X
ಹೋಮ್ » ಸೆಲಬ್ರಿಟಿಗಳು » ಎಚ್.ಎಲ್.ಎನ್.ಸಿಂಹ
ಎಚ್.ಎಲ್.ಎನ್.ಸಿಂಹ

ಎಚ್.ಎಲ್.ಎನ್.ಸಿಂಹ

Director
ಜೀವನ ಚರಿತ್ರೆ :  1904 ರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ  ಹತ್ತಿರ ಮಾರೇಹಳ್ಳಿಯಲ್ಲಿ ಜನಿಸಿದ ಎಚ್.ಎಲ್.ಏನ್ ಸಿಂಹ, ಕನ್ನಡದ ಪ್ರಖ್ಯಾತ ನಿರ್ದೇಶಕ,ಸಾಹಿತಿ ,ಮತ್ತು ನಟ . ಇವರ ತಂದೆ ನರಸಿಂಹಯ್ಯ ,ತಾಯಿ ಲಕ್ಷಮ್ಮ. ಇವರ ಪೂರ್ಣಹೆಸರು ಎಚ್ ಲಕ್ಷಿನರಸಿಂಹಯ್ಯ. ಯಾವಾಗಲೂ ಚಟುವಟಿಕೆಯಿಂದ ಕೂಡಿರುತ್ತಿದ್ದ ಸಿಂಹ ಯವ್ವನಾವಸ್ಥೆಗೆ ಬರುತ್ತಿದ್ದಂತೆಯೇ ತನ್ನ ಮುಸ್ಲಿಂ ಸ್ನೇಹಿತ ಮೊಹಮ್ಮದ್ ಪೀರ್ ಎಂಬುವವರ ಜೊತೆ ಸೇರಿ `ಚಂದ್ರಕಲಾ ನಾಟಕ ಮಂಡಳಿ' ಸ್ಥಾಪಿಸಿದರು. ಮುಂದೆ ಸಿಂಹ `ವರದಾಚಾರ್ ನಾಟಕ ಕಂಪನಿ' ಸೇರಿದರು. ಅಲ್ಲಿಂದ ಮುಂದೆ ಗುರಿಕಾರ್ ಕಂಪನಿ, ಗುಬ್ಬಿ ಕಂಪನಿಯಲ್ಲಿಯೂ ಕೆಲಸ ಮಾಡಿದರು. ಇವರ ಪ್ರತಿಭೆ ನೋಡಿ ಬೆರಗಾದ ಗುಬ್ಬಿ ವೀರಣ್ಣ, ಸಿಂಹರನ್ನು ಚಿತ್ರನಿರ್ದೇಶನ ಕಲಿಕೆಗೆಂದು ಬಾಂಬೆಗೆ ಕಳಿಸಿದರು. ಅಲ್ಲಿಂದ ಮರಳಿ ಬಂದ ಸಿಂಹ ಗುಬ್ಬಿ ವೀರಣ್ಣನವರ ಕೈಕೆಳಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಆಗಿನ ಕಾಲದಲ್ಲಿ ಪೌರಾಣಿಕ ನಾಟಕಗಳನ್ನಷ್ಟೇ ಪ್ರದರ್ಶಿಸುತ್ತಿದ್ದ ನಾಟಕ ಕಂಪನಿಗಳ ಪರಂಪರೆ ಮುರಿದು `ಸಂಸಾರ ನೌಕೆ' ಎಂಬ ಸಾಮಾಜಿಕ ನಾಟಕ ಪ್ರದರ್ಶಸಿ ಹೊಸ ಪರಂಪರೆಗೆ ನಾಂದಿ ಹಾಡಿದರು.ಮುಂದೆ ಇದೇ ನಾಟಕವನ್ನು ಚಿತ್ರರೂಪಕ್ಕೆ ತಂದು  ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರ ಎಂದೇ ಪ್ರಸಿದ್ದಿ ಪಡೆದ ನಟ,ನಿರ್ಮಾಪಕಮತ್ತು ನಿರ್ದೇಶಕ`ಬಿ.ರ್.ಪಂತಲು',`ಎಮ್.ವಿ.ರಾಜಮ್ಮ',`ಡಿಕ್ಕಿ ಮಾಧವರಾವ್',`ಹುಣಸೂರು ಕೃಷ್ಣಮೂರ್ತಿ' ಮುಂತಾದ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಈ ಚಿತ್ರದಲ್ಲಿ ನಿರ್ದೇಶನ ಮಾತ್ರವಲ್ಲದೇ ,ನಟನೆ ಕೂಡ ಮಾಡಿದರು. 1954 ರಲ್ಲಿ `ಬೇಡರ ಕಣ್ಣಪ್ಪ ' ಚಿತ್ರಕ್ಕಾಗಿ ನಟನ ಹುಡುಕಾಟದಲ್ಲಿದ್ದಾಗ ನಂಜನಗೂಡಿನಲ್ಲಿ ಮುತ್ತುರಾಜನನ್ನು ಕಂಡರು. ಇವರಿಗೆ ರಾಜಕುಮಾರ ಎಂದು ಹೆಸರು ನೀಡಿ ಹರಿಸಿದರು. ಕನ್ನಡ ಚಿತ್ರಜಗತ್ತಿಗೆ ನಟಸಾರ್ವಭೌಮ ಡಾ. ರಾಜಕುಮಾರ ಮತ್ತು ಪ್ರಖ್ಯಾತ ಹಾಸ್ಯ ಕಲಾವಿದ ನರಸಿಂಹರಾಜು ಎಂಬ ಎರಡು ರತ್ನಗಳನ್ನು ಪರಿಚಯಿಸಿದ ಶ್ರೇಯ ಸಿಂಹರವಿರಿಗೆ ಸಲ್ಲಬೇಕು.ಈ ಚಿತ್ರ ಆಗಿನ ಕಾಲದ ರಾಷ್ಟ್ರಪ್ರಶಸ್ತಿಯಾದ `ಮೆರಿಟ್ ಸರ್ಟಿಫಿಕೇಟ್'  ಪಡೆಯಿತು. ಒಟ್ಟು 6 ಚಿತ್ರಗಳನ್ನು ನಿರ್ದೇಶಿಸಿರುವ ಸಿಂಹ,ತಮ್ಮೆಲ್ಲಾ ಚಿತ್ರಗಳಿಗೆ ಸ್ವತಃ ತಾವೇ ಕಥೆ,ಚಿತ್ರಕಥೆ ,ಸಂಭಾಷಣೆ ಬರೆದಿರುವುದು ವಿಶೇಷ.  1956 ರಲ್ಲಿ ಮೂಡಿಬಂದ ಡಾ. ರಾಜಕುಮಾರ್ ಅಭಿನಯದ `ಅಬ್ಬಾ ಆ ಹುಡಗಿ`  ಇವರು ನಿರ್ಮಾಣ ಮಾಡಿದ  ಏಕಮಾತ್ರ ಚಿತ್ರ.  ಇಂದಿರಮ್ಮ ಎಂಬುವರನ್ನು ಕೈಹಿಡಿದ ಸಿಂಹರಿಗೆ ಶೇಷಚಂದ್ರ ಎಂಬ ಪುತ್ರನಿದ್ದಾನೆ . ತಮ್ಮ ಕೊನೆಯ ಚಿತ್ರ `ಅನುಗ್ರಹ'ವನ್ನು ನಿರ್ದೇಶಿಸಿದ ಸಿಂಹ ಚಿತ್ರ ಬಿಡುಗಡೆಗಿಂತ ಮುಂಚೆಯೆ 1972 ರಲ್ಲಿ ಕೊನೆಉಸಿರೆಳೆದರು. 
ಮುಂದೆ ಓದಿ

ಎಚ್.ಎಲ್.ಎನ್.ಸಿಂಹ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಎಚ್.ಎಲ್.ಎನ್.ಸಿಂಹ 1954

ಎಚ್.ಎಲ್.ಎನ್.ಸಿಂಹ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಎಚ್.ಎಲ್.ಎನ್.ಸಿಂಹ

ಹೆಸರು ಎಚ್.ಎಲ್.ಎನ್.ಸಿಂಹ
ಹುಟ್ಟಿದ ದಿನ 25 Jul 1904
ವಯಸ್ಸು 122
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಎಚ್.ಎಲ್.ಎನ್.ಸಿಂಹ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+