Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆ ಒಂದು ಸಿನಿಮಾಗೆ ಬೆದರಿದ ಅಲ್ಲು ಅರ್ಜುನ್: 'ಪುಷ್ಪ 2' ಡಿಸೆಂಬರ್ 17, 2022 ರಿಲೀಸ್ ಆಗಲ್ಲ
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ಈಗ ಬಾಲಿವುಡ್ ಕೂಡ ಮಾತಾಡುತ್ತಿದೆ. ಹಿಂದಿ ಬಾಕ್ಸಾಫೀಸ್‌ನಲ್ಲೂ ನೂರು ಕೋಟಿ ಲೂಟಿ ಮಾಡಿದ ಬಳಿಕ ಅಲ್ಲು ಅರ್ಜುನ್ ರೇಂಜ್ ಬದಲಾಗಿದೆ. 'ಪುಷ್ಪ' ಸಿನಿಮಾ ಮಾಡಿದ ಮೋಡಿಗೆ 'ಪುಷ್ಪ 2'ಗಾಗಿ ಕಾದು ಕೂರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ನಿರ್ದೇಶಕ ಸುಕುಮಾರ್ ಡಿಸೆಂಬರ್ 17, 2022ಕ್ಕೆ ಸಿನಿಮಾ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ. ಆದರೆ ಅಲ್ಲು ಅರ್ಜುನ್ ಮಾತ್ರ ನಿರ್ದೇಶಕರ ಮಾತು ಕೇಳುತ್ತಿಲ್ಲವಂತೆ.
'ಪುಷ್ಪ' ಸಕ್ಸಸ್‌ನಿಂದ ಗೆದ್ದು ಬೀಗುತ್ತಿರುವ ಅಲ್ಲು ಅರ್ಜುನ್ 'ಪುಷ್ಪ' ಪಾರ್ಟು 2ಗೆ ರೆಡಿಯಾಗುತ್ತಿದ್ದಾರೆ. ಇತ್ತ ನಿರ್ದೇಶಕ ಸುಕುಮಾರ್ ಕೂಡ ಸಿನಿಮಾ ಶೂಟಿಂಗ್ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಗೆ ಸಿನಿಮಾ ಬಿಡುಗಡೆ ವೇಳೆ ಯಾವುದೇ ಗೊಂದಲ ಆಗಬಾರದು ಅಂತ ತೀರ್ಮಾನಿಸಿದ್ದು, ಮೊದಲೇ ಡಿಸೆಂಬರ್ 17ಕ್ಕೆ ರಿಲೀಸ್ ಮಾಡುವುದು ಅಂತ ಫಿಕ್ಸ್ ಆಗಿದ್ದಾರಂತೆ. ಆದರೆ, ಅರ್ಜುನ್ ಆ ಒಂದು ಸಿನಿಮಾ ಮುಂದೆ ರಿಲೀಸ್ ಮಾಡುವುದು ಬೇಡಾ ಅಂತಿದ್ದಾರಂತೆ.

ಡಿಸೆಂಬರ್ 17 'ಪುಷ್ಪ 2' ರಿಲೀಸ್ ಆಗಲ್ಲ
'ಪುಷ್ಪ' ಸಿನಿಮಾಗೆ ಸಿಕ್ಕ ಯಶಸ್ಸು ಅಚ್ಚರಿ ಮೂಡಿಸಿದೆ. ಬಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ಸಿನಿಮಾವೊಂದು 100 ಕೋಟಿ ಲೂಟಿ ಮಾಡಿದ್ದು ಸಾಮಾನ್ಯ ವಿಷಯವೇನಲ್ಲ. ಈ ಕಾರಣಕ್ಕೆ 'ಪುಷ್ಪ 2' ಮೂಲಕ ದಾಖಲೆ ಸೃಷ್ಟಿ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಒಂದು ಹಂತದ ಸ್ಕ್ರೀಪ್ಟ್ ಕೂಡ ರೆಡಿಯಿರುವುದರಿಂದ ಬೇಗ ಬೇಗ ಶೂಟಿಂಗ್ ಮುಗಿಸಿ, ಇದೇ ವರ್ಷದ ಕೊನೆಯಲ್ಲಿ ಡಿಸೆಂಬರ್ 17ಕ್ಕೆ ರಿಲೀಸ್ ಮಾಡುವುದಕ್ಕೆ ಸುಕುಮಾರ್ ಪ್ಲ್ಯಾನ್ ಮಾಡಿದ್ದರು. ಆದರೆ, ಅವರ ಆಸೆ ಈಡೇರುವಂತೆ ಕಾಣುತ್ತಿಲ್ಲ.

'ಪುಷ್ಪ 2' Vs 'ಅವತಾರ್ 2'
'ಪುಷ್ಪ 2 ' ಡಿಸೆಂಬರ್ 17ಕ್ಕೆ ಬಿಡುಗಡೆಯಾಗುವುದಕ್ಕೆ ಬಲವಾದ ಕಾರಣವಿದೆ. 2021, ಡಿಸೆಂಬರ್ 17ರಂದು 'ಪುಷ್ಪ' ರಿಲೀಸ್ ಆಗಿ, ಬ್ಲಾಕ್‌ಬಸ್ಟರ್ ಬಸ್ಟರ್ ಲಿಸ್ಟ್ ಸೇರಿದೆ. ಇದೇ ಸೆಂಟಿಮೆಂಟ್‌ನಲ್ಲಿ 'ಪುಷ್ಪ 2' ರಿಲೀಸ್ ಮಾಡುವುದಕ್ಕೂ ಸಜ್ಜಾಗಿದ್ದರು. ಆದರೆ, 'ಪುಷ್ಪ 2' ಬಿಡುಗಡೆಗೂ ಮುನ್ನ 'ಅವತಾರ್ 2' ರಿಲೀಸ್ ಆಗಲಿದೆ. ಇದು ವಿಶ್ವದ ಬಹುನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾ. ಇದು ಭಾರತದಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಇಷ್ಟ ದೊಡ್ಡ ಸಿನಿಮಾ ಮುಂದೆ 'ಪುಷ್ಪ 2' ರಿಲೀಸ್ ಆಗುವುದಿಲ್ಲವೆಂದು ಟಾಲಿವುಡ್ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಅಲ್ಲು ಅರ್ಜುನ್‌ಗೆ ರಿಸ್ಕ್ ಬೇಕಿಲ್ಲ
'ಪುಷ್ಪ' ಕ್ರೇಜ್ ಅದೆಷ್ಟೇ ಇರಲಿ. 'ಅವತಾರ್ 2' ಅಂತಹ ಸಿನಿಮಾ ಬಂದಾಗ, ಜನರು 'ಪುಷ್ಪ' ನೋಡಲು ಚಿತ್ರಮಂದಿರಕ್ಕೆ ಬರುತ್ತಾರೆ ಅನ್ನುವುದು ಅನುಮಾನ. ಈ ಕಾರಣಕ್ಕಾಗಿಯೇ ಅಲ್ಲು ಅರ್ಜುನ್ ರಿಸ್ಕ್ ತೆಗೆದುಕೊಳ್ಳಲು ರೆಡಿಯಿಲ್ವಂತೆ. ನಿರ್ದೇಶಕ ಸುಕುಮಾರ್‌ಗೆ 'ಅವತಾರ್ 2' ಬಿಡುಗಡೆ ವೇಳೆ 'ಪುಷ್ಪ 2' ರಿಲೀಸ್ ಮಾಡುವುದು ಬೇಡವೆಂದು ಹೇಳಿದ್ದಾರಂತೆ. ಅಲ್ಲು ಅರ್ಜುನ್ ಹೀಗಂದ ಮೇಲೆ ಇನ್ನು ನಿರ್ದೇಶಕರೂ ಕೂಡ ಹಿಂದೇಟು ಹಾಕಿದ್ದಾರೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಸ್ಪೈಡರ್ ಮ್ಯಾನ್‌ಗೆ 'ಪುಷ್ಪ 2' ಟಕ್ಕರ್
'ಪುಷ್ಪ' ಸಿನಿಮಾ ಬಿಡುಗಡೆಗೂ ಮುನ್ನ ಹಾಲಿವುಡ್ ಸಿನಿಮಾ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಹಾಗೂ ರಣ್‌ವೀರ್ ಸಿಂಗ್ ನಟನೆಯ '83' ಬಿಡುಗಡೆಯಾಗಿತ್ತು. ಇಷ್ಟು ದೊಡ್ಡ ಸಿನಿಮಾಗಳು ಬಿಡುಗಡೆಯಾಗಿದ್ದರೂ, ಜನರು 'ಪುಷ್ಪ' ಸಿನಿಮಾ ನೋಡುವುದನ್ನು ನಿಲ್ಲಿಸಲಿಲ್ಲ. ಆದರೆ, ಜೇಮ್ಸ್ ಕೆಮರೊನ್ ನಿರ್ದೇಶಕನ 'ಅವತಾರ್ 2' ಕಥೆನೇ ಬೇರೆ. ಈ ಸಿನಿಮಾ ಮುಂದೆ ಯಾವುದೇ ಸಿನಿಮಾ ನಿಲ್ಲುವುದಿಲ್ಲವೆಂದು ಈಗಾಗಲೇ ಸಿನಿಮಾ ಮಂದಿ ಭವಿಷ್ಯ ನುಡಿದಿದ್ದಾರೆ. ಈ ಕಾರಣಕ್ಕೆ 'ಪುಷ್ಪ 2' ಡಿಸೆಂಬರ್ 17 ಖಂಡಿತಾ ರಿಲೀಸ್ ಆಗಲ್ಲ ಎನ್ನಲಾಗುತ್ತಿದೆ.