For Quick Alerts
  ALLOW NOTIFICATIONS  
  For Daily Alerts

  ನಿಜವಾದ ನಷ್ಟ ಯಾರಿಗೆ?: ನೊಂದ ಸಿನಿಮಾ ತಂತ್ರಜ್ಞನೊಬ್ಬನ ಅಳಲಿನ ಪತ್ರ

  |

  ಕೊರೊನಾ ನಂತರ ಏನು? ಈ ಪ್ರಶ್ನೆ ಮನರಂಜನೆಯ ಉದ್ಯಮವನ್ನೂ ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಉತ್ತರ ಕಷ್ಟ. ಚಿತ್ರರಂಗದಲ್ಲಿ ಅನೇಕ ಬದಲಾವಣೆಗಳಾಗಬಹುದು. ಇಲ್ಲಿನ ಹಣದ ವಹಿವಾಟಿನಲ್ಲಿ ಏರಿಳಿತವಾಗಬಹುದು. ಇಂತಹ ಭವಿಷ್ಯದ ಕರಾಳ ದಿನಗಳ ಕುರಿತು ಕನ್ನಡ ಚಿತ್ರರಂಗದ 'ಹೆಸರು ಹೇಳಲಿಚ್ಛಿಸದ' ತಂತ್ರಜ್ಞರೊಬ್ಬರು ಬರೆದ ನೋವಿನ ಪತ್ರ ಇಲ್ಲಿದೆ.

  ಸಿಂಗಲ್ ಥಿಯೇಟರುಗಳ ಮಾಲೀಕರು ತಮಗೆ ನಷ್ಟವಾಗಿದೆ, ನಮಗೆ ತೆರಿಗೆ ವಿನಾಯ್ತಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದಾರೆ. ಮುಂದೆ ನಿರ್ವಹಣೆ ವೆಚ್ಚ ಎಂದು ಪ್ರತಿ ಟಿಕೇಟಿಗೆ "ತೆರಿಗೆ ರಹಿತವಾದ ಐದು ರೂಪಾಯಿಗಳ ಹೆಚ್ಚಳಕ್ಕೆ" ಮನವಿ ಮಾಡಿದ್ದಾರೆ. ಈಗಿನ ಕರೋನ ಮಹಾಮಾರಿ ಸಂಕಷ್ಟ ಯಾವಾಗ ಕೊನೆಯಾಗುತ್ತದೆ ತಿಳಿದಿಲ್ಲ. ಜನ ಸದ್ಯಕ್ಕೆ ಥಿಯೇಟರಿಗೆ ಬರುವುದು ದೂರದ ಮಾತು.. ಆದರೆ ಚಿತ್ರಮಂದಿರದವರು ನಷ್ಟವನ್ನು ತುಂಬಿಕೊಳ್ಳಲು ತೆರಿಗೆ ವಿನಾಯಿತಿ ಮತ್ತು ಟಿಕೇಟ್ ಮೇಲಿನ ದರ ಹೆಚ್ಚಳದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಅತಿಯಾದ ಆತ್ಮವಿಶ್ವಾಸಕ್ಕೆ ನಗಬೇಕೋ ಅಳಬೇಕೋ ಗೊತ್ತಿಲ್ಲ. ಮುಂದೆ ಓದಿ...

  ಪ್ರತಿಯೊಂದಕ್ಕೂ ದುಪ್ಪಟ್ಟು ಹಣ

  ಪ್ರತಿಯೊಂದಕ್ಕೂ ದುಪ್ಪಟ್ಟು ಹಣ

  ಬೆಂಗಳೂರು ನಗರದ ಚಿತ್ರಮಂದಿರಗಳಲ್ಲಿ 20 ರೂಪಾಯಿಯ ನೀರಿನ ಬಾಟಲಿಗೆ 30 ರೂಪಾಯಿ ತೆಗೆದುಕೊಳ್ಳಲಾಗುತ್ತದೆ. 10 ರೂಪಾಯಿಯ ಪಫ್ಸ್, ದಿಲ್ ಪಸದ್, ಚಿಪ್ಸ್, ಇತ್ಯಾದಿ ತಿನಿಸುಗಳಿಗೆ 30 ರೂಪಾಯಿ ತೆಗೆದುಕೊಳ್ಳಲಾಗುತ್ತದೆ. 12 ರೂಪಾಯಿಗಳ ಕೂಲ್ ಡ್ರಿಂಕ್ಸ್ 30 ರೂಪಾಯಿ ಆಗುತ್ತದೆ. ಐದು ರೂಪಾಯಿಗಳ ಖರ್ಚಿನ ಮುಸುಕಿನ ಜೋಳದ popcorn ಅಥವಾ ಬೇಯಿಸಿದ ಜೋಳಕ್ಕೆ 50 ರೂಪಾಯಿ ತೆಗೆದುಕೊಳ್ಳಲಾಗುತ್ತದೆ.. 10 ರೂಪಾಯಿಯ ಬಿಸ್ಕೆಟ್ 20 ರೂಪಾಯಿಗಳು, 5 ರೂಪಾಯಿಯ ಚಾಕೋಲೇಟ್, ಚಿಕ್ಕಿ ಇತ್ಯಾದಿ ತಿನಿಸುಗಳಿಗೆ 10 ರೂಪಾಯಿಗಳು ಹೀಗೆ ಎರಡು ಮೂರು ಪಟ್ಟು ಸುಲಿಗೆ ಮಾಡಿದ್ದಾರೆ‌.

  ಕೊರೊನಾ ನಂತರ ಸಿನಿಮಾ ಉದ್ಯಮ: ರಮೇಶ್ ಅರವಿಂದ್ ವಿಶ್ಲೇಷಣೆಕೊರೊನಾ ನಂತರ ಸಿನಿಮಾ ಉದ್ಯಮ: ರಮೇಶ್ ಅರವಿಂದ್ ವಿಶ್ಲೇಷಣೆ

  ಟಿಕೆಟ್ ಲೆಕ್ಕದಲ್ಲಿ ಮೋಸ

  ಟಿಕೆಟ್ ಲೆಕ್ಕದಲ್ಲಿ ಮೋಸ

  ಸಾಮಾನ್ಯವಾಗಿ ನೂರು ಅಥವ ನೂರೈವತ್ತು ರೂಪಾಯಿಗಳ ಟಿಕೆಟ್ ದರವಿರುತ್ತದೆ, ಸ್ಟಾರ್ ನಟರ ಸಿನೆಮಾಗಳು ಬಿಡುಗಡೆಯಾದ ಮೊದಲ ವಾರದಲ್ಲಿ 200, 300, 400 ರೂಪಾಯಿಗಳಿಗೆ ಟಿಕೆಟ್ ದರ ಏರಿಸಲಾಗುತ್ತದೆ. ಒಟ್ಟು ಥಿಯೇಟರಿನ ಸೀಟುಗಳ ಸಂಖ್ಯೆಯಲ್ಲಿ ಕಾಲು ಭಾಗ, ಅರ್ಧ ಅಥವಾ ಮುಕ್ಕಾಲು ಸೀಟುಗಳು ತುಂಬುವ ಪ್ರದರ್ಶನಗಳಲ್ಲಿನ ಮಾರಾಟವಾದ ಟಿಕೇಟುಗಳ ಲೆಕ್ಕದಲ್ಲಿ ಮೋಸ ನೆಡೆಯುತ್ತದೆ. ಅದನ್ನು ಸಿನೆಮಾದವರು 'ಲೀಕೇಜ್' ಅನ್ನುತ್ತಾರೆ.

  ನಷ್ಟವಾಗುವುದು ವಿರಳ

  ನಷ್ಟವಾಗುವುದು ವಿರಳ

  ತಾಲ್ಲೂಕು ಮಟ್ಟದ ಥಿಯೇಟರುಗಳಲ್ಲಿ ಹೌಸ್ ಫುಲ್ ಆಗಿದ್ದರೂ extra ಕುರ್ಚಿಗಳನ್ನು ಇಟ್ಟು ಆ ಟಿಕೇಟುಗಳ ಲೆಕ್ಕ ಕೊಡದೆ ದುಡಿದಿದ್ದಾರೆ. ಥಿಯೇಟರುಗಳಲ್ಲಿ AC ಇದ್ದರೂ ಹಾಕದೇ, ಪ್ರೊಜೆಕ್ಟರ್ ಬಲ್ಬ್ ಕೆಟ್ಟಿದ್ದರೂ ಬದಲಿಸದೇ, screen ಧೂಳಿಡಿದಿದ್ದರೂ ಕ್ಲೀನ್ ಮಾಡಿಸದೇ, ಸ್ಪೀಕರ್ ಬರ್ ಬರ್ ಎನ್ನುತ್ತಿದ್ದರೂ ಸರ್ವೀಸ್ ಮಾಡಿಸದೆ "ಹೇಗಿದ್ದರೂ ಜನ ಸಿನೆಮಾ ನೋಡುತ್ತಾರೆ" ಎಂಬ ಧೋರಣೆ ತೋರಿದ್ದಾರೆ. ವಾಹನಗಳ ಪಾರ್ಕಿಂಗ್ ಮೊತ್ತ ಮತ್ತು Onine ticket partners ಕಡೆಯಿಂದಲೂ ಸಣ್ಣ ಮೊತ್ತದ ಕಮಿಷನ್ ಥಿಯೇಟರುಗಳಿಗೆ ಬರುತ್ತದೆ.‌ ಅದು ಬೋನಸ್.

  ಜಗತ್ತಿನ ಅತ್ಯಂತ ಸಮೃದ್ಧ ಚಿತ್ರೋದ್ಯಮ ಖ್ಯಾತಿಯ ಬಾಲಿವುಡ್‌ಗೆ ನೆಲಕಚ್ಚುವ ಭೀತಿಜಗತ್ತಿನ ಅತ್ಯಂತ ಸಮೃದ್ಧ ಚಿತ್ರೋದ್ಯಮ ಖ್ಯಾತಿಯ ಬಾಲಿವುಡ್‌ಗೆ ನೆಲಕಚ್ಚುವ ಭೀತಿ

  ಒಂದು ಸಿನೆಮಾ ಫ್ಲಾಪ್ ಆಗಿ ನಿರ್ಮಾಪಕನಿಗೆ ನಷ್ಟವಾದರೂ ಬಹುತೇಕ ಥಿಯೇಟರುಗಳು ತಮ್ಮ ವಾರದ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ. ಸಿನೆಮಾ ಬಿಡುಗಡೆಗೆ ಮುನ್ನವೇ ಒಂದು ವಾರದ ಬಾಡಿಗೆ ತೆಗೆದುಕೊಳ್ಳುವುದು ವಾಡಿಕೆ. ಜನ ಬಂದು ಸಿನೆಮಾ ನೋಡಿದರೆ ಮುಂದಿನ ವಾರಕ್ಕೆ ಸಿನೆಮಾ ಉಳಿಸಿಕೊಳ್ತಾರೆ. ಇಲ್ಲವಾದರೆ ತೆಗೆದುಬಿಡ್ತಾರೆ. ಅವರಿಗೆ ನಷ್ಟವಾಗುವುದೇ ಇಲ್ಲವೆಂದಲ್ಲ, ಅದರೆ ಬಹಳ ವಿರಳ..

  ಆ ರೀತಿ ನಷ್ಟವಾಗುವುದು ಮುಖ್ಯವಾಗಿ ಮೂರು ಸಂದರ್ಭಗಳಲ್ಲಿ.

  ಸಂದರ್ಭ 1

  ಸಂದರ್ಭ 1

  ಕೆಲವು ಹೆಸರಾಂತ ವಿತರಕರು ತಮಗೆ ತೀರಾ ಪರಿಚಿತ ನಿರ್ಮಾಪಕರ ಸಿನೆಮಾಗಳನ್ನು ವಾರದ ಬಾಡಿಗೆಯನ್ನು ಮುಂಗಡ ಕೇಳದೆ ಥಿಯೇಟರುಗಳ ಮಾಲೀಕರನ್ನು ಒಪ್ಪಿಸಿ ಸಿನಿಮಾ ಬಿಡುಗಡೆ ಮಾಡಿರುತ್ತಾರೆ. ಆ ಸಿನೆಮಾಗಳಿಗೆ ಜನ ಬರದೆ ಹೋದಾಗ ಆಗುವ ಕಲೆಕ್ಷನ್ ಥಿಯೇಟರ್ ಬಾಡಿಗೆಯನ್ನು ಕವರ್ ಮಾಡುವ ಮೊತ್ತ ತಲುಪದೇ ಹೋದಾಗ ಆಗುವ ನಷ್ಟ. ಆ ರೀತಿ ಆದಾಗ ನಿರ್ಮಾಪಕರಿಗೆ ಏನೂ ಕೊಡಲಾಗುವುದಿಲ್ಲ, ಬಂದಷ್ಟೂ ಥಿಯೇಟರ್ ಮಾಲೀಕರಿಗೆ ಉಳಿಯುತ್ತದೆ. ಬಾಡಿಗೆ ಮೊತ್ತಕ್ಕಿಂತ ಅಧಿಕವಾಗಿ ಬಂದ ಮೊತ್ತ ಮಾತ್ರ ನಿರ್ಮಾಪಕರಿಗೆ ಹೋಗುವುದು.

  ಸಂದರ್ಭ 2

  ಸಂದರ್ಭ 2

  ಸ್ಟಾರ್ ನಟರ ಅತಿ ನಿರೀಕ್ಷಿತ (ಹೈಪ್ ಕ್ರಿಯೇಟ್ ಆಗಿರುವ) ಸಿನೆಮಾಗಳನ್ನು ನಿರ್ಮಾಪಕರು ಅಥವ ವಿತರಕರಿಂದ ಹೆಚ್ಚು ಮೊತ್ತಕ್ಕೆ ಖರೀದೀಸಿ ತಂದು ಅದು ಫ್ಲಾಪ್ ಆದಾಗ ನಷ್ಟವಾಗುತ್ತದೆ. ಅಷ್ಟು ದೊಡ್ಡ ಹಿಟ್ ಸಿನೆಮಾ ಎಂದೆನಿಸಿಕೊಂಡ ಆಮೀರ್ ಖಾನ್ ಅಭಿನಯದ ಪಿ.ಕೆ., ಶಂಕರ್ ನಿರ್ದೇಶನದ ತಮಿಳು ಸಿನೆಮಾ "ಐ", ರಜಿನಿಕಾಂತ್ ಸಿನೆಮಾ "ಕೋಚಾಡಿಯನ್" ಇತ್ಯಾದಿ ಸಿನೆಮಾಗಳನ್ನು ಖರೀದಿಸಿದ ಕೆಲವು ಚಿತ್ರಮಂದಿರಗಳೂ ನಷ್ಟ ಅನುಭವಿಸಿವೆ. ಆದರೆ ಅಲ್ಲಿ ನಷ್ಟದ ಪ್ರಮಾಣ ಕಡಿಮೆಯೇ ಇರುತ್ತದೆ. ಯಾಕೆಂದರೆ ಸ್ಟಾರ್ ನಟರ ಅಭಿಮಾನಿ ಬಳಗ ಥಿಯೇಟರುಗಳಿಗೆ ನುಗ್ಗುತ್ತದೆ. ಆರಂಭದಲ್ಲಿ ಟಿಕೇಟ್ ದರಗಳನ್ನು ಏರಿಸಿರುತ್ತಾರೆ. ಅಲ್ಲಿ ನಿರ್ಮಾಪಕ ಮತ್ತು ವಿತರಕರು ಲಾಭದಲ್ಲಿರುತ್ತಾರೆ.

  ಸಂದರ್ಭ 3

  ಸಂದರ್ಭ 3

  ಸಿನೆಮಾಗಳು ಕಡಿಮೆ ಸಂಖ್ಯೆಯಲ್ಲಿ ಬಿಡುಗಡೆ ಆದಾಗ ಅಥವಾ ಸಿನೆಮಾಗಳು ಬಿಡುಗಡೆ ಆಗದೇ ಇದ್ದಾಗ ಥಿಯೇಟರುಗಳು ಅಲ್ಪಕಾಲದ ನಷ್ಟ ಅನುಭವಿಸುತ್ತವೆ.‌

  ನಿರ್ಮಾಪಕರ ಬದುಕು ಮೂರಾಬಟ್ಟೆಯಾಗಿದೆ

  ನಿರ್ಮಾಪಕರ ಬದುಕು ಮೂರಾಬಟ್ಟೆಯಾಗಿದೆ

  ನಿರಂತರ ನಷ್ಟ ಅನುಭವಿಸಿದ ಥಿಯೇಟರುಗಳ ಮಾಲೀಕರು ಥಿಯೇಟರ್ ಮುಚ್ಚಿ ಅದಕ್ಕಿಂತ ಹೆಚ್ಚು ಲಾಭದಾಯಕವಾದ ಕಲ್ಯಾಣ ಮಂಟಪಗಳನ್ನು ಕಟ್ಟಿದ್ದಾರೆ, ಆ ಜಾಗಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಮಾಲ್, ಅಪಾರ್ಟ್ಮೆಂಟ್ ಕಟ್ಟಿದ್ದಾರೆ. ಕೆಲವರು ಜಾಗ ಮಾರಾಟ ಮಾಡಿ ಬೇರೆ ವ್ಯಾಪಾರದಲ್ಲಿ ಬಂಡವಾಳ ಹೂಡಿದ್ದಾರೆ. ಆದರೆ ಒಂದೇ ಒಂದು ಸಿನೆಮಾ ಫ್ಲಾಪ್ ಆದ ಕಾರಣಕ್ಕೆ ಮನೆಗಳನ್ನು ಮಾರಿಕೊಂಡು ಬೀದಿಗೆ ಬಂದ ನಿರ್ಮಾಪಕರಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಅವಮಾನ ತಾಳಲಾರದೆ ಊರು ಬಿಟ್ಟು ತಲೆಮರೆಸಿಕೊಂಡು ಹೋಗಿರುವವರಿದ್ದಾರೆ.

  ಒದ್ದಾಡುವ ಸ್ಥಿತಿಯಲ್ಲಿ ನಿರ್ಮಾಪಕರು

  ಒದ್ದಾಡುವ ಸ್ಥಿತಿಯಲ್ಲಿ ನಿರ್ಮಾಪಕರು

  ಒಂದು ಸಿನೆಮಾದ ಸೋಲು ಹತ್ತು ಸಿನೆಮಾಗಳಿಂದ ಗಳಿಸಿದ್ದೆಲ್ಲವನ್ನು ಕಳೆದು ಸಾಲಗಾರರನ್ನಾಗಿ ಮಾಡುತ್ತದೆ. ಈ ಲಾಕ್ ಡೌನ್ ಸಮಯದಲ್ಲೂ ಸಹ ತಂದ ಸಾಲಕ್ಕೆ ಬಡ್ಡಿ ಕಟ್ಟುತ್ತಾ,‌ ಅರ್ಧ ನಿರ್ಮಾಣವಾಗಿರುವ ಸಿನೆಮಾಗಳಿಗೆ ಮತ್ತೆ ಸಾಲ ತಂದು ಮುಕ್ತಾಯ ಹಂತಕ್ಕೆ ತಲುಪಲು ಒದ್ದಾಡುವ ಸ್ಥಿತಿಯಲ್ಲಿದ್ದಾರೆ ನಿರ್ಮಾಪಕರು. ಅವರಿಗೂ ಸಿನೆಮಾ ಬಿಡುಗಡೆ ಮತ್ತು ಹಣದ ರಿಟರ್ನ್ಸ್ ಬಗ್ಗೆ ಖಚಿತತೆ ಇಲ್ಲ.

  ಒಟಿಟಿಯಿಂದ ಲಾಭವಿಲ್ಲ

  ಒಟಿಟಿಯಿಂದ ಲಾಭವಿಲ್ಲ

  ಥಿಯೇಟರ್ ಮಾಲೀಕರಿಗಿಂತ ಹೆಚ್ಚು ನಷ್ಟ ಅನುಭವಿಸುವ ನಿರ್ಮಾಪಕರು ತಮ್ಮ ಸಿನೆಮಾಗಳನ್ನು OTTಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರೆ ಥಿಯೇಟರ್ ಮಾಲೀಕರು ಆ ಸಿನಿಮಾದ ನಟರ ಮುಂದಿನ ಸಿನೆಮಾಗಳನ್ನು ಮತ್ತು ಆ ಸಿನೆಮಾದ ನಿರ್ಮಾಪಕರ ಮುಂದಿನ ಸಿನೆಮಾಗಳನ್ನು ಬಹಿಷ್ಕಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

  ಈಗಿನ ಸಂಕಷ್ಟದ ಸಮಯದಲ್ಲಿ ಸಿನೆಮಾನ OTTಗೆ ಮಾರಲು ಹೋದರೂ ಯಾರಿಗೇನೂ ಲಾಭ ಬರುವುದಿಲ್ಲ. OTTಗಳು ಕೇಳಿದಷ್ಟು ಚಿಲ್ಲರೆ ಹಣಕ್ಕೆ ಸಿನೆಮಾನ ಮಾರಾಟ ಮಾಡಬೇಕಷ್ಟೆ. OTTಗೆ ಮಾರುವ ಮೂಲಕ ಲಾಭ ಮಾಡಿಕೊಳ್ಳುವುದು ದೂರದ ಮಾತು. ಹೂಡಿದ ಬಂಡವಾಳ ಕೂಡ ವಾಪಸ್ ಬರುವುದಿಲ್ಲ. ನಷ್ಟ ಎಲ್ಲರಿಗೂ ಆಗುತ್ತಿದೆ. ಎಲ್ಲ ಉದ್ಯಮಗಳಿಗೂ. ಕೂಲಿಯವನಿಂದ ಬಹುರಾಷ್ಟ್ರೀಯ ಕಂಪನಿಗಳ ತನಕ ಎಲ್ಲರಿಗೂ ಆರ್ಥಿಕ ಹಿನ್ನಡೆ ಆಗುತ್ತಿದೆ. ಆದರೆ ಯಾರೂ ಯಾರನ್ನು ಬೆದರಿಸುವ ಅಥವ ದರಗಳನ್ನು ಹೆಚ್ಚಿಸಿ ನಷ್ಟ ಭರಿಸಿಕೊಳ್ಳುವ ಯೋಚನೆ ಮಾಡಬಾರದು.

  ಇಂತಿ,

  ಮಲ್ಲಿ

  ನೊಂದ ಕನ್ನಡ ಸಿನಿಮಾ ತಂತ್ರಜ್ಞ

  English summary
  Film Industry after Corona: a letter from a technician on the tough situation of producers and the situation of exhibitors is better.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X