»   » ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ನಿರ್ದೇಶಕರು ಫಿಕ್ಸ್?

ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ನಿರ್ದೇಶಕರು ಫಿಕ್ಸ್?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಮೊದಲ ಸಿನಿಮಾದಲ್ಲೇ ಹೈ ಬಜೆಟ್ ಚಿತ್ರದಲ್ಲಿ ನಟಿಸಿ ನಿಖಿಲ್ ಕುಮಾರ್ ಮಿಂಚಿದ್ರು. ಆದ್ರೆ 'ಜಾಗ್ವಾರ್' ಚಿತ್ರದ ನಂತರ ನಿಖಿಲ್ ಅವರ ಎರಡನೇ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಮಾತ್ರ ಇನ್ನು ಬ್ರೇಕ್ ಬಿದ್ದಿಲ್ಲ.[ಹಾಲಿವುಡ್ ಅಂಗಳಕ್ಕೆ ಹಾರಿದ ಕನ್ನಡದ ನಿಖಿಲ್ ಕುಮಾರ್]

'ಜಾಗ್ವಾರ್' ಸಿನಿಮಾ ನಂತರ ನಿಖಿಲ್ ಕುಮಾರ್ ಹಾಲಿವುಡ್ ನಲ್ಲಿ ಸಿನಿಮಾ ಮಾಡ್ತಾರೆ, ತೆಲುಗಿನಲ್ಲಿ ಮತ್ತು ಕನ್ನಡದಲ್ಲಿ ಮತ್ತೊಂದು ಸಿನಿಮಾ ಮಾಡ್ತಾರೆ ಎಂಬ ಹಲವು ಸುದ್ದಿಗಳು ಹರಿದಾಡುತ್ತಲೇ ಇದ್ದವು. ಆದರೆ ಯಾವ ಸಿನಿಮಾ ಮಾಡ್ತಾರೆ, ಯಾರು ಡೈರೆಕ್ಟ್ ಮಾಡ್ತಾರೆ ಎಂಬುದು ಮಾತ್ರ ಖಚಿತವಾಗಿರಲಿಲ್ಲ. ಈಗ ಈ ಎಲ್ಲಾ ಚರ್ಚೆಗಳಿಗೆ ವಿರಾಮ ಹಾಕುವ, ನಿಖಿಲ್ ಮುಂದಿನ ಚಿತ್ರಕ್ಕೆ ನಿರ್ದೇಶನ ಮಾಡುವುದು ಯಾರು ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ನಿಖಿಲ್ ಎರಡನೇ ಸಿನಿಮಾ ನಿರ್ದೇಶಕರು ಇವರೇ..

'ಜಾಗ್ವಾರ್' ಸ್ಟಾರ್ ನಿಖಿಲ್ ಕುಮಾರ್ ಎರಡನೇ ಚಿತ್ರವನ್ನು 'ಬಹದ್ಧೂರ್' ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.[ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ನಿರ್ದೇಶಕರು ಫಿಕ್ಸ್?]

ಚೇತನ್ ಆಕ್ಷನ್ ಕಟ್ ಹೇಳುವುದು ಪಕ್ಕನಾ?

ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಹಿಂದೆ 'ಹೆಬ್ಬುಲಿ' ಖ್ಯಾತಿಯ ಕೃಷ್ಣ ಅವರು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಚೇತನ್ ಕುಮಾರ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ ಇವರಿಬ್ಬರಲ್ಲಿ ಯಾರು ಸಿನಿಮಾ ಡೈರೆಕ್ಟ್ ಮಾಡುತ್ತಾರೆ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ನಿರ್ದೇಶಕರಾಗಲಿ ಅಥವಾ ನಿಖಿಲ್ ಕುಮಾರ್ ಆಗಲಿ ಯಾವುದೇ ಮಾಹಿತಿ ನೀಡಿಲ್ಲ.

ಚೆನ್ನಾಂಬಿಕ ಬ್ಯಾನರ್ ನಲ್ಲಿ ಸಿನಿಮಾ

ನಿಖಿಲ್ ಕುಮಾರ್ ಮುಂದಿನ ಸಿನಿಮಾ ಚೆನ್ನಾಂಬಿಕ ಫಿಲ್ಮ್ಸ್ ಅಡಿಯಲ್ಲಿ ಮೂಡಿಬರುವುದು ಪಕ್ಕಾ ಆಗಿದ್ದು, ನಾಯಕಿಗಾಗಿ ಹುಡುಕಾಟ ಶುರುವಾಗಿದೆ.

ನಟಿ ಆಗಲು ಬಯಸುವವರಿಗೆ ಇಲ್ಲಿದೆ ಚಾನ್ಸ್

ನಿಖಿಲ್ ಕುಮಾರ್ ನಟಿಸಲಿರುವ ಸಿನಿಮಾಗೆ ಚೆನ್ನಾಂಬಿಕ ಫಿಲ್ಮ್ಸ್ ನಟಿ ಆಗುವ ಆಸೆ ಇರುವವರಿಗೆ ಒಂದೊಳ್ಳೆ ಚಾನ್ಸ್ ನೀಡಿದೆ. ನಟಿ ಆಗಲು ಬಯಸುವ 18 ರಿಂದ 24 ವಯಸ್ಸಿನ, ಸ್ಪಷ್ಟವಾಗಿ ಕನ್ನಡ ಮಾತನಾಡುವ ಹುಡುಗಿಯರು ತಮ್ಮ ವಿವರವನ್ನು ಮಾರ್ಚ್ 31 ರೊಳಗೆ nikhiltalentz@gmail.com ವಿಳಾಸಕ್ಕೆ ಇ-ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸುಜಿಲ್ ಗೌಡ-9164673346 ಮತ್ತು ಪ್ರಶಾಂತ್ ಬಾಗೂರು-9538348230 ಅವರನ್ನು ಸಂಪರ್ಕಿಸಬಹುದು.

ನಿಖಿಲ್ ಎರಡನೇ ಸಿನಿಮಾ ಹೆಸರೇನು?

ನಿಖಿಲ್ ಎರಡನೇ ಸಿನಿಮಾ ಹೆಸರೇನು ಎಂಬ ಬಗ್ಗೆ ಯಾವುದೇ ಮಾಹಿತಿ ಪ್ರಕಟವಾಗಿಲ್ಲ.

English summary
'Bahaddhur' Fame Chetan to direct 'Jaguar' star Nikhil Kumar Next Movie under the Chennambika Films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada