For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನವೇ ಭಾರತದಲ್ಲಿ ಧೂಳೆಬ್ಬಿಸಿದ 'ಅವತಾರ್ 2' : ಆದರೂ KGF 2 ಮುಂದೆ ಗೆಲ್ಲಲಿಲ್ಲ!

  |

  ಹಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ 'ಅವತಾರ್ 2' ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ನಿನ್ನೆ (ಡಿಸೆಂಬರ್ 16)ರಂದು ಭಾರತದಲ್ಲೂ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ನಿರೀಕ್ಷೆ ಮಾಡಿದಂತೆ ಅಡ್ವಾನ್ಸ್ ಬುಕಿಂಗ್‌ನಲ್ಲೂ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು.

  ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್ 2' ಭಾರತದಲ್ಲಿ ಯಾವ್ಯಾವ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಬಹುದು ಅನ್ನೋ ಲೆಕ್ಕಾಚಾರ ನಡೆಯುತ್ತಲೇ ಇತ್ತು. ಸದ್ಯ ಮೊದಲ ದಿನ 'ಅವತಾರ್ 2' ಕಲೆಕ್ಷನ್ ಎಷ್ಟು ಅನ್ನೋದು ಈಗ ಹೊರಬಿದ್ದಿದೆ.

  ಮೊದಲ 'ಅವತಾರ್'ಗೂ 'ಅವತಾರ್ 2'ಗೂ ಇರುವ ವ್ಯತ್ಯಾಸಗಳೇನು?ಮೊದಲ 'ಅವತಾರ್'ಗೂ 'ಅವತಾರ್ 2'ಗೂ ಇರುವ ವ್ಯತ್ಯಾಸಗಳೇನು?

  ಈ ವರ್ಷದ ಕೊನೆಯ ದುಬಾರಿ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ದಾಖಲೆ ಬರುತ್ತೆ ಅನ್ನೋ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ, ಮೊದಲ ದಿನ ಈ ಸಿನಿಮಾ ಭಾರತದಲ್ಲಿ ಎರಡು ಸಿನಿಮಾಗಳ ದಾಖಲೆಯನ್ನು ಮುರಿಯುವಲ್ಲಿ ಹಿಂದೆ ಬಿದ್ದಿದೆ. ಒಂದು 'ಕೆಜಿಎಫ್ 2', ಇನ್ನೊಂದು ಹಾಲಿವುಡ್ ಸಿನಿಮಾ 'ಅವೆಂಜರ್ಸ್ ಎಂಡ್ ಗೇಮ್'. ಹಾಗಿದರೆ, 'ಅವತಾರ್ 2' ಮೊದಲ ದಿನದ ಗಳಿಕೆ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಅವತಾರ್ 2' ಫಸ್ಟ್ ಡೇ ಕಲೆಕ್ಷನ್ ಎಷ್ಟು?

  'ಅವತಾರ್ 2' ಫಸ್ಟ್ ಡೇ ಕಲೆಕ್ಷನ್ ಎಷ್ಟು?

  'ಅವತಾರ್ 2' ಅಥವಾ 'ಅವತಾರ್: ದ ವೇ ಆಫ್ ವಾಟರ್' ಭಾರತದ ಬಾಕ್ಸಾಫೀಸ್‌ನಲ್ಲಿ ಸೌಂಡು ಮಾಡುತ್ತಿದೆ. ಮೊದಲ ದಿನ ಸಿನಿಮಾಗೆ ಭಾರತದಲ್ಲಿ ಅತ್ಯದ್ಭುತ ರೆಸ್ಪಾನ್ಸ್ ಸಿಕ್ಕಿದೆ. 'ಅವತಾರ್' ತೆರೆಕಂಡು 13 ವರ್ಷಗಳ ಬಳಿಕ 'ಅವತಾರ್ 2' ರಿಲೀಸ್ ಆಗುತ್ತಿರೋದ್ರಿಂದ ಸಿನಿಪ್ರಿಯರಲ್ಲಿ ಸಹಜವಾಗಿಯೇ ಸಿಕ್ಕಾಪಟ್ಟೆ ಕುತೂಹಲವಿದೆ. ಭಾರತದಾದ್ಯಂತ ಈ ಸಿನಿಮಾ ಸುಮಾರು 38.50 ಕೋಟಿ ರೂ. ನಿಂದ 40.50 ಕೋಟಿ ರೂ. ಬಿಸಿನೆಸ್ ಮಾಡಿದೆ ಎಂದು ವರದಿಯಾಗಿದೆ. ಈ ಮೂಲಕ ಭಾರತದಲ್ಲಿ ಮೊದಲ ದಿನವೇ ಅತೀ ಕಲೆಕ್ಷನ್ ಮಾಡಿದ ಎರಡನೇ ಹಾಲಿವುಡ್ ಸಿನಿಮಾ ಎಂಬ ದಾಖಲೆ ಬರೆದಿದೆ.

  ಬೆಂಗಳೂರಿನಲ್ಲಿ ಅವತಾರ್ ಅಬ್ಬರ: ಜೇಮ್ಸ್, ವಿಕ್ರಾಂತ್ ರೋಣ ದಾಖಲೆ ಉಡೀಸ್, ಕೆಜಿಎಫ್ ಜಸ್ಟ್ ಮಿಸ್!ಬೆಂಗಳೂರಿನಲ್ಲಿ ಅವತಾರ್ ಅಬ್ಬರ: ಜೇಮ್ಸ್, ವಿಕ್ರಾಂತ್ ರೋಣ ದಾಖಲೆ ಉಡೀಸ್, ಕೆಜಿಎಫ್ ಜಸ್ಟ್ ಮಿಸ್!

  'ಅವೆಂಜರ್ಸ್: ಎಂಡ್ ಗೇಮ್' ಹಿಂದಿಕ್ಕಲಿಲ್ಲ

  'ಅವೆಂಜರ್ಸ್: ಎಂಡ್ ಗೇಮ್' ಹಿಂದಿಕ್ಕಲಿಲ್ಲ

  'ಅವತಾರ್ 2' ಸಿನಿಮಾಗೆ ಅತ್ಯದ್ಬುತ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆ ಮಾಡೋದು ಕನ್ಫರ್ಮ್. ಈ ಹಿನ್ನೆಲೆಯಲ್ಲಿ 'ಅವೆಂಜರ್ಸ್: ಎಂಡ್‌ ಗೇಮ್' ದಾಖಲೆಯನ್ನು 'ಅವತಾರ್ 2' ಬ್ರೇಕ್ ಮಾಡುತ್ತೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಮೊದಲ ದಿನ 'ಅವತಾರ 2' ಭಾರತದಲ್ಲಿ ಕೇವಲ 40.50 ಕೋಟಿ ರೂ. ಕಲೆ ಹಾಕಿದೆಯಷ್ಟೇ. ಅದೇ 2019ರಲ್ಲಿ ತೆರೆಕಂಡಿದ್ದ 'ಅವೆಂಜರ್ಸ್: ಎಂಡ್ ಗೇಮ್' ಭಾರತದಲ್ಲಿ ಮೊದಲ ದಿನ 53.10 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

  'ಕೆಜಿಎಫ್ 2' ದಾಖಲೆ ಮುರಿಯಲಿಲ್ಲ 'ಅವತಾರ್ 2'

  'ಕೆಜಿಎಫ್ 2' ದಾಖಲೆ ಮುರಿಯಲಿಲ್ಲ 'ಅವತಾರ್ 2'

  ದುಬಾರಿ ವೆಚ್ಚದ 'ಅವತಾರ್ 2' ಈ ವರ್ಷ ಭಾರತದಲ್ಲಿ ಸದ್ದು ಮಾಡಿದ್ದ ಎಲ್ಲಾ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. 2022ರಲ್ಲಿ ಭಾರತದ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡಿರೋ 'ಕೆಜಿಎಫ್ 2' ದಾಖಲೆ ಅಳಿಸು ಹಾಕುತ್ತೆ ಎಂದು ಊಹಿಸಲಾಗಿತ್ತು. 'ಕೆಜಿಎಫ್ 2' ಮೊದಲ ದಿನ ಭಾರತದಾದ್ಯಂತ 54 ಕೋಟಿ ರೂ. ಗಳಿಸಿತ್ತು. ಆ ದಾಖಲೆಯನ್ನೂ 'ಅವತಾರ್ 2' ಬ್ರೇಕ್ ಮಾಡಿಲ್ಲ. ಆದರೆ, ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ಇರೋದ್ರಿಂದ ಮುಂದಿನ ದಿನಗಳಲ್ಲಿ ಆಗೋ ಕಲೆಕ್ಷನ್ ಮೇಲೆ ಯಾವ್ಯಾವ ದಾಖಲೆ ಉಡೀಸ್ ಆಗುತ್ತೆ ಅನ್ನೋದು ಗೊತ್ತಾಗಲಿದೆ.

  'ಅವತಾರ್ - 2' ಚಿತ್ರಕ್ಕೂ ಲೀಕಾಸುರರ ಕಾಟ: ಸಂಪೂರ್ಣ ಸಿನಿಮಾ ಪೈರಸಿ ಲಿಂಕ್‌ಗಳು ವೈರಲ್'ಅವತಾರ್ - 2' ಚಿತ್ರಕ್ಕೂ ಲೀಕಾಸುರರ ಕಾಟ: ಸಂಪೂರ್ಣ ಸಿನಿಮಾ ಪೈರಸಿ ಲಿಂಕ್‌ಗಳು ವೈರಲ್

  ದಕ್ಷಿಣದಲ್ಲಿ 'ಅವತಾರ್ 2' ಕಲೆಕ್ಷನ್ ಹೆಚ್ಚು

  ದಕ್ಷಿಣದಲ್ಲಿ 'ಅವತಾರ್ 2' ಕಲೆಕ್ಷನ್ ಹೆಚ್ಚು

  ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ 'ಅವತಾರ್ 2' ಮೊದಲ ದಿನ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಗಳಿಕೆ ಕಂಡಿದೆ. ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದಿಂದಲೇ ಸುಮಾರು 22 ಕೋಟಿ ರೂ. ಕಲೆಕ್ಷನ್ ಆಗಿದೆ. ಉಳಿದ ಭಾಗಗಳಲ್ಲಿ ಸುಮಾರು 18 ಕೋಟಿ ರೂ. ಕಲೆಕ್ಷನ್ ಆಗಿದೆ. 'ಅವತಾರ್ 2' ಕಲೆಕ್ಷನ್‌ನಲ್ಲೂ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದೆ.

  English summary
  Avatar 2 Day 1 Box Office Collection Behind in India, Know More.
  Saturday, December 17, 2022, 13:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X