For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಖ್ಯಾತ ನಟನೊಂದಿಗೆ ಪುರಿ ಜಗನ್ನಾಥ್ ಮುಂದಿನ ಸಿನಿಮಾ?

  By Suneel
  |

  ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹದಿನಾಲ್ಕು ವರ್ಷಗಳ ನಂತರ 'ರೋಗ್' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೇ ಈ ಚಿತ್ರ ಮಾರ್ಚ್ 31 ರಂದು ಬಿಡುಗಡೆ ಆಗಲಿದೆ.['ರೋಗ್' ಚಿತ್ರದ ಮೂಲಕ ಕನ್ನಡಕ್ಕೆ ಪರಭಾಷಾ ನಟಿಯರ ಪದಾರ್ಪಣೆ!]

  ಸ್ಯಾಂಡಲ್ ವುಡ್ ಗೆ ಪುನೀತ್ ರಾಜ್ ಕುಮಾರ್ ಅವರನ್ನು 'ಅಪ್ಪು' ಚಿತ್ರದ ಮೂಲಕ ಪರಿಚಯಿಸಿದ್ದ ಪುರಿ ಜಗನ್ನಾಥ್, ಈಗ 'ರೋಗ್' ಚಿತ್ರದ ಮೂಲಕ ಇಶಾನ್ ಎಂಬ ಯುವ ಪ್ರತಿಭೆಯನ್ನ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಒಮ್ಮೆಯೇ ಪರಿಚಯಿಸುತ್ತಿದ್ದಾರೆ. ಹೀಗಿರುವಾಗಲೇ ಪುರಿ ಜಗನ್ನಾಥ್ ತಮ್ಮ ಮುಂದಿನ ಸಿನಿಮಾವನ್ನು ಕನ್ನಡದ ಖ್ಯಾತ ನಟರೊಬ್ಬರಿಗೆ ನಿರ್ದೇಶ‍ನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

  ಕನ್ನಡದ ಖ್ಯಾತ ನಟನಿಗೆ ಪುರಿ ಜಗನ್ನಾಥ್ ನಿರ್ದೇಶನ

  ಕನ್ನಡದ ಖ್ಯಾತ ನಟನಿಗೆ ಪುರಿ ಜಗನ್ನಾಥ್ ನಿರ್ದೇಶನ

  ಹದಿನಾಲ್ಕು ವರ್ಷಗಳ ಹಿಂದೆ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ 'ಅಪ್ಪು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪುರಿ ಜಗನ್ನಾಥ್, ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಯುವರಾಜ' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಮತ್ತೊಮ್ಮೆ ಕನ್ನಡದ ಸ್ಟಾರ್ ನಟರೊಬ್ಬರಿಗೆ ಆಕ್ಷನ್ ಕಟ್ ಹೇಳಲು ನಿರ್ಧರಿಸಿರುವ ಪುರಿ ಜಗನ್ನಾಥ್ ಆಯ್ಕೆ ಮಾಡಿರುವುದು ಬೇರೆ ಯಾರನ್ನು ಅಲ್ಲಾ.. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು.[14 ವರ್ಷಗಳ ನಂತರ ಪೂರಿ ಜಗನ್ನಾಥ್ ಕನ್ನಡದಲ್ಲಿ ನಿರ್ದೇಶನ]

  ಕಥೆ ರೆಡಿಯಾಗಿದೆಯಂತೆ

  ಕಥೆ ರೆಡಿಯಾಗಿದೆಯಂತೆ

  ಪುರಿ ಜಗನ್ನಾಥ್ ನಿರ್ದೇಶನ ಮಾಡಲಿರುವ ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕನ ಪಾತ್ರ ನಿರ್ವಹಿಸಲಿದ್ದು, ಈ ಚಿತ್ರಕ್ಕೆ ನಿರ್ದೇಶಕರು ಈಗಾಗಲೇ ಕಥೆ ಸಹ ರೆಡಿಮಾಡಿಕೊಂಡಿದ್ದಾರಂತೆ.

  ಸಿನಿಮಾ ಆರಂಭ ಯಾವಾಗ?

  ಸಿನಿಮಾ ಆರಂಭ ಯಾವಾಗ?

  ಪ್ರಸ್ತುತ ಪುರಿ ಜಗನ್ನಾಥ್ ನಂದಮೂರಿ ಬಾಲಕೃಷ್ಣ ಅವರ 101 ನೇ ಸಿನಿಮಾ 'ನೆನೊರಕಂ' ಚಿತ್ರದ ಮೇಕಿಂಗ್ ನಲ್ಲಿದ್ದು, ಈ ಚಿತ್ರ ಮುಕ್ತಾಯಗೊಂಡ ನಂತರ ಶಿವರಾಜ್ ಕುಮಾರ್ ಸಿನಿಮಾ ಆರಂಭಿಸಲಿದ್ದಾರಂತೆ.

  ಚಿತ್ರದ ಟೈಟಲ್ ಏನು?

  ಚಿತ್ರದ ಟೈಟಲ್ ಏನು?

  ಪೂರಿ ಜಗನ್ನಾಥ್, ಶಿವಣ್ಣ ಅವರಿಗೆ ನಿರ್ದೇಶನ ಮಾಡಲಿರುವ ಚಿತ್ರದ ಟೈಟಲ್ ಮತ್ತು ನಿರ್ಮಾಪಕರು ಯಾರು ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

  ಪೂರಿ ಜಗನ್ನಾಥ್ 'ರೋಗ್' ಈ ವಾರ ತೆರೆಗೆ

  ಪೂರಿ ಜಗನ್ನಾಥ್ 'ರೋಗ್' ಈ ವಾರ ತೆರೆಗೆ

  ಪೂರಿ ಜಗನ್ನಾಥ್ ನಿರ್ದೇಶನ ಮಾಡಿರುವ, ಯುವ ಪ್ರತಿಭೆ ಇಶಾನ್ ಅಭಿನಯದ 'ರೋಗ್' ಚಿತ್ರ ಇದೇ ಮಾರ್ಚ್ 31 ರಂದು ಕನ್ನಡ ಮತ್ತು ತೆಲುಗು ವರ್ಸನ್ ಗಳೆರಡರಲ್ಲೂ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಇಶಾನ್ ಗೆ ಮನ್ನಾರ ಚೋಪ್ರಾ ಮತ್ತು ಏಂಜೆಲಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅಲ್ಲದೇ ಇದೊಂದು ಖಡಕ್ ಹುಡುಗನ ಖಾದಲ್ ಚಿತ್ರಕಥೆಯ ಸಿನಿಮಾ.

  English summary
  The director Puri Jagannadh had came after 14 years to Kannnada Film industry to direct 'Rogue' Film. Now another one news circulating over online that Tollywood Director Puri Jagannath will direct his next movie with Actor Shiva Rajkumar in sandalwood?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X