Don't Miss!
- News
ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಲಾಲ್ ಬಾಗ್ ನಲ್ಲಿ ಸಿಎಂ ಬೊಮ್ಮಾಯಿ ಚಾಲನೆ
- Automobiles
ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದುಕೊಂಡ ಹೀರೋ ಮೋಟೋಕಾರ್ಪ್ ಅಧ್ಯಕ್ಷ
- Technology
ಜಿಯೋದಿಂದ ಮತ್ತೆ ಎರಡು ಹೊಸ ಪ್ಲ್ಯಾನ್!..ಗ್ರಾಹಕರಿಗೆ ಭಾರೀ ಅನುಕೂಲ!
- Sports
Kaviya Maran: SRH ತಂಡದ ಒಡತಿ ಕಾವ್ಯ ಮಾರನ್ಗೆ ಮದುವೆ ಪ್ರಸ್ತಾಪ ಮಾಡಿದ ದಕ್ಷಿಣ ಆಫ್ರಿಕಾ ಪ್ರೇಕ್ಷಕ
- Finance
Budget 2023 Expectations: ಬಜೆಟ್ನಲ್ಲಿ 5 ಪ್ರಮುಖ ಘೋಷಣೆಗಳ ನಿರೀಕ್ಷೆ, ಯಾವುವು?
- Lifestyle
ಸಕ್ಕರೆ ಹಾಕಿದ ಪಾನೀಯ ಕುಡಿದರೆ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುವುದೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರೀವಲ್ಲಿ ಸಾವಿಗೆ 'ಕೆಜಿಎಫ್ 2' ಕಾರಣ: ರಶ್ಮಿಕಾ ಪಾತ್ರದ ಏನಿದು ಸುದ್ದಿ?
RRR ಬಂದು ದಾಖಲೆ ಬರೀತು. KGF 2 ಬಂದು ಇತಿಹಾಸ ಸೃಷ್ಟಿಸಿತು. ಈಗ ದಕ್ಷಿಣ ಭಾರತದ ಮತ್ತೊಂದು ಸಿನಿಮಾ 'ವಿಕ್ರಂ' ಸದ್ದು ಮಾಡುತ್ತಿದೆ. ಇದರ ಹಿಂದೆನೇ '777 ಚಾರ್ಲಿ'ನೂ ಸೌಂಡು ಮಾಡುತ್ತಿದೆ. ಒಂದೊಂದೇ ದಕ್ಷಿಣ ಭಾರತದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಅದಕ್ಕೆ 'ಪುಷ್ಪ 2' ಕೂಡ ಸಿಕ್ಕಾಪಟ್ಟೆ ತಯಾರಿ ಮಾಡಿಕೊಳ್ಳುತ್ತಿದೆ.
ಐಕಾನ್ ಸ್ಟಾರ್ 'ಪುಷ್ಪ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗೆದ್ದಿದೆ. 'ಕೆಜಿಎಫ್ ಚಾಪ್ಟರ್ 1' ದಾಖಲೆಗಳನ್ನು ಉಡೀಸ್ ಮಾಡಿತ್ತು. ಸದಾ 'ಕೆಜಿಎಫ್' ಜೊತೆ ಹೋಲಿಕೆ ಮಾಡಿಕೊಳ್ಳುತ್ತಿದ್ದ ಈ ಸಿನಿಮಾ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. 'ಪುಷ್ಪ 2' ರಾಕಿ ಭಾಯ್ ಸಿನಿಮಾ 'ಕೆಜಿಎಫ್ 2' ದಾಖಲೆಯನ್ನು ಮುರಿಯಬೇಕಿದೆ. ಈ ಕಾರಣಕ್ಕೆ ಸುಕುಮಾರ್ ಕಥೆ, ಚಿತ್ರಕಥೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದಾರಂತೆ.
ಕರ್ಣನ
ಲೈಫ್ನಲ್ಲಿ
ಹುಡುಗಿಯರು
ಬಂದಂತೆ,
ನನ್ನ
ಲೈಫ್ನಲ್ಲೂ
ಒಬ್ಬಳು
ಬಂದು
ಹೋದಳು-
ರಕ್ಷಿತ್
ಶೆಟ್ಟಿ!
ಸದ್ಯ ಟಾಲಿವುಡ್‌ನಲ್ಲಿ 'ಪುಷ್ಪ 2' ಸಿನಿಮಾ ಬಗ್ಗೆನೇ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದ್ರಲ್ಲೊಂದು ರಶ್ಮಿಕಾ ಮಂದಣ್ಣ ನಟಿಸಿದ್ದ ಶ್ರೀವಲ್ಲಿ ಪಾತ್ರ. ಕೆಲವು ದಿನಗಳಿಂದ 'ಪುಷ್ಪ 2'ನಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ ಬೀಳುತ್ತಿದೆ ಎಂದು ಸುದ್ದಿಯಾಗಿತ್ತು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ಶ್ರೀವಲ್ಲಿ ಪಾತ್ರದ ಬಗ್ಗೆ ಏನಿದು ಸುದ್ದಿ?
'ಪುಷ್ಪ'ದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ನಷ್ಟೇ ರಶ್ಮಿಕಾ ಮಂದಣ್ಣ ಪಾತ್ರ ಕೂಡ ಅಷ್ಟೇ ಸದ್ದು ಮಾಡಿತ್ತು. ಶ್ರೀವಲ್ಲಿ ಅವತಾರದಲ್ಲಿ ರಶ್ಮಿಕಾ ಫುಲ್ ಮಿಂಚಿದ್ದರು. ರಶ್ಮಿಕಾ ಸ್ಟೆಪ್ಪು, ಡಿ ಗ್ಲಾಮರ್ ಲುಕ್ ಎಲ್ಲವೂ ಇಷ್ಟ ಆಗಿತ್ತು. ಅದರಲ್ಲೂ ಶ್ರೀವಲ್ಲಿ ಸ್ಟೆಪ್ಸ್ ಅಂತೂ ಟ್ರೆಂಡಿಂಗ್‌ನಲ್ಲಿತ್ತು. ಆದರೆ, ಇದೇ ಪಾತ್ರ 'ಪುಷ್ಪ 2'ನಲ್ಲಿ ಹೆಚ್ಚು ಕಾಣಿಸಿಕೊಳ್ಳಲ್ವಂತೆ. ಶ್ರೀವಲ್ಲಿ ಪಾತ್ರಕ್ಕೆ ಸುಕುಮಾರ್ ಕತ್ರಿ ಹಾಕುತ್ತಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲಿಂದ ಮತ್ತೊಂದು ಸುದ್ದಿ ಓಡಾಡುತ್ತಿದೆ.
ಸ್ಟಾರ್
ಆದ
ಮೇಲೂ
ಸ್ನೇಹಿತೆಯರನ್ನು
ಮರೆಯದ
ರಶ್ಮಿಕಾ:
ಗೆಳತಿ
ಮದುವೆಯಲ್ಲಿ
ಕಂಡಿದ್ದು
ಹೀಗೆ!

ಶ್ರೀವಲ್ಲಿ ಪಾತ್ರಕ್ಕೇನು ಮಾಡ್ತಾರೆ ಸುಕುಮಾರ್?
'ಪುಷ್ಪ 2' ಸಿನಿಮಾಗಾಗಿ ನಿರ್ದೇಶಕ ಸುಕುಮಾರ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರಂತೆ. ಕಥೆ-ಚಿತ್ರಕತೆ ಎಲ್ಲವನ್ನೂ ಮತ್ತಷ್ಟು ಟೈಟ್ ಮಾಡುತ್ತಿದ್ದಾರಂತೆ. ಅದಕ್ಕೆ ಕೆಲವು ಪಾತ್ರಗಳಿಗೆ ಕತ್ರಿ ಹಾಕಿ ಹೊಸ ಪಾತ್ರವನ್ನು ಈ ಸಿನಿಮಾಗಾಗಿ ಕರೆದುಕೊಂಡು ಬರುತ್ತಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಅಷ್ಟೊಂದು ಟ್ರೆಂಡಿಂಗ್‌ನಲ್ಲಿದ್ದ ಪಾತ್ರವನ್ನು ಏನು ಮಾಡುತ್ತಾರೆ ಅನ್ನುವ ಪ್ರಶ್ನೆಗೆ ಟಾಲಿವುಡ್ ಬಳಿ ಉತ್ತರವಿದೆ. ಶ್ರೀವಲ್ಲಿ ಪಾತ್ರವನ್ನು ಸುಕುಮಾರ್ ಸಾಯಿಸಲಿದ್ದಾರಂತೆ. ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಇದೆಷ್ಟು ನಿಜವೋ? ಸುಳ್ಳೋ? ಗೊತ್ತಿಲ್ಲ.

ಶ್ರೀವಲ್ಲಿ ಪಾತ್ರ ಸಾಯಿಸೋದೇಕೆ?
ಸಿನಿಮಾದಲ್ಲಿ ಹೀರೊಗೆ ದೊಡ್ಡ ಅನುಕಂಪ ಸೃಷ್ಟಿ ಮಾಡಲು ಶ್ರೀವಲ್ಲಿ ಪಾತ್ರವನ್ನು ಕೊನೆ ಮಾಡುತ್ತಾರೆ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಶ್ರೀವಲ್ಲಿಯನ್ನು ಖಳನಾಯಕರು ರಿವೇಂಜ್‌ಗಾಗಿ ಸಾಯಿಸುತ್ತಾರೆ. ಇದರಿಂದ ಹೀರೊ ಮತ್ತಷ್ಟು ವ್ಯಾಘ್ರನಾಗಿ ಸಿನಿಮಾದಲ್ಲಿ ಮಾಸ್ ಎಲಿಮೆಂಟ್ಸ್ ಅನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಗೆಸ್ ಮಾಡಿದ್ದಾರೆ. ಒಂದ್ವೇಳೆ ಸುಕುಮಾರ್ ಕೂಡ ಹೀಗೆ ಯೋಚನೆ ಮಾಡಿದ್ದರೆ, ಮುಂದೇನಾಗುತ್ತೆ? ಅನ್ನೋದು ನಿಜಕ್ಕೂ ಕುತೂಹಲ ಮೂಡಿಸುತ್ತೆ.
'777
ಚಾರ್ಲಿ'
ಸಿನಿಮಾ
ನೋಡಿ
ರಶ್ಮಿಕಾ
ಮಂದಣ್ಣರ
ಟ್ರೋಲ್
ಮಾಡುತ್ತಿರುವ
ಅಭಿಮಾನಿಗಳು

'ಕೆಜಿಎಫ್ 2' ಫಾಲೋ ಮಾಡುತ್ತಾ 'ಪುಷ್ಪ 2'?
ಟಾಲಿವುಡ್‌ನಲ್ಲಿ ಹೇಳಿ ಬರುತ್ತಿರೋ ಮತ್ತೊಂದು ಸುದ್ದಿ ಏನಪ್ಪಾ ಅಂದ್ರೆ, 'ಪುಷ್ಪ 2' ಕೆಜಿಎಫ್ ಫಾರ್ಮೂಲವನ್ನು ಅನುಸರಿಸುತ್ತಿದೆ ಎನ್ನಲಾಗಿದೆ. 'ಕೆಜಿಎಫ್ 2' ಸಿನಿಮಾದಲ್ಲೂ ನಾಯಕಿ ಸಾಯುತ್ತಾಳೆ. ಇದರಿಂದ ನಾಯಕನ ಮೇಲೆ ಮತ್ತಷ್ಟು ಅನುಕಂಪ ಬರಲು ಆರಂಭಿಸುತ್ತೆ. ಇದೇ ಥಿಯೇರಿಯನ್ನು 'ಪುಷ್ಪ 2' ಸಿನಿಮಾದಲ್ಲೂ ಅಳವಡಿಸಿಕೊಳ್ಳಲಿದ್ದಾರೆ ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.