twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ - ಅಶ್ವಿನಿ 22 ವರ್ಷದ ವೈವಾಹಿಕ ಜೀವನದ ಮರೆಯಲಾಗದ ಸಂಗತಿಗಳಿವು

    |

    "ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡಿದ್ದು ನಮ್ಮ ತಂದೆ ತಾಯಿ. ನಾನು ಸರಳವಾಗಿ ಮತ್ತು ನನ್ನ ದಾರಿಯಲ್ಲಿ ಹೋಗಲು ಸ್ಪೂರ್ತಿ ನೀಡುತ್ತಿರುವುದು ನನ್ನ ಪತ್ನಿ." ಪುನೀತ್ರ ರಾಜ್‌ಕುಮಾರ್ ಮೂರು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಇದು. ಡಿಸೆಂಬರ್ 01 ಪುನೀತ್ ಹಾಗೂ ಅಶ್ವಿನಿ ಅವರಿಗೆ ವಿಶೇಷ ದಿನ. ಈ ದಿನ ಇಬ್ಬರ ವಿವಾಹ ವಾರ್ಷಿಕೋತ್ಸವ. ಇಂದು ಪುನೀತ್ ರಾಜ್‌ಕುಮಾರ್ ಬದುಕಿದ್ದರೆ. 22ನೇ ವಿವಾಹ ವಾರ್ಷಿಕೊತ್ಸವವನ್ನು ಆಚರಿಸಿಕೊಳ್ಳಬೇಕಿತ್ತು.

    22 ವರ್ಷ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಇಬ್ಬರ ದಾಂಪತ್ಯ ಸುಖಕರವಾಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಅನ್ಯೋನ್ಯತೆಯಿಂದ ಬಾಳಿದೆ. ತನ್ನ ಅಮ್ಮನಂತೆ ಪತ್ನಿಯನ್ನೂ ಸಿನಿಮಾರಂಗಕ್ಕೆ ಕರೆತಂದಿದ್ದ ಪವರ್‌ಸ್ಟಾರ್ ಸದಾ ಪತ್ನಿಗೆ ಬೆನ್ನೆಲುಬಾಗಿ ನಿಂತಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಸಕ್ಸಸ್‌ಪುಲ್ ನಿರ್ಮಾಪಕಿ ಮಾಡಲು ಮುಂದಾಗಿದ್ದರು. ಪಿಆರ್‌ಕೆ ಪ್ರೊಡಕ್ಷನ್ ಆರಂಭ, ಪತ್ನಿಗೆ ಆ ಜವಾಬ್ದಾರಿ ನೀಡಿದ್ದು ಎಲ್ಲವೂ ಇಬ್ಬರ ದಾಂಪತ್ಯದ ಅನ್ಯೋನ್ಯತೆಯ ಕತೆಯನ್ನು ಹೇಳುತ್ತದೆ.

    ನಿರ್ಮಾಪಕಿ ಅಶ್ವಿನಿಗೆ ಪುನೀತ್ ಬೆಂಬಲ

    ನಿರ್ಮಾಪಕಿ ಅಶ್ವಿನಿಗೆ ಪುನೀತ್ ಬೆಂಬಲ

    ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮದೇ ಸಂಸ್ಥೆ ಮೂಲಕ ನಿರ್ಮಾಪಕಿಯಾಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆ ವೇಳೆ ಸ್ವತ: ಪುನೀತ್ ಪತ್ನಿಗೆ ಬೆಂಬಲವಾಗಿ ನಿಂತಿದ್ದರು. " ಆರಂಭದಲ್ಲಿ ನಿರ್ಮಾಪಕಿ ಅಂದ್ರೆ, ಕೆಲವು ಚೆಕ್‌ಗಳಿಗೆ ಸಹಿ ಮಾಡುವುದು ಎಂದುಕೊಂಡಿದ್ದೆ. ಆದರೆ, ಇದರಲ್ಲೂ ತುಂಬಾ ಕೆಲಸ ಇದೆ ಅನ್ನುವುದು ಮನವರಿಕೆಯಾಗಿದೆ. ಪುನೀತ್ ನನಗೆ ಸಹಾಯ ಮಾಡುತ್ತಿದ್ದಾರೆ. ನಮ್ಮ ಬಳಿ ಒಂದೊಳ್ಳೆ ತಂಡವಿದೆ. ಅವರು ನನಗೆ ಸಹಾಯ ಮಾಡುತ್ತಿದ್ದಾರೆ." ಎಂದು ಅಶ್ವಿನಿ ಪತಿ ಪುನೀತ್ ಬೆಂಬಲದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

    ಅಪ್ಪು ಅಶ್ವಿನಿ ಇಬ್ಬರೂ ಸೇರಿ ಕಥೆ ಕೇಳುತ್ತಿದ್ದರು

    ಅಪ್ಪು ಅಶ್ವಿನಿ ಇಬ್ಬರೂ ಸೇರಿ ಕಥೆ ಕೇಳುತ್ತಿದ್ದರು

    ಪಿಆರ್‌ಕೆ ಪ್ರೊಡಕ್ಷನ್ ಆರಂಭ ಮಾಡಿದ್ದರು ಹಿಂದೊಂದು ಕಥೆಯಿದೆ. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಪಕಿಯಾಗಿ ಸುಮಾರು 87 ಸಿನಿಮಾಗಳನ್ನು ನಿರ್ಮಿಸಿದ್ದರು. ಶೇ.80ರಷ್ಟು ಯಶಸ್ಸಿ ಸಿನಿಮಾಗಳನ್ನು ನಿರ್ಮಿಸಿದ್ದರು. ವಜ್ರೇಶ್ವರಿ ಕಂಬೈನ್ಸ್ ಮೂಲಕ ನಿರ್ಮಾಣ ಆದ ಸಿನಿಮಾಗಳ ಜೊತೆ ಪಿಆರ್‌ಕೆ ಪ್ರೊಡಕ್ಷನ್ ಸೇರಿಕೊಂಡಿದ್ದು 100 ಸಿನಿಮಾಗಳನ್ನು ಪೂರ್ಣಗೊಳಿಸುವ ಆಲೋಚನೆ ಹೊಂದಿದ್ದರು. ಹೀಗಾಗಿ ಅಶ್ವಿನಿ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಸೇರಿ ಕಥೆ ಕೇಳುತ್ತಿದ್ದರು. ಹೊಸ ಪ್ರತಿಭೆಗಳಿಗೆ ಸಿನಿಮಾ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಲು ಮುಂದಾಗಿದ್ದರು.

    ಬ್ರಿಡ್ಜ್ ಸಿನಿಮಾಗಳಿಗೆ ವೇದಿಕೆ ಕಲ್ಪಿಸಿದ್ದರು

    ಬ್ರಿಡ್ಜ್ ಸಿನಿಮಾಗಳಿಗೆ ವೇದಿಕೆ ಕಲ್ಪಿಸಿದ್ದರು

    ಪುನೀತ್ ರಾಜ್‌ಕುಮಾರ್ ಹಾಗೂ ಪತ್ನಿ ಅಶ್ವಿನಿ ಇಬ್ಬರಿಗೂ ಕೇವಲ ಕಮರ್ಷಿಯಲ್ ಸಿನಿಮಾ ನಿರ್ಮಿಸುವ ಒಲವಿರಲಿಲ್ಲ. ಬ್ರಿಡ್ಜ್ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಅನ್ನುವ ಹಂಬಲವಿತ್ತು. ಈ ಕಾರಣಕ್ಕಾಗಿಯೇ ಪಿಆರ್‌ಕೆ ಪ್ರೊಡಕ್ಷನ್ ಕಂಪನಿಯನ್ನು ಆರಂಭಿಸಿದ್ದರು. ಈ ಮೂಲಕ ತೀರಾ ಕಮರ್ಷಿಯಲ್ ಅಲ್ಲದ, ಅತ್ತ ತೀರಾ ಆರ್ಟ್ ಸಿನಿಮಾವೂ ಅಲ್ಲದ, ಆದರೆ, ಎರಡು ಪ್ರಕಾರದ ಸಿನಿಮಾಗಳಿಗೆ ಕೊಂಡಿಯಾಗುವಂತಹ ಬ್ರಿಡ್ಜ್ ಸಿನಿಮಾಗಳನ್ನು ನಿರ್ಮಿಸುವ ಕಲ್ಪನೆ ಹೊಂದಿದ್ದರು.

    ಪತ್ನಿಗೆ ಸಿನಿಮಾ ಕತೆ ಹೇಳುತ್ತಿದ್ದರು ಅಪ್ಪು

    ಪತ್ನಿಗೆ ಸಿನಿಮಾ ಕತೆ ಹೇಳುತ್ತಿದ್ದರು ಅಪ್ಪು

    ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಪಕಿಯಾದಾಗ ಅವರಿಗೆ ಕಥೆ ಕೇಳುವುದು ಹೊಸತೇನು ಆಗಿರಲಿಲ್ಲ. ಯಾಕಂದ್ರೆ, ಪುನೀತ್ ರಾಜ್‌ಕುಮಾರ್ ತಾವು ನಟಿಸಿದ ಪ್ರತಿಯೊಂದು ಕತೆಯನ್ನೂ ಪತ್ನಿ ನಿರೂಪಣೆ ಮಾಡುತ್ತಿದ್ದರು. " ಪುನೀತ್ ಸಿನಿಮಾಗಳನ್ನು ಮಾಡುವಾಗ ನಿರ್ದೇಶಕರು ಕಥೆ ಹೇಳುತ್ತಿದ್ದರು. ಆಗ ರಾಘವೇಂದ್ರ ರಾಜ್‌ಕುಮಾರ್ ಕಥೆ ಕೇಳುತ್ತಿದ್ದರು. ಅವರೊಂದಿಗೆ ಕೂತು ನಾನು ಕಥೆ ಕೇಳಿದ್ದೇನೆ. ಎಲ್ಲಕ್ಕಿಂತ ನಾನು ಹೆಚ್ಚು ಓದುತ್ತೇನೆ. ಆ ಕಾರಣಕ್ಕಾಗಿ ಕಥೆ ಕೇಳುವುದು ಹೊಸತೇನಲ್ಲ." ಅಂತ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದರು.

    ಕುಟುಂಬಕ್ಕಾಗಿ ಸಮಯ ಕೊಡುತ್ತಿದ್ದರು ಅಪ್ಪು

    ಕುಟುಂಬಕ್ಕಾಗಿ ಸಮಯ ಕೊಡುತ್ತಿದ್ದರು ಅಪ್ಪು

    ಪುನೀತ್ ರಾಜ್‌ಕುಮಾರ್ ಸಿನಿಮಾಗಳಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಸಮಯ ಮೀಸಲಿಡುತ್ತಿದ್ದರು. ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರು." ಪುನೀತ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು ಕುಟುಂಬಕ್ಕೆ ಸಮಯ ನೀಡುತ್ತಾರೆ. ಹಾಗಾಗಿ ಅವರ ಮೇಲೆ ಯಾವುದೇ ದೂರು ಇಲ್ಲ. ನಾವು ಮುಂಗಡವಾಗಿ ರಜೆ ದಿನಗಳನ್ನು ಮೀಸಲಿರಿಸುತ್ತೇವೆ. ಕುಟುಂಬ ಸಮೇತ ಹೊರಗೆ ಹೋಗಿ ಎಂಜಾಯ್ ಮಾಡುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಬಗ್ಗೆನೂ ಗಮನವಿಟ್ಟಿದ್ದಾರೆ. ಹೀಗಾಗಿ ಅವರ ಮೇಲೆ ಯಾವುದೇ ದೂರು ಇಲ್ಲ." ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದರು.

    English summary
    December 1 1999 Puneeth Rajkumar married Ashwini. They both supposed to celebrate 22nd wedding anniversary.
    Wednesday, December 1, 2021, 15:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X