»   » ಹಾಫ್ ಸೆಂಚುರಿ ಸನಿಹದಲ್ಲಿ 'ಚೌಕ': ನಾಲ್ಕು ಭಾಷೆಗಳಿಗೆ ರಿಮೇಕ್?

ಹಾಫ್ ಸೆಂಚುರಿ ಸನಿಹದಲ್ಲಿ 'ಚೌಕ': ನಾಲ್ಕು ಭಾಷೆಗಳಿಗೆ ರಿಮೇಕ್?

Posted By:
Subscribe to Filmibeat Kannada

ಖ್ಯಾತ ನಟ ಮತ್ತು ನಿರ್ಮಾಪಕ ದ್ವಾರಕೀಶ್ ಅವರ ನಿರ್ಮಾಣದ 50 ನೇ ಸಿನಿಮಾ 'ಚೌಕ' ಈ ವಾರದ ಅಂತ್ಯಕ್ಕೆ ಭರ್ಜರಿ 50 ದಿನ ಪೂರೈಸಲಿದೆ. ಅಲ್ಲದೆ ಚಿತ್ರ ವಿದೇಶಗಳಲ್ಲೂ ಬಿಡುಗಡೆ ಆಗಿದ್ದು, ಮೋಡಿ ಮಾಡುತ್ತಿದೆ.[ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ']

ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ 'ಚೌಕ' ಬಗ್ಗೆ ಈಗೊಂದು ಇಂಟ್ರೆಸ್ಟಿಂಗ್ ಸುದ್ದಿ ಹರಿದಾಡುತ್ತಿದ್ದು, ಸಿನಿಮಾ ಪರಭಾಷೆಗಳಲ್ಲಿ ರಿಮೇಕ್ ಆಗಲಿದೆಯಂತೆ. ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೇ ನೋಡಿ.


ಪರ ಭಾಷೆಗಳಲ್ಲಿ 'ಚೌಕ' ರಿಮೇಕ್

ಮೊದಲ ಚಿತ್ರದಲ್ಲೇ ಮಲ್ಟಿಸ್ಟಾರರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ತರುಣ್ ಸುಧೀರ್ 'ಚೌಕ' ಚಿತ್ರ, ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಲಿದೆಯಂತೆ.[ವಿದೇಶದಲ್ಲಿ ಮೋಡಿ ಮಾಡುತ್ತಿದೆ ಕನ್ನಡದ 'ಚೌಕ']


ಯಾವ್ಯಾವ ಭಾಷೆಗಳಲ್ಲಿ 'ಚೌಕ' ರಿಮೇಕ್?

ತಮಿಳು, ತೆಲುಗು, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ 'ಚೌಕ' ರಿಮೇಕ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.


ರಿಮೇಕ್ ಹಕ್ಕು ಮಾರಾಟ

'ಚೌಕ' ಸಿನಿಮಾದ ರಿಮೇಕ್ ಹಕ್ಕನ್ನು ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಮಾರಾಟ ಮಾಡಲಾಗಿದೆಯಂತೆ.


ಬೆಂಗಾಲಿ ಮತ್ತು ಮರಾಠಿ ಗೆ 'ಚೌಕ'

ಅಂದಹಾಗೆ 'ಚೌಕ' ಸಿನಿಮಾವನ್ನು ಬೆಂಗಾಲಿ ಮತ್ತು ಮರಾಠಿ ನಿರ್ಮಾಪಕರು ಸಹ ರಿಮೇಕ್ ಮಾಡಲು ಇಂಟ್ರೆಸ್ಟ್ ತೋರಿಸಿದ್ದು, ಈ ಭಾಷೆಗಳಿಗೆ ರಿಮೇಕ್ ಹಕ್ಕು ಮಾರಾಟ ಆಗಿರುವ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ತಿಳಿದುಬಂದಿಲ್ಲ.


'ಚೌಕ' ರಿಮೇಕ್ ಬಗ್ಗೆ ತರುಣ್ ಸುಧೀರ್ ಸ್ಪಷ್ಟನೆ

ನಾಲ್ಕು ಭಾಷೆಗಳಲ್ಲಿ 'ಚೌಕ' ರಿಮೇಕ್ ಆಗುವ ಬಗ್ಗೆ ತರುಣ್ ಸುಧೀರ್ ಎಲ್ಲಾ ನಿರ್ಮಾಪಕರ ಜೊತೆ ಮಾತುಕತೆ ಮುಗಿದ ನಂತರ ಅಧಿಕೃತವಾಗಿ ಪ್ರಕಟಣೆ ಮಾಡಲಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ.


ವಿದೇಶಗಳಲ್ಲಿ ಮೋಡಿ ಮಾಡುತ್ತಿದೆ 'ಚೌಕ'

ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಚೌಕ' ಚಿತ್ರ ಮಾರ್ಚ್ 24 ಕ್ಕೆ 50 ನೇ ಪೂರೈಸಲಿದೆ. ಕಸ್ತೂರಿ ಮೀಡಿಯಾ ಹಾಗೂ ಡ್ರೀಮ್ಸ್ ಮೀಡಿಯಾ ಅಮೆರಿಕ, ಕೆನಡಾದ ಚಿತ್ರಮಂದಿರಗಳಲ್ಲಿ 'ಚೌಕ' ರಿಲೀಸ್ ಮಾಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.


English summary
Tarun Sudhir Directorial, Multi Starrer 'Chowka' movie wil remake in Four Languanges.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada