Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಿಕ್ರಾಂತ್ ರೋಣ' ಬಳಿಕ ಅನುಪ್ ಭಂಡಾರಿ ಜೊತೆ ಸುದೀಪ್ ಮತ್ತೊಂದು ಸಿನಿಮಾ: 'ಬಿಲ್ಲ ರಂಗ ಭಾಷಾ' or 'ಅಶ್ವತ್ಥಾಮ'
ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಕೆರಳಿಸಿರುವ ಸಿನಿಮಾ 'ವಿಕ್ರಾಂತ್ ರೋಣ'. ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾವನ್ನು ನಿರ್ದೇಶಕ ಅನುಪ್ ಭಂಡಾರಿ 3ಡಿಯಲ್ಲಿ ತೋರಿಸಲಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿವೆ. ಇದೇ ಫೆಬ್ರವರಿ 25ಕ್ಕೆ ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಚಿತ್ರತಂಡ ಬಿಡುಗಡೆಯನ್ನು ಮುಂದೂಡಿದೆ. ಈ ಮಧ್ಯೆ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿಯ ಮತ್ತೊಂದು ಸಿನಿಮಾ ಸೆಟ್ಟೇರಲಿದೆ. ಈ ಬಗ್ಗೆ ಸ್ವತ: ಸುದೀಪ್ ಸುಳಿವು ನೀಡಿದ್ದಾರೆ.
'ವಿಕ್ರಾಂತ್ ರೋಣ' ಸಿನಿಮಾ ಶೂಟಿಂಗ್ ಮುಗಿದಿದೆ. ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಅಚ್ಚರಿ ವಿಷಯ ಏನಂದರೆ. ಸುದೀಪ್ 'ವಿಕ್ರಾಂತ್ ರೋಣ' ಶೂಟಿಂಗ್ ಮುಗಿಸಿದ್ದರೂ, ಹೊಸ ಸಿನಿಮಾ ಅನೌನ್ಸ್ ಮಾಡಿರಲಿಲ್ಲ. ಕೇವಲ 'ವಿಕ್ರಾಂತ್ ರೋಣ' ರಿಲೀಸ್ ಮೇಲೆ ಗಮನ ಹರಿಸಿದ್ದರು. ಆದ್ರೀಗ ಮತ್ತೆ ಅನುಪ್ ಭಂಡಾರಿ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಸುದೀಪ್ ಸುಳಿವು ನೀಡಿದ್ದಾರೆ.
'ವಿಕ್ರಾಂತ್
ರೋಣ'
ಬಳಿಕ
ಮತ್ತೆ
ಸುದೀಪ್
ಜೊತೆ
ಅನುಪ್
ಭಂಡಾರಿ
ಸಿನಿಮಾ:
ಇಲ್ಲಿದೆ
ಮಾಹಿತಿ
|
ಸುದೀಪ್-ಅನುಪ್ ಹೊಸ ಸಿನಿಮಾ
'ವಿಕ್ರಾಂತ್ ರೋಣ' ಇನ್ನೂ ರಿಲೀಸ್ ಆಗಿಲ್ಲ. ಅಷ್ಟರಲ್ಲೇ ಇದೇ ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿರುವುದಾಗಿ ಸುದೀಪ್ ಹೇಳಿದ್ದಾರೆ. 3ಡಿ 'ವಿಕ್ರಾಂತ್ ರೋಣ' ಸಿನಿಮಾವನ್ನು ಹೊಗಳಿ ಸುದೀಪ್ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ ಸುದೀಪ್ " ನಮ್ಮ ಮಿತಿಯನ್ನು ತಲುಪಿದ್ದೇವೆ. ಇದನ್ನು ಇನ್ನೂ ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. 3ಡಿ ವಿಕ್ರಾಂತ್ ರೋಣ ತುಂಬಾನೇ ಅದ್ಭುತವಾಗಿದೆ. ಇಡೀ ತಂಡಕ್ಕೆ ಧನ್ಯವಾದಗಳು. ಬಿಡುಗಡೆ ದಿನಕ್ಕಾಗಿ ಕಾಯುತ್ತಿದ್ದೇನೆ. ಹಾಗೇ ಅನುಪ್ ಭಂಡಾರಿ ಜೊತೆ ನನ್ನ ಮುಂದಿನ ಸಿನಿಮಾ ಅನೌನ್ಸ್ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ." ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಅನುಪ್ ಜೊತೆನೇ ಮುಂದಿನ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
|
ಸುದೀಪ್ ಮುಂದಿನ ಸಿನಿಮಾ ಯಾವುದು?
ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ವಿಕ್ರಾಂತ್ ರೋಣಾ ಸಿನಿಮಾಗೂ ಮುನ್ನವೇ 'ಬಿಲ್ಲ ರಂಗ ಬಾಷಾ' ಸಿನಿಮಾ ಮಾಡಬೇಕಿತ್ತು. ಆದರೆ, ಈ ಸಿನಿಮಾ ಕಾರಣಾಂತರಗಳಿಂದ ಸೆಟ್ಟೇರಲಿಲ್ಲ. ಆದರೆ, ಸುದೀಪ್ ಈ ಕಥೆಯನ್ನು ತುಂಬಾನೇ ಇಷ್ಟ ಪಟ್ಟಿದ್ದರು. ಈಗ ಅನುಪ್ ಜೊತೆನೇ ಮುಂದಿನ ಸಿನಿಮಾ ಎಂದು ಸುದೀಪ್ ಹೇಳಿದ್ದರಿಂದ 'ಬಿಲ್ಲ ರಂಗ ಬಾಷಾ' ಮತ್ತೆ ಚರ್ಚೆಗೆ ಬಂದಿದೆ. ಸುದೀಪ್ ಅಭಿಮಾನಿಗಳು ಮುಂದಿನ ಸಿನಿಮಾ ಇದೇ ಎಂದು ಊಹೆ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಸಿನಿಮಾ ಬಗ್ಗೆನೇ ಚರ್ಚೆ ಮಾಡುತ್ತಿದ್ದಾರೆ. ಅಂದ ಹಾಗೆ 'ಬಿಲ್ಲ ರಂಗ ಬಾಷಾ' ಒಂದು ಫ್ಯಾಂಟಸಿ ಅಡ್ವೆಂಚರ್ ಸಿನಿಮಾ.

'ಬಿಲ್ಲ ರಂಗ ಬಾಷಾ' ಅಲ್ಲದಿದ್ದರೆ 'ಅಶ್ವತ್ಥಾಮ'
ಕೆಲವು ದಿನಗಳ ಹಿಂದೆ 'ವಿಕ್ರಾಂತ್ ರೋಣ' ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ ಒಂದು ಗುಟ್ಟನ್ನು ಬಿಟ್ಟುಕೊಟ್ಟಿದ್ದರು. "ಸುದೀಪ್‌ಗಾಗಿ ಮತ್ತೊಂದು ಕಥೆ ಬರೆಯುತ್ತಿದ್ದೇನೆ." ಎಂದು ಈ ಹಿಂದೆನೇ ಹೇಳಿದ್ದರು. ಅಂದಹಾಗೆ ಈ ಸಿನಿಮಾ ಟೈಟಲ್ 'ಅಶ್ವತ್ಥಾಮ'. ಇದು ಅನುಪ್ ಭಂಡಾರಿಯ ಡ್ರೀಮ್ ಪ್ರಾಜೆಕ್ಟ್. ಹೀಗಾಗಿ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತಿರುವ ಸುಳಿವು ನೀಡಿದ್ದರು. ಪೋಸ್ಟ್ ಕೂಡ ಹರಿದಾಡಿತ್ತು. ಆ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ಪ್ರಶ್ನೆಯೊಂದು ಕಾಡಿತ್ತು. 'ಬಿಲ್ಲ ರಂಗ ಭಾಷ'ನೇ 'ಅಶ್ವತ್ಥಾಮ' ಇರಬಹುದಾ ಎಂಬ ಅನುಮಾನ ಕಾಡಿತ್ತು. ಈ ಎಲ್ಲಾ ಗೊಂದಲಗಳಿಗೆ ಸುದೀಪ್ ಹಾಗೂ ಅನುಪ್ ಇಬ್ಬರೂ ಕೆಲವೇ ದಿನಗಳ ಸ್ಪಷನೆ ನೀಡಲಿದ್ದಾರೆ. 'ಬಿಲ್ಲ ರಂಗ ಬಾಷಾ', 'ಅಶ್ವತ್ಥಾಮ', ಇವೆರಡನ್ನು ಬಿಟ್ಟು ಬೇರೆ ಸಿನಿಮಾ ಅನೌನ್ಸ್ ಮಾಡದ್ದರೂ ಅಚ್ಚರಿ ಪಡಬೇಕಿಲ್ಲ.

ಸುದೀಪ್ ಪತ್ನಿಯಿಂದಲೇ ನಿರ್ಮಾಣ
ಸುದೀಪ್ ಸುಳಿವು ನೀಡಿರುವಂತೆ ಪತ್ನಿ ಪ್ರಿಯಾ ಸುದೀಪ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಎರಡು ವರ್ಷಗಳ ಹಿಂದನೇ ಸುಪ್ರಿಯಾನ್ವಿ ಪಿಚ್ಚರ್ ಸುಡಿಯೋ ಮೂಲಕ 'ಬಿಲ್ಲ ರಂಗ ಭಾಷಾ' ಬಿಡುಗಡೆಯಾಗಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ 'ವಿಕ್ರಾಂತ್ ರೋಣ' ಕೈಗೆತ್ತಿಕೊಳ್ಳಲಾಯಿತು. ಈಗ ಸುದೀಪ್ ಪತ್ನಿ ಕೂಡ ಮುಂದಿನ ಸಿನಿಮಾದಲ್ಲಿ ಭಾಗಿಯಾಗಿರುವುದರಿಂದ ಸುದೀಪ್ ಮುಂದಿನ ಸಿನಿಮಾ 'ಬಿಲ್ಲ ರಂಗ ಭಾಷಾ' ಅಂತ ಅನೌನ್ಸ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಆದರೆ, ಸುದೀಪ್ ಪತ್ನಿ ನಿರ್ಮಾಣ, ಸಿನಿಮಾ ಟೈಟಲ್ ಬಗ್ಗೆ ಇನ್ನೂ ಸುದೀಪ್ ಅಧಿಕೃತ ಮಾಹಿತಿಯನ್ನು ಹೊರಹಾಕಬೇಕಿದೆ.