twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಪರವಾದಿಗಳಿಂದ ಉಪೇಂದ್ರರಿಗೆ ಟ್ವೀಟ್ ಪಾಠ

    By ಜೇಮ್ಸ್ ಮಾರ್ಟಿನ್
    |

    "ಕರ್ನಾಟಕದ ಬಹುಪಾಲು ಕನ್ನಡಿಗರಿಗೆ ತೆಲುಗು ಬರುತ್ತೆ, ಹಾಗಾಗಿ ಅಲ್ಲಿ ಇಲ್ಲಿ ಎಲ್ಲೂ ಡಬ್ಬಿಂಗ್ ಅವಶ್ಯಕತೆ ಇಲ್ಲ" ಎಂದು ರಿಯಲ್ ಸ್ಟಾರ್ ಉಪೇಂದ್ರ ಅವರು ಸಂದರ್ಶನವೊಂದರಲ್ಲಿ ಹೇಳಿರುವುದು ಹಲವರಿಗೆ ಕಿರಿಕಿರಿ ಉಂಟು ಮಾಡಿದೆ. 1999ರ ಉಪೇಂದ್ರ ಚಿತ್ರದ ನಂತರ ಮತ್ತೊಮ್ಮೆ ಅದೇ ಕನ್ ಫ್ಯೂಷನ್ ಫಾರ್ಮುಲಾವಿರುವ ಚಿತ್ರವನ್ನು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಉಪ್ಪಿ ತೆರೆಗೆ ತಂದು ಗೆದ್ದಿದ್ದಾರೆ.

    ಕರ್ನಾಟಕ ಹಾಗೂ ವಿದೇಶಗಳಲ್ಲಿ ಉಪ್ಪಿ2 ಸಕತ್ ಗಳಿಕೆ ಮಾಡಿರುವ ಸುದ್ದಿ ಬಂದಿದೆ. 50 ಕೋಟಿ ರು ತನಕ ಲೆಕ್ಕಾಚಾರ ತಲುಪಿದ್ದು ಕಂಡು ಸ್ವತಃ ಉಪೇಂದ್ರ ಅವರೇ ಗಾಬರಿಯಾಗಿ 13 ಕೋಟಿ ರು ಗಳಿಕೆಯಾಗಿದೆ ಅಷ್ಟೇ ಎಂದು ರಿಯಲ್ ಅಂಕಿ ಅಂಶವನ್ನು ಪತ್ರಿಕೆಯೊಂದರ ಜೊತೆ ಹಂಚಿಕೊಂಡಿದ್ದರು. ಇಂಥ ರಿಯಲ್ ಸ್ಟಾರ್ ತೆಲುಗು ಆವೃತ್ತಿಯ ಉಪ್ಪಿ 2 ಪ್ರಚಾರದ ಸಂದರ್ಭದಲ್ಲಿ ನೀಡಿದ ಹೇಳಿಕೆಗಳು ಡಬ್ಬಿಂಗ್ ಪರ ವಾದಿಗಳಿಗೆ ಕಿರಿ ಕಿರಿ ಎನಿಸಿದೆ.[ಡಬ್ಬಿಂಗ್ ಬಂದ್ರೆ ಏನಾಗ್ಬಹುದು? ಸಣ್ಣ ಲೆಕ್ಕಾಚಾರ..]

    ಡಬ್ಬಿಂಗ್ ಮಾಡುವುದರಿಂದ ಒಳ್ಳೆ ಕ್ವಾಲಿಟಿ ಸಿನಿಮಾ ಸಿಗುವುದಿಲ್ಲ. ಕರ್ನಾಟಕದಲ್ಲಿ ಬಹುತೇಕ ಮಂದಿಗೆ ತೆಲುಗು ಗೊತ್ತಿದೆ. ಡಬ್ಬಿಂಗ್ ನಿಂದ ಮಾರುಕಟ್ಟೆ ಹಾಳಾಗುತ್ತದೆ. [ಪೂರಕವೇ ಮಾರಕವೇ ಜನರೇ ನಿರ್ಧರಿಸಲಿ]

    ನಾನು ಪವನ್ ಕಲ್ಯಾಣ್ ರನ್ನು ಅವರ ದನಿಯಲ್ಲೇ ಕೇಳಿಸಿಕೊಳ್ಳಲು ಇಷ್ಟಪಡುತ್ತೇನೆ. ಬೇರೆಯವರ ದನಿಯಲ್ಲಿ ವಾಯ್ಸ್ ಡಬ್ ಮಾಡಿದರೆ ರುಚಿ ಕೆಡುತ್ತದೆ ಎಂದಿದ್ದಾರೆ. ಉಪ್ಪಿ ಹೇಳಿದ ವಾಕ್ಯಗಳಿಗೆ ಬಂದ ಉತ್ತರಗಳು ಮುಂದಿವೆ ನೋಡಿ...

