»   » 'ಯು-ಟರ್ನ್' ರಿಮೇಕ್ ನಿಂದ ಹಿಂದೆಸರಿದ ಸಮಂತಾ: ಹೊಸ ನಟಿ ಸೇರ್ಪಡೆ!

'ಯು-ಟರ್ನ್' ರಿಮೇಕ್ ನಿಂದ ಹಿಂದೆಸರಿದ ಸಮಂತಾ: ಹೊಸ ನಟಿ ಸೇರ್ಪಡೆ!

Posted By:
Subscribe to Filmibeat Kannada

'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ತಮ್ಮ 'ಯೂ-ಟರ್ನ್' ಚಿತ್ರದ ತಮಿಳು ಮತ್ತು ತೆಲುಗು ರಿಮೇಕ್ ಚಿತ್ರಗಳಿಗೂ ಅವರೇ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದನ್ನು ಈ ಹಿಂದೆ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ. ಈ ರಿಮೇಕ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಪವನ್ ಕುಮಾರ್ ಟಾಲಿವುಡ್ ಮತ್ತು ಕಾಲಿವುಡ್ ಅಂಗಳಕ್ಕೂ ಕಾಲಿಡಲಿದ್ದಾರೆ ಎಂದು ಸಹ ಹೇಳಿದ್ವಿ.[ಟಾಲಿವುಡ್, ಕಾಲಿವುಡ್ ನಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಪವನ್ ಕುಮಾರ್]

ಅಂದಹಾಗೆ 'ಯೂ-ಟರ್ನ್' ತೆಲುಗು ಮತ್ತು ತಮಿಳು ರಿಮೇಕ್ ಚಿತ್ರಕ್ಕೆ ಸಂಬಂಧಿಸಿದಂತೆ ಲೇಟೆಸ್ಟ್ ಸುದ್ದಿ ಏನಂದ್ರೆ, ಈ ರಿಮೇಕ್ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದ ದಕ್ಷಿಣ ಭಾರತದ ಸದಾ ಬಿಜಿ ನಟಿ ಆಗಿರುವ ಸಮಂತಾ ರುತ್ ಪ್ರಭು ಈಗ ಚಿತ್ರದಲ್ಲಿ ಅಭಿನಯಿಸುವುದರಿಂದ ಹಿಂದೆ ಸರಿದಿದ್ದಾರಂತೆ. ಅಲ್ಲದೇ ಈ ಚಿತ್ರಕ್ಕೆ ಹೊಸ ನಾಯಕಿ ಸೇರ್ಪಡೆ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಹಾಗಿದ್ರೆ 'ಯೂ-ಟರ್ನ್' ತಮಿಳು ಮತ್ತು ತೆಲುಗು ರಿಮೇಕ್ ಚಿತ್ರದಲ್ಲಿ ಅಭಿನಯಿಸಲಿರುವ ಆ ನಟಿಯಾರು? ಎಂಬಿತ್ಯಾದಿ ಮಾಹಿತಿಗಾಗಿ ಮುಂದೆ ಓದಿರಿ..

ಯೂ ಟರ್ನ್ ಹೊಡೆದ ಸಮಂತಾ

ಪವನ್ ಕುಮಾರ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಯು-ಟರ್ನ್' ಚಿತ್ರ ನೋಡಿ ನಟಿ ಸಮಂತಾ ರುತ್ ಪ್ರಭು ಸಖತ್ ಫಿದಾ ಆಗಿದ್ರು. ಅಲ್ಲದೇ ಈ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಸ್ವತಃ ಮುಂದೆ ಬಂದಿದ್ದರು. ಆದರೀಗ ನಟಿ ಸಮಂತಾ 'ಯು-ಟರ್ನ್' ರಿಮೇಕ್ ಚಿತ್ರದಲ್ಲಿ ನಟಿಸುವುದರಿಂದ ಹಿಂದೆಸರಿದಿದ್ದಾರಂತೆ.

ಕಾರಣ ಏನು?

'ಯು-ಟರ್ನ್' ಸಿನಿಮಾ ನೋಡಿ ಆಸೆಯಿಂದ ರಿಮೇಕ್ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದ ಸಮಂತಾ ಈಗ ಯೂ ಟರ್ನ್ ಹೊಡೆದಿರುವುದು ಏಕೆ ಎಂದು ಕಾರಣ ತಿಳಿದುಬಂದಿಲ್ಲ.

ತೆಲುಗು ರಿಮೇಕ್ ಚಿತ್ರಕ್ಕೆ ಹೊಸ ನಾಯಕಿ

'ಯು-ಟರ್ನ್' ರಿಮೇಕ್ ಚಿತ್ರದಿಂದ ಸಮಂತಾ ಹಿಂದೆ ಸರಿದ ಹಿನ್ನೆಲೆಯಲ್ಲಿ, ಈಗ ತೆಲುಗು 'ಯು-ಟರ್ನ್' ರಿಮೇಕ್ ಚಿತ್ರದಲ್ಲಿ ಬಹು ಭಾಷಾ ನಟಿ ನಿತ್ಯಾ ಮೆನನ್ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕನ್ಫರ್ಮ್ ಆಗಬೇಕು ಅಷ್ಟೆ...

ನಟಿ ನಿತ್ಯಾ ಮೆನನ್ ತೆಲುಗು 'ಯು-ಟರ್ನ್' ರಿಮೇಕ್ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದು, ಅವರ ಖಚಿತ ಮಾಹಿತಿಗಾಗಿ ನಿರ್ಮಾಪಕ ಕೆ.ಎಸ್.ರಮಾ ರಾವ್ ಕಾಯುತ್ತಿದ್ದಾರಂತೆ.

'ಜನತಾ ಗ್ಯಾರೇಜ್' ನಿತ್ಯಾ ಮೆನನ್ ಕಡೆಯ ಸಿನಿಮಾ

ಬಹುಭಾಷಾ ನಟಿ ನಿತ್ಯಾ ಮೆನನ್ ಟಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡ ಕಡೆಯ ಚಿತ್ರ ಜೂನಿಯರ್ ಎನ್‌ಟಿಆರ್ ಅಭಿನಯದ 'ಜನತಾ ಗ್ಯಾರೇಜ್'. ಈ ಚಿತ್ರದ ನಂತರ ಟಾಲಿವುಡ್ ಅಂಗಳದಿಂದ ಬ್ರೇಕ್ ಪಡೆದಿದ್ದ ನಿತ್ಯಾ ಮೆನನ್, ಹಬ್ಬಿರುವ ಗಾಳಿಸುದ್ದಿ ನಿಜವಾದಲ್ಲಿ 'ಯೂ-ಟರ್ನ್' ಚಿತ್ರದ ಮೂಲಕ ಹಿಂದಿರುಗಲಿದ್ದಾರೆ.

ತಮಿಳು ರಿಮೇಕ್ ನಲ್ಲೂ ನಟಿಸುತ್ತಾರಾ ನಿತ್ಯಾ ಮೆನನ್

'ಯು-ಟರ್ನ್' ತೆಲಗು ರಿಮೇಕ್ ಚಿತ್ರದಲ್ಲಿ ನಿತ್ಯಾ ಮೆನನ್ ಅಭಿನಯಿಸಲಿದ್ದಾರೆ ಎಂಬ ಬಗ್ಗೆ ಮಾತ್ರ ಸುದ್ದಿ ಹರಿದಾಡುತ್ತಿದೆ. ಆದರೆ 'ಯು-ಟರ್ನ್' ತಮಿಳು ರಿಮೇಕ್ ಚಿತ್ರದಲ್ಲಿಯೂ ನಿತ್ಯಾ ಮೆನನ್ ಅವರೇ ನಟಿಸಲಿದ್ದಾರಾ ಅಥವಾ ಇತರೆ ಯಾರಾದರೂ ನಟಿಸುತ್ತಾರಾ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

English summary
Multi language actress Nithya Menen replaces Samantha in the Telugu remake of Kannada Movie 'U Turn'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada