For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಆಯ್ತು, ಈಗ ಎಲ್ಲರ ಕಣ್ಣು ಸೂಪರ್ ಸ್ಟಾರ್ ರಜನಿಕಾಂತ್ ಮೇಲೆ.!

  By Harshitha
  |

  'ಬಾಹುಬಲಿ-2'... ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಮಾಡಿರುವ ಸಿನಿಮಾ... ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಬಿಗ್ ಬಜೆಟ್ ಸಿನಿಮಾ.... ಬಾಲಿವುಡ್ ನಲ್ಲಿ ಕಿಂಗ್ 'ಖಾನ್'ಗಳು ನಿರ್ಮಿಸಿದ್ದ ರೆಕಾರ್ಡ್ ಗಳನ್ನೆಲ್ಲ ಪೀಸ್ ಪೀಸ್ ಮಾಡಿದ ದಕ್ಷಿಣ ಭಾರತದ ಸಿನಿಮಾ...

  ಇಂತಿಪ್ಪ 'ಬಾಹುಬಲಿ-2' ಚಿತ್ರದ ದಾಖಲೆಗಳ ಸರಮಾಲೆಯನ್ನ ಒಡೆದು ಹಾಕುವ ಶಕ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಚಿತ್ರಕ್ಕಿದೆ ಎಂಬುದೀಗ ಸಿನಿರಂಗದಲ್ಲಿ ಕೇಳಿಬರುತ್ತಿರುವ ಹೊಸ ಮಾತು.! ಮುಂದೆ ಓದಿರಿ....

  'ಬಾಹುಬಲಿ' ದಾಖಲೆಯನ್ನ ಮುರಿಯಲಿದ್ಯಂತೆ ರಜನಿಯ '2.0'.!

  'ಬಾಹುಬಲಿ' ದಾಖಲೆಯನ್ನ ಮುರಿಯಲಿದ್ಯಂತೆ ರಜನಿಯ '2.0'.!

  'ಬಾಹುಬಲಿ' ಚಿತ್ರದ ಎಲ್ಲ ದಾಖಲೆಗಳನ್ನ ಮತ್ತೊಂದು ದಕ್ಷಿಣ ಭಾರತದ ಚಿತ್ರ... ಅಂದ್ರೆ... ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಮುರಿಯಲಿದೆ ಎಂಬ ಲೆಕ್ಕಾಚಾರ ಎಲ್ಲೆಡೆ ಶುರು ಆಗಿದೆ.[ಬಾಹುಬಲಿ ದಾಖಲೆಯನ್ನ ಬ್ರೇಕ್ ಮಾಡುವುದು ಇವರಿಂದ ಸಾಧ್ಯವಂತೆ!]

  ಎಷ್ಟು ಕಲೆಕ್ಷನ್ ಆಗಬಹುದು.?

  ಎಷ್ಟು ಕಲೆಕ್ಷನ್ ಆಗಬಹುದು.?

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆಯ ನಂತರ ಎಷ್ಟು ಕಲೆಕ್ಷನ್ ಮಾಡಬಹುದು ಲೆಕ್ಕಾಚಾರದಲ್ಲಿ ಸಿನಿ ಪಂಡಿತರು ಮುಳುಗಿದ್ದಾರೆ.[ಶಾರೂಖ್ ಚಿತ್ರದ ಈ ದಾಖಲೆಯನ್ನ 'ಬಾಹುಬಲಿ' ಬ್ರೇಕ್ ಮಾಡಲಾಗಿಲ್ಲ..!]

  ದಾಖಲೆ ಮಾಡುತ್ತಾ '2.0'?

  ದಾಖಲೆ ಮಾಡುತ್ತಾ '2.0'?

  ರಜನಿಕಾಂತ್ ರವರ ಚಿತ್ರಗಳನ್ನ ಯಾರು ತಾನೆ ಕೊಂಡುಕೊಳ್ಳಲು ಮುಂದೆ ಬರಲ್ಲ ಹೇಳಿ..? ಸಹಜವಾಗಿ, '2.0' ಚಿತ್ರದ ಬಿಡುಗಡೆಗೂ ಮುನ್ನ ಪ್ರಸಾರ ಹಕ್ಕು, ವಿತರಣೆ ಹಕ್ಕು ದಾಖಲೆ ಬೆಲೆಗೆ ಮಾರಾಟ ಆಗುವುದು ಕನ್ಫರ್ಮ್. ಜೊತೆಗೆ, ರಜನಿಕಾಂತ್ ರವರ '2.0' ಸಿನಿಮಾ ಭಾರತದಾದ್ಯಂತ ಒಟ್ಟು 7000 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  ರಜನಿ ಕ್ರೇಜ್.!

  ರಜನಿ ಕ್ರೇಜ್.!

  ಹೇಳಿಕೇಳಿ, ಭಾರತದ ಮೂಲೆಮೂಲೆಯಲ್ಲೂ 'ತಲೈವಾ'ಗೆ ಫ್ಯಾನ್ಸ್ ಇದ್ದಾರೆ. ಹೀಗಾಗಿ '2.0' ಚಿತ್ರಕ್ಕೆ ಬಿಗ್ ಓಪನ್ನಿಂಗ್ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಲ್ಲದೇ, ಮೊದಲ ದಿನ ಎಲ್ಲೆಡೆ '2.0' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುವುದು ಖಚಿತ ಎಂಬುದು ಸಕ್ಸಸ್ ಪಂಡಿತರ ಲೆಕ್ಕಾಚಾರ. ಹಾಗೊಂದು ವೇಳೆ, ಅದು ನಿಜವೇ ಆದರೆ...'2.0' ಹೊಸ ದಾಖಲೆ ನಿರ್ಮಿಸುವುದು ಪಕ್ಕಾ ಅಂತಿದ್ದಾರೆ ಸಿನಿ ಪಂಡಿತರು.

  ಎಲ್ಲವೂ ಪ್ಲಾನ್ ಪ್ರಕಾರ ನಡೆಯಬೇಕು ಅಷ್ಟೇ.!

  ಎಲ್ಲವೂ ಪ್ಲಾನ್ ಪ್ರಕಾರ ನಡೆಯಬೇಕು ಅಷ್ಟೇ.!

  ಸದ್ಯ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ '2.0' ಸಿನಿಮಾ ರೆಡಿ ಆಗುತ್ತಿದೆ. ಇದರ ಜೊತೆಗೆ ಅನೇಕ ಭಾಷೆಗಳಿಗೆ ಡಬ್ ಆಗುವ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ. ಇದೆಲ್ಲವೂ ಅಂದುಕೊಂಡಂತೆ ಆದರೆ, 'ಬಾಹುಬಲಿ'ಯ ಕಲೆಕ್ಷನ್ ನ '2.0' ಮೀರಿಸುವ ಚಾನ್ಸಸ್ ಇದೆ.

  ಮುಂದಿನ ವರ್ಷ ತೆರೆಕಾಣಲಿದೆ

  ಮುಂದಿನ ವರ್ಷ ತೆರೆಕಾಣಲಿದೆ

  ಬಹುಕೋಟಿ ವೆಚ್ಚದ '2.0' ಚಿತ್ರದಲ್ಲಿ ರಜನಿಕಾಂತ್ ಜೊತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಇದ್ದಾರೆ. ಚಿತ್ರಕ್ಕೆ ಶಂಕರ್ ಡೈರೆಕ್ಟರ್. ವರದಿಗಳ ಪ್ರಕಾರ, ಮುಂದಿನ ವರ್ಷ '2.0' ಸಿನಿಮಾ ತೆರೆ ಕಾಣಲಿದೆ. ಆದರೂ, ಈಗಲೇ ಎಲ್ಲರ ಕಣ್ಣು ರಜನಿ ಮ್ಯಾಲೆ..!

  English summary
  Speculations have begun whether Super Star Rajinikanth starrer '2.0' break all the records of 'Baahubali-2'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X