    ತೆಲುಗು ಸಿನಿಮಾನೇ ನೋಡ್ತಿವಿ ಬಿಡಿ

    ತೆಲುಗು ಸಿನಿಮಾನೇ ನೋಡ್ತಿವಿ ಬಿಡಿ

    ನಮ್ಮ ರಿಯಲ್ ಸ್ಟಾರ್ ಉಪ್ಪಿ ಅವರ ಮಾತು ದಿಟ ಅನ್ನೋದಾದರೆ, ಕನ್ನಡಿಗರ ಮನೊರಂಜನೆಗಾಗಿ ಕನ್ನಡದ ಪ್ರತ್ಯೇಕ ಚಿತ್ರೋದ್ಯಮವಾದರು ಏಕೆ ಬೇಕು? ತೆಲುಗು ಸಿನಿಮಾನೇ ನೋಡ್ತಿವಿ ಬಿಡಿ ಎಂದ ಡಬ್ಬಿಂಗ್ ಪರ ಕನ್ನಡಿಗರು.

    ನಿಮ್ಮ ಚಿತ್ರದ ಹೀರೋಯಿನ್ ಯಾವ ಭಾಷೆ

    ನಿಮ್ಮ ಚಿತ್ರದ ಹೀರೋಯಿನ್ ಯಾವ ಭಾಷೆ

    ನಿಮ್ಮ ಚಿತ್ರದ ಹೀರೋಯಿನ್ ಯಾವ ಭಾಷೆ ಮಾತನಾಡುತ್ತಾರೆ. ಕ್ರಿಸ್ಟೀನಾ ಅಖೀವಾಗೆ ಯಾರು ದನಿ ಕೊಟ್ಟರು.

    ತೆಲುಗು ಗೊತ್ತಿದೆ ಎಂದರೆ ತೆಲುಗು ಸಿನಿಮಾ ಮಾಡಿ

    ತೆಲುಗು ಗೊತ್ತಿದೆ ಎಂದರೆ ತೆಲುಗು ಸಿನಿಮಾ ಮಾಡಿ, ಸುಮ್ಮನೆ ಸುಳ್ಳಾಡಬೇಡಿ.

    ಉಪ್ಪಿ2 ಚಿತ್ರವನ್ನು ಆಂಧ್ರದಲ್ಲೇ ರಿಲೀಸ್ ಮಾಡಿ

    ನಿಮ್ಮ ಲಾಜಿಕ್ ಪ್ರಕಾರ ಉಪ್ಪಿ2 ಚಿತ್ರವನ್ನು ಆಂಧ್ರದಲ್ಲೇ ರಿಲೀಸ್ ಮಾಡಬಹುದಾಗಿತ್ತು.

    ಡಬ್ಬಿಂಗ್ ಇರುವ ಜಾಗದಲ್ಲೂ ಬೇರೆ ವ್ಯವಸ್ಥೆ

    ಡಬ್ಬಿಂಗ್ ಇರುವ ಜಾಗದಲ್ಲೂ ಬೇರೆ ವ್ಯವಸ್ಥೆ ಇದೆ. ಡಬ್ ಅದ ಚಿತ್ರ, ಮೂಲ ಚಿತ್ರ ಎರಡಕ್ಕೂ ಮಾರ್ಕೆಟ್ ಇದೆ.

    ಉಪ್ಪಿ ನೀಡಿದ ಸಂದರ್ಶನ ವಿಡಿಯೋ

    ಎಬಿಎನ್ ಚಾನೆಲ್ ಗೆ ಉಪ್ಪಿ ನೀಡಿದ ಸಂದರ್ಶನ ವಿಡಿಯೋ ನೋಡಿ..

    English summary
    While speaking about Uppi 2, Upendra has also spoke about the dubbing issue in Kannada film industry. He has said that," I feel the quality of the movie hinders if it is dubbed to the others language. Dubbing is not good for Telugu as well as Kannada industry". But Uppi is misleading the facts said Kannadigas.
    Friday, August 21, 2015, 18:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X