For Quick Alerts
  ALLOW NOTIFICATIONS  
  For Daily Alerts

  ಅಮ್ಮಂದಿರ ದಿನದ ವಿಶೇಷ: ತಾಯಂದಿರ ಜತೆ ತಾರೆಯರ ಫೋಟೊಗಳು

  |

  ಜಗತ್ತಿನಾದ್ಯಂತ ಅಮ್ಮಂದಿರ ದಿನವನ್ನು ಸಂಭ್ರಮಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಜನರು ಅಮ್ಮನ ಜತೆಗಿನ ಫೋಟೊಗಳನ್ನು ಹಾಕಿಕೊಂಡು ತಾಯಂದರಿಗೆ ಶುಭ ಕೋರುತ್ತಿದ್ದಾರೆ. ಇದರಲ್ಲಿ ಸೆಲೆಬ್ರಿಟಿಗಳೂ ಹಿಂದೆ ಬಿದ್ದಿಲ್ಲ. ಅದರಲ್ಲಿಯೂ ಕನ್ನಡ ಚಿತ್ರರಂಗದ ಅನೇಕ ನಟಿಯರು ತಮ್ಮ ಅಮ್ಮನ ಜತೆಗಿನ ಹಲವು ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  ಎಲ್ಲರಿಗೂ ಅವರ ಅಮ್ಮಂದಿರೇ ಮೊದಲ ದೇವರು. ಮೊದಲ ಗುರು ಕೂಡ. ಸಾಮಾನ್ಯವಾಗಿ ಸಿನಿಮಾ ಸೆಟ್‌ಗಳಲ್ಲಿ ನಟಿಯರಿಗೆ ಧೈರ್ಯ ನೀಡಲು ಅಮ್ಮಂದಿರು ಜತೆಯಲ್ಲಿಯೇ ಇರುತ್ತಾರೆ. ಸಿನಿಮಾ ಶೂಟಿಂಗ್‌ಗೆ ತೆರಳಿದಾಗ ತಾಯಂದಿರು ಅವರ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಕಲಾವಿದರು ಹೆಚ್ಚಾಗಿ ಸಮಯ ಕಳೆಯುವುದು ಅವರ ತಾಯಂದಿರ ಜತೆಯಲ್ಲಿಯೇ. ಅಮ್ಮಂದಿರ ದಿನದ ವಿಶೇಷವಾಗಿ ಅನೇಕ ಸೆಲೆಬ್ರಿಟಿಗಳು ಅವರೊಂದಿಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಪುನೀತ್ ರಾಜ್ ಕುಮಾರ್ ನೆನಪು

  ಪುನೀತ್ ರಾಜ್ ಕುಮಾರ್ ನೆನಪು

  'ಅಮ್ಮ ನೀನು ನಮಗಾಗಿ...' ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಅವರ ಕೆನ್ನೆಗೆ ಪಾರ್ವತಮ್ಮ ರಾಜ್ ಕುಮಾರ್ ಮುತ್ತಿಕ್ಕುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಅಮ್ಮಂದಿರ ದಿನದ ಶುಭಾಶಯವನ್ನು ಕೋರಿದ್ದಾರೆ.

  ಮಿಲನಾ ನಾಗರಾಜ್

  ಮಿಲನಾ ನಾಗರಾಜ್

  ಅಮ್ಮಂದಿರ ದಿನದ ವಿಶೇಷವಾಗಿ ಅಮ್ಮನ ಜತೆ ಕುಳಿತುಕೊಂಡಿರುವ ಫೋಟೊವನ್ನು ಮಿಲನಾ ನಾಗರಾಜ್ ಹಂಚಿಕೊಂಡಿದ್ದಾರೆ. ನಿಮ್ಮನ್ನು ನಾನು ಸಾವಿರ ರೀತಿಯಲ್ಲಿ ನೋಡುತ್ತೇನೆ. ಅಮ್ಮಂದಿರ ದಿನದ ಶುಭಾಶಯ ಅಮ್ಮ ಎಂದು ಅವರು ಹೇಳಿಕೊಂಡಿದ್ದಾರೆ.

  ಕೋಮಲ್ ಮದುವೆಯಾದ 20 ದಿನದಲ್ಲಿ ಈ ಘಟನೆ ನಡೆದಿತ್ತು: ಜಗ್ಗೇಶ್ ಹಂಚಿಕೊಂಡ ನೋವಿನ ಕಥೆಕೋಮಲ್ ಮದುವೆಯಾದ 20 ದಿನದಲ್ಲಿ ಈ ಘಟನೆ ನಡೆದಿತ್ತು: ಜಗ್ಗೇಶ್ ಹಂಚಿಕೊಂಡ ನೋವಿನ ಕಥೆ

  ವಡೆ ಪಾಯಸ ಪ್ರೀತಿ ಬೇಡ!

  ವಡೆ ಪಾಯಸ ಪ್ರೀತಿ ಬೇಡ!

  ಅಮ್ಮ ಇರುವ ಅದೃಷ್ಟವಂತರೆ ಅಮ್ಮನೆ ಈ ಜಗಕ್ಕೆ ಪರಿಚಯಿಸಿದ ದೇವರು. ಕ್ಷಣಿಕ ಸುಖದ ಮಾಯೆ, ಹಣ ಕೀರ್ತಿ ಏನೇ ಗಳಿಸಿದರೂ ಅಮ್ಮ ಜೀವಕೊಟ್ಟ ಮೇಲೆ ಜಗತ್ತು ಸಿಕ್ಕಿದ್ದು. ಇದ್ದಾಗಲೆ ಅವಳಿಗಾಗಿ ಬಾಳಿ. ಸತ್ತ ಮೇಲೆ ಫೋಟೊ ಮುಂದೆ ಅವಳ ಹೆಸರಲ್ಲಿ ವಡೆ ಪಾಯಸ ಪ್ರೀತಿ ಬೇಡ. ಹೋದ ಮೇಲೆ ಮತ್ತೆ ಸಿಗಳು ಆ ದೇವತೆ. ಅಮ್ಮನ ವಸ್ತು ನನ್ನ ಬಳಿ ಜೋಪಾನವಾಗಿವೆ ಎಂದು ನಟ ಜಗ್ಗೇಶ್ ಭಾವುಕರಾಗಿ ಹೇಳಿದ್ದಾರೆ.

  ನಿಜವಾದ ನಷ್ಟ ಯಾರಿಗೆ?: ನೊಂದ ಸಿನಿಮಾ ತಂತ್ರಜ್ಞನೊಬ್ಬನ ಅಳಲಿನ ಪತ್ರನಿಜವಾದ ನಷ್ಟ ಯಾರಿಗೆ?: ನೊಂದ ಸಿನಿಮಾ ತಂತ್ರಜ್ಞನೊಬ್ಬನ ಅಳಲಿನ ಪತ್ರ

  ಕಿಚ್ಚ ಸುದೀಪ್

  ಕಿಚ್ಚ ಸುದೀಪ್

  ಜೀವ ಕೊಟ್ಟ ನನ್ನ ಹೆತ್ತ ತಾಯಿಗೆ ಜೀವನ ಕೊಟ್ಟ ನನ್ನ ಕನ್ನಡ ತಾಯಿಗೆ, ಅನ್ನ ಕೊಟ್ಟ ಭೂತಾಯಿಗೆ, ತಮ್ಮ ಹೃದಯಗಳಲ್ಲಿ ಪ್ರೀತಿಯ ಸ್ಥಾನ ಕೊಟ್ಟು, ನನ್ನನ್ನು ಅಕ್ಕರೆಯಿಂದ ಬೆಳೆಸುತ್ತಿರುವ ಎಲ್ಲಾ ಮಾತೃಹೃದಯಿ ಸ್ವರೂಪ ಅಭಿಮಾನಿ ತಾಯಂದಿರಿಗೆ ನಾನು ಸದಾ ಋಣಿ... ವಿಶ್ವದ ಎಲ್ಲ ಅಮ್ಮಂದಿರಿಗೆ ಈ ಕಿಚ್ಚನ ಶುಭಾಶಯಗಳು ಎಂದು ನಟ ಸುದೀಪ್ ವಿಶಿಷ್ಟವಾಗಿ ಶುಭ ಹಾರೈಸಿದ್ದಾರೆ.

  ಶ್ರೀ ಮುರಳಿ

  ಶ್ರೀ ಮುರಳಿ

  ನಟ ಶ್ರೀಮುರಳಿ ಅಮ್ಮನನ್ನು ಅಪ್ಪಿಕೊಂಡ ಸುಂದರವಾದ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಹ್ಯಾಪಿ ಬರ್ಥಡೇ ಅಮ್ಮ ಎಂದು ಮುರಳಿ ಬರೆದುಕೊಂಡಿದ್ದಾರೆ.

  'ನಾನು ಸತ್ತಿಲ್ಲ, ಸೋತಿದ್ದೀನಿ ಅಷ್ಟೇ': ಬೆನ್ನಿಗೆ ಚೂರಿಹಾಕಿದವರ ಕುರಿತು ಲೂಸ್ ಮಾದ ಯೋಗಿ ಹೇಳಿದ್ದೇನು?'ನಾನು ಸತ್ತಿಲ್ಲ, ಸೋತಿದ್ದೀನಿ ಅಷ್ಟೇ': ಬೆನ್ನಿಗೆ ಚೂರಿಹಾಕಿದವರ ಕುರಿತು ಲೂಸ್ ಮಾದ ಯೋಗಿ ಹೇಳಿದ್ದೇನು?

  ನಾಲ್ಕು ತಲೆಮಾರಿನ ಫೋಟೊ

  ನಾಲ್ಕು ತಲೆಮಾರಿನ ಫೋಟೊ

  ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ನಾಲ್ಕು ತಲೆಮಾರಿನ ಅಪರೂಪದ ಫೋಟೊವನ್ನು ಹಂಚಿಕೊಂಡಿದ್ದಾರೆ. ಮಗ, ತಾಯಿ ತಾರಾ ಚಂದ್ರಪ್ಪ ಮತ್ತು ಅಜ್ಜಿ ಜಾನಕಿ ಅವ್ವಯ್ಯ ಅವರ ಜತೆಗಿನ ಚಿತ್ರ ಹಾಕಿ ಅಮ್ಮಂದಿರ ದಿನದ ಶುಭ ಕೋರಿ ಸುದೀರ್ಘ ಬರಹ ಬರೆದಿದ್ದಾರೆ.

  ಸುಧಾರಾಣಿ ಫೋಟೊ

  ಸುಧಾರಾಣಿ ಫೋಟೊ

  ಅಮ್ಮ ಹಾಗೂ ಅಜ್ಜಿ ಜತೆಗಿನ ಪೋಟೊವನ್ನು ಪ್ರಕಟಿಸಿರುವ ನಟಿ ಸುಧಾರಾಣಿ, ನಮ್ಮ ಬದುಕನ್ನು ರೂಪಿಸಿದ ಇಬ್ಬರು ಅತ್ಯಂತ ಬಲಿಷ್ಠ, ಸಹಾನುಭೂತಿಯ ಮತ್ತು ಪ್ರೀತಿಪಾತ್ರ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು ಎಂದು ಅವರು ಹೇಳಿದ್ದಾರೆ.

  ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ

  ನನ್ನ ಅತ್ಯಂತ ಸುಂದರಳಾದ ಅಮ್ಮನಿಗೆ ಮತ್ತು ಇಲ್ಲಿರುವ ಎಲ್ಲ ಸುಂದರವಾದ ಅಮ್ಮಂದಿರಿಗೂ ತಾಯಂದಿರ ದಿನದ ಶುಭಾಶಯಗಳು ಎಂದು ಕೊಡವತಿ ರಶ್ಮಿಕಾ ಮಂದಣ್ಣ ಅಮ್ಮನೊಂದಿಗಿನ ಫೋಟೊ ಶೇರ್ ಮಾಡಿದ್ದಾರೆ

  ಪ್ರಿಯಾಂಕಾ ಉಪೇಂದ್ರ

  ಪ್ರಿಯಾಂಕಾ ಉಪೇಂದ್ರ

  ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಅಮ್ಮನ ಬ್ಲಾಕ್ ಆಂಡ್ ವೈಟ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಅತ್ಯಂತ ಉತ್ಸಾಹಿ, ಕ್ರಿಯಾಶೀಲ, ಕಾಳಜಿಯುಳ್ಳ, ಆಶಾವಾದಿ, ಪ್ರೀತಿಸುವ ಮತ್ತು ಸುಂದರ ಎಂದು ಅಮ್ಮನನ್ನು ಅವರು ಕೊಂಡಾಡಿದ್ದಾರೆ.

  English summary
  Many Kannada celebrities shared photos lovable photos with mother on the occassion of Mother's Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X