For Quick Alerts
  ALLOW NOTIFICATIONS  
  For Daily Alerts

  ನಟಿ ಕಾಜೋಲ್‌ಗೆ ಮೊದಲು ಕ್ರಶ್ ಆಗಿದ್ದು ಅಕ್ಷಯ್ ಕುಮಾರ್ ಮೇಲೆ

  |

  ಚಿತ್ರರಂಗದ ಲವ್ ಸ್ಟೋರಿಗಳು, ಬ್ರೇಕಪ್‌ಗಳು, ಕ್ರಶ್‌ಗಳು, ಮರುಮದುವೆಗಳದ್ದೇ ಸಾವಿರಾರು ಕಥೆಗಳಿವೆ. ಹಾಗೆಯೇ ಗೆಳೆತನ, ವಂಚನೆ, ಅಕ್ರಮ ಸಂಬಂಧಗಳೂ ಇವೆ. ಜತೆಯಾಗಿ ನಟಿಸುವ ಕಲಾವಿದರ ನಡುವೆ, ನಟಿಯರು-ನಿರ್ದೇಶಕರು, ತಂತ್ರಜ್ಞರ ನಡುವಿನ ಪ್ರೇಮ ಪ್ರಸಂಗಗಳು ಸಹ ಸಾಮಾನ್ಯ.

  ಮೇಡಮ್ ಟುಸ್ಸಾಡ್ ವಿರುದ್ಧ ಹರಿಪ್ರಿಯಾ ಅಸಮಾಧಾನ | Haripriya | Madame Tussauds | Sandalwood

  ಎಷ್ಟೂ ಮಂದಿ ಪ್ರೀತಿಸಿದ್ದು, ಡೇಟಿಂಗ್ ನಡೆಸಿದ್ದೇ ಒಬ್ಬರನ್ನು ಮದುವೆಯಾಗಿದ್ದೇ ಮತ್ತೊಬ್ಬರನ್ನು ಎನ್ನುವುದಕ್ಕೂ ಅನೇಕ ಉದಾಹರಣೆಗಳಿವೆ. ನಟಿ ಕಾಜೋಲ್ ಈಗ ಅಜಯ್ ದೇವಗನ್ ಅವರನ್ನು ಮದುವೆಯಾಗಿ ಖುಷಿಯಿಂದ ಸಂಸಾರ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಬಾಂಧವ್ಯ ಮದುವೆಯಾಗಿ ವರ್ಷದಲ್ಲಿಯೇ ದೂರಾಗುವ ಜನರಿಗೆ ಮಾದರಿ. ಆದರೆ ಕಾಜೋಲ್ ಅವರಿಗೆ ಮೊದಲು ಕ್ರಶ್ ಉಂಟಾಗಿದ್ದು ಅಜಯ್ ದೇವಗನ್ ಮೇಲಲ್ಲ. ಬದಲಾಗಿ ಅಕ್ಷಯ್ ಕುಮಾರ್ ಮೇಲೆ. ಮುಂದೆ ಓದಿ...

  ಅಕ್ಷಯ್ ಮೇಲೆ ಕ್ರಶ್

  ಅಕ್ಷಯ್ ಮೇಲೆ ಕ್ರಶ್

  ಕಾಜೋಲ್‌ಗೆ ಅಕ್ಷಯ್ ಕುಮಾರ್ ಮೇಲೆ ಕ್ರಶ್ ಆಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದು, ಕಾಜೋಲ್ ಅವರ ಆತ್ಮೀಯ ಗೆಳೆಯ ಕರಣ್ ಜೋಹರ್. 'ಪಾರ್ಟಿಯೊಂದರಲ್ಲಿ ನಾನು ಕಾಜೋಲ್‌ರನ್ನು ಭೇಟಿಯಾಗಿದ್ದೆ. ಅದು 'ಹೆನ್ನಾ' ಚಿತ್ರದ ಬಿಡುಗಡೆ ಸಂದರ್ಭ. ಅಕ್ಷಯ್ ಕುಮಾರ್ ಮೇಲೆ ಕಾಜೋಲ್‌ಗೆ ತೀವ್ರ ಕ್ರಶ್ ಆಗಿತ್ತು' ಎಂದು ಕರಣ್ ಹೇಳಿದ್ದರು.

  ನಟಿ ಕಾಜೋಲ್ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ವದಂತಿ: ಪತಿ ಅಜಯ್ ಹೇಳಿದ್ದೇನು?ನಟಿ ಕಾಜೋಲ್ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ವದಂತಿ: ಪತಿ ಅಜಯ್ ಹೇಳಿದ್ದೇನು?

