»   » ರಿಯಾಲಿಟಿ ಶೋ ಫಿನಾಲೆಗಾಗಿ ಬೆಂಗಳೂರಿಗೆ ಶಿಲ್ಪಾ ಶೆಟ್ಟಿ

ರಿಯಾಲಿಟಿ ಶೋ ಫಿನಾಲೆಗಾಗಿ ಬೆಂಗಳೂರಿಗೆ ಶಿಲ್ಪಾ ಶೆಟ್ಟಿ

Posted By:
Subscribe to Filmibeat Kannada

ಮಂಗಳೂರು ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸದ್ಯದಲ್ಲೇ ಬೆಂಗಳೂರಿಗೆ ಬರುತ್ತಿದ್ದಾರಂತೆ. ಸಡೆನ್ ಆಗಿ ಶಿಲ್ಪಾ ಶೆಟ್ಟಿ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವುದು ಖಾಸಗಿ ಚಾನೆಲ್ ಒಂದರ ರಿಯಾಲಿಟಿ ಶೋ ಫಿನಾಲೆ ಕಾರ್ಯಕ್ರಮಕ್ಕಾಗಿ ಎಂಬ ಸುದ್ದಿ ಹರಿದಾಡುತ್ತಿದೆ.[ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಪಿತೃ ವಿಯೋಗ]

ಕಿಚ್ಚ ಸುದೀಪ್ ಹೋಸ್ಟ್ ಆಗಿರುವ ರಿಯಾಲಿಟಿ ಶೋ ಫಿನಾಲೆ ಕಾರ್ಯಕ್ರಮಕ್ಕೆ ಶಿಲ್ಪಾ ಶೆಟ್ಟಿ ಡ್ಯಾನ್ಸ್ ಸಹ ಮಾಡಲಿದ್ದಾರಂತೆ. ಅದು ಬೇರೆ ಯಾವುದು ಅಲ್ಲ. ರಿಯಾಲಿಟಿ ಶೋ ಎಂದ ತಕ್ಷಣ ಎಲ್ಲರಿಗೂ ನೆನಪಾಗುವ 'ಕನ್ನಡ ಬಿಗ್‌ ಬಾಸ್ ಸೀಸನ್ 4'. ಈ ರಿಯಾಲಿಟಿ ಶೋ ಫಿನಾಲೆ ಕಾರ್ಯಕ್ರಮ ಯಾವಾಗ? ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಏನ್ಮಾಡ್ತಾರೆ ಎಂಬ ಮಾಹಿತಿ ಇಲ್ಲಿದೆ. [ಕನ್ನಡ ಕಿರುತೆರೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ!]

ರಿಯಾಲಿಟಿ ಶೋ ಫಿನಾಲೆ ಕಾರ್ಯಕ್ರಮ ಯಾವಾಗ?

ಕನ್ನಡದ ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋ ಈ ವಾರಾಂತ್ಯದಲ್ಲಿ ನಡೆಯಲಿದೆ. ಈ ಬಾರಿಯ ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಶಿಲ್ಪಾ ನಟಿ ವಿಶೇಷ ಅತಿಥಿಯಾಗಿ ಬರುತ್ತಿದ್ದಾರೆ.

ಬಿಗ್ ಬಾಸ್ ಫಿನಾಲೆಯಲ್ಲಿ ಶಿಲ್ಪಾ ಶೆಟ್ಟಿ

ಕುಡ್ಲದ ಕುವರಿ ಶಿಲ್ಪಾ ಶೆಟ್ಟಿ ಕನ್ನಡದ ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋ ನಲ್ಲಿ ಸ್ಟೆಪ್ ಸಹ ಹಾಕಲಿದ್ದಾರಂತೆ. ತಮ್ಮ ನೃತ್ಯದಿಂದ ಕಾರ್ಯಕ್ರಮಕ್ಕೆ ರಂಗು ತುಂಬಲಿದ್ದಾರಂತೆ.

ರಿಯಾಲಿಟಿ ಶೋ ವಿನ್ನರ್ ಆಗಿದ್ದ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಅವರು 2007 ರ 'ಸೆಲೆಬ್ರಿಟಿ ಬಿಗ್ ಬ್ರದರ್' ರಿಯಾಲಿಟಿ ಶೋ ವಿನ್ನರ್ ಸಹ ಆಗಿದ್ದರು.

ಕನ್ನಡದ ಕಿರುತೆರೆಯಲ್ಲಿ ಶಿಲ್ಪಾ ಶೆಟ್ಟಿ

ಅಂದಹಾಗೆ ಶಿಲ್ಪಾ ಶೆಟ್ಟಿ ಅವರು ಕನ್ನಡದ ಕಿರುತೆರೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಏನು ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ಶೋ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದರು.

ಕನ್ನಡದೊಂದಿಗೆ ಶಿಲ್ಪಾ ಶೆಟ್ಟಿ ನಂಟು

ಸ್ಯಾಂಡಲ್ ವುಡ್ ನೊಂದಿಗೆ ಹಿಂದಿನಿಂದಲೂ ನಂಟು ಹೊಂದಿರುವ ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಪ್ರೀತ್ಸೋದ್ ತಪ್ಪಾ', 'ಒಂದಾಗೋಣ ಬಾ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಆಟೋ ಶಂಕರ್' ಸಿನಿಮಾ ದಲ್ಲಿಯೂ ಅಭಿನಯಿಸಿದ್ದಾರೆ.

English summary
Mangalore Born Bollywood Actress Shilpa Shetty Will visit bengaluru for a private Channel Reality Show Finale.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada