»   » ಟಾಲಿವುಡ್, ಕಾಲಿವುಡ್ ನಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಪವನ್ ಕುಮಾರ್

ಟಾಲಿವುಡ್, ಕಾಲಿವುಡ್ ನಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಪವನ್ ಕುಮಾರ್

Posted By:
Subscribe to Filmibeat Kannada

'ಲೂಸಿಯಾ' ಪವನ್ ಕುಮಾರ್ 'ಯು-ಟರ್ನ್' ಚಿತ್ರದ ಮೂಲಕ ತಮ್ಮ ನಿರ್ದೇಶನದ ಗತ್ತಿನಲ್ಲೂ ಯುಟರ್ನ್ ಪಡೆದುಕೊಂಡವರು. ಇಷ್ಟುದಿನ ಸ್ಯಾಂಡಲ್ ವುಡ್‌ ನಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದ, ಪವನ್ ಕುಮಾರ್ ಈಗ ಟಾಲಿವುಡ್ ಮತ್ತು ಕಾಲಿವುಡ್ ಅಂಗಳದಲ್ಲೂ ಆಕ್ಷನ್ ಕಟ್ ಹೇಳಲು ರೆಡಿಯಾಗುತ್ತಿದ್ದಾರೆ.[ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಒಲವನ್ನು ಬಯಲು ಮಾಡಿದ ಸಮಂತಾ]

ಅಂದಹಾಗೆ ಪವನ್ ಕುಮಾರ್, ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದಾ ಬ್ಯುಸಿ ಶೆಡ್ಯೂಲ್ ನಲ್ಲಿ ಇರುವ ನಟಿಯೊಬ್ಬರಿಗೆ ತಮಿಳು ಮತ್ತು ತೆಲುಗು ಎರಡು ಭಾಷೆ ಚಿತ್ರಗಳಲ್ಲಿ ಆಕ್ಷನ್ ಕಟ್ ಹೇಳಲಿದ್ದಾರಂತೆ. ಪವನ್ ಕುಮಾರ್ ನಿರ್ದೇಶಿಸಲಿರುವ ಸಿನಿಮಾ ಯಾವುದು, ಯಾವ ನಟಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾಹಿತಿಗಾಗಿ ಮುಂದೆ ಓದಿ.

ಸಮಂತಾ ಕನಸು ನನಸಾಯಿತು

ನಿರ್ದೇಶಕ ಪವನ್ ಕುಮಾರ್ ಅವರ 'ಯು-ಟರ್ನ್' ಸಿನಿಮಾ ನೋಡಿ ನಟಿ ಸಮಂತಾ ಸಖತ್ ಫಿದಾ ಆಗಿದ್ರು. ಹಾಗೆ 'ಯು-ಟರ್ನ್' ರಿಮೇಕ್ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯನ್ನು ಸಹ ಇಟ್ಟುಕೊಂಡಿದ್ದರು ಎಂಬ ಮಾಹಿತಿಯನ್ನು ನಿಮ್ಮ ಫಿಲ್ಮಿ ಬೀಟ್ ನಲ್ಲಿ ಈ ಹಿಂದೆ ಹೇಳಿದ್ವಿ. ಸಮಂತಾ ರುತ್ ಪ್ರಭು ಅವರ ಕನಸು ಈಗ ನನಸಾಗಲಿದೆ.

ಸಮಂತಾಗೆ, ಪವನ್ ಕುಮಾರ್ ಆಕ್ಷನ್ ಕಟ್

ಮೂಲಗಳ ಪ್ರಕಾರ 'ಯು-ಟರ್ನ್' ಸಿನಿಮಾ ವನ್ನು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಮೇಕ್ ಮಾಡಲು ಪವನ್ ಕುಮಾರ್ ಅವರಿಗೆ ನಿರ್ಮಾಪಕರು ಸಿಕ್ಕಿದ್ದಾರಂತೆ. ಆದ್ದರಿಂದ 'ಯು-ಟರ್ನ್' ರಿಮೇಕ್ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದ ಸಮಂತಾ ಅವರಿಗೆ ಪವನ್ ಕುಮಾರ್ ಸದ್ಯದಲ್ಲೇ ಆಕ್ಷನ್ ಕಟ್ ಹೇಳಲಿದ್ದಾರಂತೆ.[ನಾಗ್ ಚೈತನ್ಯ ಮದುವೆ ಆಗಲು ಮತಾಂತರಗೊಂಡರೇ ನಟಿ ಸಮಂತಾ?]

ಟಾಲಿವುಡ್ ಮತ್ತು ಕಾಲಿವುಡ್ ಗೆ ಪವನ್ ಕುಮಾರ್ ಎಂಟ್ರಿ

'ಯು-ಟರ್ನ್' ರಿಮೇಕ್ ಮಾಡಲು ಸಿದ್ಧರಿರುವ ನಿರ್ಮಾಪಕರು ಅಧಿಕೃತ ಘೋಷಣೆ ಮಾಡಿದ್ದಲ್ಲಿ, ಪವನ್ ಕುಮಾರ್ ಈ ಚಿತ್ರದ ರಿಮೇಕ್ ಮೂಲಕ ಟಾಲಿವುಡ್ ಮತ್ತು ಕಾಲಿವುಡ್ ಅಂಗಳದಲ್ಲಿ ನಿರ್ದೇಶನ ಮಾಡಲು ಪಾದಾರ್ಪಣೆ ಮಾಡಲಿದ್ದಾರೆ.

ಏಪ್ರಿಲ್ ನಲ್ಲಿ ಚಿತ್ರೀಕರಣ

ಸಮಂತಾ ಅಭಿನಯದ 'ಯು-ಟರ್ನ್' ರಿಮೇಕ್ ಚಿತ್ರೀಕರಣ ಏಪ್ರಿಲ್ ನಲ್ಲಿ ಆರಂಭವಾಗುವ ಸಾಧ್ಯತೆ ಇದೆಯಂತೆ, ಪ್ರಸ್ತುತದಲ್ಲಿ ಉಳಿದ ತಾರಾಗಣದ ಬಗ್ಗೆ ಹುಡುಕಾಟ ನಡೆಯುತ್ತಿದೆಯಂತೆ.

ಶ್ರದ್ಧಾ ಶ್ರೀನಾಥ್ ಬೆಳ್ಳಿ ತೆರೆಗೆ ಪರಿಚಯಿಸಿದ ಸಿನಿಮಾ

'ಯು-ಟರ್ನ್' ಸ್ಯಾಂಡಲ್ ವುಡ್ ನಲ್ಲಿ ಶತ ದಿನ ಪ್ರದರ್ಶನ ಪೂರೈಸಿ ಶ್ರದ್ಧಾ ಶ್ರೀನಾಥ್ ಅವರಿಗೆ ಬೆಳ್ಳಿ ತೆರೆಯಲ್ಲಿ ಹೆಸರು ತಂದುಕೊಟ್ಟ ಸಿನಿಮಾ.[ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದೆ ಪವನ್ ರ 'ಯು-ಟರ್ನ್']

English summary
The director Pawan Kumar has found a producer to invest in the ' U-Turn' remake projects. What’s more interesting is that these remakes will mark the directorial debut of Pawan in Tollywood and Kollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada