For Quick Alerts
  ALLOW NOTIFICATIONS  
  For Daily Alerts

  ಎರಡೂವರೆ ತಿಂಗಳು ಮುನ್ನವೇ ದಳಪತಿ ವಿಜಯ್ 'ವಾರಸುಡು' ಭರ್ಜರಿ ವ್ಯಾಪಾರ?

  |

  ಟಾಲಿವುಡ್‌ನ ಸ್ಟಾರ್ ನಿರ್ಮಾಪಕರಲ್ಲಿ ದಿಲ್ ರಾಜು ಕೂಡ ಒಬ್ಬರು. ದಿಲ್ ರಾಜು ನಿರ್ಮಿಸಿದ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ನಿರ್ಮಾಪಕರಾಗಿ ಹಾಗೂ ವಿತರಕರಾಗಿ ಗೆದ್ದಿರೋ ದಿಲ್ ರಾಜು ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದುವೇ 'ವಾರಸುಡು'

  ದಳಪತಿ ವಿಜಯ್ ನಟಿಸುತ್ತಿರುವ ಈ ಸಿನಿಮಾವನ್ನು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ತೆಲುಗಿನಲ್ಲಿ 'ವಾರಸುಡು' ಅನ್ನೋ ಟೈಟಲ್‌ನಲ್ಲಿ ರಿಲೀಸ್ ಆದರೆ, ತಮಿಳಿನ 'ವಾರಿಸು' ಶೀರ್ಷಿಕೆಯನ್ನಿಟ್ಟು ಚಿತ್ರೀಕರಣ ಮಾಡಲಾಗುತ್ತಿದೆ.

  ಸಂಕ್ರಾಂತಿಗೆ ದಳಪತಿ ಅಬ್ಬರ: ದಾಖಲೆ ಬೆಲೆಗೆ 'ವಾರಿಸು' ಡಿಜಿಟಲ್ ರೈಟ್ಸ್ ಸೇಲ್?ಸಂಕ್ರಾಂತಿಗೆ ದಳಪತಿ ಅಬ್ಬರ: ದಾಖಲೆ ಬೆಲೆಗೆ 'ವಾರಿಸು' ಡಿಜಿಟಲ್ ರೈಟ್ಸ್ ಸೇಲ್?

  ತೆಲುಗಿನ ಸ್ಟಾರ್ ಡೈರೆಕ್ಟರ್ ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿರೋ 'ವಾರಸುಡು' ಸಿನಿಮಾ ಶೂಟಿಂಗ್ ಬಹುತೇಕ ಮುಗಿಯುವ ಹಂತದಲ್ಲಿದ್ದು, 2023 ಜನವರಿಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ಈಗಿನಿಂದಲೇ ಸಿನಿಮಾ ವ್ಯಾಪಾರಕ್ಕೆ ದಿಲ್ ರಾಜು ಕೂತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

  ಜನವರಿ 12, 2023ರಂದು 'ವಾರಸುಡು' ಸಿನಿಮಾ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿದೆ. ಅಮೆಜಾನ್ ಪ್ರೈಂ ಜೊತೆ ಓಟಿಟಿ ರೈಟ್ಸ್ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, 60 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನಲಾಗಿದೆ.

  'ವಾರಿಸು' Vs 'ತುನಿವು': ವಿಜಯ್ ಹಾಗೂ ಅಜಿತ್ ಫ್ಯಾನ್ಸ್ ಮಧ್ಯೆ ಮಧುರೆಯಲ್ಲಿ ಪೋಸ್ಟರ್ ವಾರ್!'ವಾರಿಸು' Vs 'ತುನಿವು': ವಿಜಯ್ ಹಾಗೂ ಅಜಿತ್ ಫ್ಯಾನ್ಸ್ ಮಧ್ಯೆ ಮಧುರೆಯಲ್ಲಿ ಪೋಸ್ಟರ್ ವಾರ್!

  ಹಾಗೇ ಸ್ಯಾಟಲೈಟ್ ರೈಟ್ಸ್ ಸನ್ ಟಿವಿ ಜೊತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದ್ದು, 50 ಕೋಟಿ ರೂಪಾಯಿ ಸೇಲ್ ಆಗಿದೆ ಎನ್ನಲಾಗಿದೆ. ಹಾಗೇ 'ವಾರಸುಡು' ಹಿಂದಿ ಹಾಗೂ ಓವರ್ ಸೀಸ್ ಹಕ್ಕುಗಳು ಕೂಡ ಸುಮಾರು 70 ಕೋಟಿ ರೂಪಾಯಿ ವೆಚ್ಚಕ್ಕೆ ಸೇಲ್ ಆಗಿದೆ ಎನ್ನಲಾಗಿದೆ.

  ಇಷ್ಟಕ್ಕೆ ಬ್ಯುಸಿನೆಸ್ ಮುಗಿದಿಲ್ಲ. ದಿಲ್ ರಾಜು ತಮ್ಮ ಸಿನಿಮಾದ ಆಡಿಯೋ ಹಕ್ಕುಗಳನ್ನು ಸುಮಾರು 10 ಕೋಟಿ ರೂಪಾಯಿಗೆ ವ್ಯವಹಾರ ಕುದುರಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಬೇರೆ ಭಾಷೆಯ ಥಿಯೇಟರ್ ಹಕ್ಕುಗಳನ್ನು ಸುಮಾರು 200 ಕೋಟಿ ರೂಪಾಯಿ ವರೆಗೂ ಮಾರಾಟ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇ 'ವಾರಸುಡು' ಸಿನಿಮಾ ಸುಮಾರು 400 ಕೋಟಿ ರೂ.ಗೆ ವ್ಯಾಪಾರ ಆಗುವ ಸಾಧ್ಯತೆಯಿದೆ.

  'ಭಿಕ್ಷುಕ ವಿಜಯ್' ಸ್ಟಾರ್ ನಟನನ್ನು ಹೀಗೆನ್ನುವುದೇ ನೆಟ್ಟಿಗರು: ಕಾರಣವೇನು?'ಭಿಕ್ಷುಕ ವಿಜಯ್' ಸ್ಟಾರ್ ನಟನನ್ನು ಹೀಗೆನ್ನುವುದೇ ನೆಟ್ಟಿಗರು: ಕಾರಣವೇನು?

  ಟಾಲಿವುಡ್ ಮೂಲಕ ನಿರ್ಮಾಪಕ ದಿಲ್ ರಾಜುಗೆ ಅಂದಾಜು ಸುಮಾರು 100 ಕೋಟಿ ಲಾಭ ಆಗುವ ಸಾಧ್ಯತೆಯಿದೆ. ಅಲ್ಲದೆ ದಿಲ್ ರಾಜು ವೃತ್ತಿ ಬದುಕಿಗೆ ಈ ಸಿನಿಮಾ ದೊಡ್ಡ ಲಾಭ ತಂದುಕೊಡಲಿದೆ ಎಂದು ಅಂದಾಜು ಹಾಕಲಾಗಿದೆ.

  English summary
  Thalapathy Vijay Vamsi Dil Raju Movie Varasudu Pre-Release Business, Know More.
  Wednesday, October 26, 2022, 22:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X