twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪುವಿಗೆ ಈ ಎರಡು ಹೊಟೇಲಿನ ಚಿಕನ್ ಬಿರಿಯಾನಿ ಅಂದ್ರೆ ಬಲು ಇಷ್ಟ

    |

    ನಟ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 12 ದಿನಗಳು ಕಳೆದಿವೆ. ನಿನ್ನೆ (ನವೆಂಬರ್ 8) ತಾನೇ ಅಣ್ಣಾವ್ರ ಇಡೀ ಕುಟುಂಬ ಪುನೀತ್ ರಾಜ್‌ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆಯನ್ನು ನೆರವೇರಿಸಿದೆ. ಕೇವಲ ಚಿತ್ರರಂಗದ ಗಣ್ಯರಿಗೆ ಹಾಗೂ ಆಪ್ತ ವಲಯಕ್ಕಷ್ಟೇ ಅವಕಾಶ ನೀಡಲಾಗಿತ್ತು. ದರ್ಶನ್, ಗಣೇಶ್, ರವಿಶಂಕರ್, ರಕ್ಷಿತ್ ಶೆಟ್ಟಿ ಸೇರಿದಂತೆ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಅಪ್ಪು ಮನೆಗೆ ಬಂದು ಆತ್ಮಕ್ಕೆ ಶಾಂತಿ ಕೋರಿದ್ದರು. ಇಂದು ( ನವೆಂಬರ್ 9) ಅಭಿಮಾನಿಗಳಿಗಾಗಿ ಪುನೀತ್ ಕುಟುಂಬ ಭೋಜನ ವ್ಯವಸ್ಥೆಯನ್ನು ಮಾಡಿದೆ.

    ಸುಮಾರು 30 ರಿಂದ 40 ಸಾವಿರ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಈ ಅನ್ನಸಂತರ್ಪಣೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಮೊದಲಿನಿಂದಲೂ ಅಭಿಮಾನಿಗಳಿಗೆ ಊಟ ಹಾಕಿಸಬೇಕು ಅಂತ ಅಪ್ಪು ಇಷ್ಟ ಪಟ್ಟಿದ್ದರು. ಕುಟುಂಬದವರೊಂದಿಗೂ ಚರ್ಚೆ ಮಾಡಿದ್ದರು. ಅಪ್ಪು ಆಸೆಯಂತೆ ಅಭಿಮಾನಿಗಳಿಗೆ ಪ್ಯಾಲೇಜ್ ಗ್ರೌಂಡ್‌ನಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಭೋಜನದ ವ್ಯವಸ್ಥೆ ಆಗಿದೆ. ಪುನೀತ್ ರಾಜ್‌ಕುಮಾರ್ ಆಹಾರ ಪ್ರಿಯರಾಗಿದ್ದರು.

     ಚಿಕನ್ ಬಿರಿಯಾನಿ ಅಂದ್ರೆ ಬಲು ಇಷ್ಟ

    ಚಿಕನ್ ಬಿರಿಯಾನಿ ಅಂದ್ರೆ ಬಲು ಇಷ್ಟ

    ಪುನೀತ್ ರಾಜ್‌ಕುಮಾರ್ ವರ್ಕ್ ಔಟ್ ಹೇಗೆ ಮಾಡುತ್ತಿದ್ದರೋ ಹಾಗೇ ಚೆನ್ನಾಗಿ ಆಹಾರವನ್ನೂ ಸೇವಿಸುತ್ತಿದ್ದರು. ಅಪ್ಪುಗೆ ಚಿಕನ್ ಬಿರಿಯಾನಿ ಅಂದರೆ ಬಲು ಪ್ರೀತಿ. ಶೂಟಿಂಗ್ ಹೋಗಲಿ, ಇಲ್ಲಾ ಮನೆಯಲ್ಲಿ ಇರಲಿ ಚಿಕನ್ ಬಿರಿಯಾನಿ ಬೇಕಿತ್ತು. ಬಿರಿಯಾನಿ ತಿನ್ನಬೇಕು ಅನಿಸಿದಾಗಲೆಲ್ಲಾ ತನಗೆ ಬೇಕಾಗಿರೋ ಹೊಟೇಲ್‌ನಿಂದ ಮನೆಗೇ ತರಿಸಿಕೊಳ್ಳುತ್ತಿದ್ದರು. ಇಲ್ಲವೇ ತಾವೇ ಹೋಗಿ ಬಿರಿಯಾನಿ ತಿಂದು ಬರುತ್ತಿದ್ದರು.

     ನವಯುಗ ಹಾಗೂ ಶಿವಾಜಿ ಬಿರಿಯಾನಿ ಇಷ್ಟ

    ನವಯುಗ ಹಾಗೂ ಶಿವಾಜಿ ಬಿರಿಯಾನಿ ಇಷ್ಟ

    ಪುನೀತ್ ರಾಜ್‌ಕುಮಾರ್ ತಂದೆ ಡಾ. ರಾಜ್‌ಕುಮಾರ್ ಅವರಂತೆ ಊಟದಲ್ಲಿ ಎತ್ತಿದ ಕೈ. ಅಣ್ಣಾವ್ರು ಬಹಳ ಇಷ್ಟ ಪಡುತ್ತಿದ್ದ ನವಯುಗ ಹೊಟೇಲ್‌ನ ಚಿಕನ್ ಬಿರಿಯಾನಿ ಅಪ್ಪು ವಿಗೆ ಇಷ್ಟವಿತ್ತು. ಬೆಂಗಳೂರಿನ ಮೆಜಿಸ್ಟಿಕ್‌ನಲ್ಲಿರುವ ನವಯುಗ ಹೊಟೇಲ್‌ನ ಚಿಕನ್ ಬಿರಿಯಾನಿಯನ್ನು ಇಷ್ಟ ಪಟ್ಟು ತಿನ್ನುತ್ತಿದ್ದರು. ಹಾಗೇ ಬನಶಂಕರಿಯ ಬಸ್ ನಿಲ್ದಾಣದ ಸಮೀಪವಿರುವ ಶಿವಾಜಿ ಹೊಟೇಲ್‌ನ ಚಿಕನ್ ಬಿರಿಯಾನಿ ಕೂಡ ಇಷ್ಟವಿತ್ತು. ಶೂಟಿಂಗ್‌ ಮಾಡುವಾಗ ಇಲ್ಲವೆ ಬಿಡುವಿದ್ದಾಗ ಇದೇ ಬಿರಿಯಾನಿಯನ್ನು ತರಿಸಿಕೊಂಡು ತಿನ್ನುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅಪ್ಪು ಆಪ್ತರು.

     ಇಡೀ ಚಿತ್ರತಂಡಕ್ಕೆ ಬಿರಿಯಾನಿ ತರಿಸಿದ್ದರು ಅಪ್ಪು

    ಇಡೀ ಚಿತ್ರತಂಡಕ್ಕೆ ಬಿರಿಯಾನಿ ತರಿಸಿದ್ದರು ಅಪ್ಪು

    ಶೂಟಿಂಗ್‌ಗೆ ಹೊರಗಡೆ ಹೋದಾಗಲೂ ಪವರ್‌ಸ್ಟಾರ್‌ಗೆ ಬಿರಿಯಾನಿ ತರಿಸುತ್ತಿದ್ದರು. ತಾವು ಎಲ್ಲೇ ಶೂಟಿಂಗ್‌ಗೆ ಹೋದರೂ ಅಲ್ಲಿನ ಬೆಸ್ಟ್ ಹೊಟೇಲ್ ಅನ್ನು ಹುಡುಕುತ್ತಿದ್ದರು." ತೀರ್ಥಹಳ್ಳಿಯಲ್ಲಿ ಪರಮಾತ್ಮ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಒಂದು ದಿನ ಅಪ್ಪುಗೆ ಬಿರಿಯಾನಿ ತಿನ್ನಬೇಕೆನಿಸಿತ್ತು. ಆಗ ಇಡೀ ಚಿತ್ರತಂಡಕ್ಕೂ ಬಿರಿಯಾನಿ ತರಿಸಿಕೊಟ್ಟಿದ್ದರು." ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಪರಮಾತ್ಮ ಚಿತ್ರಕ್ಕೆ ಸಹಾಯಕ ನಿರ್ದೇಶಕ ಮಹೇಶ್. ಈಗ ಶ್ರೀಮುರಳಿ ನಟಿಸಿದ ಮದಗಜ ಚಿತ್ರದ ನಿರ್ದೇಶಕರಾಗಿದ್ದಾರೆ.

     ಪುನೀತ್‌ಗೆ ತಟ್ಟೆ ಇಡ್ಲಿ, ಜೋಳದ ರೊಟ್ಟಿನೂ ಇಷ್ಟ

    ಪುನೀತ್‌ಗೆ ತಟ್ಟೆ ಇಡ್ಲಿ, ಜೋಳದ ರೊಟ್ಟಿನೂ ಇಷ್ಟ

    ಪುನೀತ್‌ ರಾಜ್‌ಕುಮಾರ್‌ಗೆ ಕೇವಲ ಚಿಕನ್ ಬಿರಿಯಾನಿ ಗ್ರಿಲ್ಡ್ ಚಿಕನ್ ಅಷ್ಟೇ ಇಷ್ಟ ಆಗಿರಲಿಲ್ಲ. ಸಸ್ಯಹಾರಿ ಊಟವನ್ನೂ ತುಂಬಾನೇ ಇಷ್ಟ ಪಡುತ್ತಿದ್ದರು. ಅದರಲ್ಲೂ ಬೀದಿ ಬದಿಯ ಊಟ ಅವರಿಗೆ ಸಿಕ್ಕಾಪಟ್ಟೆ ಇಷ್ಟವಿತ್ತು. ತಟ್ಟೆ ಇಡ್ಲಿ, ಜೋಳದ ರೊಟ್ಟಿಯನ್ನು ತುಂಬಾನೇ ಇಷ್ಟ ಪಡುತ್ತಿದ್ದರು. ಅದರಲ್ಲೂ ಮೈಸೂರು ಶೈಲಿಯ ಮಸಾಲೆ ಚಿತ್ರಾನ್ನ, ಟೊಮೆಟೊ ಪಪ್ಪು ಅಂದರೆ ಅಪ್ಪು ಬಾಯಿ ನೀರಾಡುತ್ತಿತ್ತು.

     ಲಾಕ್‌ಡೌನ್‌ನಲ್ಲಿ ಅಡುಗೆ ಕಲಿತಿದ್ದ ಪುನೀತ್

    ಲಾಕ್‌ಡೌನ್‌ನಲ್ಲಿ ಅಡುಗೆ ಕಲಿತಿದ್ದ ಪುನೀತ್

    ಲಾಕ್‌ಡೌನ್ ವೇಳೆ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಬಿದ್ದಿತ್ತು. ಈ ವೇಳೆ ಪುನೀತ್ ರಾಜ್‌ಕುಮಾರ್ ಮನೆಯಲ್ಲಿ ಯೂಟ್ಯೂಬ್ ಚಾನೆಲ್‌ಗಳನ್ನು ನೋಡಿ ಅಡುಗೆ ಮಾಡುವುದನ್ನು ಕಲಿತಿದ್ದರು. ಚಿಕನ್ 65, ಮಟನ್ ಸುಕ್ಕಾ ಮಾಡುವುದನ್ನು ಕಲಿತಿದ್ದರು. ಸಿನಿಮಾ ಬಿಟ್ಟರೆ, ವರ್ಕ್‌ಔಟ್. ವರ್ಕ್‌ಔಟ್ ಬಿಟ್ಟರೆ ಊಟ. ಇದು ಪುನೀತ್ ರಾಜ್‌ಕುಮಾರ್ ಅವರ ಮೆಚ್ಚಿನ ದಿನನಿತ್ಯದ ದಿನಚರಿಯಾಗಿತ್ತು. ಬುಧವಾರ ಮತ್ತು ಗುರುವಾರ ನಾವ್ ವೆಜ್ ಊಟ ಮಾಡುತ್ತಿರಲಿಲ್ಲ.

    English summary
    Power star Puneeth Rajkumar was foodie. He love chicken Biriyani from Navayuga and Banashankari's Shivaji hotel.
    Tuesday, November 9, 2021, 14:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X