ಹರ್ಷ ಮತ್ತು ಪುನೀತ್ ಚಿತ್ರಕ್ಕೆ ರವಿಚಂದ್ರನ್ ಕ್ಲಾಪ್
ಎ ಹರ್ಷ ಇತ್ತೀಚೆಗೆ ತಾನೆ ಪುನೀತ್ ರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳುವ, ಚಿತ್ರದ ಹೆಸರು ಏನು ಎಂಬ ಕುತೂಹಲಕ್ಕೆ ಬ್ರೇಕ್ ಹಾಗಿದ್ದರು. ಸಿನಿಮಾ ಗೆ ಟೈಟಲ್ ಫಿಕ್ಸ್ ಆದ ಬೆನ್ನಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.[ಪುನೀತ್ ರಾಜ್ ಕುಮಾರ್-ಹರ್ಷ ಮಹಾಸಂಗಮದ ಇಂಟ್ರೆಸ್ಟಿಂಗ್ ಡೀಟೈಲ್ಸ್]
'ಅಂಜನಿಪುತ್ರ' ಶೂಟಿಂಗ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡುವ ಮೂಲಕ ಅದ್ಧೂರಿ ಚಾಲನೆ ನೀಡಿದ್ದಾರೆ. ತಮಿಳಿನ 'ಪೂಜೈ' ಚಿತ್ರದ ರೀಮೇಕ್ ಆಗಿರುವ ಈ ಚಿತ್ರಕ್ಕೆ 'ಅಂಜಿನಿಪುತ್ರ' ಎಂಬ ಹೆಸರು ನೀಡಿ ಆಂಜನೇಯನ ಪರಮಭಕ್ತ ಎಂಬುದನ್ನು ಹರ್ಷ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

ಚಿತ್ರೀಕರಣಕ್ಕೆ ಚಾಲನೆ ನೀಡಿದ ವೇಳೆ ಪುನೀತ್ ರಾಜ್ ಕುಮಾರ್ ಜೊತೆ, ನಾಯಕಿ ರಶ್ಮಿಕಾ ಮಂದಣ್ಣ, ಕಾಮಿಡಿ ಕಿಂಗ್ ಚಿಕ್ಕಣ್ಣ ಸಹ ಇದ್ದರು. ಈ ಚಿತ್ರದಲ್ಲಿ ರಶ್ಮಿಕಾ ಮಾರ್ಡನ್ ಕ್ಯಾರೆಕ್ಟರ್ ನಲ್ಲಿ ತುಂಬಾ ಗ್ಲಾಮರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಎಂ.ಎನ್.ಕೆ ಮೂವೀಸ್ ಅಡಿಯಲ್ಲಿ ಎಂ.ಎನ್ ಕುಮಾರ್ ಮತ್ತು ಜಯಶ್ರೀ ದೇವಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.[ಪವರ್ ಸ್ಟಾರ್ ಮುಂದಿನ ಚಿತ್ರದಲ್ಲಿ ಬಹುಭಾಷಾ ನಟಿ ಅಭಿನಯ]

ತಮಿಳು ನಟ ವಿಶಾಲ್ ಮತ್ತು ನಟಿ ಶೃತಿ ಹಾಸನ್ ಅಭಿನಯದ ಸೂಪರ್ ಹಿಟ್ ಚಿತ್ರ 'ಪೂಜೈ' ರಿಮೇಕ್ 'ಅಂಜನಿಪುತ್ರ' ಆಗಿದ್ದು, ಬಹುಭಾಷಾ ನಟಿ ರಮ್ಯಾಕೃಷ್ಣ ಅವರು ಪುನೀತ್ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎ ಹರ್ಷ ನಿರ್ದೇಶನದ ಈ ಚಿತ್ರಕ್ಕೆ, 'ಉಗ್ರಂ' ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ ನೀಡುತ್ತಿದ್ದಾರೆ.


Click it and Unblock the Notifications











