Don't Miss!
- News
'ರಾಜ್ಯದ ಜನ ಮತ್ತೆ ಬಿಎಸ್ ಯಡಿಯೂರಪ್ಪರನ್ನು ನಂಬುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಷ್ಪ 2' ಸಿನಿಮಾದಿಂದ ಹೊರ ನಡೆದ ಫಹಾದ್ ಫಾಸಿಲ್: ವಿಜಯ್ ಸೇತುಪತಿ ಕಾರಣ?
ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ದಕ್ಷಿಣ ಭಾರತದ ಸಿನಿಮಾಗಳಲ್ಲಿ 'ಪುಷ್ಪ' ಕೂಡ ಒಂದು. ಅಲ್ಲು ಅರ್ಜುನ್ ಸ್ಟೈಲ್, ಮ್ಯಾನರಿಸಂ, ದೇವಿಶ್ರೀ ಪ್ರಸಾದ್ ಸಾಂಗ್ ಹಾಗೂ ಸುಕುಮಾರ್ ಡೈರೆಕ್ಷನ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಬೇರೆ ಬೇರೆ ಭಾಷೆಯವರೂ ಕೂಡ 'ಪುಷ್ಪ' ಸಿನಿಮಾ ನೋಡಿ ಥ್ರಿಲ್ ಆಗಿದ್ದರು.
ಬಾಕ್ಸಾಫೀಸ್‌ನಲ್ಲೂ 'ಪುಷ್ಪ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರಲ್ಲೂ ಬಾಲಿವುಡ್ ಮಾರ್ಕೆಟ್‌ನಲ್ಲಿ 'ಪುಷ್ಪ' ಮಾಡಿದ ಸದ್ದಿಗೆ ಅಲ್ಲಿನ ಸೂಪರ್‌ಸ್ಟಾರ್‌ಗಳೇ ದಂಗಾಗಿ ಹೋಗಿದ್ದರು. ಈ ಕಾರಣಕ್ಕೆ 'ಪುಷ್ಪ 2' ಸಿನಿಮಾವನ್ನು ಇನ್ನಷ್ಟು ದೊಡ್ಡದಾಗಿ ನಿರ್ಮಾಣ ಮಾಡುವುದಕ್ಕೆ ಇಡೀ ಚಿತ್ರತಂಡ ಮುಂದಾಗಿದೆ.
ಪುಷ್ಪ
2
ಮುನ್ನ
ಅಲ್ಲು
ಅರ್ಜುನ್
ಮತ್ತೊಂದು
ಸಿನಿಮಾ:
ಯಾವುದದು?
'ಪುಷ್ಪ 2' ಬಜೆಟ್ ಹೆಚ್ಚು ಮಾಡಿಕೊಳ್ಳುತ್ತಿದ್ದಂತೆ ಅಲ್ಲು ಅರ್ಜುನ್ ಸಿನಿಮಾದಿಂದ ಒಬ್ಬೊಬ್ಬರ ಪಾತ್ರಗಳಿಗೆ ಕತ್ತರಿ ಬೀಳುತ್ತಿದೆ. ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಇದೇ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಈಗ ಮಲಯಾಳಂ ನಟ ಫಹಾದ್ ಫಾಸಿಲ್ ಹೆಸರು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

'ಪುಷ್ಪ 2' ಸಿನಿಮಾದಿಂದ ಫಹಾದ್ ಫಾಸಿಲ್ ಔಟ್
'ಪುಷ್ಪ' ಸಿನಿಮಾ ನೋಡಿದವರಿಗೆ ಮಲಯಾಳಂ ನಟ ಫಹಾದ್ ಫಾಸಿಲ್ ಯಾರು ಅಂತ ಹೇಳಬೇಕಿಲ್ಲ. ಇನ್ನು ಮಲಯಾಳಂ ಸಿನಿಮಾ ಪ್ರಿಯರಿಗೂ ಫಹಾಸ್ ಫಾಸಿಲ್ ಚಿರಪರಿಚಿತ. 'ಪುಷ್ಪ' ಮೊದಲ ಪಾರ್ಟ್‌ನಲ್ಲಿ ಭನ್ವರ್ ಸಿಂಗ್ ಶೇಕಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ ಮಿಂಚಿದ್ದರು. ಈ ಕಾರಣಕ್ಕೆ ಫಹಾದ್ ಹಾಗೂ ಅಲ್ಲು ಅರ್ಜುನ್ ಫೈಟ್ ಅನ್ನು 'ಪುಷ್ಪ 2'ನಲ್ಲಿ ನೋಡಲು ಕಾದು ಕೂತಿದ್ದರು. ಟಾಲಿವುಡ್‌ನಲ್ಲಿ ಕಳೆದೆರೆಡು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಯ ಪ್ರಕಾರ ಫಹಾದ್ ಫಾಸಿಲ್ ಈ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಸಲ್ಮಾನ್
ಖಾನ್‌ಗೆ
'ಊ
ಅಂಟಾವಾ..'
ಸಾಂಗ್
ಇಷ್ಟವಂತೆ:
ಸಮಂತಾ
ರಿಯಾಕ್ಷನ್
ಏನು?

'ಪುಷ್ಪ 2' ಹೊರಬರಲು ಏನು ಕಾರಣ?
'ಪುಷ್ಪ 2' ಸಿನಿಮಾದಿಂದ ಫಹಾದ್ ಫಾಸಿಲ್ ಹೊರಬಂದಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸಿಕ್ಕಾ ಪಟ್ಟೆ ಸಂಚಲನ ಸೃಷ್ಟಿಸುತ್ತಿದೆ. ಇತ್ತೀಚೆಗೆ 'ಪುಷ್ಪ 2' ತಂಡ ದಕ್ಷಿಣ ಭಾರತದ ಮತ್ತೊಬ್ಬ ನಟ ವಿಜಯ್ ಸೇತುಪತಿಯನ್ನು ಪ್ರಮುಖ ಪಾತ್ರಕ್ಕಾಗಿ ಕರೆದುಕೊಂಡು ಬಂದಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಫಹಾದ್ ಫಾಸಿಲ್ 'ಪುಷ್ಪ 2' ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

'ಪುಷ್ಪ' ಸಿನಿಮಾದಲ್ಲಿ ನಟಿಸಬೇಕಿತ್ತು ವಿಜಯ್
ಅಲ್ಲು ಅರ್ಜುನ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ದಲ್ಲಿ ನಟಿಸುವಂತೆ ವಿಜಯ್ ಸೇತುಪತಿಗೆ ಆಹ್ವಾನ ನೀಡಲಾಗಿತ್ತು. ಫಹಾದ್ ಫಾಸಿಲ್ ಪಾತ್ರದಲ್ಲಿಯೇ ವಿಜಯ್ ಸೇತುಪತಿ ನಟಿಬೇಕಿತ್ತು. ಆದರೆ, ಅಂದು ವಿಜಯ್ ಈ ಪಾತ್ರವನ್ನು ತಿರಸ್ಕರಿಸಿದ್ದರು. ಈಗ ಮತ್ತೆ ಪ್ರಮುಖ ವಿಲನ್ ಆಗಿ 'ಪುಷ್ಪ 2' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇತ್ತೀಚೆಗೆ ತೆರೆಕಂಡ 'ವಿಕ್ರಂ' ಸಿನಿಮಾದಲ್ಲೂ ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆದ್ರೀಗ ಯಾಕೆ ದೂರ ಆಗುತ್ತಿದ್ದಾರೆ ಎಂಬುವುದು ಅಲ್ಲು ಫ್ಯಾನ್ಸ್ ತಲೆಕೆಡಿಸಿದೆ.
ಶ್ರೀವಲ್ಲಿ
ಸಾವಿಗೆ
'ಕೆಜಿಎಫ್
2'
ಕಾರಣ:
ರಶ್ಮಿಕಾ
ಪಾತ್ರದ
ಏನಿದು
ಸುದ್ದಿ?

ಡಾಲಿ ಪಾತ್ರದ ಕಥೆಯೇನು?
ಕೆಲವು ದಿನಗಳ ಹಿಂದ ನಿರ್ದೇಶಕ ಸುಕುಮಾರ್ ನಟಿ ರಶ್ಮಿಕಾ ಮಂದಣ್ಣ ಪಾತ್ರಕ್ಕೂ ಕತ್ತರಿ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಫಹಾದ್ ಫಾಸಿಲ್ 'ಪುಷ್ಪ 2'ದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಉಳಿದುಕೊಂಡಿರೋದು ಡಾಲಿ ಧನಂಜಯ್ ಪಾತ್ರ. ಇದಕ್ಕೂ ಸುಕುಮಾರ್ ಕತ್ತರಿ ಹಾಕುತ್ತಾರಾ? ಈ ನಿರ್ಧಾರ ಮಾಡುತ್ತಿರುವುದು ಯಾಕೆ? ಅನ್ನೋ ಕುತೂಹಲ ಕೆರಳಿಸಿರುವುದಂತೂ ನಿಜ. ಆದರೆ, ಈಗ ಹರಿದಾಡುತ್ತಿರುವ ಸುದ್ದಿ ಬಗ್ಗೆ 'ಪುಷ್ಪ 2' ತಂಡ ಇನ್ನೂ ಅಧಿಕೃತ ಮಾಹಿತಿಯನ್ನು ನೀಡಿಲ್ಲ.