X
ಹೋಮ್ » ಸೆಲಬ್ರಿಟಿಗಳು » ಹೇಮಾ ಚೌಧರಿ
ಹೇಮಾ ಚೌಧರಿ

ಹೇಮಾ ಚೌಧರಿ

Actress
ಜೀವನ ಚರಿತ್ರೆ :  ಹೇಮಾ ಚೌಧರಿ ದಕ್ಷಿಣ ಭಾರತದ ಖ್ಯಾತ ನಟಿ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಸುಮಾರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, ಕೂಚಿಪೂಡಿ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.  ಆರಂಭಿಕ ಜೀವನ ಹೇಮಾ ಚೌಧರಿ ಅವರ ಮೂಲ ಹೆಸರು ದುರ್ಗಾಪ್ರಭಾ. ಇವರು 1955ರ ಅಕ್ಟೋಬರ್ 12ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಹೇಮಾ ತೆಲುಗಿನ ಜನಪ್ರಿಯ ನಟಿ ಮತ್ತು ಕಂಠದಾನ ಕಲಾವಿದೆ ಬೃಂದಾವನ ಚೌಧರಿ ಅವರ ಮಗಳು. ಎಂಜಿಆರ್‌, ಎನ್‌ಟಿಆರ್‌ ಮತ್ತು ಶಿವಾಜಿ ಗಣೇಶನ್, ಎನ್‌.ಎನ್‌.ಆರ್‌, ಎಸ್‌ವಿಆರ್ ಅವರಂತಹ ಮೇರುನಟರ ಚಿತ್ರಗಳನ್ನು ನೋಡುತ್ತಿದ್ದ ಹೇಮಾ ಅವರಿಗೆ ಮನೆಯಲ್ಲಿ ಸಿನಿಮಾ ವಾತಾವರಣವಿದ್ದರಿಂದ ಸಹಜವಾಗಿ ನಟನೆ ಕಡೆಗೆ ಆಸಕ್ತಿ ಬೆಳೆಯಿತು. ನಂತರ ಚೈನೈ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಅಭಿನಯ ತರಬೇತಿ ಪಡೆದರು. ಈ ಸಂದರ್ಭ ಸೂಪರ್ ಸ್ಟಾರ್ ರಜನಿಕಾಂತ್ ಹಾಗೈ ಅಶೋಕ್ ಇವರ ಸಹಪಾಠಿಗಳಾಗಿದ್ದರು.   ಸಿನಿಮಾರಂಗ ಈ ಕಾಲಂ ದಂಪತುಲು ಎಂಬ ಸಿನಿಮಾ ಮೂಲಕ ಹೇಮಾ ಚಿತ್ರರಂಗ ಪ್ರವೇಶಿಸಿದರು. ನಂತರ 1976ರಲ್ಲಿ 'ಪೆಳ್ಳಿಕಾನಿ ಪೆಳ್ಳಿ' ಚಿತ್ರದಲ್ಲಿ ಮೊದಲಿಗೆ ನಾಯಕಿಯಾಗಿ ನಟಿಸಿದರು. ನಂತರ ತಮಿಳಿನ 'ಮನ್ಮಥ ಲೀಲೈ' ಚಿತ್ರದಲ್ಲಿ ಕಮಲ್ ಹಾಸನ್ ಜೋಡಿಯಾಗಿ ಮಿಂಚಿದ್ದರು. 1976ರಲ್ಲಿ 'ವಿಜಯವಾಣಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಹೇಮಾ ಚೌಧರಿ, ಮುಂದೆ ಕನ್ನಡದಲ್ಲೇ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಬೆಂಗಳೂರಿನಲ್ಲೇ ನೆಲೆಸಿದರು. ಬಳಿಕ 80ರ ದಶಕದಲ್ಲಿ ಪೋಷಕ ಪಾತ್ರಗಳತ್ತ ಮುಖ ಮಾಡಿದ ಇವರು, ಕನ್ನಡ ನಟಿಯೇ ಆಗಿಬಿಟ್ಟರು. ಕನ್ನಡ ಸಿನಿಮಾಗಳಲ್ಲಿ ತಮ್ಮ ನೆಗೆಟಿವ್ ಪಾತ್ರಗಳಿಂದ ಹೆಚ್ಚು ಜನಪ್ರಿಯತೆ ಪಡೆದರು.  ಜನಪ್ರಿಯ ನಟರೊಂದಿಗೆ ಅಭಿನಯ ಹೇಮಾ ಅವರು 70, 80ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಾದ ಎನ್‌ಟಿಆರ್, ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಚಿರಂಜೀವಿ, ಶಂಕರ್ ನಾಗ್, ಟೈಗರ್ ಪ್ರಭಾಕರ್ ಸೇರಿದಂತೆ ಸಾಕಷ್ಟು ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾವಿತ್ರಿ, ಬಿ. ಸರೋಜಾ ದೇವಿ, ಜಯಂತಿ, ಕಲ್ಪನಾ, ಜಯಪ್ರದಾ, ಶ್ರೀದೇವಿ ಸೇರಿದಂತೆ ಹಲವು ಖ್ಯಾತ ನಟಿಯರ ಜೊತೆಗೂ ಹೇಮಾ ಚೌಧರಿ ತೆರೆ ಹಂಚಿಕೊಂಡಿದ್ದಾರೆ ಸಿನಿಮಾಗಳು ಹೇಮಾ ಚೌಧರಿ ಅವರು ವಿಜಯವಾಣಿ, ಶುಭಾಶಯ, ದೀಪ ಹಾಗೂ ನೀ ಬರೆದ ಕಾದಂಬರಿ ಚಿತ್ರಗಳಲ್ಲಿ ತಮ್ಮ ಪಾತ್ರಗಳಿಂದ ಗಮನ ಸೆಳೆದಿದ್ದರು. ಗಾಳಿಮಾತು ಚಿತ್ರದ 'ನಮ್ಮೂರ ಜಾತ್ರೇಲಿ ಪೇಟೆಯ ಬೀದಿಲಿ' ಎನ್ನುವ ಹಾಡಿನಲ್ಲಿ ಕುಣಿದು ಸಿನಿರಸಿಕರ ಮನಸ್ಸಿನಲ್ಲಿ ಉಳಿದರು. ಜೊತೆಗೆ ಗುರುಶಿಷ್ಯರು, ಯಾರಿವನು, ಜಿಮ್ಮಿಗಲ್ಲು, ಮಸಣದ ಹೂವು, ಕಿಂದರಿ ಜೋಗಿ, ಕುರುಬನ ರಾಣಿ, ವೀರಪ್ಪ ನಾಯಕ, ಸೂರ್ಯವಂಶ, ಜಮೀನ್ದಾರು, ಕನಸುಗಾರ, ತವರಿಗೆ ಬಾ ತಂಗಿ, ಅಣ್ಣ ತಂಗಿ, ಮಲ್ಲಿಕಾರ್ಜುನ, ಶಕ್ತಿ, ದಶರಥ ಸೇರಿದಂತೆ ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಕೂಚಿಪೂಡಿ ಕಲಾವಿದೆ ಕೂಚಿಪೂಡಿ ನೃತ್ಯ ಕಲಾವಿದೆಯೂ ಆಗಿರುವ ಹೇಮಾ ಚೌಧರಿ ಪದ್ಮಭೂಷಣ ವೆಂಕಟಸತ್ಯಂ ಅವರೊಡನೆ ವಿಶ್ವದಾದ್ಯಂತ ಸುಮಾರು 700ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾರೆ.  ಕಿರುತೆರೆ  ಹೇಮಾ ಚೌಧರಿ ಸುವರ್ಣ ವಾಹಿನಿಯ ಜನಪ್ರಿಯ ಧಾರವಾಹಿ 'ಅಮೃತವರ್ಷಿಣಿ'ಯಲ್ಲಿ ನಿಷ್ಠುರವಾದಿ ಅತ್ತೆ ಶಂಕುತಲಾ ದೇವಿ ಪಾತ್ರದ ಮೂಲಕ ಮನೆಮಾತಾಗಿದ್ದರು. ನಾಯಕಿ ಎಂಬ ಸೀರಿಯಲ್‌ನಲ್ಲೂ ನಟಿಸಿದ್ದಾರೆ.  ಚಲನಚಿತ್ರ ಸಂಸ್ಥೆಗಳ ಸದಸ್ಯೆಯಾಗಿ ಹೇಮಾ ಚೌಧರಿ ಚಲನಚಿತ್ರ ಸಂಬಂಧಿಸಿದ ಅನೇಕ ಸಂಸ್ಥೆಗಳಲ್ಲಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿಯೂ ಮೂರು ಬಾರಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.  ಅನಾರೋಗ್ಯ: ಹೇಮಾ ಅವರು ಇತ್ತೀಚೆಗೆ ಬ್ರೈನ್ ಹ್ಯಾಮರೇಜ್‌ ಆಗಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಮುಂದೆ ಓದಿ

ಹೇಮಾ ಚೌಧರಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಎಂ.ಎಸ್ ರಮೇಶ್ 11 Oct 2013
ಎಸ್ ಮುರಳಿಮೋಹನ್ 27 May 2011
ನಾಗಣ್ಣ 07 Jun 2008
ಓಂ ಸಾಯಿ ಪ್ರಕಾಶ್ 04 Nov 2005

ಹೇಮಾ ಚೌಧರಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಹೇಮಾ ಚೌಧರಿ

ಹೆಸರು ಹೇಮಾ ಚೌಧರಿ
ಹುಟ್ಟಿದ ದಿನ 12 Oct 1955
ವಯಸ್ಸು 71
ಹುಟ್ಟಿದ ಸ್ಥಳ Hyderabad
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಹೇಮಾ ಚೌಧರಿ ಆಸ್ತಿ

ಆಸ್ತಿ

ಹೇಮಾ ಚೌಧರಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+