»   » ಸೂಪರ್ ಹಿಟ್ ಮಲಯಾಳಂ ರಿಮೇಕ್ ಚಿತ್ರಕ್ಕೆ ದಿಗಂತ್ ನಾಯಕ

ಸೂಪರ್ ಹಿಟ್ ಮಲಯಾಳಂ ರಿಮೇಕ್ ಚಿತ್ರಕ್ಕೆ ದಿಗಂತ್ ನಾಯಕ

Posted By:
Subscribe to Filmibeat Kannada

ನಟ ದಿಗಂತ್ ಮತ್ತು ನಟಿ ಪ್ರಿಯಾಮಣಿ ಕಾಂಬಿನೇಷನ್ ನಲ್ಲಿ ಕಾಣಿಸಿಕೊಂಡಿರುವ, ಮಲ್ಟಿಸ್ಟಾರ್ ಗಳು ನಟಿಸಿರುವ ಚಿತ್ರ 'ಚೌಕ' ಈ ವಾರ ತೆರೆಗೆ ಬರುತ್ತಿದೆ. 'ಟಿಕೆಟ್ ಟು ಬಾಲಿವುಡ್' ಚಿತ್ರೀಕರಣದ ವೇಳೆ ಗಾಯಗೊಂಡು ಒಂದು ವರ್ಷ ದಿಗಂತ್ ಚಿತ್ರರಂಗದತ್ತ ಅಷ್ಟಾಗಿ ಮುಖ ಮಾಡಿರಲಿಲ್ಲ. ಆದರೆ ಈಗ 'ಚೌಕ' ಬಿಡುಗಡೆಗೂ ಮುನ್ನವೇ ಇನ್ನೊಂಡು ಚಿತ್ರದಲ್ಲಿ ನಟಿಸಲು ಸೈನ್ ಮಾಡಿದ್ದಾರೆ.[ದಿಗಂತ್ 'ಅಸಲಿ'ಯತ್ತು ಬಯಲು ಮಾಡಿದ 'ನಾಗರಹಾವು' ನಿರ್ಮಾಪಕ.!]

ಹೌದು, ದೂದ್ ಪೆಡಾ ದಿಗಂತ್ ಮಾಲಿವುಡ್ ಹಿಟ್ ಸಿನಿಮಾ ಒಂದರ ಕನ್ನಡ ರಿಮೇಕ್ ಚಿತ್ರದಲ್ಲಿ ಸದ್ಯದಲ್ಲೇ ನಟಿಸಲಿದ್ದಾರಂತೆ. ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಆ ಮಲಯಾಳಂ ಸಿನಿಮಾ ಮತ್ತು ಇತರೆ ಮಾಹಿತಿ ಇಲ್ಲಿದೆ.

'ಚಾರ್ಲಿ'

ದಿಗಂತ್ ನಟಿಸಲು ಸಹಿ ಹಾಕಿರುವ, ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಮಲಯಾಳಂ ಸಿನಿಮಾ 'ಚಾರ್ಲಿ'.

ಮಲಯಾಳಂ ಸೂಪರ್ ಹಿಟ್ ಸಿನಿಮಾ 'ಚಾರ್ಲಿ'

2015 ಡಿಸೆಂಬರ್ 24 ರಂದು ಮಾಲಿವುಡ್ ನಲ್ಲಿ ಬಿಡುಗಡೆ ಆಗಿದ್ದ 'ಚಾರ್ಲಿ' ಸಿನಿಮಾ ಸೂಪರ್ ಹಿಟ್ ಆಗಿ, ಎಲ್ಲರ ಮನಗೆದ್ದಿತ್ತು. ಈ ಚಿತ್ರಕ್ಕೆ ಮಾರ್ಟಿನ್ ಪ್ರಕ್ಕತ್ ಆಕ್ಷನ್‌ ಕಟ್ ಹೇಳಿದ್ದರು. ಗೋಪಿ ಸುಂದರ್ ಸಂಗೀತ ಸಂಯೋಜನೆ ನೀಡಿದ್ದರು.

'ಚಾರ್ಲಿ'ಯಲ್ಲಿ 'ಬೆಂಗಳೂರು ಡೇಸ್' ಚಿತ್ರದ ನಟ-ನಟಿ

'ಚಾರ್ಲಿ' ಸಿನಿಮಾದಲ್ಲಿ ಮಾಲಿವುಡ್ ಮಾತ್ರವಲ್ಲದೇ ಬೆಂಗಳೂರಿನ ಯೂತ್ಸ್ ಗಳ ಗಮನ ಸೆಳೆದ ಮಲಯಾಳಂ ಸಿನಿಮಾ 'ಬೆಂಗಳೂರು ಡೇಸ್' ನ ನಟ ದುಲ್ಕರ್ ಸಲ್ಮಾನ್ ಮತ್ತು ನಟಿ ಪಾರ್ವತಿ ಅವರು ಅಭಿನಯಿಸಿದ್ದರು. ಈಗ 'ಚಾರ್ಲಿ' ಕನ್ನಡದ ರಿಮೇಕ್ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳಲಿದ್ದಾರಂತೆ.

ಹರ್ಷ ಎಂಟರ್ ಟೈನ್‌ಮೆಂಟ್ ಅಡಿಯಲ್ಲಿ ಚಿತ್ರ ನಿರ್ಮಾಣ

'ಚಾರ್ಲಿ' ಸಿನಿಮಾವನ್ನು ಹರ್ಷ ಎಂಟರ್ ಟೈನ್‌ಮೆಂಟ್ ನಿರ್ಮಾಣ ಕಂಪನಿ ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಈ ಚಿತ್ರಕ್ಕೆ ಜಿ ಎನ್ ರುದ್ರೇಶ್ ಅವರು ಆಕ್ಷನ್ ಕಟ್ ಹೇಳಲಿದ್ದಾರಂತೆ.

ನಟಿಗಾಗಿ ಹುಡುಕಾಟ

ದೂದ್ ಪೆಡಾ ದಿಗಂತ್ ಈಗಾಗಲೇ 'ಚಾರ್ಲಿ' ಕನ್ನಡ ರಿಮೇಕ್ ಚಿತ್ರದಲ್ಲಿ ನಾಯಕನಾಗಿ ನಟಿಸಲು ಸಹಿ ಹಾಕಿದ್ದು, ಚಿತ್ರತಂಡ ನಟಿಗಾಗಿ ಹುಡುಕಾಟ ನಡೆಸುತ್ತಿದೆಯಂತೆ. ಮಲಯಾಳಂದ ಚಿತ್ರ 'ಚಾರ್ಲಿ'ಯಲ್ಲಿ ಪಾರ್ವತಿ ಅವರು ನಟಿಸಿದಂತೆ ಅವರ ಸ್ಥಾನ ತುಂಬುವ ನಟಿ ಸಿಕ್ಕಿಲ್ಲಿ, ಚಿತ್ರತಂಡ ಸಡೆನ್‌ ಆಗಿ ಮುಹೂರ್ತ ಕಾರ್ಯಕ್ರಮ ಹಮ್ಮಿಕೊಳ್ಳಲಿದೆಯಂತೆ.

English summary
Harsha Entertainers, who is set to remake the Malayalam film Charlie, that Diganth will be playing the lead in the Kannada version.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada