twitter
    For Quick Alerts
    ALLOW NOTIFICATIONS  
    For Daily Alerts

    ಕಮಲ್ ಹಾಸನ್‌ ಬಗ್ಗೆ ಹೆಚ್ಚು ಮಂದಿಗೆ ತಿಳಿಯದ ಆಸಕ್ತಿಕರ ಸಂಗತಿಗಳಿವು

    |

    ಎಲ್ಲ ವ್ಯಕ್ತಿಗಳೂ ಒಂದು ನಿರ್ದಿಷ್ಟ ಕಾರಣಕ್ಕಾಗಿ ಜನ್ಮ ತಳೆಯುತ್ತಾರೆ ಎಂದು ಅಧ್ಯಾತ್ಮ ಹೇಳುವ ಮಾತು. ಕೆಲವರನ್ನು ಕಂಡರೆ ಅದು ನಿಜವೆಂದೂ ಎನಿಸುತ್ತದೆ. ಕೆಲವು ಕೆಲವು ಕ್ಷೇತ್ರಗಳಲ್ಲಿ ಅದೆಷ್ಟು ಮಹತ್ ಸಾಧನೆ ಮಾಡುತ್ತಾರೆಂದರೆ ಅವರ ಹೊರತಾಗಿ ಆ ಕ್ಷೇತ್ರದಲ್ಲಿ ಇನ್ನೊಬ್ಬರನ್ನು ಊಹಿಸಿಕೊಳ್ಳುವುದು ಸಹ ಕಷ್ಟ. ಅಂಥಹವರಲ್ಲಿ ನಟ ಕಮಲ್ ಹಾಸನ್ ಒಬ್ಬರು.

    ಕಮಲ್ ಹಾಸನ್, ಭಾರತ ಕಂಡಿರುವ, ಕಾಣುತ್ತಿರುವ ಪ್ರತಿಭಾನ್ವಿತ ನಟ. ಬಾಲಿವುಡ್ಡೆ ಎಲ್ಲ ಎಂಬ ಮಿಥ್ಯ ಜೋರಾಗಿದ್ದ ಕಾಲದಲ್ಲಿಯೂ ತನ್ನ ನಟನಾ ಪ್ರತಿಭೆಯಿಂದ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಿಗೆ ಚಳಿಜ್ವರ ಹೆಚ್ಚಿಸಿದ್ದ ನಟ ಕಮಲ್ ಹಾಸನ್.

    35 ವರ್ಷಗಳ ನಂತರ ಖ್ಯಾತ ನಿರ್ದೇಶಕನ ಜೊತೆ ಕೈ ಜೋಡಿಸಿದ ಕಮಲ್ ಹಾಸನ್: ಯಾವ ಸಿನಿಮಾ?35 ವರ್ಷಗಳ ನಂತರ ಖ್ಯಾತ ನಿರ್ದೇಶಕನ ಜೊತೆ ಕೈ ಜೋಡಿಸಿದ ಕಮಲ್ ಹಾಸನ್: ಯಾವ ಸಿನಿಮಾ?

    ಕಮಲ್ ಹಾಸನ್, ಭಾರತೀಯ ಚಿತ್ರರಂಗಕ್ಕೆ ದೊರೆತ ವರ. ಅತ್ಯದ್ಭುತ ನಟನೆ ಜೊತೆಗೆ ಅದ್ಭುತವಾದ ಭರತನಾಟ್ಯ ನೃತ್ಯ ಕಲಾವಿದ. ಕ್ರಾಂತಿಕಾರಿ ಕವಿ, ಕತೆಗಾರ, ಚಿತ್ರಕತೆ ಬರಹಗಾರ, ಗಾಯಕ, ನಿರ್ದೇಶಕ, ನಿರ್ಮಾಪಕ ಇತ್ತೀಚೆಗೆ ರಾಜಕೀಯ ರಂಗಕ್ಕೂ ಧುಮುಕಿ, ಅಲ್ಲಿಯೂ ಚಾಪು ಮೂಡಿಸುವ ಪ್ರಯತ್ನದಲ್ಲಿರುವ ಕಮಲ್ ಹಾಸನ್‌ಗೆ ಇಂದಿಗೆ 68 ವರ್ಷ ವಯಸ್ಸು. ಇಂದು ಅವರ ಹುಟ್ಟುಹಬ್ಬ. ಅವರ ಹುಟ್ಟುಹಬ್ಬದಂದು ಕಮಲ್‌ ಹಾಸನ್‌ ಬಗ್ಗೆ ಆಸಕ್ತಿಕರ ಕೆಲವು ವಿಷಯಗಳನ್ನು ಇಲ್ಲಿ ತಿಳಿಯೋಣ.

    ಕಮಲ್‌ ಹಾಸನ್‌ರ ಮೊದಲ ಹೆಸರೇನು?

    ಕಮಲ್‌ ಹಾಸನ್‌ರ ಮೊದಲ ಹೆಸರೇನು?

    ಕಮಲ್ ಹಾಸನ್‌ ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ನಟನೆ ಆರಂಭಿಸಿದವರು. ನಾಲ್ಕನೇ ವಯಸ್ಸಿಗೆ 'ಕಲಾತುರ್ ಕಣ್ಣಮ್ಮ' ಸಿನಿಮಾಕ್ಕಾಗಿ ಅತ್ಯುತ್ತಮ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಗೆದ್ದರು. ಅವರ ಮೊದಲ ಹೆಸರು ಪಾರ್ಥ ಸಾರಥಿ, ವಕೀಲ ಹಾಗೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಕಮಲ್‌ರ ತಂದೆ ಮಗನ ಹೆಸರನ್ನು ಪಾರ್ಥ ಸಾರಥಿಯಿಂದ ಕಮಲ್ ಹಾಸನ್ ಎಂದು ಬದಲಾಯಿಸಿದರು.

    ಖ್ಯಾತ ನಟರಿಗೆ ನೃತ್ಯ ಹೇಳಿಕೊಡುತ್ತಿದ್ದ ಕಮಲ್

    ಖ್ಯಾತ ನಟರಿಗೆ ನೃತ್ಯ ಹೇಳಿಕೊಡುತ್ತಿದ್ದ ಕಮಲ್

    ಕಮಲ್ ಹಾಸನ್ ನೃತ್ಯದಲ್ಲೂ ಪರಿಣಿತರಾಗಿದ್ದು, ಬಾಲ್ಯನಟನಾಗಿ ಜನಪ್ರಿಯರಾಗಿದ್ದರೂ ಯೌವ್ವನದಲ್ಲಿ ನಟನೆಗೆ ಅವಕಾಶಗಳಲ್ಲಿದಾಗ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದರು. 'ನಾನ್ ಎನ್ ಪಿರಂತೇನ್' ಸಿನಿಮಾದಲ್ಲಿ ಎಂಜಿಆರ್‌ಗೆ, 'ಸವಾಲೆ-ಸಮಾಲಿ' ಸಿನಿಮಾದಲ್ಲಿ ಶಿವಾಜಿ ಗಣೇಶನ್‌ಗೆ, 'ಅನ್ಬು ತಂಗಿ' ಸಿನಿಮಾದಲ್ಲಿ ಜಯಲಲಿತಾಗೆ ನೃತ್ಯ ಹೇಳಿಕೊಟ್ಟಿದ್ದರು.

    ಎಲ್ಲ ವಿಭಾಗಗಳ ಬಗ್ಗೆಯೂ ಜ್ಞಾನವಿರುವ ಕಲಾವಿದ

    ಎಲ್ಲ ವಿಭಾಗಗಳ ಬಗ್ಗೆಯೂ ಜ್ಞಾನವಿರುವ ಕಲಾವಿದ

    ಸಿನಿಮಾದ ಬಹುತೇಕ ಎಲ್ಲ ವಿಭಾಗಗಳ ಬಗ್ಗೆಯೂ ಜ್ಞಾನವಿರುವ ಹಾಗೂ ಬರವಣಿಗೆ, ನಿರ್ದೇಶಕ, ನೃತ್ಯ, ನಟನೆ, ಗಾಯನದಲ್ಲಿ ಪರಿಣಿತಿ ಪಡೆದಿರುವ ಕಮಲ್ ಹಾಸನ್‌ ಬಹು ಅಪರೂಪದ ಕಲಾವಿದ. ಭಾರತದ ಹಲವು ಭಾಷೆಗಳಲ್ಲಿ ನಾಯಕನಾಗಿ ನಟಿಸಿರುವ ವಿರಳ ಕಲಾವಿದರಲ್ಲಿ ಕಮಲ್ ಹಾಸನ್ ಒಬ್ಬರು. ಅತಿ ಹೆಚ್ಚು ಫಿಲಂಫೇರ್, ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಕಲಾವಿದ ಕಮಲ್ ಹಾಸನ್. ಕಮಲ್‌ರ ಸಿನಿಮಾಗಳಷ್ಟು ಆಸ್ಕರ್‌ಗೆ ಸಬ್‌ಮಿಷನ್ ಪಡೆದ ಬೇರೊಬ್ಬ ನಟನಿಲ್ಲ.

    ಸಾರ್ವಕಾಲಿಕ ಶ್ರೆಷ್ಠ ಸಿನಿಮಾಗಳಲ್ಲಿ ಕಮಲ್

    ಸಾರ್ವಕಾಲಿಕ ಶ್ರೆಷ್ಠ ಸಿನಿಮಾಗಳಲ್ಲಿ ಕಮಲ್

    1988 ರಿಂದ 1998 ರವರೆಗೆ ಅತಿ ಹೆಚ್ಚು ಸಂಭಾವನೆ ಪಡೆವ ನಾಯಕ ನಟರಾಗಿದ್ದರು ಕಮಲ್ ಹಾಸನ್. ಮೊದಲ ಬಾರಿಗೆ ಸಿನಿಮಾ ಒಂದಕ್ಕೆ 1 ಕೋಟಿ ಸಂಭಾವನೆ ಪಡೆದಿದ್ದು ಸಹ ಕಮಲ್ ಹಾಸನ್ ಅವರೇ. ಮೊದಲ ಬಾರಿಗೆ ತಮ್ಮ ಅಭಿಮಾನಿ ಸಂಘವನ್ನು ಎನ್‌ಜಿಓ ಆಗಿ ಬದಲಾಯಿಸಿ, ಸಾಮಾಜಿಕ ಕಾರ್ಯಕ್ಕೆ ತೊಡಗಿಸಿದ ಶ್ರೇಯವೂ ಕಮಲ್ ಹಾಸನ್ ಅವರದ್ದೇ. ಭಾರತೀಯ ಸಿನಿಮಾ ಹಾದಿಯನ್ನೇ ಬದಲಾಯಿಸಿದ, 'ನಾಯಗನ್', 'ವಿರುಮಾಂಡಿ' 'ಹೇ ರಾಮ್', 'ಸಾಗರ ಸಂಗಮಂ', 'ಏಕ್ ದೂಜೆ ಕೇ ಲಿಯೆ', 'ಗುಣ', 'ಅಪೂರ್ವ ರಾಗಂಗಳ್', 'ಪುಷ್ಪಕ ವಿಮಾನ', 'ಸದ್ಮಾ', 'ಇಂಡಿಯನ್' ಗಳಲ್ಲಿ ಕಮಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

    ಕಮಲ್‌ರನ್ನು ಮೆಚ್ಚು ಟೆರಂಟೀನೋ

    ಕಮಲ್‌ರನ್ನು ಮೆಚ್ಚು ಟೆರಂಟೀನೋ

    ಕಮಲ್ ಹಾಸನ್‌ ಅವರನ್ನು ಸ್ಪೂರ್ತಿಯಾಗಿ ಪಡೆದು ಭಾರತದಲ್ಲಿ ಅನೇಕ, ನಟರು, ನಿರ್ದೇಶಕರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರಂತೆ ನಟಿಸಲು, ನಿರ್ದೇಶಿಸಲು ಯತ್ನಿಸಿದ್ದಾರೆ. ಆದರೆ ಭಾರತದ ಮಾತ್ರವಲ್ಲ, ಹಾಲಿವುಡ್‌ನ ಖ್ಯಾತನಾಮ ನಿರ್ದೇಶಕರನ್ನೂ ಸಹ ಕಮಲ್ ಹಾಸನ್ ಪ್ರಭಾವಿತಗೊಳಿಸಿದ್ದಾರೆ. ಆಲ್‌ ಟೈಮ್ ಗ್ರೇಟ್ ಎಂದೇ ಹೆಸರಾಗಿರುವ ಕ್ವಿಂಟೆನ್ ಟೆರೆಂಟೀನೋ ಸಹ ಕಮಲ್ ಹಾಸನ್‌ ಅವರ ನಿರ್ದೇಶನ ಬಹಳ ಇಷ್ಟವೆಂದು ಹೇಳಿದ್ದರು. ಅವರ 'ಆಳಾವಧನ್' ಸಿನಿಮಾದಲ್ಲಿ ಹಿಂಸೆಯನ್ನು ತೋರಿಸುವ ರೀತಿಯನ್ನು ಅನುಕರಿಸಿ ತಮ್ಮ 'ಕಿಲ್-ಬಿಲ್' ಸಿನಿಮಾದಲ್ಲಿ ಬಳಸಿರುವುದಾಗಿ ಕ್ವಿಂಟೆನ್ ಟೆರೆಂಟೀನೋ ಅನುರಾಗ್ ಕಶ್ಯಪ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದರು.

    English summary
    Great actor Kamal Haasan birthday today. Here is some interesting facts about greatest of all time Kamal Haasan.
    Monday, November 7, 2022, 13:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X