For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ಸಮಂತಾ: ಈ ಬಾರಿ ಯಾವ ಹೀರೊಗೂ ಕಮ್ಮಿಯಿಲ್ಲ!

  |

  ಟಾಲಿವುಡ್‌ನಲ್ಲಿ ಸುದ್ದಿಯಲ್ಲಿರೋ ನಟಿ ಸಮಂತಾ. ವಿವಾಹದ ಬಳಿಕ ಸಿನಿಮಾದಲ್ಲಿ ನಟಿಸುವುದು ಕೊಂಚ ಕಡಿಮೆಯಾಗಿದ್ದರೂ, ರಿಯಾಲಿಟಿ ಶೋಗಳು, ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

  ವಿಚ್ಚೇದನದ ಬಳಿಕ ಸಮಂತಾಗೆ ಆ ಎಲ್ಲಾ ಅಡೆ-ತಡೆಗಳಿಂದ ಮುಕ್ತಿ ಸಿಕ್ಕಿದೆ. ಹೀಗಾಗಿ ಗ್ಲಾಮರಸ್ ರೋಲ್‌ಗಳಿಂದ ಹಿಡಿದು, ಪರ್ಫಾಮೆನ್ಸ್‌ಗೆ ಅವಕಾಶವಿರುವ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಸಮಂತಾಗೆ ಬೇಡಿಕೆ ಹೆಚ್ಚಾಗಿಲ್ಲ. ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಬೆನ್ನಲ್ಲೇ ಸಮಂತಾ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

  ಸಮಂತಾಗೆ ಬೇಡಿಕೆ ಕಮ್ಮಿಯಾಗಿಲ್ಲ

  ಸಮಂತಾಗೆ ಬೇಡಿಕೆ ಕಮ್ಮಿಯಾಗಿಲ್ಲ

  ಸಮಂತಾ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡಿವೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಿನಿಮಾ ಸಮಂತಾ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದರು. ಒಂದೇ ಒಂದು ಹಾಡು ಸಿನಿಮಾವನ್ನು ಎಲ್ಲಿಗೋ ಕರೆದುಕೊಂಡು ಹೋಗಿತ್ತು. 'ಪುಷ್ಪ' ಸಿನಿಮಾದಲ್ಲಿ ಹೆಚ್ಚು ಹಾಕುವುದಕ್ಕೆ ಸಮಂತಾ ಸಿಕ್ಕಾಪಟ್ಟೆ ಸಂಭಾವನೆಯನ್ನು ಕೇಳಿದ್ದರು ಎಂದು ಸುದ್ದಿಯಾಗಿತ್ತು. ಒಂದು ಹಾಡಿಗೆ ಬರೋಬ್ಬರಿ ಮೂರು ಕೋಟಿ ಸಂಭಾವನೆ ಸಿಕ್ಕಿತ್ತು ಎನ್ನಲಾಗಿತ್ತು. ಇನ್ನು ಸಮಂತಾ ಸೋಲೊ ನಾಯಕಿಯಾಗಿ ನಟಿಸಿದರೂ ಬ್ಯುಸಿನೆಸ್ ಅದ್ಭುತವಾಗಿ ಆಗುತ್ತೆ ಎನ್ನಲಾಗಿದೆ.

  ಸಮಂತಾ ಬೇಡಿಕೆ ಇಟ್ಟ ಸಂಭಾವನೆ ಎಷ್ಟು?

  ಸಮಂತಾ ಬೇಡಿಕೆ ಇಟ್ಟ ಸಂಭಾವನೆ ಎಷ್ಟು?

  ಟಾಲಿವುಡ್‌ನ ಸ್ಟಾರ್ ಹೀರೊಯಿನ್‌ಗಳಲ್ಲಿ ಸಮಂತಾ ಕೂಡ ಒಬ್ಬರು. ಸಿನಿಮಾ ಇಂಡಸ್ಟ್ರಿಯರಲ್ಲಿ ಸಮಂತಾಗೆ ಅವರದ್ದೇ ಆದ ಬೇಡಿಕೆ ಇದೆ. ಸದ್ಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ರೆಡಿಯಾಗಿರುವಾಗಲೇ ಸ್ಯಾಮ್ ಸಂಭಾವನೆ ಹೆಚ್ಚಿಸಿಕೊಂಡಿರೋ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿಯಾಗುತ್ತಿದೆ. ಅಂದ್ಹಾಗೆ ಸಮಂತಾ ಒಂದು ಸಿನಿಮಾದಲ್ಲಿ ನಟಿಸುವುದಕ್ಕೆ ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಅಂತ ಗುಲ್ಲೆದ್ದಿದೆ.

  ಸಮಂತಾಗೆ ಯಾಕಿಷ್ಟು ಸಂಭಾವನೆ?

  ಸಮಂತಾಗೆ ಯಾಕಿಷ್ಟು ಸಂಭಾವನೆ?

  ಸಮಂತಾ ವಿಚ್ಛೇದನದ ಬಳಿಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜನಪ್ರಿಯರಾಗಿದ್ದಾರೆ. ಅದರಲ್ಲೂ 'ಫ್ಯಾಮಿಲಿಮ್ಯಾನ್ 2' ವೆಬ್‌ ಸಿರೀಸ್ ಬಳಿಕ ಸಮಂತಾ ಅಭಿನಯಕ್ಕೆ ಫಿಲ್ಮ್‌ ಮೇಕರ್ಸ್ ಫಿದಾ ಆಗಿದ್ದಾರೆ. ಹೀಗಾಗಿ ಸಮಂತಾ ನಟಿಸೋ ಸಿನಿಮಾಗಳನ್ನು ಪ್ಯಾನ್‌ ಇಂಡಿಯಾ ರಿಲೀಸ್ ಮಾಡಬಹುದು. ಅಲ್ಲದೆ ಸಮಂತಾ ಸೋಲೊ ಸಿನಿಮಾಗಳು ನಿರ್ಮಾಪಕರಿಗೆ ಒಳ್ಳೆ ಬ್ಯುಸಿನೆಸ್ ಮಾಡಿಕೊಟ್ಟಿವೆಯಂತೆ. ಸದ್ಯ 'ಯಶೋದಾ' ಸಿನಿಮಾ ಕೂಡ ಬ್ಯುಸಿನೆಸ್ ಚೆನ್ನಾಗಿ ಆಗಿದೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ 'ಶಾಕುಂತಲಂ' ಸಿನಿಮಾಗೂ ಕ್ರೇಜ್ ಜೋರಾಗಿದೆ. ಈ ಕಾರಣಕ್ಕೆ ಸಮಂತಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

  ಸಮಂತಾಗೆ 'ಮಯೋಸೈಟಿಸ್'

  ಸಮಂತಾಗೆ 'ಮಯೋಸೈಟಿಸ್'

  ಸಮಂತಾ ಅಪರೂಪದ 'ಮಯೋಸೈಟಿಸ್' ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ಇಷ್ಟೊತ್ತಿಗಾಗಲೇ ಗುಣಮುಖರಾಗಬೇಕಿತ್ತು. ಆದರೆ, ರಿಕವರಿ ಆಗುತ್ತಿರೋದು ತಡವಾಗುತ್ತಿದೆ. ಒಂದ್ವೇಳೆ ಸಮಂತಾ ಆರೋಗ್ಯ ಸರಿಯಿದ್ದಿದ್ದರೆ, ಇಷ್ಟೊತ್ತಿಗಾಗಲೇ 'ಯಶೋದಾ' ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದರು. ಆದರೆ, ನವೆಂಬರ್ 11ರಂದು ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ.

  English summary
  Pan India Movie Yashoda Starrer Samantha Demanding 8 Crore Remuneration, Know More.
  Thursday, November 3, 2022, 10:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X