X
ಲಕ್ಷ್ಮಣ್

ಲಕ್ಷ್ಮಣ್

ಜೀವನ ಚರಿತ್ರೆ :  ಲಕ್ಷ್ಮಣ್ ಕನ್ನಡ ಚಿತ್ರರಂಗದ ಹಿರಿಯ ನಟ. ಬೆಂಗಳೂರಿನಲ್ಲಿ ಜನಿಸಿದ್ದ ಇವರು ಖಳನಟರಾಗಿ ಗುರುತಿಸಿಕೊಂಡಿದ್ದರು. ಇವರ ತಂದೆ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ತಂದೆ ತಾಯಿಗೆ 8 ಜನ ಮಕ್ಕಳಾಗಿ ಒಪ್ಪರಾಗಿದ್ದ ಲಕ್ಷ್ಮಣ್, ಎಸ್‌ಎಸ್ಎಲ್‌ಸಿವರೆಗೂ ಓದಿದ ನಂತರ ಕೆಲಸ ಹುಡುಕಲು ಆರಂಭಿಸಿದರು. ಮೊದಲಿಗೆ ವಾರದಕ್ಕೆ 15 ರೂಪಾಯಿ ಸಂಬಳಕ್ಕೆ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. 'ಸತ್ಯ ಹರಿಶ್ಚಂದ್ರ' ಸಿನಿಮಾ ನೋಡಿ ಡಾ. ರಾಜ್‌ಕುಮಾರ್ ಅಭಿಮಾನಿಯಾಗಿದ್ದರು. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಲು ಆಯ್ಕೆ ಆಗಿದ್ದರು. ಆದರೆ ಸೈನ್ಯಕ್ಕೆ ಸೇರಲು ತಾಯಿ ಒಪ್ಪದ ಕಾರಣ, ಬೆಂಗಳೂರಿನಲ್ಲೇ ಕೆಲಸ ಹುಡುಕಿಕೊಂಡಿದ್ದರು. 150 ರೂಪಾಯಿ ಸಂಬಳಕ್ಕೆ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಕೆಲಸ ಮಾಡುವಾಗ ಜಿಮ್‌ನಲ್ಲಿ ಕರಸತ್ತು ಮಾಡುತ್ತಿದ್ದರು. ಕಾರ್ಖಾನೆಯಲ್ಲಿ ನಾಟಕಗಳಲ್ಲಿ ನಟಿಸಲು ಆರಂಭಿಸಿದರು. ಆ ನಾಟಕದ ಗೀಳು ಚಿತ್ರರಂಗಕ್ಕೆ ಕರೆದುಕೊಂಡು ಬಂದಿತ್ತು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಖಳನಟರಾಗಿ ಲಕ್ಷ್ಮಣ್‌ ನಟಿಸಿದ್ದರು. ಅಂಬರೀಶ್ ಸಿನಿಮಾಗಳಲ್ಲಿ ಖಾಯಂ ಪೋಷಕ ಕಲಾವಿದರಾಗಿದ್ದರು. 'ಅಂತ', 'ಮಲ್ಲ', 'ದಿಗ್ವಿಜಯ', 'ಒಲವಿನ ಉಡುಗೊರೆ', 'ಅಸಂಭವ', 'ಕರ್ಣ', 'ಚದುರಂಗ', 'ಸೂರ್ಯವಂಶ' ಸೇರಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. 'ಉಷಾ ಸ್ವಯಂವರ' ಚಿತ್ರದ ಮೂವರು ನಾಯಕರಲ್ಲಿ ಒಬ್ಬರಾಗಿ ನಟಿಸುವ ಮೂಲಕ ಲಕ್ಷ್ಮಣ್ ಚಿತ್ರರಂಗ ಪ್ರವೇಶಿಸಿದರು. ಆದರೆ, ಆ ಸಿನಿಮಾ ರಿಲೀಸ್ ತಡವಾಗಿತ್ತು. ಮುಂದೆ ದೇಹದಾರ್ಢ್ಯ ನೋಡಿ ವಿಲನ್ ಪಾತ್ರಗಳಿಗೆ ಸೀಮಿತ ಮಾಡಿಬಿಟ್ಟಿದ್ದರು. ಅಂಬರೀಶ್ ನಟನೆಯ 'ಅಂತ' ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಅಲ್ಲಿಂದ ಮುಂದೆ ಹಿಂತಿರುಗಿ ನೋಡಲಿಲ್ಲ. 'ಅಂತ' ಚಿತ್ರದ ಪೊಲೀಸ್ ಆಫೀಸರ್ ಕುಲವಂತ್ ಪಾತ್ರಕ್ಕೆ ಆಯ್ಕೆ ಆಗಿದ್ದರು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇವರು 2023ರ ಜನವರಿ 23ರಂದು ಮೂಡಲಪಾಳ್ಯದ ನಿವಾಸದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.  
ಮುಂದೆ ಓದಿ

ಲಕ್ಷ್ಮಣ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಲಕ್ಷ್ಮಣ್

ಹೆಸರು ಲಕ್ಷ್ಮಣ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಲಕ್ಷ್ಮಣ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+