  ಅಕ್ಷಯ್ ಕುಮಾರ್ ಕಡೆ ನೋಡುತ್ತಿದ್ದೆವು

  ಅಕ್ಷಯ್ ಕುಮಾರ್ ಕಡೆ ನೋಡುತ್ತಿದ್ದೆವು

  'ಕಾಜೋಲ್ ಕಾರ್ಯಕ್ರಮದುದ್ದಕ್ಕೂ ಅಕ್ಷಯ್ ಕುಮಾರ್ ಅವರಿಗಾಗಿ ಹುಡುಕಾಡುತ್ತಲೇ ಇದ್ದರು. ನಾನೂ ಆಕೆಗೆ ಬೆಂಬಲ ನೀಡಿದ್ದೆ. ಹೀಗಾಗಿ ಇಬ್ಬರೂ ಕಾರ್ಯಕ್ರಮವಿಡೀ ಅಕ್ಷಯ್ ಕುಮಾರ್ ಅವರತ್ತಲೇ ನೋಡುತ್ತಿದ್ದೆವು. ಕೊನೆಯಲ್ಲಿ ಅಕ್ಷಯ್ ಕುಮಾರ್ ಇದ್ದಕ್ಕಿದ್ದಂತೆ ಕಾಣಿಸದೆ ಹೋದರು. ಅದು ನಮ್ಮ ಗೆಳೆತನದ ಆರಂಭದ ಸಮಯ. ನಾವಿಬ್ಬರೂ ದಕ್ಷಿಣ ಮುಂಬೈನಲ್ಲಿ ಇದ್ದೆವು. ಹೀಗಾಗಿ ನಮ್ಮ ಸ್ನೇಹ ಮುಂದೆ ಚೆನ್ನಾಗಿ ಬೆಳೆಯಿತು' ಎಂದು ಕರಣ್ ತಿಳಿಸಿದ್ದರು.

  ಕಾಜೋಲ್-ಕರಣ್ ಮೊದಲ ಭೇಟಿ

  ಕಾಜೋಲ್-ಕರಣ್ ಮೊದಲ ಭೇಟಿ

  ಇದೇ ವೇಳೆ ಕರಣ್, ತಮ್ಮ ಮತ್ತು ಕಾಜೋಲ್ ಗೆಳೆತನ ಹೇಗಿತ್ತು ಎಂಬುದನ್ನು ವಿವರಿಸಿದ್ದರು. 'ಮೊದಲ ಬಾರಿ ನಾವಿಬ್ಬರೂ ಭೇಟಿಯಾದಾಗ ಆಕೆಗೆ 15 ವರ್ಷ. ನನಗೆ 17. ಸಿನಿಮಾದ ಪಾರ್ಟಿಯೊಂದರಲ್ಲಿ ಕಾಜೋಲ್ ತಮ್ಮ ತಾಯಿ ತನುಜಾ ಜತೆ ಭಾಗವಹಿಸಿದ್ದರು. ಅಲ್ಲಿಗೆ ನಾನು ಸೂಟ್ ಧರಿಸಿ ಹೋಗಿದ್ದೆ' ಎಂಬುದನ್ನು ನೆನಪಿಸಿಕೊಂಡಿದ್ದಾರೆ.

  ಅಜಯ್ ದೇವ್ಗನ್-ಕಾಜೋಲ್ ಸಂಸಾರ ಸರಿಗಮ: ಸಿಹಿ-ಕಹಿ ನೆನಪು ಬಿಚ್ಚಿಟ್ಟ ನಟಿಅಜಯ್ ದೇವ್ಗನ್-ಕಾಜೋಲ್ ಸಂಸಾರ ಸರಿಗಮ: ಸಿಹಿ-ಕಹಿ ನೆನಪು ಬಿಚ್ಚಿಟ್ಟ ನಟಿ

  ಡ್ರೆಸ್ ನೋಡಿ ನಕ್ಕಿದ್ದ ಕಾಜೋಲ್

  ಡ್ರೆಸ್ ನೋಡಿ ನಕ್ಕಿದ್ದ ಕಾಜೋಲ್

  'ಎಲ್ಲರೂ ಫಿಲ್ಮಿ ಪಾರ್ಟಿಗೆ ತಕ್ಕಂತೆ ಡ್ರೆಸ್ ಧರಿಸಿ ಬರುತ್ತಾರೆ ಎಂದು ನಾನು ಅಂದುಕೊಂಡಿದ್ದೆ. ತನುಜಾ ಆಂಟಿ ಸಲಹೆಯಂತೆ ಕಾಜೋಲ್ ಜತೆಗೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದೆ. ಕಾಜೋಲ್ ನನ್ನ ಕಡೆಗೆ ನೋಡುತ್ತಾ ಅರ್ಧ ಗಂಟೆ ನಕ್ಕಿದ್ದರು. ನನಗೆ ತೀರಾ ಅವಮಾನವಾಗಿತ್ತು. ಪಾರ್ಟಿಯಿಂದ ಸೀದಾ ಹೊರಗೆ ನಡೆದಿದ್ದೆ. ನನ್ನ ಬದುಕಿನಲ್ಲಿ ಅಷ್ಟು ದೊಡ್ಡ ಅವಮಾನವನ್ನು ಕಂಡಿರಲಿಲ್ಲ' ಎಂದು ಹೇಳಿದ್ದಾರೆ.

  ಅಜಯ್ ಸಿಗದೆ ಇದಿದ್ದರೆ, ಶಾರೂಖ್ ರನ್ನು ಮದುವೆ ಆಗುತ್ತಿದ್ದೀರಾ?: ಫ್ಯಾನ್ಸ್ ಗೆ ಕಾಜಲ್ ಉತ್ತರಅಜಯ್ ಸಿಗದೆ ಇದಿದ್ದರೆ, ಶಾರೂಖ್ ರನ್ನು ಮದುವೆ ಆಗುತ್ತಿದ್ದೀರಾ?: ಫ್ಯಾನ್ಸ್ ಗೆ ಕಾಜಲ್ ಉತ್ತರ

  English summary
  Throwback story: Karan Johar once revealed that actress Kajol had massive crush on actor Akshay Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X