For Quick Alerts
  ALLOW NOTIFICATIONS  
  For Daily Alerts

  ಇನ್ಮುಂದೆ ದೇಶದ ಅತ್ಯಂತ ಶ್ರೀಮಂತರೇ ಸೋನಂ ಕಪೂರ್ ನೆರೆಮನೆಯವರು.!

  By Harshitha
  |

  ಬಾಲಿವುಡ್ ನಟಿ ಸೋನಂ ಕಪೂರ್ ಬಾಳಲ್ಲಿ ಹೊಸ ಅಧ್ಯಾಯ ಶುರು ಆಗಿದೆ. ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆಗೆ ವೈವಾಹಿಕ ಜೀವನಕ್ಕೆ ಕಪೂರ್ ಕುಡಿ ಸೋನಂ ಕಾಲಿಟ್ಟಿದ್ದಾರೆ.

  ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಸೋನಂ ಕೈಹಿಡಿದಿರುವ ಆನಂದ್ ಅಹುಜಾ ಉದ್ಯಮಿ. ಎಕ್ಸ್ ಪೋರ್ಟ್ ಬಿಸಿನೆಸ್ ಟೈಕೂನ್ ಹರೀಶ್ ಅಹುಜಾ ರವರ ಮೊಮ್ಮಗ. ದೆಹಲಿ ಮೂಲದ ಅಹುಜಾ ಕುಟುಂಬದ ಬಳಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಇದೆ.

  ಒಂದು ವೇಳೆ ಆನಂದ್ ಅಹುಜಾ ಜೊತೆಗೆ ಸೋನಂ ಕಪೂರ್ ದೆಹಲಿಯಲ್ಲಿ ನೆಲೆಸಿದರೆ, ಕೋಟ್ಯಾಧಿಪತಿಗಳೇ ಅವರ ಅಕ್ಕ-ಪಕ್ಕದವರಾಗಲಿದ್ದಾರೆ. ಅಷ್ಟಕ್ಕೂ, ದೆಹಲಿಯಲ್ಲಿ ಆನಂದ್ ಅಹುಜಾ ಬಂಗಲೆ ಹೇಗಿದೆ.? ಅವರ ನೆರೆಮನೆಯವರು ಯಾರು.? ಎಂಬುದರ ಸಂಪೂರ್ಣ ರಿಪೋರ್ಟ್ ಇಲ್ಲಿದೆ, ಓದಿರಿ..

  173 ಕೋಟಿ ಬೆಲೆ ಬಾಳುವ ಬಂಗಲೆ

  173 ಕೋಟಿ ಬೆಲೆ ಬಾಳುವ ಬಂಗಲೆ

  ಕೆಲವೇ ಕೆಲವು ವರ್ಷಗಳ ಹಿಂದೆಯಷ್ಟೇ, ಬರೋಬ್ಬರಿ 173 ಕೋಟಿ ರೂಪಾಯಿ ಕೊಟ್ಟು ದೆಹಲಿಯ Lutyens ನಲ್ಲಿ ಹರೀಶ್ ಅಹುಜಾ ಬಂಗಲೆ ಖರೀದಿಸಿದ್ದರು. 28,530 ಚದರ ಅಡಿ ವಿಸ್ತೀರ್ಣ ಹೊಂದಿರುವ ಬಂಗಲೆ ಇದು.

  ಸೋನಂ ಧರಿಸಿದ್ದ ಲೆಹೆಂಗಾ ತಯಾರು ಮಾಡೋಕೆ ಬೇಕಾಗಿದ್ದು ಬರೋಬ್ಬರಿ 18 ತಿಂಗಳು.! ಸೋನಂ ಧರಿಸಿದ್ದ ಲೆಹೆಂಗಾ ತಯಾರು ಮಾಡೋಕೆ ಬೇಕಾಗಿದ್ದು ಬರೋಬ್ಬರಿ 18 ತಿಂಗಳು.!

  3000 ಕೋಟಿ ಆಸ್ತಿ ಇದೆ

  3000 ಕೋಟಿ ಆಸ್ತಿ ಇದೆ

  ವರದಿಗಳ ಪ್ರಕಾರ, ಅಹುಜಾ ಕುಟುಂಬದ ಬಳಿ 3000 ಕೋಟಿ ಬೆಲೆ ಬಾಳುವ ಆಸ್ತಿ ಇದೆ.

  ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ನವ ವಧು ಸೋನಂ ಕಪೂರ್ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ನವ ವಧು ಸೋನಂ ಕಪೂರ್

  ಅದೇ ಬಂಗಲೆಯಲ್ಲಿ ನೆಲೆಸುತ್ತಾರಾ ಸೋನಂ ಕಪೂರ್.?

  ಅದೇ ಬಂಗಲೆಯಲ್ಲಿ ನೆಲೆಸುತ್ತಾರಾ ಸೋನಂ ಕಪೂರ್.?

  Lutyens ನಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬಂಗಲೆಯಲ್ಲಿ ಆನಂದ್ ಅಹುಜಾ ಹಾಗೂ ಸೋನಂ ನೆಲೆಸಲು ನಿರ್ಧರಿಸಿದರೆ, ದೇಶ ಕಂಡ ಅತ್ಯಂತ ಶ್ರೀಮಂತರೇ ಅವರ ನೆರೆಮನೆಯವರಾಗುತ್ತಾರೆ.

  ಹ್ಯಾಪಿ ಮ್ಯಾರೀಡ್ ಲೈಫ್ ಮಿಸ್ಟರ್ ಅಂಡ್ ಮಿಸಸ್ ಅಹುಜಾಹ್ಯಾಪಿ ಮ್ಯಾರೀಡ್ ಲೈಫ್ ಮಿಸ್ಟರ್ ಅಂಡ್ ಮಿಸಸ್ ಅಹುಜಾ

  ಅಂತಹ ಶ್ರೀಮಂತರು ಯಾರ್ಯಾರು.?

  ಅಂತಹ ಶ್ರೀಮಂತರು ಯಾರ್ಯಾರು.?

  ಸ್ಟೀಲ್ ಮ್ಯಾಗ್ನೆಟ್ ಲಕ್ಷ್ಮಿ ಮಿತ್ತಲ್, ನವೀನ್ ಜಿಂದಾಲ್ ಹಾಗೂ ಸಿಮೆಂಟ್ ಟೈಕೂನ್ ಸಿ.ಕೆ.ಬಿರ್ಲಾ ಬಂಗಲೆ ಕೂಡ ದೆಹಲಿಯ Lutyens ನಲ್ಲಿಯೇ ಇದೆ.

  ಸೋನಂ ಕಪೂರ್ ಮದುವೆಗೆ ಬಂದ ಸ್ಪೆಷಲ್ ಗೆಸ್ಟ್ ಗಳಿವರು...ಸೋನಂ ಕಪೂರ್ ಮದುವೆಗೆ ಬಂದ ಸ್ಪೆಷಲ್ ಗೆಸ್ಟ್ ಗಳಿವರು...

  ಕೋಟ್ಯಾಧಿಪತಿಗಳು

  ಕೋಟ್ಯಾಧಿಪತಿಗಳು

  ಡಿ.ಎಲ್.ಎಫ್ ಗ್ರೂಪ್ ಸಂಸ್ಥಾಪಕ ಕೆ.ಪಿ.ಸಿಂಗ್ ರವರ 477 ಕೋಟಿ ರೂಪಾಯಿ ಮೌಲ್ಯದ ಬಂಗಲೆ ಇರೋದು ದೆಹಲಿಯ Lutyens ನಲ್ಲೇ. ಹಾಗೂ ಎಸ್ಸಾರ್ ಗ್ರೂಪ್ ನ ಚೇರ್ ಮ್ಯಾನ್ ಶಶಿ Ruia ನೆಲೆಸಿರೋದು ಇದೇ ಏರಿಯಾದಲ್ಲಿ.

  ಮ್ಯಾಕ್ಸ್ ಮತ್ತು ಪುಂಜ್ ಲಾಯ್ಡ್ ಸಂಸ್ಥಾಪಕರು

  ಮ್ಯಾಕ್ಸ್ ಮತ್ತು ಪುಂಜ್ ಲಾಯ್ಡ್ ಸಂಸ್ಥಾಪಕರು

  ಉಳಿದಂತೆ 'ಮ್ಯಾಕ್ಸ್'ನ ಅನಲ್ಜಿತ್ ಸಿಂಗ್ ಮತ್ತು Punj Lloyd's ನ ಸಂಸ್ಥಾಪಕ ಅತುಲ್ ಪುಂಜ್ ನಿವಾಸ ಕೂಡ ಇಲ್ಲೇ ಇದೆ.

  English summary
  Bollywood Actress Sonam Kapoor got married to Anand Ahuja on May 8th in Mumbai. These multi-billionaires will now be neighbours to Sonam Kapoor in Delhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X