»   » ರಯೀಸ್ VS ಕಾಬಿಲ್: ಬಾಕ್ಸ್ ಆಫೀಸ್‌ನಲ್ಲಿ ಗೆದ್ದ ಸಿನಿಮಾ ಯಾವುದು?

ರಯೀಸ್ VS ಕಾಬಿಲ್: ಬಾಕ್ಸ್ ಆಫೀಸ್‌ನಲ್ಲಿ ಗೆದ್ದ ಸಿನಿಮಾ ಯಾವುದು?

Posted By:
Subscribe to Filmibeat Kannada

ಒಂದೇ ದಿನ ಇಬ್ಬರು ಬಿಗ್ ಸ್ಟಾರ್ ಗಳ ಸಿನಿಮಾ ಗಳು ಬಿಡುಗಡೆ ಆದ್ರೆ ಅಭಿಮಾನಿಗಳಿಗೆ ಸ್ವಲ್ಪ ಬೇಜಾರು ಆಗೋದು ಸಹಜ. ಯಾಕಂದ್ರೆ ಹೆಚ್ಚು ಅಭಿಮಾನಿಗಳಿಗೆ ಇಬ್ಬರ ಸಿನಿಮಾಗಳು ಗೆಲ್ಲಬೇಕು ಎಂಬ ಮನೋಭಾವ ಇರುತ್ತದೆ. ಈಗ ಬಾಲಿವುಡ್ ನ ಬಿಗ್ ನಟರಾದ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಇಬ್ಬರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿರುವುದು ಹಲವು ಫ್ಯಾನ್‌ ಗಳಲ್ಲಿ ಬೇಸರ ತಂದಿದೆ. ಆದ್ರೆ ಶಾರುಖ್ ಮತ್ತು ಹೃತಿಕ್ ಮಾತ್ರ ಒಂದೇ ದಿನ ಇಬ್ಬರ ಸಿನಿಮಾ ರಿಲೀಸ್ ಆಗಿರುವುದಕ್ಕೆ ಬೇಸರಗೊಳ್ಳದೇ ರಿಲೀಫ್ ಆಗೇ ಇದ್ದಾರೆ.[ಶಾರುಖ್ 'ರಯೀಸ್' ಪ್ರಮೋಶನ್ ವೇಳೆ ವ್ಯಕ್ತಿ ಸಾವು]

ರಯೀಸ್ ಮತ್ತು ಕಾಬಿಲ್ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಿರುವ ಕಾರಣ, ಯಾವ ಸಿನಿಮಾ ಬಾಕ್ಸ್ ಆಫೀಸ್ ಗೆ ಹೆಚ್ಚು ಹಣ ತುಂಬಿಸಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದದ್ದೇ. ರಯೀಸ್ ಮತ್ತು ಕಾಬಿಲ್ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಿ ಮೂರು ದಿನಗಳನ್ನು ಪೂರೈಸಿವೆ. ಮೂರನೇ ದಿನಕ್ಕೆ ಎರಡು ಚಿತ್ರಗಳು ಗಳಿಸಿದ ಒಟ್ಟಾರೆ ಮೊತ್ತ ಎಷ್ಟು ಎಂಬ ಮಾಹಿತಿ ಇಲ್ಲಿದೆ.

50 ಕೋಟಿ ದಾಟಿದ 'ರಯೀಸ್'

ಶಾರುಖ್ ಖಾನ್ ಫ್ಯಾನ್‌ ಗಳಿಗೆ ಗುಡ್ ನ್ಯೂಸ್. 'ರಯೀಸ್' ಚಿತ್ರ ಬಿಡುಗಡೆ ಆಗಿ ಮೂರನೇ ದಿನಕ್ಕೆ ಒಟ್ಟಾರೆ 50 ಕೋಟಿ ದಾಟಿದ್ದು, ಬಾಕ್ಸ್ ಆಫೀಸ್ ತಂಬಿಸುವಲ್ಲಿ ಹೃತಿಕ್ ರೋಷನ್ ಅಭಿನಯದ 'ಕಾಬಿಲ್' ಚಿತ್ರಕ್ಕಿಂತ ಮುಂಚೂಣಿಯಲ್ಲಿದೆ.[ಟ್ವಿಟರ್ ವಿಮರ್ಶೆ: ಶಾರುಖ್ ಖಾನ್ 'ರಯೀಸ್' ಗೆ ಶಹಬ್ಬಾಸ್]

ಕಾಬಿಲ್ ಮೂರು ದಿನಕ್ಕೆ ಗಳಿಸಿದ ಒಟ್ಟಾರೆ ಮೊತ್ತ ಇದು..

ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಭಿನಯದ 'ಕಾಬಿಲ್' ಚಿತ್ರ ಬಿಡುಗಡೆ ಆಗಿ ಮೂರು ದಿನಗಳಲ್ಲಿ ಗಳಿಸಿದ ಒಟ್ಟಾರೆ ಮೊತ್ತ 38.87 ಕೋಟಿ. 'ರಯೀಸ್' ಚಿತ್ರದ ಗಳಿಕೆಗೆ ಹೋಲಿಸಿದರೆ 'ಕಾಬಿಲ್' ಬಾಕ್ಸ್ ಆಫೀಸ್ ತುಂಬಿಸುವುದರಲ್ಲಿ ಸ್ವಲ್ಪ ಮಟ್ಟಿಗೆ ಹಿಂದೆ ಉಳಿದಿದ್ದು, ಮೇನ್‌ಟೇನ್ ಮಾಡುತ್ತಿದೆ.['ಕಾಬಿಲ್' ಅಸಾಧಾರಣ, ಅಚ್ಚರಿದಾಯಕ, ಅವಾರ್ಡ್ ವಿನ್ನಿಂಗ್ ಚಿತ್ರ]

ಕಾಬಿಲ್ ಮತ್ತು ರಯೀಸ್ ಚಿತ್ರಗಳ ಪ್ರತಿ ದಿನದ ಗಳಿಕೆ

ಬಾಲಿವುಡ್ ಬಾಕ್ಸ್ ಆಫೀಸ್ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ರವರು ನೀಡಿರುವ ಮಾಹಿತಿ ಪ್ರಕಾರ..

ರಯೀಸ್ : ಬಿಡುಗಡೆ ಆದ ದಿನ ರಯೀಸ್ ಒಟ್ಟಾರೆ ಗಳಿಸಿದ ಮೊತ್ತ 20.42 ಕೋಟಿ. ಗುರುವಾರ 26.30 ಕೋಟಿ, ಶುಕ್ರವಾರ 13.11 ಕೋಟಿ. ಒಟ್ಟಾರೆ ರಯೀಸ್ ಮೂರು ದಿನ ಅಂತ್ಯಕ್ಕೆ 59.83 ಕೋಟಿ ಬಾಕ್ಸ್ ಆಫೀಸ್ ಗಳಿಗೆ ಪಡೆದಿದೆ.

ಕಾಬಿಲ್ : ಬಿಡುಗಡೆ ಆದ ದಿನ ಕಾಬಿಲ್ ಚಿತ್ರ ಒಟ್ಟಾರೆ ಗಳಿಸಿದ ಹಣ 10.43 ಕೋಟಿ. ಗುರುವಾರ 18.67 ಕೋಟಿ, ಶುಕ್ರವಾರ 9.77 ಕೋಟಿ. ಒಟ್ಟಾರೆ ಮೂರು ದಿನಗಳ ಅಂತ್ಯಕ್ಕೆ ಕಾಬಿಲ್ ಚಿತ್ರ 38.87 ಕೋಟಿ ಗಳಿಸಿದೆ.

'ರಯೀಸ್' ಬಗ್ಗೆ ಅಮಿತಾಬ್ ಬಚನ್ ಹೇಳಿದ್ದೇನು?

ಶಾರುಖ್ ಖಾನ್ ಅಭಿನಯದ ರಯೀಸ್ ಚಿತ್ರ ನೋಡಿ ಬಿಗ್ ಬಿ ಅಮಿತಾಬ್ ಬಚನ್ ಮೆಚ್ಚುಗೆ ವ್ಯಕ್ತಪಡಿಸಿ "ಅಭಿನಂದನೆಗಳು ಶಾರುಖ್.. ರಯೀಸ್ ಚಿತ್ರದಲ್ಲಿ ನಿಮ್ಮ ಕೋಪದ ಮೇಲೆ ಲವ್ ಆಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

'ಕಾಬಿಲ್ ಅತೀ ವಿಶ್ವಾಸನೀಯ ಚಿತ್ರ'

ರಯೀಸ್ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಮಿತಾಬ್ ಬಚ್ಚನ್ 'ಕಾಬಿಲ್' ಚಿತ್ರವನ್ನು ಅತೀ ವಿಶ್ವಾಸನೀಯ ಚಿತ್ರ ಎಂದು ಹೊಗಳಿದ್ದಾರೆ. " 'ಕಾಬಿಲ್' ಅತೀ ವಿಶ್ವಾಸನೀಯ ಚಿತ್ರ... ಪ್ರೀತಿಯ, ಉತ್ತಮ ಪ್ರದರ್ಶನ ಮತ್ತು ನಿರ್ದೇಶಕ ಸಂಜಯ್ ಗುಪ್ತಾ ಚತುರತೆ ಇಂದ ಹ್ಯಾಂಡಲ್ ಮಾಡಿದ್ದಾರೆ. ಅಭಿನಂದನೆಗಳು !!" ಎಂದು ಟ್ವಿಟ್ ಮಾಡಿದ್ದಾರೆ.

English summary
Raees VS Kaabil Box Office Collection Day 3: Who Is Winning, Shahrukh Khan Or Hrithik Roshan?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada