»   » ನಟಿ ಮಮತಾ ಮೋಹನ್ ದಾಸ್ ಗೆ ಮತ್ತೆ ಕ್ಯಾನ್ಸರ್?

ನಟಿ ಮಮತಾ ಮೋಹನ್ ದಾಸ್ ಗೆ ಮತ್ತೆ ಕ್ಯಾನ್ಸರ್?

Posted By:
Subscribe to Filmibeat Kannada
ಕನ್ನಡದ 'ಗೂಳಿ' ಚಿತ್ರದಲ್ಲಿ ಅಭಿನಯಿಸಿದ್ದ ಮೋಹಕ ತಾರೆ ಮಮತಾ ಮೋಹನ್ ದಾಸ್ ಅವರು ಮತ್ತೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಮೂರು ವರ್ಷಗಳ ಹಿಂದೆ ಅವರು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈಗ ಮತ್ತೆ ಅವರನ್ನು ಕ್ಯಾನ್ಸರ್ ಬಾಧಿಸುತ್ತಿದೆ ಎಂಬ ಸುದ್ದಿ ಹಬ್ಬಿದೆ.

ಈ ಹಿಂದೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದಾಗ ಮಮತಾ ಈ ರೀತಿ ಪ್ರತಿಯಿಸಿದ್ದರು, "ತನಗೇನು ಆಗಿಲ್ಲ. ಚಿಕಿತ್ಸೆ ಪಡೆದಿದ್ದೇನೆ. ಈಗ ತಾನು ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ" ಎಂದು ಆತ್ಮವಿಶ್ವಾಸದಿಂದ ಹೇಳಿದ್ದರು. ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬ ಆಕೆಯ ಆರೋಗ್ಯದ ಬಗ್ಗೆ ಪ್ರಶ್ನಿಸಲಾಗಿ ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

"ತಮಗೆ ಗುಣಮುಖ ಮಾಡಬಹುದಾದ ಕಾಯಿಲೆ ಇದೆ ಎಂದೂ, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಬಾರಿಯೂ ತಾನು ಸಂಪೂರ್ಣ ಗುಣಮುಖಳಾಗುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಯಾವ ರೀತಿಯ ಕಾಯಿಲೆ ಅದು ಎಂಬ ಬಗ್ಗೆ ಮಾತ್ರ ಮಮತಾ ಹೇಳಿಕೊಂಡಿಲ್ಲ.

ಆದರೆ ಅಭಿಮಾನಿಗಳ ವಲಯದಲ್ಲಿ ಮಾತ್ರ ಬಹುಶಃ ಕ್ಯಾನ್ಸರ್ ಇರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸತ್ಯಾಸತ್ಯತೆಗಳು ಇನ್ನಷ್ಟೇ ಹೊರಬೀಳಬೇಕು. ಗೂಳಿ ಚಿತ್ರಗಳ ಬಳಿಕ ಮಮತಾ ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರು ಮಲಯಾಳಂ ಚಿತ್ರಗಳಲ್ಲಿ ಬಿಜಿಯಾದರು.

ಕಳೆದ ವರ್ಷ ಬಿಡುವಿಲ್ಲದಂತೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಚಿಕಿತ್ಸೆಯ ಕಾರಣ ಸರಿಸುಮಾರು ಆರು ತಿಂಗಳು ಸಿನಿಮಾಗೆ ದೂರವಾಗಲಿದ್ದಾರೆ ಎಂಬ ಸಮಾಚಾರವೂ ಇದೆ. ಮಮತಾ ಮೋಹನ್ ದಾಸ್ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಖತ್ ಬಿಜಿ ತಾರೆ. ಸಾಲದಕ್ಕೆ ಈಕೆ ಗಾಯಕಿ ಕೂಡ. 'ಗೂಳಿ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಮತ್ತೆ ಈಕೆಗೆ ಕನ್ನಡದಲ್ಲಿ ನಟಿಸುವ ಚಾನ್ಸ್ ಸಿಗಲೇ ಇಲ್ಲ.

ತೀರಾ ಇತ್ತೀಚೆಗಷ್ಟೇ ಮಮತಾ ಅವರ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿತ್ತು. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲೇ ಆಕೆ ವಿಚ್ಛೆದನಕ್ಕೆ ಅರ್ಜಿ ಸಲ್ಲಿಸಿದ್ದರು. ಮುಂದೆ ಓದಿ ಮಮತಾ ಹಾಲಿನಂತಹ ಸಂಸಾರ ಒಡೆದದ್ದು ಯಾಕೆ?

English summary
Rumours are that actor Mamta Mohandas has again suffers from cancer and she is undergoing treatment. The popular star revealed the details of her illness through Twitter, “At times a follow-up can show residual/resistant disease which needs to be treated. So this too shall pass. Thank you for the concern and support.”
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada