For Quick Alerts
  ALLOW NOTIFICATIONS  
  For Daily Alerts

  ದಳಪತಿ ವಿಜಯ್ ಸಿನಿಮಾದಲ್ಲಿ ಎಂ ಎಸ್ ಧೋನಿ ನಟನೆ? ನಿರ್ದೇಶಕ ಯಾರು?

  |

  ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಇತ್ತೀಚೆಗಷ್ಟೇ ಧೋನಿ ಸಿನಿಮಾ ನಿರ್ಮಾಣ ಕಂಪನಿಯನ್ನು ಆರಂಭಿಸಿದ್ದರು. ತಮ್ಮ ಪ್ರೊಡಕ್ಷನ್‌ನಲ್ಲಿ ತಮಿಳು ಸಿನಿಮಾಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ.

  ಈ ಬೆನ್ನಲ್ಲೇ ಧೋನಿ ನಟನೆಗೂ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತು ಚೆನ್ನೈನಲ್ಲಿ ಬಲವಾಗಿ ಹರಿದಾಡುತ್ತಿದೆ. ಅದೂ ದಳಪತಿ ವಿಜಯ್ ನಟಿಸುತ್ತಿರೋ ಸಿನಿಮಾ ಮೂಲಕ ಎಂ ಎಸ್ ಧೋನಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ ಅನ್ನೋ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ.

  ವಿಜಯ್ ಸಿನಿಮಾದಲ್ಲಿ ಧೋನಿ ನಟನೆ

  ವಿಜಯ್ ಸಿನಿಮಾದಲ್ಲಿ ಧೋನಿ ನಟನೆ

  ಮಹೇಂದ್ರ ಸಿಂಗ್ ಧೋನಿ ಹಾಗೂ ದಳಪತಿ ವಿಜಯ್ ಇಬ್ಬರೂ ಸ್ನೇಹಿತರು. ದಳಪತಿ ವಿಜಯ್ ಕ್ರಿಕೆಟ್ ಅಭಿಮಾನಿ. ಅತ್ತ ಧೋನಿ ಸಿನಿಮಾ ಅಭಿಮಾನಿ. ಹೀಗಾಗಿ ವಿಜಯ್ ನಟಿಸಲಿರುವ 67ನೇ ಸಿನಿಮಾ ಮೂಲಕ ಧೋನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಅನ್ನೂ ಸುದ್ದಿಯೊಂದು ಕಳೆದ ಮೂರು-ನಾಲ್ಕು ದಿನಗಳಿಂದ ಓಡಾಡುತ್ತಿದೆ. ತಮಿಳು ಸಿನಿಮಾ ಮೂಲಕ ಎಂ ಎಸ್ ಧೋನಿ ನಟನೆಗಿಳಿಯಲಿದ್ದಾರೆ ಅಂತ ಕೆಲವು ಮಾಧ್ಯಮಗಳು ವರದಿ ಮಾಡಿವೆ.

  ಧೋನಿ ಕರೆತರಲು ಲೋಕೇಶ್ ಪ್ಲ್ಯಾನ್

  ಧೋನಿ ಕರೆತರಲು ಲೋಕೇಶ್ ಪ್ಲ್ಯಾನ್

  ಕಾಲಿವುಡ್ ನಿರ್ದೇಶಕ ಲೋಕೇಶ್ ಕನಗರಾಜ್ 'ವಿಕ್ರಂ' ಅಂತ ಬ್ಲಾಕ್‌ ಬಸ್ಟರ್ ಸಿನಿಮಾ ನೀಡಿದ ಖುಷಿಯಲ್ಲಿದ್ದಾರೆ. ಸದ್ಯ 'ವಿಕ್ರಂ' ಬಳಿಕ ದಳಪತಿ ವಿಜಯ್ ನಟಿಸುತ್ತಿರೋ 67ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಿನಿಮಾಗೆ ವಿಜಯ್ ಜೊತೆ ನಟಿಸುವುದಕ್ಕೆ ಎಂ ಎಸ್ ಧೋನಿಯನ್ನು ಕರೆದುಕೊಂಡು ಬರಲು ಮುಂದಾಗಿದ್ದಾರೆ ಅನ್ನೋ ಮಾತು ಕಾಲಿವುಡ್‌ನಲ್ಲಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ.

  ಲೋಕೇಶ್‌ರಿಂದ ಸೂಪರ್ ಹಿಟ್ ಸಿನಿಮಾ

  ಲೋಕೇಶ್‌ರಿಂದ ಸೂಪರ್ ಹಿಟ್ ಸಿನಿಮಾ

  ಲೋಕೇಶ್ ಕನಗರಾಜ್ ಇದೂವರೆಗೂ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. 2017ರಲ್ಲಿ ತೆರೆಕಂಡಿದ್ದ 'ಮಾನಗಾರಂ' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಬಳಿಕ ಕಾರ್ತಿ ಅಭಿನಯದ 'ಖೈತಿ'. ದಳಪತಿ ವಿಜಯ್ ನಟನೆಯ 'ಮಾಸ್ಟರ್' ಹಾಗೂ ಇತ್ತೀಚೆಗೆ ರಿಲೀಸ್‌ ಆದ ಸೂಪರ್ ಹಿಟ್ ಸಿನಿಮಾ 'ವಿಕ್ರಂ'ವರೆಗೂ ಸಕ್ಸಸ್ ಅನ್ನೇ ಕಂಡಿದ್ದಾರೆ. ಇದೇ ನಿರ್ದೇಶಕ ಎಂ ಎಸ್ ಧೋನಿ ಹಿಂದೆ ಬಿದ್ದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

  ಸಿನಿಮಾ.. ಐಪಿಎಲ್ ಧೋನಿ ಆಯ್ಕೆ ಯಾವುದು?

  ಸಿನಿಮಾ.. ಐಪಿಎಲ್ ಧೋನಿ ಆಯ್ಕೆ ಯಾವುದು?

  ಐಪಿಎಲ್ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಧೋನಿ ಗುರುತಿಸಿಕೊಳ್ಳುತ್ತಿದ್ದಾರೆ. ತಮಿಳು ಜನರು ನೀಡಿದ ಪ್ರೀತಿಗೆ ಧೋನಿ ಸೋತಿದ್ದು, ಇಲ್ಲಿನ ಜನರ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಧೋನಿ ಎಂಟರ್‌ಟೈನ್ಮೆಂಟ್ ಅನ್ನೊ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇದರ ಮೂಲಕ ಸಿನಿಮಾ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿಯೇ ಇವರ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಆರಂಭ ಆಗಲಿದೆ ಎನ್ನುತ್ತಿವೆ ಮೂಲಗಳು.

  English summary
  Gossip Is That MS Dhoni Acting Debut In Tamil With Thalapathy Vijay 67th Movie, Know More.
  Monday, November 14, 2022, 23:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X