»   » ರಾಜಮೌಳಿಯ ಬಾಹುಬಲಿಗೆ ಅಣ್ಣಾವ್ರ ಮಯೂರ ಸ್ಫೂರ್ತಿ?

ರಾಜಮೌಳಿಯ ಬಾಹುಬಲಿಗೆ ಅಣ್ಣಾವ್ರ ಮಯೂರ ಸ್ಫೂರ್ತಿ?

Posted By:
Subscribe to Filmibeat Kannada

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಬಹುಭಾಷಾ 'ಬಾಹುಬಲಿ' ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲು ಕ್ಷಣಗಣನೆ ಆರಂಭವಾಗಿದೆ. ಜುಲೈ 10ರಂದು ಚಿತ್ರ ತೆರೆ ಕಾಣಲಿದೆ.

ಈ ನಡುವೆ ಬಾಹುಬಲಿ ಚಿತ್ರ ಕನ್ನಡದ ಪೌರಾಣಿಕ, ಮೇರುನಟ ಡಾ.ರಾಜಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ 'ಮಯೂರ' ಚಿತ್ರದಿಂದ ಸ್ಫೂರ್ತಿ ಪಡೆದ ಚಿತ್ರ ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ಭಾರೀ ಸುದ್ದಿ, ಚರ್ಚೆಯಾಗುತ್ತಿದೆ.

ಒಂದು ವೇಳೆ ಬಾಹುಬಲಿ ಚಿತ್ರ ಮಯೂರ ಚಿತ್ರದ ಕಥೆಯನ್ನು ಆಧರಿಸಿ ತೆರೆಗೆ ತರಲಾಗಿದ್ದರೆ, ಕರ್ನಾಟಕದ ರಾಯಚೂರು ಮೂಲದ ರಾಜಮೌಳಿ ಅದನ್ನು ನಿಯತ್ತಾಗಿ ಒಪ್ಪಿಕೊಳ್ಳಬೇಕಾಗಿತ್ತು ಎನ್ನುವ ಮಾತೂ ಕೇಳಿ ಬರುತ್ತಿದೆ. (ಬಾಹುಬಲಿ ವಿರುದ್ಧ ರಂಗಿತರಂಗ ತಂಡದಿಂದ ದೂರು)

1975ರಲ್ಲಿ ಬಿಡುಗಡೆಯಾದ ಮಯೂರ ಚಿತ್ರದಲ್ಲಿ ರಾಜಕುಮಾರ್, ವಜ್ರಮುನಿ, ಶ್ರೀನಾಥ್, ಮಂಜುಳ, ಕೆ ಎಸ್ ಅಶ್ವಥ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು. ದೇವಡು ನರಸಿಂಹ ಶಾಸ್ತ್ರಿಯವರ ಕದಂಬ ರಾಜಸಂಸ್ಥಾನದ ಕಥೆಯನ್ನಾಧರಿಸಿ ಮಯೂರ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದರು.

ಮಯೂರ ಮತ್ತು ಬಾಹುಬಲಿ

ಬಾಹುಬಲಿ ಚಿತ್ರದ ಕಥೆ ಯಥಾವತ್ತಾಗಿ ಮಯೂರ ಚಿತ್ರದ ಕಥೆಯನ್ನು ಆಧರಿಸಿದ್ದಾಗಿದೆ ಎನ್ನುವ ಚರ್ಚೆ ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ.

ಪ್ರಭಾಸ್

ಬಾಹುಬಲಿ ಚಿತ್ರ ರಾಜಮನೆತನಕ್ಕೆ ಸಂಬಂಧಿಸಿದ್ದು ಮತ್ತು ಇನ್ನೊಂದು ರಾಜ ಸಂಸ್ಥಾನವನ್ನು ಸೋಲಿಸಿ ಮತ್ತೆ ಸಾಮ್ರಾಜ್ಯ ಕಟ್ಟುವ ಕಥೆಯೆಂದು ಈಗಾಗಲೇ ಲೀಕ್ ಆಗಿದೆ. ಮಯೂರ ಚಿತ್ರದಲ್ಲಿನ ರಾಜ್ ಪಾತ್ರವನ್ನು ಬಾಹುಬಲಿಯಲ್ಲಿ ಪ್ರಭಾಸ್ ಮಾಡಿದ್ದಾರೆಂದು ಸುದ್ದಿಯೋ ಸುದ್ದಿ...

ಬಾಹುಬಲಿಯ ಬಗ್ಗೆ

ಮಹಿಷ್ಮತಿ ಎನ್ನುವ ಸಾಮ್ರಾಜ್ಯದ ರಾಜ ಅಮರೇಂದ್ರ ಬಾಹುಬಲಿ ಮತ್ತು ಶಿವುಡು ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಅನುಷ್ಕಾ ಶೆಟ್ಟಿ ಈತನ ಪತ್ನಿಯಾಗಿ, ರಾಣಾ ದಗ್ಗುಬಾಟಿ ಇನ್ನೊಂದು ರಾಜಸಂಸ್ಥಾನದ ಅರಸನಾಗಿ ನಟಿಸಿದ್ದಾರೆ.

ವಜ್ರಮುನಿ

ಮಯೂರ ಚಿತ್ರದಲ್ಲಿ ವಜ್ರಮುನಿ (ವಿಶ್ವಗೋಪ)ಮಾಡಿದ್ದ ಪಾತ್ರ ಮತ್ತು ಬಾಹುಬಲಿ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಮಾಡಿದ ಪಾತ್ರ ಒಂದಕ್ಕೊಂದು ಹೋಲುತ್ತದೆ ಎಂದು ಸಾಮಾಜಿಕ ತಾಣದಲ್ಲಿನ ಚರ್ಚೆ ನಡೆಯುತ್ತಿದೆ.

ಕುತೂಹಲಕ್ಕೆ ತೆರಬೀಳಲಿದೆ

ಬಾಹುಬಲಿ, ಮಯೂರ ಚಿತ್ರದಿಂದ ಸ್ಪೂರ್ಥಿ ಪಡೆದ ಚಿತ್ರವಾ ಅಥವಾ ಅದೆಲ್ಲಾ ಗಾಳಿಸುದ್ದಿಯೋ ಎನ್ನುವ ಎಲ್ಲಾ ಕುತೂಹಲಕ್ಕೆ ಜುಲೈ ಹತ್ತರ ಫಸ್ಟ್ ಡೇ, ಫಸ್ಟ್ ಶೋನಲ್ಲಿ ತೆರೆಬೀಳಲಿದೆ.

English summary
SS Rajamouli's most awaited movie Baahubali is the rip-off of Dr Rajkumar's earlier classic movie Mayura. This news now reached the limelight, after social media went forward to reveal the story-line of Baahubali which is almost similar to Mayura(1975).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada