twitter
    For Quick Alerts
    ALLOW NOTIFICATIONS  
    For Daily Alerts

    ಹಾಲಿವುಡ್‌ ನಲ್ಲಿ ಆಕ್ಷನ್‌ ಕಟ್: 2016ರ ಬೆಸ್ಟ್‌ ಡೈರೆಕ್ಟರ್ ಯಾರು?

    2016 ರ ಹಾಲಿವುಡ್‌ ರೌಂಡಪ್ಸ್ ನಲ್ಲಿ ಬೆಸ್ಟ್‌ ಸಿನಿಮಾಗಳು ಯಾವುವು ಎಂದು ಹೇಳಿದ್ವಿ. ಬರೀ ಸಿನಿಮಾಗಳ ಲೀಸ್ಟ್‌ ಹೇಳಿದ್ರೆ ಸಾಕಾ? 2016 ರ ಹಾಲಿವುಡ್ ಬೆಸ್ಟ್‌ ಡೈರೆಕ್ಟರ್‌ ಯಾರು ಎಂತಲೂ ನಿಮಗೆ ಮಾಹಿತಿ ನೀಡಬೇಕಲ್ವಾ?

    By Suneel
    |

    ತಂತ್ರಜ್ಞಾನ ಬೆಳವಣಿಗೆ, ಇಂಟರ್ನೆಟ್ ಸಾರ್ವತ್ರೀಕರಣ ಹಾಗೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಇಂದು ಸಿನಿಮಾ ಕ್ಷೇತ್ರದಲ್ಲಿ ಆಕ್ಷನ್‌ ಕಟ್ ಹೇಳೋ ಶೈಲಿಯೇ ಬದಲಾಗಿದೆ. ಇನ್ನೂ ತಮ್ಮ ಸಿನಿಮಾಗಳಲ್ಲಿ ಹೊಸ ಲೋಕಕ್ಕೆ ವೀಕ್ಷಕರನ್ನು ಕರೆದೊಯ್ಯುವ ಹಾಲಿವುಡ್ ಸಿನಿಮಾ ಮೇಕರ್‌ಗಳು ಭಾಷೆಯ ಎಲ್ಲೇ ಮೀರಿ ಪ್ರೇಕ್ಷಕರನ್ನು ಸೆಳೆಯುತ್ತಾರೆ.[2016 ರ ಬೆಸ್ಟ್ ಹಾಲಿವುಡ್‌ ಸಿನಿಮಾಗಳಿವು..!]

    ಅಂದಹಾಗೆ 2016 ರ ಹಾಲಿವುಡ್‌ ರೌಂಡಪ್ಸ್ ನಲ್ಲಿ ಬೆಸ್ಟ್‌ ಸಿನಿಮಾಗಳು ಯಾವುವು ಎಂದು ಹೇಳಿದ್ವಿ. ಬರೀ ಸಿನಿಮಾಗಳ ಲೀಸ್ಟ್‌ ಹೇಳಿದ್ರೆ ಸಾಕಾ? 2016 ರ ಹಾಲಿವುಡ್ ಬೆಸ್ಟ್‌ ಡೈರೆಕ್ಟರ್‌ ಯಾರು ಎಂತಲೂ ನಿಮಗೆ ಮಾಹಿತಿ ನೀಡಬೇಕಲ್ವಾ?[ಚೂರು ಯಾಮಾರಿದ್ರೆ, ಹಾಲಿವುಡ್ ನಲ್ಲಿ 'ಮಾಸ್ತಿಗುಡಿ' ಮಾದರಿ ದುರಂತ.!]

    ಉತ್ತಮ ಸಿನಿಮಾ ಅಂದ್ರೆ ಕೇವಲ ಗಲ್ಲಾ ಪೆಟ್ಟಿಗೆಯನ್ನು ಫುಲ್‌ ಮಾಡೋದು ಅಲ್ಲಾ. ಒಬ್ಬ ನಿರ್ದೇಶಕ ಸಿನಿಮಾಗೆ ಉತ್ತಮ ನ್ಯಾಯ ಒದಗಿಸಿದ್ದಾನಾ, ಉತ್ತಮ ವಿಮರ್ಶೆಗಳನ್ನು ಸಿನಿಮಾಗೆ ಪಡೆದಿದ್ದಾನಾ, ಹಾಗೆ ಸಿನಿಮಾದಲ್ಲಿ ಸೃಜನಾತ್ಮಕತೆಯನ್ನು ಅಭಿವೃದ್ದಿಪಡಿಸಿದ್ದಾರಾ ಎಂಬ ಎಲ್ಲಾ ಪ್ರಶ್ನೆಗಳು ಬರುತ್ತವೆ. ಸೋ ಆಕ್ಷನ್‌ ಕಟ್ ಎಂಬುದು ಸಿನಿಮಾ ನಿರ್ಮಾಣದಲ್ಲಿ ಅತೀ ಮುಖ್ಯ. ಈ ಎಲ್ಲಾ ಅಂಶಗಳಿಂದ ತಮ್ಮ ಸಿನಿಮಾಗೆ ನ್ಯಾಯ ಒದಗಿಸಿ 2016 ನೇ ವರ್ಷದ ಅತ್ಯುತ್ತಮ ಹಾಲಿವುಡ್ ನಿರ್ದೇಶಕ ಎನಿಸಿಕೊಂಡವರು ಯಾರು ಎಂಬ ಲೀಸ್ಟ್‌ ಇಲ್ಲಿದೆ ನೋಡಿ.[ಬಾಲಿವುಡ್ ನ 'ಲಂಚ್ ಬಾಕ್ಸ್' ನಿರ್ದೇಶಕ ಹಾಲಿವುಡ್‌ ನಲ್ಲಿ ಆಕ್ಷನ್ ಕಟ್.!]

    ಬ್ಯಾರಿ ಜೆನ್‌ಕಿನ್ಸ್ (ಮೂನ್‌ಲೈಟ್)

    ಬ್ಯಾರಿ ಜೆನ್‌ಕಿನ್ಸ್ (ಮೂನ್‌ಲೈಟ್)

    ನಿರ್ದೇಶಕ ಬ್ಯಾರಿ ಜೆಂಕಿನ್ಸ್ ವೈಯಕ್ತಿಕ ರೂಪಾಂತರದ ನಾವೆಲಿಸ್ಟಿಕ್ ಸಿನಮಾಗೆ ಆಕ್ಷನ್‌ ಹೇಳಿದ್ದರು. ಈ ಸಿನಿಮಾ 'ಕಪ್ಪು ಹುಡುಗನೊಬ್ಬ ಬಡತನದಲ್ಲಿ ಮತ್ತು ಸಲಿಂಗಿ ಆಗಿ ಬೆಳೆಯುವ ಕಥೆ ಆಧಾರಿತವಾದದ್ದು. ಉತ್ತಮ ರೂಪಕದಿಂದ ಸಿನಿಮಾ ನಿರ್ದೇಶನ ಮಾಡಿದ್ದರಿಂದ ಇವರನ್ನು 2016 ರ ಸಾಲಿನ ಅತ್ಯುತ್ತಮ ನಿರ್ದೇಶಕ ಎಂದು ಗುರುತಿಸಲಾಗಿದೆ.

    2016 ರಲ್ಲಿ ಹಾಲಿವುಡ್‌ ಮಾಸ್ಟರ್ ಪೀಸ್‌ ಸಿನಿಮಾಗಳ ಸಾಲಿಗೆ ಸೇರಿದ ಚಿತ್ರಗಳಲ್ಲಿ 'ಮೂನ್‌ಲೈಟ್' ಸಹ ಒಂದು.

    ಡೇಮಿಯನ್ ಛಾಝೆಲ್ಲೆ ('ಲಾ ಲಾ ಲ್ಯಾಂಡ್')

    ಡೇಮಿಯನ್ ಛಾಝೆಲ್ಲೆ ('ಲಾ ಲಾ ಲ್ಯಾಂಡ್')

    ಡೇಮಿಯನ್ ಛಾಝೆಲ್ಲೆ 'ಲಾ ಲಾ ಲ್ಯಾಂಡ್' ಎಂಬ ಸಿನಿಮಾಗೆ 2016 ರಲ್ಲಿ ಆಕ್ಷನ್‌ ಕಟ್ ಹೇಳುವ ಮೂಲಕ ಅತ್ಯುತ್ತಮ ನಿರ್ದೇಶಕರ ಪಟ್ಟಿಗೆ ಸೇರಿದ್ದಾರೆ. ಅಂದಹಾಗೆ ಇವರ ಈ ಸಿನಿಮಾ ಒಂದು ಕಲೆಯನ್ನು ವೃತ್ತಿಯಾಗಿ ಪಡೆಯಲು ಬಯುಸುವವರು ಎಷ್ಟೆಲ್ಲಾ ಕಷ್ಟಪಡುತ್ತಾರೆ ಎಂಬುದನ್ನು ತೆರೆ ಮೇಲೆ ತೋರಿಸುವ ಚಿತ್ರವಾಗಿದೆ.

    'ಲಾ ಲಾ ಲ್ಯಾಂಡ್' ವನ್ನಾಬೆ ನಟಿ 'ಮಿಯಾ' ಮತ್ತು ಜಾಝ್ ಸಂಗೀತಗಾರ 'ಸೆಬಾಸ್ಟಿಯನ್' ಕಥೆ ಆಧಾರಿತ ಸಿನಿಮಾ. 'ಸೆಬಾಸ್ಟಿಯನ್‌' ತನ್ನ ಕನಸನ್ನು ನನಸು ಮಾಡಿಕೊಳ್ಳಲು ದಿನನಿತ್ಯ ತನ್ನ ನಗರದಲ್ಲಿ ಕಷ್ಟದ ಜೀವನ ಹೇಗೆ ನಡೆಸುತ್ತಿದ್ದ, ತನ್ನ ಗುರಿಗಳನ್ನು ಹೇಗೆ ತಾನೆ ನಾಶ ಮಾಡಿಕೊಂಡ ಎಂಬುದನ್ನು ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ.

    ಡೆನ್ಝೆಲ್ ವಾಷಿಂಗ್ಟನ್ (ಫೆನ್ಸೆಸ್)

    ಡೆನ್ಝೆಲ್ ವಾಷಿಂಗ್ಟನ್ (ಫೆನ್ಸೆಸ್)

    ಡೆಂಜೆಲ್ ವಾಷಿಂಗ್ಟನ್ ತಮ್ಮ ಮೂರನೇ ಚಿತ್ರ 'ಫೆನ್ಸೆಸ್‌'ಗೆ ಆಕ್ಷನ್‌ ಕಟ್ ಹೇಳುವ ಮೂಲಕ ಉತ್ತಮ ನ್ಯಾಯ ಒದಗಿಸಿಕೊಟ್ಟಿದ್ದರು. ಫೆನ್ಸೆಸ್ ಸಿನಿಮಾ ಅಗಸ್ಟ್‌ ವಿಲ್ಸನ್ ರವರ ಡ್ರಾಮಾ ಆಧಾರಿತ ಸಿನಿಮಾವಾಗಿದೆ. ಡೆನ್ಝೆಲ್ ಸ್ವತಃ ತನ್ನ ಅಭಿನಯ ಮತ್ತು ನಿರ್ದೇಶನದ ಮೂಲಕ ಫೆನ್ಸೆಸ್ ಡ್ರಾಮಾದಲ್ಲಿರುವ ಪುಟಗಳಿಗೆ ಮರು ಜೀವ ತುಂಬಿದ್ದರು.

    ಕೆನ್ನೆಥ್ ಲೊನೆರ್ಗನ್ (ಮ್ಯಾನ್ಛೆಸ್ಟರ್ ಬೈ ದ ಸಿ)

    ಕೆನ್ನೆಥ್ ಲೊನೆರ್ಗನ್ (ಮ್ಯಾನ್ಛೆಸ್ಟರ್ ಬೈ ದ ಸಿ)

    'ಮ್ಯಾನ್ಛೆಸ್ಟರ್ ಬೈ ದ ಸಿ' ಕೆನ್ನೆಥ್ ಲೊನೆರ್ಗನ್ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿಬಂದ ಚಿತ್ರ. ಮಾನವೀಯತೆಯ ಮೇಲೆ ಸೂಕ್ಷ್ಮವಾಗಿ ಬೆಳಕು ಚೆಲ್ಲುವ ಮತ್ತು ಕಾಮಿಡಿ ಸಿನಿಮಾ ಸಹ ಹೌದು. ನಿರ್ದೇಶಕರು ಸಿನಿಮಾದಲ್ಲಿ ಅತ್ಯುತ್ತಮವಾಗಿ ಮಾನವೀಯ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಪಾತ್ರಗಳನ್ನು ತಮ್ಮ ನಿರ್ದೇಶನದಿಂದ ಉತ್ತಮವಾಗಿ ನಿರೂಪಿಸಿದ್ದರು.

    ಮಾರ್ಟಿನ್ ಸ್ಕಾರ್ಸೆಸೆ (ಸೈಲೆನ್ಸ್)

    ಮಾರ್ಟಿನ್ ಸ್ಕಾರ್ಸೆಸೆ (ಸೈಲೆನ್ಸ್)

    ಮಾರ್ಟಿನ್ ಸ್ಕಾರ್ಸೆಸೆ ಸೈಲೆನ್ಸ್ ಎಂಬ ಸಿನಿಮಾಗೆ ಆಕ್ಷನ್‌ ಕಟ್ ಹೇಳಿ ಹಾಲಿವುಡ್‌ನ ಬೆಸ್ಟ್‌ ನಿರ್ದೇಶಕರ ಲೀಸ್ಟ್‌ ಗೆ ಸೇರ್ಪಡೆ ಆದವರು. ವಿಶೇಷ ಅಂದ್ರೆ ಹುತಾತ್ಮರ ಸಾಹಸ ಕಥೆಯ ಚಿತ್ರ ಸೈಲೆನ್ಸ್ ನಿರ್ದೇಶಿಸಲು ಅತಿ ಹೆಚ್ಚು ಸಮಯ ಮೀಸಲಿಟ್ಟವರು ಮಾರ್ಟಿನ್ ಸ್ಕಾರ್ಸೆಸೆ ಎಂದು ಹೇಳಲಾಗಿದೆ. ಕೇವಲ ಚಿತ್ರ ಕಥೆ ಅಲ್ಲದೇ ಚಿತ್ರ ನಿರೂಪಣೆ ಶೈಲಿಯಲ್ಲಿ ಹಾಲಿವುಡ್‌ನ ಸಿನಿಮಾ ಅಂಗಳದಲ್ಲಿ ಪ್ರಭಾವಬೀರಿದವರು.

    English summary
    Here is the list of the top Hollywood Best Director of 2016 by Kannada Filmibeat. Go through the list.
    Sunday, December 25, 2016, 12:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X