದಲ್ಲಿ ಲಭ್ಯವಿದ್ದು, ದಿನನಿತ್ಯ ಸ್ಥಳೀಯ ಕೇಬಲ್ ಆಪರೇಟರ್ ಗಳು ಚಿತ್ರ ಪ್ರದರ್ಶನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಯೀಸ್ ಕಲೆಕ್ಷನ್ ಡೇ 13

'ರಯೀಸ್' ಚಿತ್ರ ಭಾರತದಲ್ಲಿ 13 ದಿನಗಳ ಅಂತ್ಯಕ್ಕೆ 150 ಕೋಟಿ ಗಿಂತ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್ ಗೆ ನೀಡಿದೆ.

ಪಾಕಿಸ್ತಾನದಲ್ಲಿ 'ಕಾಬಿಲ್'

ಯಾಮಿ ಗೌತಮ್ ಮತ್ತು ಹೃತಿಕ್ ರೋಷನ್ ಅಭಿನಯದ 'ಕಾಬಿಲ್' ಚಿತ್ರವು ಕಳೆದ ವಾರ ಪಾಕಿಸ್ತಾನದಲ್ಲಿ ಬಿಡುಗಡೆ ಆಗಿದ್ದು, ಒಂದು ತಿಂಗಳ ನಂತರ ಪ್ರದರ್ಶಕರೇ ನಿಷೇಧಿಸುತ್ತಾರಂತೆ.

English summary
The release of the Indian movie "Raees", which was scheduled to hit Pakistani cinemas on Sunday, was on Monday banned for its "inappropriate" portrayal of Muslims.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X