»   » ಸೋನಾಕ್ಷಿ ಸಿನ್ಹಾ ಪತ್ರಕರ್ತೆಯಾದ 'ನೂರ್' ಹೊಸ ಟ್ರೈಲರ್

ಸೋನಾಕ್ಷಿ ಸಿನ್ಹಾ ಪತ್ರಕರ್ತೆಯಾದ 'ನೂರ್' ಹೊಸ ಟ್ರೈಲರ್

Posted By:
Subscribe to Filmibeat Kannada

ಬಾಲಿವುಡ್ ಬೋಲ್ಡ್ ನಟಿ ಸೋನಾಕ್ಷಿ ಸಿನ್ಹಾ ಅಭಿನಯದ 'ನೂರ್' ಚಿತ್ರದ ಎರಡನೇ ಅಫೀಶಿಯಲ್ ಟ್ರೈಲರ್ ಹೊರಬಿದ್ದಿದೆ. 'ಅಕಿರ' ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಸೋನಾಕ್ಷಿ 'ನೂರ್' ಚಿತ್ರದಲ್ಲಿ ಪತ್ರಕರ್ತೆಯಾಗಿ ಬಣ್ಣ ಹಚ್ಚಿದ್ದಾರೆ.[ಸೋನಾಕ್ಷಿ ಸಿನ್ಹಾ ಹೊಸ ಬಯಕೆ ಈಡೇರುತ್ತಾ..!]

ಅಂದಹಾಗೆ ಸೋನಾಕ್ಷಿ ಅಭಿನಯದ 'ನೂರ್' ಸಿನಿಮಾ ಪಾಕಿಸ್ತಾನದ ಪತ್ರಕರ್ತೆ ಹಾಗೂ ಲೇಖಕಿ ಸಬ ಇಮ್ತಿಯಾಝ್ ಅವರ 'Karachi, You're Killing Me!' ಎಂಬ ಇಂಗ್ಲಿಷ್ ಕಾದಂಬರಿ ಆಧರಿತ ಸಿನಿಮಾ. ಚಿತ್ರದಲ್ಲಿ ನಟನೆಯ ಜೊತೆಗೆ ಸೋನಾಕ್ಷಿ ಸಿನ್ಹಾ ಅವರು ಟೈಟಲ್ ಸಾಂಗ್ ಹಾಡಿದ್ದು, ಅಮಲ್ ಮಲ್ಲಿಕ್ ಸಾಹಿತ್ಯ ಬರೆದಿದ್ದಾರೆ.

Sonakshi Sinha Starrer 'Noor' Official trailer 2

'ನೂರ್' ಚಿತ್ರಕ್ಕೆ ಸುನ್ಹಿಲ್ ಸಿಪ್ಪಿ ಆಕ್ಷನ್ ಕಟ್ ಹೇಳಿದ್ದು, ಭೂಷಣ್ ಕುಮಾರ್, ಕೃಷ್ಣ ಕುಮಾರ್ ಮತ್ತು ವಿಕ್ರಮ್ ಮಲ್ಹೋತ್ರ ನಿರ್ಮಾಣ ಮಾಡಿದ್ದಾರೆ. 'ನೂರ್' ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಉಳಿದಂತೆ ಕನನ್ ಗಿಲ್, ಶಿಬಾನಿ ದಂಡೇಕರ್, ಪುರಬ್ ಕೊಹ್ಲಿ ನಟಿಸಿದ್ದಾರೆ.[ಸೋನಾಕ್ಷಿ ಮೊದಲ ಪ್ರೇಮ ಕಹಾನಿಗೆ ತಂದೆಯೇ ವಿಲನ್..!]

ನರೆನ್ ಚಂದವರ್ಕರ್ ಮತ್ತು ಬೆನೆಡಿಕ್ಟ್ ಟೇಲರ್ ಸಂಗೀತ ಸಂಯೋಜನೆ, ಕಿಕೋ ನಕಹರ ಛಾಯಾಗ್ರಹಣ ಚಿತ್ರಕ್ಕಿದೆ. 'ನೂರ್' ಸಿನಿಮಾ ಏಪ್ರಿಲ್ 21 ರಂದು ತೆರೆಕಾಣಲಿದೆ. 'ನೂರ್' ಹೊಸ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Sonakshi Sinha starrer Noor is all set to be released on April 21. Here is 'Noor' Official trailer 2

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada