For Quick Alerts
  ALLOW NOTIFICATIONS  
  For Daily Alerts

  ಹನಿಮೂನ್‌ಗೂ ಮೊದಲು ಸೆಟ್ಟೇರುತ್ತೆ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಸಿನಿಮಾ: ಆಫರ್ ಕೊಟ್ಟಿದ್ಯಾರು?

  |

  ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ರಾಜಸ್ಥಾನದ ಸಿಕ್ಸ್ ಸೆನ್ಸ್ ರೆಸಾರ್ಟ್ ಬಾಲಿವುಡ್ ಜೋಡಿ ಹಕ್ಕಿಯ ವಿವಾಹಕ್ಕೆ ಸಜ್ಜಾಗಿ ನಿಂತಿದೆ. ಕತ್ರಿನಾ ಹಾಗೂ ವಿಕ್ಕಿ ಇಬ್ಬರೂ ಈಗಾಗಲೇ ರೆಸ್ಟಾರ್ಟ್‌ಗೆ ಗ್ರ್ಯಾಂಡ್ ಎಂಟಿಕೊಟ್ಟಿದ್ದಾರೆ. ಆಪ್ತ ಮೂಲಗಳು ಕೂಡ ಮದುವೆ ಸ್ಥಳಕ್ಕೆ ಬಂದಿದೆ. ಬಾಲಿವುಡ್ ಮೂಲಗಳ ಪ್ರಕಾರ, ಡಿಸೆಂಬರ್ 9 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ.

  ಡಿಸೆಂಬರ್ 7ರಿಂದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಸಮಾರಂಭ ಆಗಲಿದ್ದು, ಸಂಗೀತ್ ಕಾರ್ಯಕ್ರಮ ಜರುಗಲಿದೆ. ಡಿಸೆಂಬರ್ 8ರಂದು ಮಹೆಂದಿ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 9ರಂದು ಮದುವೆ ನಡೆಯಲಿದೆ ಎನ್ನಲಾಗಿದೆ. ರಾಜಸ್ಥಾನದ ಸ್ಟಾರ್ ಹೊಟೇಲ್‌ಗಳು ಮದುವೆಗೆ ಬಂದ ಅತಿಥಿಗಳಿಂದ ತುಂಬಿ ಹೋಗಿದ್ದು, ಸ್ಟಾರ್ ಜೋಡಿಯ ಮದುವೆಯನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಈ ಮಧ್ಯೆ ಮದುವೆ ಬಳಿಕ ಈ ಜೋಡಿ ಒಪ್ಪಿಕೊಂಡಿರುವ ಹೊಸ ಪ್ರಾಜೆಕ್ಟ್ ಬಗ್ಗೆ ಬಾಲಿವುಡ್‌ನಲ್ಲಿ ಗುಲ್ಲೆದ್ದಿದೆ.

  ಹನಿಮೂನ್‌ಗೂ ಮುನ್ನ ಸಿನಿಮಾ ಸಹಿ ಮಾಡಲಿರುವ ಜೋಡಿ

  ಹನಿಮೂನ್‌ಗೂ ಮುನ್ನ ಸಿನಿಮಾ ಸಹಿ ಮಾಡಲಿರುವ ಜೋಡಿ

  ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಜೋಡಿಗೆ ಸಿನಿಮಾಗಳ ಮೇಲೆ ಸಿನಿಮಾ ಆಫರ್ ಬರುತ್ತಿದೆಯಂತೆ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಆಫರ್ ನೀಡುತ್ತಿದೆಯಂತೆ. ಬಾಲಿವುಡ್ ಮೂಲಗಳ ಪ್ರಕಾರ, ಮದುವೆ ಬಳಿಕವೇ ಈ ಜೋಡಿ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಲಿದೆಯಂತೆ. ಮದುವೆಗೆಂದು ರಾಜಸ್ಥಾನಕ್ಕೆ ಬರುವ ಮುನ್ನವೇ ಈ ಜೋಡಿ ಸಿನಿಮಾಗೆ ಸಹಿ ಮಾಡಿದೆ ಎನ್ನಲಾಗಿದೆ. ವಿಷಯ ಏನಂದ್ರೆ, ಈ ಸಿನಿಮಾದಿಂದಾಗಿ ಕತ್ರಿನಾ-ವಿಕ್ಕಿ ಹನಿಮೂನ್‌ಗೂ ಹೋಗುತ್ತಿಲ್ಲವಂತೆ.

  ಮದುವೆ ಸುದ್ದಿ ಹಬ್ಬುತ್ತಿದ್ದಂತೆ ಹೆಚ್ಚಿತು ಆಫರ್

  ಮದುವೆ ಸುದ್ದಿ ಹಬ್ಬುತ್ತಿದ್ದಂತೆ ಹೆಚ್ಚಿತು ಆಫರ್

  ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ವಿಚಾರ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಈ ಜೋಡಿ ತಮ್ಮ ಮದುವೆ ಬಗ್ಗೆ ಎಲ್ಲೂ ಬಾಯಿ ಬಿಡದೆ ಇದ್ದಿದ್ದರಿಂದ ಬಾಲಿವುಡ್ ಗೊಂದಲದಲ್ಲಿತ್ತು. ಯಾವಾಗ ಇಬ್ಬರ ಸಂಬಂಧ ಅಧಿಕೃತ ಅನ್ನುವುದು ಖಾತ್ರಿಯಾಗುತ್ತಿದ್ದಂತೆ ಬಾಲಿವುಡ್‌ನ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಜೋಡಿಯ ಹಿಂದೆ ಬಿದ್ದಿವೆಯಂತೆ. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಆಪ್ತ ಸ್ನೇಹಿತರೇ ಈ ವಿಷಯವನ್ನು ಬಾಲಿವುಡ್ ವೆಬ್ ಸೈಟ್ ಒಂದಕ್ಕೆ ಮಾಹಿತಿ ನೀಡಿದೆ.

  ಕತ್ರಿನಾ-ವಿಕ್ಕಿ ಮದುವೆಗೆ 120 ಮಂದಿ ಅತಿಥಿಗಳು

  ಕತ್ರಿನಾ-ವಿಕ್ಕಿ ಮದುವೆಗೆ 120 ಮಂದಿ ಅತಿಥಿಗಳು

  ಈ ವರ್ಷದ ಕೊನೆಯ ಗ್ರ್ಯಾಂಡ್ ವಿವಾಹಕ್ಕೆ ಸುಮಾರು 120 ಮಂದಿ ಅತಿಥಿಗಳು ಭಾಗವಹಿಸಲಿದ್ದಾರೆ. ಹೀಗಾಗಿ ಸ್ಥಳೀಯ ಅಧಿಕಾರಿಗಳು 120 ಅತಿಥಿಗಳ ಮೇಲೂ ಕಟ್ಟೆಚ್ಚರ ವಹಿಸಿದೆ. ಎಲ್ಲರಿಗೂ ಲಸಿಕೆ ಆಗಿರುವುದು ಖಡ್ಡಾಯ ಮಾಡಿದೆ. ಅಲ್ಲದೆ RT-PCR ಟೆಸ್ಟ್ ಕೂಡ ಅಗತ್ಯವೆಂದು ಹೇಳಿದೆ. ಹೀಗಾಗಿ ಯಾರೇ ಗೆಸ್ಟ್ ಮದುವೆಗೆ ಬಂದರೂ ಅವರ ಮೇಲೆ ಸ್ಥಳೀಯ ಆಡಳಿತ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆ.

  ಕತ್ರಿನಾ ವಿಕ್ಕಿ ಮದುವೆಗೆ ಬರ್ತಾರಾ ಸಲ್ಲು?

  ಕತ್ರಿನಾ ವಿಕ್ಕಿ ಮದುವೆಗೆ ಬರ್ತಾರಾ ಸಲ್ಲು?

  ಕತ್ರಿನಾ ಕೈಫ್ ಸಲ್ಮಾನ್ ಖಾನ್‌ ಕುಟುಂಬಕ್ಕೆ ತೀರಾ ಆತ್ಮೀಯರಾಗಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಮದುವೆ ಬರುತ್ತಾರೋ ಇಲ್ಲವೊ ಅನ್ನುವುದು ಇನ್ನೂ ಖಾತ್ರಿಯಾಗಿಲ್ಲ. ಆದರೆ, ಸಲ್ಮಾನ್ ಖಾನ್ ಕುಟುಂಬ ಈ ಮದುವೆ ಆಗಮಿಸಲಿದೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಹಾಗೂ ಪತಿ ಆಯುಷ್ ಶರ್ಮಾ ಮದುವೆಗೆ ಆಗಮಿಸುವುದು ಬಹುತೇಕ ಪಕ್ಕಾ ಆಗಿದೆ.

  English summary
  Katrina Kaif and Vicky Kaushal likely to sign new project before going honeymoon. Katrina and Vicky both are seriously contemplating signing a film together post marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X