For Quick Alerts
  ALLOW NOTIFICATIONS  
  For Daily Alerts

  Exclusive: ದರ್ಶನ್ ನಟಿಸಬೇಕಿದ್ದ 'ಸಿಂಧೂರ ಲಕ್ಷಣ'ದಲ್ಲಿ ಈ ನಟ? ಏನಿದು ಟ್ವಿಸ್ಟ್?

  |

  'ವೀರ ಸಿಂಧೂರ ಲಕ್ಷ್ಮಣ' ಅಂದರೆ, ಉತ್ತರ ಕರ್ನಾಟಕದ ಭಾಗದ ಮಂದಿ ರೋಮಾಂಚನಗೊಳ್ಳುತ್ತಾರೆ. ಸಿಂಧೂರ ಲಕ್ಷ್ಮಣನ ಧೈರ್ಯ, ಹೋರಾಟ, ತ್ಯಾಗವನ್ನು ಇಂದಿಗೂ ನೆನೆಯುತ್ತಾರೆ. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ವೀರನೀಗೆ ಸಲಾಂ ಹೊಡೆಯುತ್ತಾರೆ.

  ಈ ಸ್ವಾತಂತ್ರ್ಯ ಸೇನಾನಿಯ ಹೋರಾಟವನ್ನು ಉತ್ತರ ಕರ್ನಾಟಕದಲ್ಲಿ ಇಂದಿಗೂ ಸಂಭ್ರಮಿಸಲಾಗುತ್ತೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಸಿಂಧೂರ ಲಕ್ಷ್ಮಣನ ಚರಿತ್ರೆಯನ್ನಾಧರಿಸಿದ ಅದೆಷ್ಟೊ ನಾಟಕಗಳು ನಡೆದಿವೆ. ಕನ್ನಡ ಚಿತ್ರರಂಗದ ಧೀಮಂತ ಕಲಾವಿದ ದಿವಂಗತ ಸುಧೀರ್ ಅವರು ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದ್ದರು.

  ಧನಂಜಯ್‌ನ 'ಜಮಾಲಿಗುಡ್ಡ'ದಲ್ಲಿ 2ನೇ ವಿಶ್ವಯುದ್ಧ : ಡಾಲಿ 'ಹಿರೋಷಿಮಾ', ಯಶ್ 'ನಾಗಸಾಕಿ'!ಧನಂಜಯ್‌ನ 'ಜಮಾಲಿಗುಡ್ಡ'ದಲ್ಲಿ 2ನೇ ವಿಶ್ವಯುದ್ಧ : ಡಾಲಿ 'ಹಿರೋಷಿಮಾ', ಯಶ್ 'ನಾಗಸಾಕಿ'!

  ಕೆಲವು ದಿನಗಳಿಂದ ಸಿಂಧೂರ ಲಕ್ಷ್ಮಣನ ಚರಿತ್ರೆಯನ್ನು ತೆರೆಮೇಲೆ ತರೋಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಮೊದಲಿ ಸಿಂಧೂರ ಲಕ್ಷ್ಮಣನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸೋ ಬಗ್ಗೆ ಮಾತುಕತೆ ನಡೆದಿತ್ತು. ಆದ್ರೀಗ ಡಾಲಿ ಹೆಸರು ಹರಿದಾಡುತ್ತಿದೆ. ಅಷ್ಟಕ್ಕೂ ಡಾಲಿ ಹೆಸರು ಹೇಗೆ ಬಂತು ಅಂತ ತಿಳಿದುಕೊಳ್ಳುವ ಮೊದಲು ಸಿಂಧೂರ ಲಕ್ಷ್ಮಣ ಯಾರು? ಅನ್ನೋದನ್ನು ತಿಳಿದುಕೊಳ್ಳೋದು ಮುಖ್ಯ.

  ಬ್ರಿಟಿಷರ ನಿದ್ದೆ ಕೆಡಿಸಿದ್ದ 'ಸಿಂಧೂರ ಲಕ್ಷ್ಮಣ'

  ಬ್ರಿಟಿಷರ ನಿದ್ದೆ ಕೆಡಿಸಿದ್ದ 'ಸಿಂಧೂರ ಲಕ್ಷ್ಮಣ'

  ಉತ್ತರ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗಗಳಲ್ಲಿ 'ಸಿಂಧೂರ ಲಕ್ಷ್ಮಣ' ಹೋರಾಟ ನೆನೆದು ರೊಮಾಂಚನಗೊಳ್ಳುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮದೇ ರೀತಿಯಲ್ಲಿ ಹೋರಾಟ ಮಾಡಿದ ಅದೆಷ್ಟೋ ವೀರರಲ್ಲಿ ಸಿಂಧೂರ ಲಕ್ಷ್ಮಣ ಕೂಡ ಒಬ್ಬ. ತನ್ನದೇ ಒಂದು ಗುಂಪು ಕಟ್ಟಿಕೊಂಡು ಬ್ರಿಟಿಷರು ಹಾಗೂ ಶ್ರೀಮಂತರ ವಿರುದ್ಧ ಹೋರಾಟ ನಡೆಸಿದ ಸೇನಾನಿ ಇವರೇ. ಗಾಂಧೀಜಿಯ ಅಸಹಕಾರ ಚಳುವಳಿ ಕರೆಗೆ ಓಗೊಟ್ಟು ಬ್ರಿಟಿಷರ ವಿರುದ್ಧ ತಿರುಗಿಬಿದ್ದಿದ್ದ ಅಪ್ರತಿಮ ವೀರ. ಬಡವರಿಂದಲೂ ತೆರಿಗೆ ವಸೂಲಿ ಮೂಡುತ್ತಿದ್ದ ಬ್ರಿಟಿಷರ ಖಜಾನೆಗಳನ್ನು ಲೂಟಿ ಮಾಡಿ ಬಡವರಿಗೆ ಹಂಚುತ್ತಿದ್ದ. ಇದು ಬ್ರಿಟಿಷರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಸಿಂಧೂರ ಲಕ್ಷ್ಮಣನನ್ನು ಸೆದೆಬಡಿಯೋಕೆ ಮೋಸದ ಹಾದಿ ಹಿಡಿದಿದ್ದರು. ಹೀಗಾಗಿ ಉತ್ತರ ಕರ್ನಾಟಕದ ಜನರ ಪಾಲಿಗೆ ಸಿಂಧೂರ ಲಕ್ಷ್ಮಣ ದೇವರ ಸಮಾನ. ಈತನ ಚರಿತ್ರೆಯೇ ಈ ಸಿನಿಮಾ ರೂಪ ಪಡೆಯಲು ಮುಂದಾಗಿದೆ.

  ದರ್ಶನ್ ಬದಲು ಡಾಲಿ ಧನಂಜಯ್

  ದರ್ಶನ್ ಬದಲು ಡಾಲಿ ಧನಂಜಯ್

  'ರಾಬರ್ಟ್' ಸಿನಿಮಾ ಚಿತ್ರೀಕರಣದ ವೇಳೆ ನಿರ್ಮಾಪಕ ಉಮಾಪತಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಲು ನಿರ್ಧರಿಸಿದ್ದರು. ಈ ಪಾತ್ರವನ್ನು ದರ್ಶನ್ ಮಾಡುತ್ತಾರೆ ಅಂತಲೂ ಹೇಳಿದ್ದರು. ಅದಕ್ಕೆ ದರ್ಶನ್ ಕೂಡ ಸಮ್ಮತಿ ಸೂಚಿಸಿದ್ದರು. ದಿವಂಗತ ಸುಧೀರ್ ಪುತ್ರ ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎಂದು ನಿಗದಿಯಾಗಿತ್ತು. ಆದರೆ ಈ ಮಧ್ಯದಲ್ಲಿ ದರ್ಶನ್ ಹಾಗೂ ಉಮಾಪತಿ ನಡುವೆ ಕಿತ್ತಾಟವಾಗಿದ್ದರಿಂದ ಇಬ್ಬರೂ ಬೇರೆಯಾಗಿದ್ದಾರೆ. ಆದರೂ ಉಮಾಪತಿ 'ಸಿಂಧೂರ ಲಕ್ಷ್ಮಣ' ನಿರ್ಮಾಣ ಮಾಡುವುದರಿಂದ ಹಿಂದೆ ಬಿದ್ದಿಲ್ಲ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸಂಗತಿ ಏನಂದರೆ, ದರ್ಶನ್ ಅವರ ಜಾಗದಲ್ಲಿ ಡಾಲಿ ಧನಂಜಯ್‌ಗೆ 'ಸಿಂಧೂರ ಲಕ್ಷ್ಮಣ' ಪಾತ್ರ ಮಾಡುವಂತೆ ಕೇಳಿಕೊಳ್ಳಲಾಗದೆಯಂತೆ. ಅದಕ್ಕೆ ಡಾಲಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ.

  ಸ್ಕ್ರಿಪ್ಟ್ ಹಂತದಲ್ಲಿ 'ಸಿಂಧೂರ ಲಕ್ಷಣ'

  ಸ್ಕ್ರಿಪ್ಟ್ ಹಂತದಲ್ಲಿ 'ಸಿಂಧೂರ ಲಕ್ಷಣ'

  ಉಮಾಪತಿ 'ಸಿಂಧೂರ ಲಕ್ಷ್ಮಣ' ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಹಾಗೂ 'ಕೆಜಿಎಫ್ ಚಾಪ್ಟರ್ 1' ಸಿನಿಮಾದಲ್ಲಿ ಕೆಲಸ ಮಾಡಿರೋ ಪುನೀತ್‌ ರುದ್ರನಾಗ್ ಈ ಸಿನಿಮಾಗೆ ಸಂಶೋಧನೆ ಮಾಡಿ ಸ್ಕ್ರೀನ್ ಪ್ಲೇ ಮಾಡುತ್ತಿದ್ದಾರೆ. ಒಮ್ಮೆ ಇದೆಲ್ಲಾ ಕಂಪ್ಲೀಟ್ ಆಗುತ್ತಿದ್ದಂತೆ ಸಿಂಧೂರ ಲಕ್ಷ್ಮಣ ಟೇಕಾಫ್ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಈ ಮಧ್ಯೆ ಡಾಲಿ ಧನಂಜಯ್ ಹೆಸರು ಬಲವಾಗಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಯಾರೂ ಅಧಿಕೃತ ಮಾಹಿತಿಯನ್ನು ರವಾನೆ ಮಾಡಿಲ್ಲ.

  ಚುನಾವಣೆ ಬಳಿಕ ಸೆಟ್ಟೇರುವ ಸಾಧ್ಯತೆ

  ಚುನಾವಣೆ ಬಳಿಕ ಸೆಟ್ಟೇರುವ ಸಾಧ್ಯತೆ

  ನಿರ್ಮಾಪಕ ಉಮಾಪತಿ ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದ ಆಕಾಂಕ್ಷಿಯಾಗಿರುವ ಉಮಾಪತಿ ಸದ್ಯ ಆ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಮೂಲಗಳ ಪ್ರಕಾರ, ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ಧನಂಜಯ್ ಕೂಡ ಒಂದರ ಹಿಂದೊಂದು ಸಿನಿಮಾದಲ್ಲಿ ಬ್ಯುಸಿಯಾಗಿರುವುದರಿಂದ ಈಗಾಗಲೇ ಒಪ್ಪಿಕೊಂಡಿರುವ ಕಮಿಟ್ಮೆಂಟ್ ಮುಗಿದ ಕೂಡಲೇ ಗ್ರೀನ್ ಸಿಗ್ನಲ್ ಕೊಡಬಹುದು ಎನ್ನುತ್ತಿವೆ ಮೂಲಗಳು.

  English summary
  Is Dhananjay Agreed To Act Lead Role In Sindhura Lakshmana Instead Of Darshan?, Know More.
  Thursday, November 17, 2022, 14:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X