For Quick Alerts
  ALLOW NOTIFICATIONS  
  For Daily Alerts

  ಸೋನಮ್ ಸ್ವಾಗತಕ್ಕೆ ಮಹೇಶ್ ಸುಖಧರೆ ಸಜ್ಜು!

  By Sriram
  |
  <ul id="pagination-digg"><li class="next"><a href="/gossips/darshan-sonam-kapoor-acts-kannada-movie-bhairava-068089.html">Next »</a></li></ul>

  ಬಾಲಿವುಡ್ ನಾಯಕ ನಟ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಕನ್ನಡಕ್ಕೆ ಬರುತ್ತಾರೆ ಎಂಬ ಮಾತು ಬಹಳ ಕಾಲದಿಂದ ಚಾಲ್ತಿಯಲ್ಲಿತ್ತು. ಆದರೆ ಯಾರ ನಿರ್ದೇಶನದ ಚಿತ್ರ ಎಂಬ ಪಕ್ಕಾ ಮಾಹಿತಿ ಬಹಿರಂಗವಾಗಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಭೈರವ' ಚಿತ್ರದಲ್ಲಿ ನಟಿಸಲು ಬಾಲಿವುಡ್ ನಿಂದ ಸೋನಮ್ ಕಪೂರ್ ಬರುತ್ತಾರೆ ಎಂದು ನಿರ್ದೇಶಕ ಮಹೇಶ್ ಸುಖಧರೆ ಹೇಳಿದ್ದರು.

  ನಾಲ್ಕಾರು ತಿಂಗಳುಗಳ ಹಿಂದೆ ಆದ ಈ ಸುದ್ದಿಗೆ ಯಾವುದೇ ರೆಕ್ಕೆ-ಪುಕ್ಕ ಇರಲಿಲ್ಲವಾಗಿ ಅದು ಸ್ಯಾಂಡಲ್ ವುಡ್ ತುಂಬಾ ಹಾರಾಡುವ ಬದಲು ಎಲ್ಲೋ ಮರೆಯಾಗಿತ್ತು. ಆದರೆ ಈಗ ಸ್ವತಃ ಅದೇ ನಿರ್ದೇಶಕ ಮಹೇಶ್ ಸುಖಧರೆ, ಈ ಮಾತನ್ನು ದೃಢೀಕರಿಸಿದ್ದಾರೆ. ಸದ್ಯದಲ್ಲೇ ಸೋನಮ್ ಕರೆತರುವ ವಗ್ಗೆ ಖಾತ್ರಿಪಡಿಸಿದ್ದಾರೆ. ದರ್ಶನ್ ಅವರಿಗೆ ಸೋನಮ್ ನಾಯಕಿ ಎಂದಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ 'ಭೈರವ' ಎಂದು ಹೆಸರಿಡಲಾಗಿದ್ದರೂ ಅದು ಅಂತಿಮವಾಗಿಲ್ಲ ಎಂದಿದ್ದಾರೆ.

  ಕಳೆದ ಏಪ್ರಿಲ್ ನಲ್ಲಿ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಅವರನ್ನು ಕಂಡು ಮಾತನಾಡಿಸಿ ಬಂದಿದ್ದ ಮಹೇಶ್ ಸುಖಧರೆ ಅವರಿಗೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ, ಮಹೇಶ್ ಸುಖಧರೆ ಹೇಳಿದ ಕಥೆಯನ್ನು ಇಷ್ಟಪಟ್ಟಿದ್ದರು ಸೋನಮ್. ಅಷ್ಟೇ ಅಲ್ಲ, ನಿರೂಪಣೆ ಶೈಲಿಯೂ ಅವರಿಗೆ ಇಷ್ಟವಾಗಿತ್ತು. ಆದರೆ ಆಗ ಅವರು ಸಾಕಷ್ಟು ಬಿಜಿಯಾಗಿದ್ದರು, ಇತ್ತ ದರ್ಶನ್ ಕೂಡ ಬಿಜಿಯಾಗಿದ್ದರು.

  ಈಗಲೂ ಅಷ್ಟೇ, ಧನುಷ್ ನಾಯಕತ್ವದ ತಮಿಳು ಚಿತ್ರವೊಂದರ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೋನಮ್, ಆನಂತರವಷ್ಟೇ ಕನ್ನಡದ ಚಿತ್ರದಲ್ಲಿ ನಟಿಸಲು ಸಾಧ್ಯವಾಗಬಹುದು. ಜೊತೆಗೆ ದರ್ಶನ್ ಕೂಡ ಇತ್ತೀಚಿಗಷ್ಟೇ 'ಸಂಗೊಳ್ಳಿ ರಾಯಣ್ಣ' ಚಿತ್ರ ಮಗಿಸಿ 'ಬುಲ್ ಬುಲ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಇಬ್ಬರೂ ಈಗಿರುವ ಕಮಿಟ್ ಮೆಂಟ್ ಮುಗಿಸಿ ಮಹೇಶ್ ಸುಖಧರೆ ಚಿತ್ರಕ್ಕೆ ಜೋಡಿಯಾಗಬಹುದು.

  ದರ್ಶನ್ ಅಭಿನಯಿಸಲಿರುವ ತೆಲುಗು 'ಬೃಂದಾವನಂ' ರಿಮೇಕ್ ನಿರ್ದೇಶನದ ಹೊಣೆಯೂ ಈಗ ಮಹೇಶ್ ಸುಖಧರೆ ಅವರದೇ. ಈ ಮೊದಲು ಇದನ್ನು ಕೆ ಮಾದೇಶ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ ಅದೀಗ ಮಹೇಶ್ ಹೆಗಲೇರಿದೆ. ಅಂದರೆ, 'ಭೈರವ' (ಶೀರ್ಷಿಕೆ ಅಂತಿಮವಾಗಿಲ್ಲ!) ಹಾಗೂ 'ಬೃಂದಾವನಂ' ರಿಮೇಕ್ ಎರಡನ್ನೂ ಇವರೇ ನಿರ್ಧಶಿಬೇಕಾಗಿದೆ. ಸದ್ಯದಲ್ಲೇ ಸೋನಂ ಕಪೂರ್ ನಾಯಕಿಯನ್ನಾಗಿಸಿ ಭೈರವ ನಿರ್ದೇಶಿಸಲಿದ್ದೇನೆ ಎಂಬುದು ಸುಖಧರೆ ಮಾತು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/gossips/darshan-sonam-kapoor-acts-kannada-movie-bhairava-068089.html">Next »</a></li></ul>
  English summary
  Bollywood Actress, Actor Anil Kapoor daughter Sonam Kapoor acts in Challenging Star Darshan Upcoming movie 'Bhairava'. This movie to direct by Mahesh Sukhadhare as he told himself. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X