For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಫಿಲ್ಮ್‌ಫೇರ್ ಪ್ರಶಸ್ತಿಗೆ ಚಕ್ಕರ್ ಹೊಡೆದು ಮಾಲ್ಡೀವ್ಸ್‌ಗೆ ಹಾರಿದ್ದು ಏಕೆ? ಕಾರಣ ಇದೇ ಅಂತೆ!

  |

  ಒಂದ್ಕಡೆ ದಕ್ಷಿಣ ಭಾರತದ ಚಿತ್ರರಂಗ ಫಿಲ್ಮ್ ಫೇರ್ ಪ್ರಶಸ್ತಿ ಗುಂಗಿನಲ್ಲಿತ್ತು. ಬಹಳ ದಿನಗಳ ಬಳಿಕ ಬೆಂಗಳೂರಿನಲ್ಲಿ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ನಡೆದಿದ್ದರಿಂದ ತಾರೆಯರೆಲ್ಲ ಒಟ್ಟಿಗೆ ಸಂಭ್ರಮಿಸಿದ್ದರು. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ ಟ್ರಿಪ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು.

  ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಮಾಲ್ಡೀವ್ಸ್‌ನಲ್ಲಿ ರಜೆಯ ಮಜಾ ಮಾಡಲು ಹೋಗಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಇತ್ತ ರಶ್ಮಿಕಾ ಸಖತ್ ಬೋಲ್ಡ್ ಆಗಿರೋ ಫೋಟೊಗಳನ್ನು ಮಾಲ್ಡೀವ್ಸ್‌ನಿಂದಲೇ ಅಪ್‌ಲೋಡ್ ಮಾಡುತ್ತಲೇ ಇದ್ದರು.

  ವಿದೇಶದಿಂದ ಮರಳಿದ ವಿಜಯ್ & ರಶ್ಮಿಕಾ; ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ರು ಎನ್ನುತ್ತಿದೆ ಈ ಒಂದು ಫೋಟೊವಿದೇಶದಿಂದ ಮರಳಿದ ವಿಜಯ್ & ರಶ್ಮಿಕಾ; ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ರು ಎನ್ನುತ್ತಿದೆ ಈ ಒಂದು ಫೋಟೊ

  ಇಷ್ಟೆಲ್ಲ ಬೆಳವಣಿಗಳ ಮಧ್ಯೆ ಟಾಲಿವುಡ್ ಮಂದಿ ತಲೆಯೊಳಗೆ ಒಂದು ಪ್ರಶ್ನೆ ಓಡಾಡುತ್ತಿದೆ. ಬೆಂಗಳೂರಿನಲ್ಲಿ ಬಹಳ ದಿನಗಳ ಬಳಿಕ ಫಿಲ್ಮ್‌ಫೇರ್ ಅಂತಹ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದ ವೇಳೆ ರಶ್ಮಿಕಾ ಗೈರು ಹಾಜರಾಗಿ, ವಿದೇಶಕ್ಕೆ ಹಾರಿದ್ದೇಕೆ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಟಾಲಿವುಡ್‌ ಮಂದಿನೇ ಉತ್ತರವನ್ನೂ ಕಂಡುಕೊಂಡಿದ್ದಾರೆ.

  ಫಿಲ್ಮ್‌ಫೇರ್ ಮಿಸ್ ಮಾಡಿಕೊಂಡಿದ್ದೇಕೆ ರಶ್ಮಿಕಾ?

  ಫಿಲ್ಮ್‌ಫೇರ್ ಮಿಸ್ ಮಾಡಿಕೊಂಡಿದ್ದೇಕೆ ರಶ್ಮಿಕಾ?

  ಫಿಲ್ಮ್ ಫೇರ್ ಪ್ರಶಸ್ತಿ ಮುಗಿದು ಮೂರು ದಿನ ಆಗಿದೆ. ಇತ್ತ ಮಾಲ್ಡೀವ್ಸ್‌ಗೆ ಹೋಗಿದ್ದ ರಶ್ಮಿಕಾ ಮಂದಣ್ಣನೂ ಹಿಂತಿರುಗಿ ಬಂದಿದ್ದಾರೆ. ಈ ಗ್ಯಾಪ್‌ನಲ್ಲಿ ರಶ್ಮಿಕಾ ಮಂದಣ್ಣ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಯನ್ನು ತಪ್ಪಿಸಿಕೊಂಡಿದ್ದೇಕೆ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕಂದ್ರೆ, ರಶ್ಮಿಕಾ ಅತ್ಯುತ್ತಮ ನಟಿ ಕ್ಯಾಟಗರಿಯಲ್ಲಿ ಎರಡೆರಡು ನಾಮಿನೇಷನ್ ಆಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ನಟಿಯಾಗಿ ಬೆಂಗಳೂರಿನಲ್ಲೇ ನಡೆದ ಪ್ರಶಸ್ತಿ ಸಮಾರಂಭದಕ್ಕೆ ಕೈ ಕೊಟ್ಟಿದ್ದರ ಬಗ್ಗೆ ಲೆಕ್ಕ ಹಾಕಲು ಶುರು ಮಾಡಿದ್ದಾರೆ.

  ಪ್ರಶಸ್ತಿ ಗೆಲ್ಲಲ್ಲ ಅನ್ನೋದು ಗೊತ್ತಿತ್ತು

  ಪ್ರಶಸ್ತಿ ಗೆಲ್ಲಲ್ಲ ಅನ್ನೋದು ಗೊತ್ತಿತ್ತು

  ದಾಖಲೆ ಬರೆದ ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಫಿಲ್ಮ್‌ಫೇರ್‌ ನಾಮಿನೇಷನ್‌ನಲ್ಲಿ ಅತೀ ಹೆಚ್ಚು ವಿಭಾಗಗಳಿಗೆ ಆಯ್ಕೆಯಾಗಿತ್ತು. ಇದರಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ರಶ್ಮಿಕಾ ಹೆಸರಿತ್ತು. 'ಪುಷ್ಪ 1' ಸಿನಿಮಾದ ಅತ್ಯುತ್ತಮ ನಟನೆ ಹಾಗೂ 'ಭೀಷ್ಮ' ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಹೆಸರನ್ನು ನಾಮಿನೇಟ್ ಮಾಡಲಾಗಿತ್ತು. ಆದರೂ ರಶ್ಮಿಕಾ ಮಂದಣ್ಣ ಪ್ರಶಸ್ತಿಯನ್ನು ಗೆದ್ದಿಲ್ಲ. ಇದು ಮೊದಲೇ ಗೊತ್ತಿದ್ದರಿಂದ ರಶ್ಮಿಕಾ ಕೈ ಕೊಟ್ಟಿದ್ದಾರೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

  ರಶ್ಮಿಕಾಗೆ ಸೋಲಿನ ಕಹಿ

  ರಶ್ಮಿಕಾಗೆ ಸೋಲಿನ ಕಹಿ

  ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ನಟಿಸಿದ 'ಗುಡ್‌ ಬೈ' ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಇದು ತೆರೆಕಂಡ ರಶ್ಮಿಕಾಳ ಮೊದಲ ಬಾಲಿವುಡ್ ಸಿನಿಮಾ. ಈ ಕಾರಣಕ್ಕೆ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಗುಡ್‌ ಬೈ ಸಿನಿಮಾ ಮೋಡಿ ಮಾಡುವಲ್ಲಿ ಸೋತಿತ್ತು. ಸೋಲಿನ ಕಹಿಯನ್ನು ಮರೆಯಲು ರಶ್ಮಿಕಾ ಮಾಲ್ಡೀವ್ಸ್‌ಗೆ ಹೋಗಿದ್ರು ಅನ್ನೋದು ಇನ್ನು ಕೆಲವರ ವಾದ.

  ಇಬ್ಬರಿಗೂ ಸೋಲು

  ಇಬ್ಬರಿಗೂ ಸೋಲು

  ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಮಾಲ್ಡೀವ್ಸ್‌ಗೆ ಹೋಗಿದ್ರು ಅನ್ನೋ ಗುಸುಗುಸು ಇದೆ. ರಶ್ಮಿಕಾ ಮಂದಣ್ಣ ಆರಾಮಾಗಿ ಫೋಟೊಗಳನ್ನು ಶೇರ್ ಮಾಡುತ್ತಿದ್ದರೆ. ಇನ್ನೊಂದು ಕಡೆ ವಿಜಯ್ ದೇವರಕೊಂಡ ಸುಳಿವು ಬಿಟ್ಟು ಕೊಟ್ಟಿಲ್ಲ. ಅಸಲಿಗೆ ವಿಜಯ್ ದೇವರಕೊಂಡ ಸಿನಿಮಾ 'ಲೈಗರ್' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಮತ್ತೊಂದು ಕಡೆ ರಶ್ಮಿಕಾ 'ಗುಡ್‌ ಬೈ' ಇಬ್ಬರೂ ಸೋಲಿನ ಕಹಿ ಮರೆಯೋದಕ್ಕೆ ಮಾಲ್ಡೀವ್ಸ್‌ಗೆ ಹೋಗಿದ್ರು, ಈ ಕಾರಣಕ್ಕೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಮಿಸ್ ಮಾಡಿಕೊಂಡಿದ್ದಾರೆ ಅಂತ ಗುಲ್ಲೆದ್ದಿದೆ.

  ಮಾಲ್ಡೀವ್ಸ್‌ಗೆ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ರೊಮ್ಯಾಂಟಿಕ್ ಟೂರ್? ಏರ್‌ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೇಗೆ?ಮಾಲ್ಡೀವ್ಸ್‌ಗೆ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ರೊಮ್ಯಾಂಟಿಕ್ ಟೂರ್? ಏರ್‌ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೇಗೆ?

  English summary
  Reason Behind Rashmika Missed Filmfare South Awards despite Held In Bengaluru, Know More.
  Wednesday, October 12, 2022, 18:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X