Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಮರದ ಕೊರಡಿನಂತಿರೋ ಹೀರೊ ಅಂತ ಬರೆದ್ರು.. 'ಬಾ ನಲ್ಲೆ ಮಧು ಚಂದ್ರಕೆ' ಹಿಟ್ ಆಯ್ತು"
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ 'ಬಾ ನಲ್ಲೆ ಮಧು ಚಂದ್ರಕೆ'. ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಂ ನಟಿಸಿದ್ದ ಮೊದಲ ಸಿನಿಮಾ. ಈ ಚಿತ್ರ ಹತ್ತು ಹಲವು ಕಾರಣಗಳಿಗೆ ತುಂಬಾನೇ ಜನಪ್ರಿಯವಾಗಿತ್ತು. ಇಂದಿಗೂ ಈ ಸಿನಿಮಾಗೆ ಅಭಿಮಾನಿಗಳು ಇದ್ದಾರೆ.
ನಾಗತ್ತಿಹಳ್ಳಿ ಚಂದ್ರಶೇಖರ್, ಹಂಸಲೇಖ, ಪ್ರಕಾಶ್ ರೈ ಅಂತಹ ದಿಗ್ಗಜರ ಸಮಾಗಮ ಈ ಸಿನಿಮಾದಲ್ಲಾಗಿತ್ತು. ಬಹುತೇಕ ಹೊಸ ಮುಖಗಳೇ ಇದ್ದ ಈ ಸಿನಿಮಾ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ 1993ರಲ್ಲಿ ತೆರೆಕಂಡಿತ್ತು. ನಾಗತ್ತಿಹಳ್ಳಿ ಚಂದ್ರಶೇಖರ್, ಕೆ ಶಿವರಾಂ ಇಬ್ಬರಿಗೂ ಸಕ್ಸಸ್ ಕೊಟ್ಟಿತ್ತು. ಸಿನಿಮಾ ತೆರೆಕಂಡು ಇಷ್ಟು ವರ್ಷಗಳ ಬಳಿಕ ಸಿನಿಮಾ ಬಜೆಟ್ ಎಷ್ಟು? ಮೊದಲ ಸಿನಿಮಾದಲ್ಲಿ ತಮ್ಮನ್ನು ನೋಡಿ ಬರೆದ ವಿಮರ್ಶೆ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕೆ ಶಿವರಾಂ ಮಾತಾಡಿದ್ದಾರೆ.

'ಬಾ ನಲ್ಲೆ ಮಧುಚಂದ್ರಕೆ' ಶುರುವಾಗಿದ್ದೇಗೆ?
ನಾಗತ್ತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ 'ಉಂಡು ಹೋದ ಕೊಂಡು ಹೋದ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲದೆ ಸ್ಕ್ರೀನ್ ಪ್ಲೇ ಹಾಗೂ ಡೈಲಾಗ್ ಕೂಡ ಬರೆಯುತ್ತಿದ್ದರು. ಆಗ ಕೆ ಶಿವರಾಂ ಅವರಿಗೂ ಹೀರೊ ಆಗಬೇಕು ಅನ್ನೋ ಆಸೆಯಿತ್ತು. ಸಿನಿಮಾ ಮಾಡೋದು ಅಂತ ನಿರ್ಧಾರ ಮಾಡಿದಾಗ ನಾಗತ್ತಿಹಳ್ಳಿಯವರೇ ಬರೆದ 'ಬಾ ನಲ್ಲೆ ಮಧುಚಂದ್ರಕೆ' ಕಥೆಯನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇಲ್ಲಿಂದ ಸಿನಿಮಾ ಹೇಗೆ ಶುರುವಾಯ್ತು. ಬಜೆಟ್ ಎಷ್ಟು ಅನ್ನೋದನ್ನು ಕೆ ಶಿವರಾಂ ಹೆಗ್ಗದ್ದೆ ಸ್ಟುಡಿಯೋ ಜೊತೆ ಹಂಚಿಕೊಂಡಿದ್ದಾರೆ.

ನಾಗತ್ತಿಹಳ್ಳಿ ಸ್ಕ್ರೀನ್ ಪ್ಲೇ.. ಹಂಸಲೇಖ ಮ್ಯೂಸಿಕ್
"ನಾನು ಸಿನಿಮಾ ಮಾಡಬೇಕು ಅಂದಾಗ ನಾಗತ್ತಿಹಳ್ಳಿಯವರು ಸ್ಕ್ರೀನ್ ಪ್ಲೇ ಮಾಡಿದ್ರು. ಹಂಸಲೇಖ ಅವರಿಗೆ ಮ್ಯೂಸಿಕ್ ಹಾಕಿಕೊಳ್ಳೋಣ ಅಂತ ಹೇಳಿದ್ರು. ಆಯ್ತು ಅಂತ ಹೇಳಿದೆ. ನಾನು ಸಿನಿಮಾ ಮಾಡುವಾಗ ಮಿಸ್ಟರ್ ಸೋಮಣ್ಣ ತುಂಬಾನೇ ಕ್ಲೋಸ್ ಇದ್ದರು. ಆಗ ಅವರು ಕಾರ್ಪೊರೇಟರ್ ಆಗಿದ್ದರು. ಆಗ ಅವರಿಗೆ ಸಿನಿಮಾ ಮಾಡುತ್ತಿದ್ದೇನೆ ಅಂದಾಗ, ಮ್ಯೂಸಿಕ್ ಮಾಡಿಸಿಕೊಡುತ್ತೇನೆ ಅಂದ್ರು. ಅವರೇ ಹಂಸಲೇಖ ಅವರನ್ನು ಭೇಟಿ ಮಾಡಿ 50 ಸಾವಿರ ಅಡ್ವಾನ್ಸ್ ಕೊಟ್ಟರು." ಎಂದು ಕೆ ಶಿವರಾಂ ಹೇಳಿದ್ದಾರೆ.

'ಬಾ ನಲ್ಲೆ ಮಧುಚಂದ್ರಕೆ' ಬಜೆಟ್ ಎಷ್ಟು?
" ಈ ಸಿನಿಮಾ ಮಾಡುವುದಕ್ಕೆ 35 ಲಕ್ಷ ಖರ್ಚಾಗಿತ್ತು. ಆದರೆ, ಸಿನಿಮಾದಿಂದ ಸ್ವಲ್ಪ ಹಣ ಸಿಕ್ಕಿತಷ್ಟೇ. ಜಾಸ್ತಿ ಎಲ್ಲ ವಿತರಕರೇ ತಿಂದರು. ಕಲೆಕ್ಷನ್ ಏನೂ ನಮ್ಮ ಕೈಗೆ ಬರಲೇ ಇಲ್ಲ. ಆಗ ನಮಗೆ ದುಡ್ಡು ಬರೋದು ಮುಖ್ಯ ಆಗಿರಲಿಲ್ಲ. ಹೆಸರು ಬಂತಲ್ಲ ಅಷ್ಟೇ ಸಾಕಾಗಿತ್ತು. ನಾನು 10 ರಿಂದ 12 ಸಿನಿಮಾ ಮಾಡಿದ್ದರೂ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾದಿಂದಾನೇ ಗುರುತಿಸುತ್ತಾರೆ." ಎಂದಿದ್ದಾರೆ ಕೆ ಶಿವರಾಂ.

'ಬಾ ನಲ್ಲೆ ಮಧುಚಂದ್ರಕೆ' ವಿಮರ್ಶೆ ಹೇಗಿತ್ತು?
ಕೆ ಶಿವರಾಂ ತಾವು ಹೀರೊ ಮೆಟಿರಿಯಲ್ ಅಲ್ಲ ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ ಚಾಕೊಲೇಟ್ ಹೀರೊಗಳ ಜಮಾನದಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮೊದಲ ಸಿನಿಮಾ 'ಬಾ ನಲ್ಲೆ ಮಧುಚಂದ್ರಕೆ' ರಿಲೀಸ್ ಆದಾಗ ವಿಮರ್ಶೆ ಹೇಗಿತ್ತು ಅನ್ನೋದನ್ನು ರಿಕಾಲ್ ಮಾಡಿಕೊಂಡಿದ್ದಾರೆ. "ಮರದ ಕೊರಡಿನಂತಿರೋ ಹೀರೊ.. ಬಿಳುಚಿಕೊಂಡಿರೋ ಹೀರೊಯಿನ್ ಅಂತ ಪತ್ರಿಕೆಯೊಂದು ಬರೀತು. ಆದರೆ ಸಿನಿಮಾ ಸೂಪರ್ ಹಿಟ್ ಆಗಿ ಹೋಯ್ತು." ಎಂದು ಯೂಟ್ಯೂಬ್ ಚಾನೆಲ್‌ಗೆ ಹೇಳಿಕೊಂಡಿದ್ದಾರೆ.